ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂಥ ಚೆಲುವಗೆ ಮಗಳನು | ಪುರಂದರ ವಿಠಲ | Entha cheluvage magala | Sri Purandara Dasaru


ಸಾಹಿತ್ಯ: ಶ್ರೀ ಪುರಂದರ ದಾಸರು 
Kruti:  Sri Purandara Dasaru


ಎಂಥ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ ||ಪ||
ಕಂತು ಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮ ||ಅಪ||

ಮೋರೆ ಐದು ಮೂರು ಕಣ್ಣ ವಿಪರೀತವ ನೋಡಮ್ಮಮ್ಮ |
ಕೊರಳೊಳು ರುಂಡ ಮಾಲೆಯ ಧರಿಸಿದ ಉರಗ ಭೂಷಣನ ನೋಡಮ್ಮಮ್ಮ ||೧||

ತಲೆಯೆಂಬೋದು ನೋಡಿದರೆ ಜಡೆ ಹೊಳೆಯುತಲಿದೆ ನೋಡಮ್ಮಮ್ಮ |
ಹಲವು ಕಾಲದ ತಪಸಿ ರುದ್ರನ ಮೈ ಬೂದಿಯು ನೋಡಮ್ಮಮ್ಮ ||೨||

ಭೂತ ಪ್ರೇತ ಪಿಶಾಚಿಗಳೆಲ್ಲ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳ ಮುಪ್ಪುರ ಹರನ ನೋಡಮ್ಮಮ್ಮ ||೩||

ಮನೆಯೆಂಬೋದು ಸ್ಮಶಾನವು ನೋಡೆ | ಗಜ ಚರ್ಮಾಂಬರವಮ್ಮಮ್ಮಾ 
ಹಣವೊಂದಾದರು  ಕೈಯೊಳಗಿಲ್ಲ ಕಪ್ಪರವನು ನೋಡಮ್ಮಮ್ಮ ||೪||

ನಂದಿವಾಹನ ನೀಲಕಂಠನ ನಿರ್ಗುಣನ ನೋಡಮ್ಮಮ್ಮ |
ಇಂದಿರೆರಮಣ ಶ್ರೀ ಪುರಂದರ ವಿಠಲನ ಪೊಂದಿದವನ ನೋಡಮ್ಮಮ್ಮ ||೫||

eMtha celuvage magaLanu koTTanu giriraajanu nODammamma ||pa||
kaMtu hara shiva celuvanennuta meccidanu nODammamma ||apa||

mOre aidu mUru kaNNa viparItava nODammamma |
koraLoLu ruMDa maaleya dharisida uraga bhUShaNana nODammamma ||1||

taleyeMbOdu nODidare jaDe hoLeyutalide nODammamma |
halavu kaalada tapasi rudrana mai bUdiyu nODammamma ||2||

bhUta prEta pishaacigaLella parivaaravu nODammamma |
Itana naamavu oMdE maMgaLa muppura harana nODammamma ||3||

maneyeMbOdu smashaanavu nODe | gaja carmaaMbaravammammaa 
haNavoMdaadaru  kaiyoLagilla kapparavanu nODammamma ||4||

naMdivaahana nIlakaMThana nirguNana nODammamma |
iMdireramaNa shrI puraMdara viThalana poMdidavana nODammamma ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru