ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಂದಳು ನಮ್ಮ ಮನೆಗೆ | ಶ್ರೀ ಪುರಂದರ ದಾಸರು | Bandalu Namma Manege | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು 
Kruti:  Sri Purandara Dasaru


ಬಂದಳು ನಮ್ಮ ಮನೆಗೆ ಶ್ರೀ ಮಹಾಲಕ್ಷ್ಮೀ ಸಂದೇಹವಿಲ್ಲದಂತೆ ||ಪ||

ಬಂದಳು ನಮ್ಮ ಮನೆಗೆ ನಿಂದಳು ಗೃಹದಲ್ಲಿ 
ನಂದಕಂದನ ರಾಣಿ ಇಂದಿರೇಶನ ಸಹಿತ ||ಅಪ||

ಹೆಜ್ಜೆ ಮೇಲ್ಹೆಜ್ಜೆನಿಕ್ಕುತ ಗೆಜ್ಜೆಯ ಕಾಲು ಘಲು ಘಲು ಘಲುರೆನ್ನುತ || 
ಮೂರ್ಜಗ ಮೋಹಿಸುತ ಮುರಹರನ ರಾಣಿ ಸಂಪತ್ತು ಕೊಡಲಿಕ್ಕೆ ಶ್ರೀನಿವಾಸನ ಸಹಿತ ||೧||

ಮಾಸ ಶ್ರಾವಣ ಮಾಸವು ಶುಕ್ರವಾರ ಪೌರ್ಣಮಿ ದಿನದಂದು | 
ಭೂಸುರರೆಲ್ಲ ಸೇರಿ ಸಾಸಿರ ನಾಮ ಪಾಡಿ ವಾಸವಾಗಿರಲಿಕ್ಕೆ ವಾಸುದೇವನ ಸಹಿತ ||೨||

ಕನಕವಾಯಿತು ಮಂದಿರ ಜನನಿ ಬರಲು ಜಯ ಜಯ ಜಯವೆನ್ನಿರೋ || 
ಸನಕಾದಿ ಮುನಿಗಳ ಸೇವೆಯನು ಸ್ವೀಕರಿಸಿ ಕನಕವಲ್ಲಿಯು ತನ್ನ ಕಾಂತನ ಕರೆದುಕೊಂಡು ||೩||

ಉಟ್ಟ ಪೀತಾಂಬರವು ಹೊಳೆಯುತ್ತ ತೊಟ್ಟ ಕಂಕಣ ಕೈ ಪಿಡಿಯುತ್ತಾ || 
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ಪಟ್ಟದರಸಿಯು ನಮಗೆ ಇಷ್ಟಾರ್ಥ ಕೊಡಲಿಕ್ಕೆಂದು||೪||

baMdaLu namma manege SrI mahAlakShmI saMdEhavilladaMte ||pa||
 
baMdaLu namma manege niMdaLu gRuhadalli 
naMdakaMdana rANi iMdirESana sahita ||apa||

hejje mElhejjeyanikkuta gejjeya kAlu Galu Galu Galurennuta || 
mUrjaga mOhisuta muraharana rANi saMpattu koDalikke SrInivAsana sahita ||1||
 
mAsa SrAvaNa mAsavu SukravAra paurNami dinadaMdu | 
BUsurarella sEri sAsira nAma pADi vAsavAgiralikke vAsudEvana sahita ||2||
 
kanakavAyitu maMdira janani baralu jaya jaya jayavennirO || 
sanakAdi munigaLa sEveyanu svIkarisi kanakavalliyu tanna kAMtana karedukoMDu ||3||
 
uTTa pItAMbaravu hoLeyutta toTTa kaMkaNa kai piDiyuttA || 
sRuShTigoDeya namma puraMdaraviThalana paTTadarasiyu namage iShTArtha koDalikkeMdu ||4||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru