ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸ್ಮರಿಸು ಗುರುಗಳ ಮನವೆ | ವರದ ಗೋಪಾಲ ವಿಠಲ | Smarisu Gurugala Manave | Varada Gopala Vithala


ಸಾಹಿತ್ಯ : ಶ್ರೀ ವರದ ಗೋಪಾಲ ದಾಸರು 
Kruti: Sri Varada Gopala Dasaru


ಸ್ಮರಿಸು ಗುರುಗಳ ಮನವೆ ||ಪ||
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳವು
ದುರಿತ ಪರ್ವತಕೆ ಪವಿಯೆಂದು ತಿಳಿದು ||ಅಪ||

ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ
ಕರಿಗಳ ಜ್ವರ ಮೊದಲಾದ ಭಯಗಳಿಂದ
ಪೊರೆದು ಮಂಗಳವೀವ ನರಹರಿಯ ದಾಸರ
ಚರಣ ಕಂಡೆನೊ ದುರಿತ ಪರಿಹಾರವಾಯಿತು  ||೧||

ಗುರುಸ್ಮರಣಿಯಿಂದ ಸಕಲ ಆಪತ್ತು ಪರಿಹಾರ
ಗುರುಸ್ಮರಣೆಯಿಂದ ಸಕಲ ಸಂಪದವು ನಿನಗೆ
ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು 
ಗುರು ಸ್ಮರಣೆಯಿಂದ ಹರಿಯೊಲಿದು ಪೊರೆವಾ ||೨||

ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ
ಗುರುಗಳೇ ಪರಮ ಹಿತಕರು ನೋಡು
ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ
ದುರಿತಗಳ ಕಳೆವನು ಸುಖಗರೆವ ನೋಡು ||೩||

smarisu gurugaLa manave ||pa||
smarisu gurugaLa ninage parama maMgaLavu
durita parvatake paviyeMdu tiLidu ||apa||

uraga vRuScika vyaaGra arasu cOraagni
karigaLa jvara modalaada bhayagaLiMda
poredu maMgaLavIva narahariya daasara
caraNa kaMDeno durita parihaaravaayitu  ||1||

gurusmaraNiyiMda sakala Apattu parihaara
gurusmaraNeyiMda sakala saMpadavu ninage
guru smaraNeyiMda vishESha dhana dorakuvudu 
guru smaraNeyiMda hariyolidu porevaa ||2||

gurugaLiMdadhika innaaru Aptaru ninage
gurugaLRE parama hitakaru nODu
guru svaami varada gOpaala viThala sarva
duritagaLa kaLevanu sukhagareva nODu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru