ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವೆಂಕಟಾದ್ರಿ ನಿಲಯನ | ಮೋಹನ ವಿಠಲ | Venkatadri Nilayana | Sri Mohana Vithala


ಸಾಹಿತ್ಯ : ಶ್ರೀ ಮೋಹನ ದಾಸರು (ಮೋಹನ ವಿಠಲ) 
Kruti:   Sri Mohana Dasaru (Mohana Vithala)


ವೆಂಕಟಾದ್ರಿ ನಿಲಯನ ಪಂಕಜನಾಭನ ತೋರಮ್ಮ ಲಕುಮಿ |ಪ|

ಶೇಷಾದ್ರಿ ನಿಲಯನ ದೋಷವಿದೂರನ ತೋರಮ್ಮ ಲಕುಮಿ|
ಅಂಜನಾದ್ರಿ ನಿಲಯನ ಕಂಜಜನಾಭನ ತೋರಮ್ಮ ಲಕುಮಿ|
ಪುಂಡಲೀಕ ವರದನ ಪಂಢರಿ ರಾಯನ ತೋರಮ್ಮ ಲಕುಮಿ |ಅಪ|

ವಸುದೇವ ದೇವಕಿ ಕಂದ| ನಮ್ಮ ಶಶಿಮುಖಿಯರೊಡನೆ ಆನಂದ|  
ಪಶುಗಳ ಕಾಯ್ದ ಗೋವಿಂದ| ನಮ್ಮ ಬಿಸಜನಾಭ ಮುಕುಂದನ |೧|

ಸಾಮಜರಾಜನ ವರದ| ಬಲು ಪ್ರೇಮದಿ ಭಕುತರ ಪೊರೆದಾ|  
ಆ ಮಹಾ ದಿತಿಜರ ತರಿದ| ನಿಸ್ಸೀಮ ಮಹಿಮನಾಗಿ ಮೆರೆವನ |೨|  

ಉರಗ ಗಿರಿಯಲಿಪ್ಪ| ನಮ್ಮ ಮರುತನ ಹೆಗಲೇರಿ ಬಪ್ಪ|
ಶರಣರಿಗೊರವಿತ್ತು ತಪ್ಪ| ಸಿರಿ ಮೋಹನ ವಿಠಲ ತಿಮ್ಮಪ್ಪನ |೩|

veMkaTAdri nilayana paMkajanABana tOramma lakumi |pa|

SEShAdri nilayana dOShavidUrana tOramma lakumi|
aMjanAdri nilayana kaMjajanABana tOramma lakumi|
puMDalIka varadana paMDhari rAyana tOramma lakumi |apa|
 
vasudEva dEvaki kaMda| namma SaSimuKiyaroDane AnaMda|
paSugaLa kAyda gOviMda| namma bisajanABa mukuMdana |1|
 
sAmajarAjana varada| balu prEmadi Bakutara poredA|
A mahA ditijara tarida| nissIma mahimanAgi merevana |2|
 
uraga giriyalippa| namma marutana hegalEri bappa|
SaraNarigoravittu tappa| siri mOhana viThala timmappana |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru