ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಳುವುದ್ಯಾತಕೋ ರಂಗಯ್ಯ | ಪುರಂದರ ವಿಠಲ | Aluvudyatako Rangayya | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಅಳುವುದ್ಯಾತಕೋ ರಂಗಯ್ಯ | ಅತ್ತರಂಜಿಪ ಗುಮ್ಮ ||ಪ||

ಪುಟ್ಟಿದೇಳು ದಿವಸದಿ ದುಷ್ಟ ಪೂತನಿಯ ಕೊಂದೆ || 
ಮುಟ್ಟಿ ವಿಷದ ಮೊಲೆಯುಂಡ ಕಾರಣ ದೃಷ್ಟಿ ತಾಕಿತೆ ನಿನಗೆ ರಂಗಯ್ಯ ||೧||

ಬಾಲಕ ತನದಿ ಗೋಪಾಲಕರೊಡನಾಡಿ | ಕಾಳಿಂಗ ಮಡುವನು 
ಕಲಕಿದ ಕಾರಣ ಕಾಲು ಉಳುಕಿತೆ ನಿನಗೆ ರಂಗಯ್ಯ ||೨||

ತುರುವ ಕಾಯಲು ಪೋಗಿ ಭರದಿಂದ್ರ ಮಳೆಗರೆಯೆ || 
ಬೆರಳಲಿ ಬೆಟ್ಟವ ನೆತ್ತಿದ ಕಾರಣ ಬೆರಳು ನೋಯಿತೆ ರಂಗಯ್ಯ ||೩||

ವಸುದೇವ ಸುತನಾಗಿ ಅಸುರ ಮಲ್ಲರ ಕೊಂದು | 
ಕಸುವಿನ ಕಂಸನ ಕೊಂದ ಕಾರಣ ಕಿಸುರು ತಾಕಿತೆ ರಂಗಯ್ಯ ||೪||  

ಶರಣು ವೇಲಾಪುರದ ಚೆಲುವ ಚೆನ್ನಿಗರಾಯ | 
ಪರಿ ಪರಿ ವಿಧದಿಂದ ಶರಣರ ಪೊರೆಯುವ ವರದ ಪುರಂದರ ವಿಠಲ ||೫||

aLuvudyAtakO raMgayya | attaraMjipa gumma ||pa||

puTTidELu divasadi duShTa pUtaniya koMde || 
muTTi viShada moleyuMDa kAraNa dRuShTi tAkite ninage raMgayya ||1||

bAlaka tanadi gOpAlakaroDanADi | kALiMga maDuvanu 
kalakida kAraNa kAlu uLukite ninage raMgayya ||2||

turuva kAyalu pOgi BaradiMdra maLegareye || 
beraLali beTTava nettida kAraNa beraLu nOyite raMgayya ||3||

vasudEva sutanAgi asura mallara koMdu | 
kasuvina kaMsana koMda kAraNa kisuru tAkite raMgayya ||4||

SaraNu vElApurada celuva cennigarAya | 
pari pari vidhadiMda SaraNara poreyuva varada puraMdara viThala ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru