ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ | ಇಂದಿರೇಶ ದಾಸರು | Baare Venkataramani | Sri Indiresha Dasaru


ಸಾಹಿತ್ಯ : ಶ್ರೀ ಇಂದಿರೇಶ ದಾಸರು 
Kruti: Sri Indiresha Dasaru


ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ ಬಾರೆ ವೆಂಕಟರಮಣಿ |ಪ||
ಬಾರೆ ವೆಂಕಟರಮಣಿ ಪಾರಾಯಣ ಕೇಳು ಚಾರುವದನೆ ಉಪಹಾರ ಕಾಲಕ್ಕೆ ನಿತ್ಯ ||ಅಪ||

ಏನು ಪುಣ್ಯವೆ ನಂದೂ ಪಾರಾಯಣ ನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊ ಜ್ಞಾನವಿಲ್ಲದೆ ಉಚ್ಛ ಸ್ಥಾನದೊಳಗೆ ಕೂಡೆ ||೧||

ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ ಕ್ಷಿಪ್ರ ತನದಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲನಪ್ಪಿಕೊಂಬುವ ಸುಖ ಒಪ್ಪಿಸೆ ಬೇಗನೆ ||೨||

ಎಲ್ಲಾ ದೇವತೆಗಳನು ತಡೆದಿಹೆ ಫುಲ್ಲ ವಾರಿಜನಯನೆ
ಗೊಲ್ಲ ಬಾಲನ ಪಾದ ಪಲ್ಲವ ನೋಡದೆ ನಿಲ್ಲಲೊಲ್ಲದು ಮನ ಸೊಲ್ಲು ಲಾಲಿಸಿ ಬೇಗ ||೩||

ಮಂಗಳಾಂಗಿಯೇ ನಿನ್ನ ಕಾಣದೆ ಭಂಗ ಪಡುವೆನಮ್ಮ
ಗಂಗಾಜನಕ ಸಿರಿ ರಂಗನಂಕದಿ ಕೂತು ಭೃಂಗಕುಂತಳೆ ಹೃದಯಾಂಗಣದೊಳಗಾಡೆ ||೪||

ಇಂದಿರೇಶನ ರಾಣಿ ಎನ್ನಯ ಮನ ಮಂದಿರದೊಳು ಬಾ ನೀ
ನಂದಗೋಕುಲ ಬಾಲಕಂದನನೆತ್ತಿ ಕರೆ ತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮೀ ||೫||

bAre veMkaTaramaNi SrI SrIdEvi bAre veMkaTaramaNi |pa||
bAre veMkaTaramaNi pArAyaNa kELu cAruvadane upahAra kAlakke nitya ||apa||

Enu puNyave naMdU pArAyaNa nInu kELuvi baMdu
hIna mAnavanige nInu baruvi eMbo j~jAnavillade ucCa sthAnadoLage kUDe ||1||

svapnadoLage baruvi SrI SrIdEvi kShipra tanadi pOguvi
sarpaSayana nammappa gOkula bAlanappikoMbuva suKa oppise bEgane ||2||

ellA dEvategaLanu taDedihe Pulla vArijanayane
golla bAlana pAda pallava nODade nillalolladu mana sollu lAlisi bEga ||3||

maMgaLAMgiyE ninna kANade BaMga paDuvenamma
gaMgAjanaka siri raMganaMkadi kUtu BRuMgakuMtaLe hRudayAMgaNadoLagADe ||4||

iMdirESana rANi ennaya mana maMdiradoLu bA nI
naMdagOkula bAlakaMdananetti kare taMdu tOrise araviMdanilaye lakShmI ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru