ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಂತ್ರಾಲಯ ಮಂದಿರ | ಅಭಿನವ ಜನಾರ್ದನ ವಿಠಲ | Mantralaya Mandira | Abhinava Janardana Vithala


ಸಾಹಿತ್ಯ : ಶ್ರೀ ಅಭಿನವ ಜನಾರ್ದನ ವಿಠಲ ದಾಸರು 
Kruti:Sri Abhinava Janardana Vithala Dasaru


ಮಂತ್ರಾಲಯ ಮಂದಿರ |
ಮಾಂ ಪಾಹಿ ಮಂತ್ರಾಲಯ ಮಂದಿರ ||ಪ||

ಮಧ್ವಾಭಿಧಮುನಿ ಸದ್ವಂಶೋದ್ಭವ ||
ಅದ್ವೈತಾರಣ್ಯ ಸದ್ವೀತಿ ಹೋತ್ರ ||೧||

ಸುಧೀಂದ್ರ ಯತಿಕರ ಪದುಮೋದ್ಭವ |
ಸುಧಿ ಗುರು ರಾಘವೇಂದ್ರ ಕೋವಿದ ಕುಲವರ್ಯ ||೨||

ದಂಡಧರ ಕೋದಂಡ ಪಾಣಿಪದ ||
ಪುಂಡರೀಕ ಧ್ಯಾನ ಉದ್ದಂಡ ಮತೇ ಹೇ ||೩||

ಸುರಧೇನು ಕಲ್ಪತರು ವರಚಿಂತಾಮಣಿ ||
ಶರಣಾಗತ ಜನ ಪರಿಪಾಲತ್ವಂ ||೪||

ಅಭಿನವ ಜನಾರ್ದನ ವಿಠಲ ಪದ ||
ಯುಗಳ ಧ್ಯಾನಿಪ ಮುನಿ ಕುಲೋತ್ತಂಸ ||೫||

maMtrAlaya maMdira |
mAM pAhi maMtrAlaya maMdira ||pa||

madhvABidhamuni sadvaMSOdBava ||
advaitAraNya sadvIti hOtra ||1||
 
sudhIMdra yatikara padumOdBava |
sudhi guru rAGavEMdra kOvida kulavarya ||2||
  
daMDadhara kOdaMDa pANipada ||
puMDarIka dhyAna uddaMDa matE hE ||3||
 
suradhEnu kalpataru varaciMtAmaNi ||
SaraNAgata jana paripAlatvaM ||4||
 
aBinava janArdana viThala pada ||
yugaLa dhyAnipa muni kulOttaMsa ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru