Posts

Showing posts from January, 2022

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗುರು ಪುರಂದರ ದಾಸರೇ | ಶ್ರೀ ವಿಜಯ ದಾಸರ ಕೃತಿ | Guru Purandara Dasare | Vijaya Dasara kruti

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ|| ಗರುವ ರಹಿತರ ಮಾಡಿ ಎಮ್ಮನು ಪೊರೆವ ಭಾರವು ನಿಮ್ಮದೇ ||ಅಪ|| ಒಂದು ಅರಿಯದ ಮಂದಮತಿ ನಾ ಇಂದು ನಿಮ್ಮನು ನಂಬಿದೆ | ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧|| ಪುರಂದರ ಘಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ | ಪರಮಪುರುಷ ವಿಪ್ರನಂದದಿ ಕರವ ನೀಡಿ ಯಾಚಿಸೆ ||೨|| ಪರಮ ನಿರ್ಗುಣ ಮನವನರಿತು ಹರಿಗೆ ಸೂರೆಯ ನೀಡುತ | ಅರಿತು ಮನದೊಳು ಹರಿದು ಭವಗಳ ತರುಣಿ ಸಹಿತಾ ಹೊರಟನೆ ||೩|| ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ | ನಾರದರು ಈ ರೂಪದಿಂದಲಿ ಚಾರು ದರುಶನ ತೋರಿದೆ ||೪|| ಅಜಭವಾದಿಗಳರಸನಾದ ವಿಜಯ ವಿಠಲನ ಧ್ಯಾನಿಪ | ನಿಜ ಸುಜ್ಞಾನವ ಕೊಡಿಸಬೇಕೆಂದು ಭಜಿಪೆನು ಕೇಳ್ ಗುರುವರ ||೫|| guru puraMdara dAsarE nimma caraNa kamalava naMbide ||pa|| garuva rahitara mADi emmanu poreva BAravu nimmadE ||apa||   oMdu ariyada maMdamati nA iMdu nimmanu naMbide | iMdirESana pAda tOriso taMde mADelo satkRupe ||1||   puraMdara GaDadoLage niMdu niruta dravyava gaLiside | paramapuruSha vipranaMdadi karava nIDi yAcise ||2||   parama nirguNa manavanaritu harige sUreya nIDuta | aritu manadoLu haridu Bavag...

ಬೇಸರದೆಂದು ಸದಾಶಿವನೆನ್ನಿ | ಶ್ರೀ ಪ್ರಸನ್ನವೇಂಕಟ ದಾಸರು | Besaradendu | Sri Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಬೇಸರದೆಂದು ಸದಾಶಿವನೆನ್ನಿ | ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ |ಪ| ನಂದಿವಾಹನ ಆನಂದ ಎನ್ನಿ| ಸುಂದರ ಗಣಪನ ತಂದೆ ಎನ್ನಿ |೧| ನಂಬೆ ಭವಾಂಬುದಿ ಅಂಬಿಗನೆನ್ನಿ| ಅಂಬಿಕೆಯರಸು ತ್ರಯಂಬಕನೆನ್ನಿ |೨| ಕರ್ಪರಭಾಂಡ ಕಂದರ್ಪಹರನೆನ್ನಿ| ಸರ್ಪಭೂಷಣ ಸುಖದರ್ಪಣನೆನ್ನಿ |೩| ಬೇಡಿದ ಭಾಗ್ಯವೀಡಾಡುವನೆನ್ನಿ| ಬೇಡನ ಭಕುತಿಗೆ ಕೂಡಿದನೆನ್ನಿ |೪| ಶಂಭು ಗಜದಚರ್ಮಾಂಬರನೆನ್ನಿ| ಸಾಂಬ ಸುಗುಣ ಕರುಣಾಂಬುಧಿಯೆನ್ನಿ |೫| ಎಂದಿಗೂ ಭಾವಿಕ ಮಂದಿರನೆನ್ನಿ| ಇಂದುಶೇಖರ ನೀಲಕಂಧರನೆನ್ನಿ |೬| ದುರ್ದನುಜಾಸುರ ಮರ್ದಕನೆನ್ನಿ| ಕಪರ್ದಿಕೃಪಾಲ ತೇ ವರ್ಧಕನೆನ್ನಿ |೭| ಶರಣು ಸುರಾರ್ಚಿತ ಚರಣನೆ ಎನ್ನಿ| ಪರಮ ಭಕ್ತರನು ಪೊರೆಯುವನೆನ್ನಿ |೮| ತ್ರಿಪುರಾಂತಕ ನಿಷ್ಕಪಟನು ಎನ್ನಿ| ಅಪಮೃತ್ಯುಹರ ಖಳರಪಹರನೆನ್ನಿ |೯| ದಕ್ಷನ ಯಜ್ಞ ವೀಶಿಕ್ಷಕನೆನ್ನಿ| ಪಕ್ಷಿಗಮನ ಭಟರಕ್ಷಕನೆನ್ನಿ |೧೦| ಈ ಪರಿ ನೆನೆದರೆ ಪಾಪದೂರೆನ್ನಿ| ಶ್ರೀ ಪ್ರಸನ್ವೆಂಕಟೇಶಗೆ ಪ್ರಿಯನೆನ್ನಿ |೧೧| bEsaradeMdu sadASivanenni | kASiya praBu viSvESvaranenni |pa| naMdivAhana AnaMda enni| suMdara gaNapana taMde enni |1|   naMbe BavAMbudi aMbiganenni| aMbikeyarasu trayaMbakanenni |2| karparabhAMDa kaMdarpaharanenni| sarpaBUShaNa suKadarpaNanenni |3|...

ಚರಣವ ತೋರೈ ಚೆಲುವರ ಅರಸನೆ | ವಿಜಯ ದಾಸರು | Charanava Torai | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಚರಣವ ತೋರೈ ಚೆಲುವರ ಅರಸನೆ ಚರಣವ ತೋರೈ ||ಪ|| ಸ್ಮರಣೆ ಮಾತ್ರದಿ ಮುಕುತಿಯ ಕೊಡುವ ಚರಣವ ತೋರೈ || ಅಪ || ರಮ್ಮೆಯ ಮನಕೆ ಬೆಡಗು ತೋರುವ ಚರಣವ ತೋರೈ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ || ೧ || ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜೆಯ ಮನೆಗೆ ಪೋದ ಚರಣವ ತೋರೈ ನೂಕಿ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ || ೨ || ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟ ಚರಣವ ತೋರೈ ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ ಉಡುಪಿಯ ಸ್ಥಳದಲಿ ನಿಂದು ಪೂಜೆಯಗೊಂಬ ಚರಣವ ತೋರೈ || ೩ || caraNava tOrai celuvara arasane caraNava tOrai ||pa||   smaraNe mAtradi mukutiya koDuva caraNava tOrai || apa || rammeya manake beDagu tOruva charaNava tOrai bommaadigaLa manake nilukada caraNava tOrai cimmi raavaNana balu dUragaida charaNava tOrai Gammane mosaru meddu ODuva charaNa tOrai || 1 || gOkula bhUmiya paavana maaDida charaNava tOrai lOkavanellaa aDagisikoMDaa charaNava tOrai bEkeMdu ku...

ವೀರ ಹನುಮ ಬಹು | ಶ್ರೀ ಪುರಂದರ ವಿಠಲ | Veera Hanuma Bahu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara Dasaru ವೀರ ಹನುಮ ಬಹು ಪರಾಕ್ರಮ ||ಪ|| ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅಪ|| ರಾಮದೂತನೆನಿಸಿಕೊಂಡೆ ನೀ | ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ || ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರುಷವಿತ್ತು ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ ||೧|| ಗೋಪಿಸುತನ ಪಾದ ಪೂಜಿಸಿ | ಗದೆಯ ಧರಿಸಿ ಬಕಾಸುರನ ಸಂಹರಿಸಿದೆ || ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||೨|| ಮಧ್ಯಗೇಹನಲ್ಲಿ ಜನಿಸಿ ನೀ | ಬಾಲ್ಯದಲ್ಲಿ ಮಸ್ಕರೀಯ ರೂಪಗೊಂಡೆ ನೀ || ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ ಸಜ್ಜನರ ಪೊರೆವ ಮುದ್ದು ಪುರಂದರ ವಿಠಲ ದಾಸ ||೩|| vIra hanuma bahu parAkrama ||pa|| suj~jAnavittu pAlisenna jIvarOttama ||apa|| rAmadUtanenisikoMDe nI | rAkShasara vanavanella kittu baMde nI || jAnakige mudreyittu jagatigella haruShavittu cUDAmaNiya rAmagittu lOkake muddenisi mereva ||1|| gOpisutana pAda pUjisi | gadeya dharisi bakAsurana saMhariside || draupadiya moreya kELi matte kIcakanna koMdu BImaneMba nAma dharisi saMgrAma dhIranAgi jagadi ||2|| madhyagEhanalli janisi nI ...

ಸತ್ಯವಂತರಿಗಿದು ಕಾಲವಲ್ಲ | ಪುರಂದರ ವಿಠಲ | Satyavantarigidu Kala | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸತ್ಯವಂತರಿಗಿದು ಕಾಲವಲ್ಲ || ದುಷ್ಟ ಜನರಿಗಿದು ಸುಭೀಕ್ಷ ಕಾಲ ||ಪ|| ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ | ಪರಮ ಪಾಪಿಗಳಿಗೆ ಸುಭೀಕ್ಷ ಕಾಲ || ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ | ಧರೆಗೆ ಜಾರೆಗಳ ಕೊಂಡಾಡುವ ಕಾಲ ||೧|| ಉಪಕಾರ ಮಾಡಿದರೆ ಅಪಕರಿಸುವ ಕಾಲ | ಸಕಲವೂ ತಿಳಿದವಗೆ ದುರ್ಭೀಕ್ಷ ಕಾಲ || ಪತಿಸುತರು ಎಂಬುವರ ನಂಬಲರಿಯದ ಕಾಲ | ಸಟೆಯಲ್ಲವಿದೆ ವಿಪರೀತ ಕಾಲ ||೨|| ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ | ಕರ್ಮಿ ಪಾತಕರಿಗೆ ಬಹು ಸೌಖ್ಯ ಕಾಲ || ನಿರ್ಮಲಾತ್ಮಕ ಸಿರಿ ಪುರಂದರ ವಿಠಲನ | ಮರ್ಮದೊಳು ಭಜಿಪಲರಿಯದ ಕಾಲವಯ್ಯ ||೩|| satyavaMtarigidu kAlavalla || duShTa janarigidu suBIkSha kAla ||pa||   harismaraNe mADuvage kShayavAguva kAla | parama pApigaLige suBIkSha kAla || sthiravAda pativrateya pararu niMdipa kAla | dharege jAregaLa koMDADuva kAla ||1|| upakAra mADidare apakarisuva kAla | sakalavU tiLidavage durBIkSha kAla || patisutaru eMbuvara naMbalariyada kAla | saTeyallavide viparIta kAla ||2||   dharma mADuvage nirmUlavAguva kAla | karmi pAtakarige bahu sauKya kAla || nirmal...

ಸ್ಮರಿಸು ಗುರುಗಳ ಮನವೆ | ವರದ ಗೋಪಾಲ ವಿಠಲ | Smarisu Gurugala Manave | Varada Gopala Vithala

Image
ಸಾಹಿತ್ಯ : ಶ್ರೀ ವರದ ಗೋಪಾಲ ದಾಸರು  Kruti: Sri Varada Gopala Dasaru ಸ್ಮರಿಸು ಗುರುಗಳ ಮನವೆ ||ಪ|| ಸ್ಮರಿಸು ಗುರುಗಳ ನಿನಗೆ ಪರಮ ಮಂಗಳವು ದುರಿತ ಪರ್ವತಕೆ ಪವಿಯೆಂದು ತಿಳಿದು ||ಅಪ|| ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿಗಳ ಜ್ವರ ಮೊದಲಾದ ಭಯಗಳಿಂದ ಪೊರೆದು ಮಂಗಳವೀವ ನರಹರಿಯ ದಾಸರ ಚರಣ ಕಂಡೆನೊ ದುರಿತ ಪರಿಹಾರವಾಯಿತು  ||೧|| ಗುರುಸ್ಮರಣಿಯಿಂದ ಸಕಲ ಆಪತ್ತು ಪರಿಹಾರ ಗುರುಸ್ಮರಣೆಯಿಂದ ಸಕಲ ಸಂಪದವು ನಿನಗೆ ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು  ಗುರು ಸ್ಮರಣೆಯಿಂದ ಹರಿಯೊಲಿದು ಪೊರೆವಾ ||೨|| ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ ಗುರುಗಳೇ ಪರಮ ಹಿತಕರು ನೋಡು ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ದುರಿತಗಳ ಕಳೆವನು ಸುಖಗರೆವ ನೋಡು ||೩|| smarisu gurugaLa manave ||pa|| smarisu gurugaLa ninage parama maMgaLavu durita parvatake paviyeMdu tiLidu ||apa|| uraga vRuScika vyaaGra arasu cOraagni karigaLa jvara modalaada bhayagaLiMda poredu maMgaLavIva narahariya daasara caraNa kaMDeno durita parihaaravaayitu  ||1|| gurusmaraNiyiMda sakala Apattu parihaara gurusmaraNeyiMda sakala saMpadavu ninage guru smaraNeyiMda vishESha dhana dorakuvudu  guru smaraNeyiMda hariyolidu...

ಸಕಲ ಗ್ರಹಬಲ ನೀನೇ | ಪುರಂದರ ವಿಠಲ | Sakala Grahabala | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸಕಲ ಗ್ರಹಬಲ ನೀನೇ ಸರಸಿಜಾಕ್ಷ ||ಪ|| ನಿಖಿಳ ರಕ್ಷಕ ನೀನೇ ವಿಶ್ವ ವ್ಯಾಪಕನೆ ||ಅಪ|| ರವಿ ಚಂದ್ರ ಬುಧ ನೀನೇ ರಾಹು ಕೇತುವು ನೀನೇ | ಕವಿಗುರುವು ಶನಿಯು ಮಂಗಳನು ನೀನೇ || ದಿವರಾತ್ರಿಯು ನೀನೇ ನವ ವಿಧಾನವು ನೀನೇ  ಭವರೋಗ ಹರ ನೀನೇ ಭೇಷಜನು ನೀನೇ ||೧|| ಪಕ್ಷ ಮಾಸವು ನೀನೇ ಪರ್ವ ಕಾಲವು ನೀನೇ | ನಕ್ಷತ್ರ ಯೋಗ ತಿಥಿ ಕರಣನು ನೀನೇ || ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ   ಪಕ್ಷಿವಾಹನ ದೀನ ರಕ್ಷಕನು ನೀನೇ ||೨|| ಋತು ವತ್ಸರವು ನೀನೇ ವ್ರತಯುಗಾದಿಯು ನೀನೇ | ಕ್ರತು ಹೋಮ ಸಂಧ್ಯಾನ ಸದ್ಗತಿಯು ನೀನೇ ಜಿತವಾಗಿ ಎನ್ನೊಡೆಯ ಪುರಂದರ ವಿಠಲನೇ ಸ್ತುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೇ ||೩|| sakala grahabala nInE sarasijAkSha ||pa||   niKiLa rakShaka nInE viSva vyaapakane ||apa||   ravi caMdra budha nInE rAhu kEtuvu nInE | kaviguruvu Saniyu maMgaLanu nInE || divarAtriyu nInE nava vidhAnavu nInE  BavarOga hara nInE BEShajanu nInE ||1|| pakSha mAsavu nInE parva kAlavu nInE | nakShatra yOga tithi karaNanu nInE || akShayaveMdu draupadiya mAnava kAyda   pakShivAhana dIna rakShakanu n...

ಶ್ರೀ ಗೋಪಾಲ ದಾಸರ ಸ್ತೋತ್ರ ಸುಳಾದಿ | ಶ್ರೀ ಅಭಿನವ ಪ್ರಾಣೇಶವಿಠ್ಠಲ ದಾಸರು | Sri Gopala Dasara Stotra Suladi | Abhinava PraneshaVittala

Image
ರಚನೆ : ಶ್ರೀ ಅಭಿನವ ಪ್ರಾಣೇಶವಿಠ್ಠಲ ದಾಸರು  Kriti : Sri Abhinava Praneshavittala Dasaru ಹರಿದಾಸ ಚತುಷ್ಟಯ ಪುರುಷ ತೃತೀಯರಾದ ತುರುಪಾಲ ದಾಸರ ಚರಿತೆ ತಿಳಿದಷ್ಟು ಬರೆಯುವೆ ಶಿರಿ ಹರಿ ಮರುತರ ದಯದಿಂದ ಗುರು ವರದೇಂದ್ರರ ಪರಮಾನುಗ್ರಹದಿಂದ ವರದೇಶದಾಸರ ಕರುಣದಿಂದ ಮುರಹರನಾಜ್ಞದಿ ಕರಿಕಂಧರಿಯೊಳು ಪುರ ದಧಿಶಿಲೆಯಲ್ಲಿ ಪುಟ್ಟಿ  ಪರ ಶುಕ್ಲನಂತೆ ಬೆಳೆದ ಭಾಗಣ್ಣನು ದುರುಳ ಭಾಗದೇಯಾರು ಚರಚರಾಸ್ತಿಯನಪ ಹರಿಸಿ ದೂಡಲು ಬಂದು ಸಂಕಾಪುರದಿ ಮರುತದೇವನ ಆಶ್ರಯದಲ್ಲಿ ನೆಲೆಸಿಹ ಶಿರಿವರ ಅಭಿನವ ಪ್ರಾಣೇಶವಿಠ್ಠಲನ ದಯದಿ ||೧|| ಗಾಯತ್ರೀ ಮಂತ್ರ ಪುನಶ್ಚರಣೆಯಲ್ಲಿ ತಾಯಿಯ ಒಲಿಸಿದನು ಮೌನ ತಪಸಿನಲಿ ಬೀಯ ಮಾಡುತಲೊಬ್ಬ ಮರಳುವ ನೀರೆರೆಯೆ ಘಾಯಗೊಂಡು ತಾನೆ ಬಹುಪರಿ ಬಳಲಿದನು ವಾಯುಭಕ್ಷನೊಮ್ಮೆ ಶಿರದಲಿ ಫಣವಿರಿಸೆ ಕಾಯವ ಸುತ್ತಿರಲು ಕಂಡು ಜನರು ಬೆದರೆ ತೋಯಜಾಕ್ಷ ಅಭಿನವ ಪ್ರಾಣೇಶವಿಠ್ಠಲನ ಪ್ರೀಯ ದಾಸರಿಗುಂಟೆ ನೋವು ಭಯವು ||೨|| ಪೃಥ್ವಿಪನರಿಕೆಯನಾಲಿಸಿ ಬೇಗನೆ ಉತ್ತನೂರಿಗೆ ಬಂದು ನೆಲೆಸಿದನು ಚಿತ್ತಜನಯ್ಯನ ಗಿರಿ ವೆಂಕಟೇಶನ ತುತಿಸುತಾಕ್ಷಣ ಸೇವೆಗೈಯುತಲಿ ನಿತ್ಯ ಜನರಿಗೆ ಭವಿಷ್ಯವ ಪೇಳುತ್ತ ಸತ್ಯ ಕಥಾಮೃತ ಸುರಿಸುತಲಿ ಭೃತ್ಯರಿಗುಣಿಸುತ್ತ ಅವರ ಮನ ತಣಿಸುತ್ತ ನಿತ್ಯನೂತನ ಮಹಿಮೆ ತೋರುತಲಿ ಹತ್ತಿ ಕುದುರೆಯ ಬಂದು ಅಲೆನಾಹಿ ಎಂದು ಕತ್ತುರಿ ಚಲುವನ ಅಣತಿಯಂತೆ ತೆತ್ತಿಗರೊಡನೆ ಪಂಢರಪುರವ ಕಂಡು ಯಜಿಸಿ ಉತ್ತರ ದೇಶದ ಯಾತ್ರೆಯ ಸಮಯದೀ ಸೋತ್...

ಎಂಥ ಚೆಲುವಗೆ ಮಗಳನು | ಪುರಂದರ ವಿಠಲ | Entha cheluvage magala | Sri Purandara Dasaru

Image
ಸಾಹಿತ್ಯ: ಶ್ರೀ ಪುರಂದರ ದಾಸರು  Kruti:  Sri Purandara Dasaru ಎಂಥ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ ||ಪ|| ಕಂತು ಹರ ಶಿವ ಚೆಲುವನೆನ್ನುತ ಮೆಚ್ಚಿದನು ನೋಡಮ್ಮಮ್ಮ ||ಅಪ|| ಮೋರೆ ಐದು ಮೂರು ಕಣ್ಣ ವಿಪರೀತವ ನೋಡಮ್ಮಮ್ಮ | ಕೊರಳೊಳು ರುಂಡ ಮಾಲೆಯ ಧರಿಸಿದ ಉರಗ ಭೂಷಣನ ನೋಡಮ್ಮಮ್ಮ ||೧|| ತಲೆಯೆಂಬೋದು ನೋಡಿದರೆ ಜಡೆ ಹೊಳೆಯುತಲಿದೆ ನೋಡಮ್ಮಮ್ಮ | ಹಲವು ಕಾಲದ ತಪಸಿ ರುದ್ರನ ಮೈ ಬೂದಿಯು ನೋಡಮ್ಮಮ್ಮ ||೨|| ಭೂತ ಪ್ರೇತ ಪಿಶಾಚಿಗಳೆಲ್ಲ ಪರಿವಾರವು ನೋಡಮ್ಮಮ್ಮ | ಈತನ ನಾಮವು ಒಂದೇ ಮಂಗಳ ಮುಪ್ಪುರ ಹರನ ನೋಡಮ್ಮಮ್ಮ ||೩|| ಮನೆಯೆಂಬೋದು ಸ್ಮಶಾನವು ನೋಡೆ | ಗಜ ಚರ್ಮಾಂಬರವಮ್ಮಮ್ಮಾ  ಹಣವೊಂದಾದರು  ಕೈಯೊಳಗಿಲ್ಲ ಕಪ್ಪರವನು ನೋಡಮ್ಮಮ್ಮ ||೪|| ನಂದಿವಾಹನ ನೀಲಕಂಠನ ನಿರ್ಗುಣನ ನೋಡಮ್ಮಮ್ಮ | ಇಂದಿರೆರಮಣ ಶ್ರೀ ಪುರಂದರ ವಿಠಲನ ಪೊಂದಿದವನ ನೋಡಮ್ಮಮ್ಮ ||೫|| eMtha celuvage magaLanu koTTanu giriraajanu nODammamma ||pa|| kaMtu hara shiva celuvanennuta meccidanu nODammamma ||apa|| mOre aidu mUru kaNNa viparItava nODammamma | koraLoLu ruMDa maaleya dharisida uraga bhUShaNana nODammamma ||1|| taleyeMbOdu nODidare jaDe hoLeyutalide nODammamma | halavu kaalada tapasi rudrana mai bUdiyu nODammamma ||2|| bhUta prEta...

ನಿನ್ನ ಧ್ಯಾನವ ಕೊಡೊ | ಪುರಂದರ ವಿಠಲ | Ninna Dhyanava Kodo | Purandara Dasaru

Image
ಸಾಹಿತ್ಯ: ಶ್ರೀ ಪುರಂದರ ದಾಸರು  Kruti: Sri Purandara Dasaru ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೋ  ಪನ್ನಗಶಯನ ಶ್ರೀ ಪುರಂದರ ವಿಠಲ ||ಪ|| ಅಂಬುಜ ನಯನನೇ ಅಂಬುಜ ಜನಕನೇ | ಅಂಬುಜನಾಭ ಶ್ರೀ ಪುರಂದರ ವಿಠಲ ||೧|| ಪಂಕಜ ನಯನನೇ ಪಂಕಜ ವದನನೇ | ಪಂಕಜನಾಭ ಶ್ರೀ ಪುರಂದರ ವಿಠಲ ||೨|| ಭಾಗೀರಥಿ ಪಿತ ಭಾಗವತರ ಪ್ರಿಯ | ಯೋಗಿಗಳರಸೇ ಶ್ರೀ ಪುರಂದರ ವಿಠಲ ||೩|| ninna dhyAnava koDo enna dhanyana mADO  pannagaSayana SrI puraMdara viThala ||pa||   aMbuja nayananE aMbuja janakanE | aMbujanABa SrI puraMdara viThala ||1||   paMkaja nayananE paMkaja vadananE | paMkajanABa SrI puraMdara viThala ||2||   BAgIrathi pita BAgavatara priya | yOgigaLarasE SrI puraMdara viThala ||3||

ಸುಂದರ ಮೂರುತಿ ಮುಖ್ಯಪ್ರಾಣ | ಪುರಂದರ ದಾಸರು | Sundara Muruti | Sri Purandara Dasaru

Image
ಸಾಹಿತ್ಯ: ಶ್ರೀ ಪುರಂದರ ದಾಸರು  Kruti: Sri Purandara Dasaru   ಸುಂದರ ಮೂರುತಿ ಮುಖ್ಯಪ್ರಾಣ ಬಂದ ಮನೆಗೆ ||ಪ|| ಪ್ರಾಣ ಬಂದ ಮನೆಗೆ ಶ್ರೀ ರಾಮನಾಮ ಧ್ವನಿಗೆ ||ಅಪ|| ಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ |  ಝಣಕು ಝಣಕು ಎಂದು ಕುಣಿ ಕುಣಿದಾಡುತ ||೧|| ತುಂಬುರು ನಾರದರು ವೀಣೆ ಬಾರಿಸುತ ||  ವೀಣೆ ಬಾರಿಸುತ ಶ್ರೀ ರಾಮ ನಾಮ ಪಾಡುತ ||೨|| ಪುರಂದರ ವಿಠಲನ ನೆನೆದು ಪಾಡುತಲಿ ||  ನೆನೆದು ಪಾಡುತಲಿ ಆಲಿಂಗನ ಮಾಡುತಲಿ ||೩|| suMdara mUruti muKyapraaNa baMda manege ||pa|| praaNa baMda manege shrI raamanaama dhvanige ||apa|| kaNakaalaMduge gejje JaNa JaNarenuta |  JaNaku JaNaku eMdu kuNi kuNidaaDuta ||1|| tuMburu naaradaru vINe baarisuta ||  vINe baarisuta shrI raama naama paaDuta ||2|| puraMdara viThalana nenedu paaDutali ||  nenedu paaDutali AliMgana maaDutali ||3||

ಬಂದಳು ನಮ್ಮ ಮನೆಗೆ | ಶ್ರೀ ಪುರಂದರ ದಾಸರು | Bandalu Namma Manege | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti:  Sri Purandara Dasaru ಬಂದಳು ನಮ್ಮ ಮನೆಗೆ ಶ್ರೀ ಮಹಾಲಕ್ಷ್ಮೀ ಸಂದೇಹವಿಲ್ಲದಂತೆ ||ಪ|| ಬಂದಳು ನಮ್ಮ ಮನೆಗೆ ನಿಂದಳು ಗೃಹದಲ್ಲಿ  ನಂದಕಂದನ ರಾಣಿ ಇಂದಿರೇಶನ ಸಹಿತ ||ಅಪ|| ಹೆಜ್ಜೆ ಮೇಲ್ಹೆಜ್ಜೆನಿಕ್ಕುತ ಗೆಜ್ಜೆಯ ಕಾಲು ಘಲು ಘಲು ಘಲುರೆನ್ನುತ ||  ಮೂರ್ಜಗ ಮೋಹಿಸುತ ಮುರಹರನ ರಾಣಿ ಸಂಪತ್ತು ಕೊಡಲಿಕ್ಕೆ ಶ್ರೀನಿವಾಸನ ಸಹಿತ ||೧|| ಮಾಸ ಶ್ರಾವಣ ಮಾಸವು ಶುಕ್ರವಾರ ಪೌರ್ಣಮಿ ದಿನದಂದು |  ಭೂಸುರರೆಲ್ಲ ಸೇರಿ ಸಾಸಿರ ನಾಮ ಪಾಡಿ ವಾಸವಾಗಿರಲಿಕ್ಕೆ ವಾಸುದೇವನ ಸಹಿತ ||೨|| ಕನಕವಾಯಿತು ಮಂದಿರ ಜನನಿ ಬರಲು ಜಯ ಜಯ ಜಯವೆನ್ನಿರೋ ||  ಸನಕಾದಿ ಮುನಿಗಳ ಸೇವೆಯನು ಸ್ವೀಕರಿಸಿ ಕನಕವಲ್ಲಿಯು ತನ್ನ ಕಾಂತನ ಕರೆದುಕೊಂಡು ||೩|| ಉಟ್ಟ ಪೀತಾಂಬರವು ಹೊಳೆಯುತ್ತ ತೊಟ್ಟ ಕಂಕಣ ಕೈ ಪಿಡಿಯುತ್ತಾ ||  ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ಪಟ್ಟದರಸಿಯು ನಮಗೆ ಇಷ್ಟಾರ್ಥ ಕೊಡಲಿಕ್ಕೆಂದು||೪|| baMdaLu namma manege SrI mahAlakShmI saMdEhavilladaMte ||pa||   baMdaLu namma manege niMdaLu gRuhadalli  naMdakaMdana rANi iMdirESana sahita ||apa|| hejje mElhejjeyanikkuta gejjeya kAlu Galu Galu Galurennuta ||  mUrjaga mOhisuta muraharana rANi saMpattu koDalikke SrInivAsana sahita ||1||...

ಮಂತ್ರಾಲಯ ಮಂದಿರ | ಅಭಿನವ ಜನಾರ್ದನ ವಿಠಲ | Mantralaya Mandira | Abhinava Janardana Vithala

Image
ಸಾಹಿತ್ಯ : ಶ್ರೀ ಅಭಿನವ ಜನಾರ್ದನ ವಿಠಲ ದಾಸರು  Kruti:Sri Abhinava Janardana Vithala Dasaru ಮಂತ್ರಾಲಯ ಮಂದಿರ | ಮಾಂ ಪಾಹಿ ಮಂತ್ರಾಲಯ ಮಂದಿರ ||ಪ|| ಮಧ್ವಾಭಿಧಮುನಿ ಸದ್ವಂಶೋದ್ಭವ || ಅದ್ವೈತಾರಣ್ಯ ಸದ್ವೀತಿ ಹೋತ್ರ ||೧|| ಸುಧೀಂದ್ರ ಯತಿಕರ ಪದುಮೋದ್ಭವ | ಸುಧಿ ಗುರು ರಾಘವೇಂದ್ರ ಕೋವಿದ ಕುಲವರ್ಯ ||೨|| ದಂಡಧರ ಕೋದಂಡ ಪಾಣಿಪದ || ಪುಂಡರೀಕ ಧ್ಯಾನ ಉದ್ದಂಡ ಮತೇ ಹೇ ||೩|| ಸುರಧೇನು ಕಲ್ಪತರು ವರಚಿಂತಾಮಣಿ || ಶರಣಾಗತ ಜನ ಪರಿಪಾಲತ್ವಂ ||೪|| ಅಭಿನವ ಜನಾರ್ದನ ವಿಠಲ ಪದ || ಯುಗಳ ಧ್ಯಾನಿಪ ಮುನಿ ಕುಲೋತ್ತಂಸ ||೫|| maMtrAlaya maMdira | mAM pAhi maMtrAlaya maMdira ||pa|| madhvABidhamuni sadvaMSOdBava || advaitAraNya sadvIti hOtra ||1||   sudhIMdra yatikara padumOdBava | sudhi guru rAGavEMdra kOvida kulavarya ||2||    daMDadhara kOdaMDa pANipada || puMDarIka dhyAna uddaMDa matE hE ||3||   suradhEnu kalpataru varaciMtAmaNi || SaraNAgata jana paripAlatvaM ||4||   aBinava janArdana viThala pada || yugaLa dhyAnipa muni kulOttaMsa ||5||

ಗಜವದನ ಬೇಡುವೆ | ಶ್ರೀ ಪುರಂದರ ವಿಠಲ | Gajavadana Beduve | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti:   Sri Purandara Dasaru ಗಜವದನ ಬೇಡುವೆ ಗೌರೀತನಯ ||ಪ|| ತ್ರಿಜಗ ವಂದಿತನೇ ಸುಜನರ ಪೊರೆವನೇ ||ಅಪ|| ಪಾಶಾಂಕುಶಧರ ಪರಮ ಪವಿತ್ರ |  ಮೂಷಿಕ ವಾಹನ ಮುನಿಜನ ಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋ  ಸಾಧು ವಂದಿತನೇ ಆದರದಿಂದಲಿ || ೨ || ಸರಸಿಜನಾಭ ಶ್ರೀ ಪುರಂದರ ವಿಠಲನ  ನಿರುತ ನೆನೆಯುವಂತೆ ದಯ ಮಾಡೋ ವರವಾ ||೩|| gajavadana bEDuve gaurItanaya ||pa|| trijaga vaMditanE sujanara porevanE ||apa||   pASAMkuSadhara parama pavitra |  mUShika vAhana munijana prEma ||1||   mOdadi ninnaya pAdava tOrO  sAdhu vaMditanE AdaradiMdali || 2 || sarasijanABa SrI puraMdara viThalana  niruta neneyuvaMte daya mADO varavA ||3||

ನೀರೆ ತೋರೆಲೆ ಜಗತ್ಪಾಲ | ಶ್ರೀ ಮಹಿಪತಿಸುತ ದಾಸರು | Neere Torele Jagatpala | Sri Mahipatisuta Dasaru

Image
ಸಾಹಿತ್ಯ : ಶ್ರೀ ಮಹಿಪತಿಸುತ ದಾಸರು    Kruti:   Sri Mahipatisuta Dasaru ನೀರೆ ತೋರೆಲೆ ಜಗತ್ಪಾಲ ಮುಕುಂದನ ||ಪ|| ಶೂಲಧರನ ಮಿತ್ರನ ತೋರೇ ||ಅಪ|| ಪಾಂಡವವರದ ಶ್ರೀ ಪುಂಡರೀಕಾಕ್ಷನ  ಚಂದ್ರಕೋಟಿ ಪ್ರಕಾಶನ ಕುಂಡಲ ವಿಭೂಷಿತ ಕಂಠಸುಶೋಭಿತ ಪುಂಡಲೀಕ ವರದ ಶ್ರೀ ಪಾಂಡುರಂಗನ ||೧|| ಪರಮವರಪುರಾಣ ಪುರುಷೋತ್ತಮನ ನರಕಾಸುರ ಮರ್ದನ ಗೋಪಾಲನ ಉರಾಗಾರಿ ಗಮನನ ನಿರುಪಮ ಚರಿತನಾ- ಗ್ರಜನಾದ ವಾಸುದೇವ ಮುಕುಂದನ ||೨|| ಸನಕ ಸನಂದನ ಮುನಿಜನ ಮಾನಸ ಅನುಪಮ ಅನಂತ ಮಹಿಮನ ವನರುಹ ಯೋಗಿವಂದ್ಯ ಮುಕುಂದನ ಘನ ಮಹಿಪತಿಸುತಪ್ರಭು ಶ್ರೀಕೃಷ್ಣನ ||೩|| nIre tOrele jagatpaala mukuMdana ||pa|| SUladharana mitrana tOrE ||apa|| paaMDavavarada SrI puMDarIkaakShana  chaMdrakOTi prakaaSana kuMDala vibhUShita kaMThasuSObhita puMDalIka varada SrI paaMDuraMgana ||1|| paramavarapuraaNa puruShOttamana narakaasura mardana gOpaalana uraagaari gamanana nirupama caritanaa- grajanaada vaasudEva mukuMdana ||2|| sanaka sanaMdana munijana maanasa anupama anaMta mahimana vanaruha yOgivaMdya mukuMdana ghana mahipatisutaprabhu SrIkRuShNana ||3||

ಅಳುವುದ್ಯಾತಕೋ ರಂಗಯ್ಯ | ಪುರಂದರ ವಿಠಲ | Aluvudyatako Rangayya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅಳುವುದ್ಯಾತಕೋ ರಂಗಯ್ಯ | ಅತ್ತರಂಜಿಪ ಗುಮ್ಮ ||ಪ|| ಪುಟ್ಟಿದೇಳು ದಿವಸದಿ ದುಷ್ಟ ಪೂತನಿಯ ಕೊಂದೆ ||  ಮುಟ್ಟಿ ವಿಷದ ಮೊಲೆಯುಂಡ ಕಾರಣ ದೃಷ್ಟಿ ತಾಕಿತೆ ನಿನಗೆ ರಂಗಯ್ಯ ||೧|| ಬಾಲಕ ತನದಿ ಗೋಪಾಲಕರೊಡನಾಡಿ | ಕಾಳಿಂಗ ಮಡುವನು  ಕಲಕಿದ ಕಾರಣ ಕಾಲು ಉಳುಕಿತೆ ನಿನಗೆ ರಂಗಯ್ಯ ||೨|| ತುರುವ ಕಾಯಲು ಪೋಗಿ ಭರದಿಂದ್ರ ಮಳೆಗರೆಯೆ ||  ಬೆರಳಲಿ ಬೆಟ್ಟವ ನೆತ್ತಿದ ಕಾರಣ ಬೆರಳು ನೋಯಿತೆ ರಂಗಯ್ಯ ||೩|| ವಸುದೇವ ಸುತನಾಗಿ ಅಸುರ ಮಲ್ಲರ ಕೊಂದು |  ಕಸುವಿನ ಕಂಸನ ಕೊಂದ ಕಾರಣ ಕಿಸುರು ತಾಕಿತೆ ರಂಗಯ್ಯ ||೪||   ಶರಣು ವೇಲಾಪುರದ ಚೆಲುವ ಚೆನ್ನಿಗರಾಯ |  ಪರಿ ಪರಿ ವಿಧದಿಂದ ಶರಣರ ಪೊರೆಯುವ ವರದ ಪುರಂದರ ವಿಠಲ ||೫|| aLuvudyAtakO raMgayya | attaraMjipa gumma ||pa|| puTTidELu divasadi duShTa pUtaniya koMde ||  muTTi viShada moleyuMDa kAraNa dRuShTi tAkite ninage raMgayya ||1|| bAlaka tanadi gOpAlakaroDanADi | kALiMga maDuvanu  kalakida kAraNa kAlu uLukite ninage raMgayya ||2|| turuva kAyalu pOgi BaradiMdra maLegareye ||  beraLali beTTava nettida kAraNa beraLu nOyite raMgayya ||3|| vas...

ಜಾಣೆ ನೋಡೋಣ ನಡಿ | ಪುರಂದರ ವಿಠಲ | Jane Nodona Nadi | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಜಾಣೆ ನೋಡೋಣ ನಡಿ ವೇಣುಗೋಪಾಲನ | ವೇಣುಗೋಪಾಲನ ಪ್ರಾಣದೊಲ್ಲಭನ || ಪ || ದೇವಕಿ ಉದರದಿ ಜನಿಸಿ ಬಂದವನ | ಮಾವ ಕಂಸನ ಕೊಂದ ದೇವಾದಿದೇವನ ||೧|| ಕಿರೀಟ ಕುಂಡಲಧರ ಪದಕದಿ ಹೊಳೆವನ | ಪರಮ ಪಾವನ ಮುದ್ದು ಮುರಳಿ ಊದುವನ ||೨|| ಮುಕ್ತಿದಾಯಕನಾಗಿ ಮೆರೆವ ಸುಂದರನ | ಭಕ್ತವತ್ಸಲ ನಮ್ಮ ಪುರಂದರ ವಿಠಲನ ||೩|| jANe nODONa naDi vENugOpAlana | vENugOpAlana prANadollaBana || pa || dEvaki udaradi janisi baMdavana | mAva kaMsana koMda dEvAdidEvana ||1|| kirITa kuMDaladhara padakadi hoLevana | parama pAvana muddu muraLi Uduvana ||2|| muktidAyakanAgi mereva suMdarana | Baktavatsala namma puraMdara viThalana ||3||

ಗುರುರಾಯರ ನಂಬಿರೋ ಮಾರುತಿಯೆಂಬ | ಪುರಂದರ ವಿಠಲ | Gururayara Nambiro | Sri Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti:  Sri Purandara Dasaru ಗುರುರಾಯರ ನಂಬಿರೋ ಮಾರುತಿಯೆಂಬ ||ಪ|| ಗುರುರಾಯರ ನಂಬಿ ಬಿಡದೆ ಯಾವಾಗಲೂ  ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅಪ|| ವನಧಿಯ ಮನೋವೇಗದಿ ಲಂಘಿಸಿ ಮಹಿ ತನುಜೆ ಶೋಕವ ತರಿದು ವನವ ಬೇರೊಡನೆ ಕಿತ್ತೀಡಾಡಿ ಎದುರಾದ ದನುಜರ ಸದೆದು ಲಂಕೆಯ ತನ್ನ ಸಖಗಿತ್ತ ||೧|| ಕೌರವ ಬಕ ಹಿಡಿಂಬ ಕೀಚಕರೆಂಬ ದುರುಳ ಸಂತತಿ ನೆಗ್ಗೊತ್ತಿ ಘೋರ ಪಾತಕಿ ದುಶ್ಯಾಸನನ ರಕುತವ ಹೀರಿ ಮುದದಿ ಮುರ ವೈರಿಯ ಭಜಿಸಿದ ||೨|| ಜೀವೇಶರೊಂದೆಂಬುವ ದುರ್ವಾದಿಯ ಭಾವ ಶಾಸ್ತ್ರಗಳೋಡಿಸಿ ಕೋವಿದರಿಗೆ ಸದ್ಭಾಷ್ಯವ ತೋರಿದ  ದೇವ ಪುರಂದರ ವಿಠಲ ಸೇವಕರಾದ ||೩|| gururAyara naMbirO mArutiyeMba ||pa|| gururAyara naMbi biDade yAvAgalU  duritava kaLedu sadgatiya paDevarella ||apa||   vanadhiya manOvEgadi laMGisi mahi tanuje SOkava taridu vanava bEroDane kittIDADi edurAda danujara sadedu laMkeya tanna saKagitta ||1||   kaurava baka hiDiMba kIcakareMba duruLa saMtati neggotti GOra pAtaki duSyAsanana rakutava hIri mudadi mura vairiya Bajisida ||2||   jIvESaroMdeMbuva durvAdiya BAva SAstragaLODisi kOvidarige sadBAShyava tOrida  dEva puraMdar...

ಕಂಡೆ ನಾ ಉಡುಪಿಯ ಕೃಷ್ಣರಾಯನ | ಪುರಂದರ ವಿಠಲ | Kande Na Udupiya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಂಡೆ ನಾ ಉಡುಪಿಯ ಕೃಷ್ಣರಾಯನ ||ಪ|| ಭೂ ಮಂಡಲದೊಳಗೆ ಉದ್ಧಂಡ ಮೋಹಿಪನ ||ಅಪ|| ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ | ಚಂದ್ರ ಮೌಳೀಶ್ವರನ ಚರಣಕ್ಕೆರಗಿ || ಆಮೇಲೆ ನಾ ಬಂದು ಅನಂತೇಶ್ವರನ ಕಂಡು  ಹನುಮಂತನ ಪಾಡಿ ಮನದಿ ನಿಲ್ಲಿಸಿ ||೧|| ಸುತ್ತು ನದಿಯ ಕಂಡೆ ಸೂರ್ಯಪ್ರಭೆಯ ಕಂಡೆ | ಅಲ್ಲಿದ್ದ ಮಧ್ವಸರೋವರವ ಕಂಡೆ || ಮಧ್ವಮತದ ಅಷ್ಟ ಯತಿಗಳ ನಾ ಕಂಡೆ | ಪ್ರಸಿದ್ಧವಾಗಿರುವ ಶ್ರೀ ಉಡುಪಿ ಕೃಷ್ಣನ ಕಂಡೆ ||೨|| ಉಂಗುರ ಉಡಿದಾರ ಉಡಿಗಂಟೆ ನಾ ಕಂಡೆ | ರಂಗು ಮಾಣಿಕ್ಯದ ನವರತ್ನ ಮಾಲೆ ಕಂಡೆ || ದಿಂಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ | ಪುರಂದರ ವಿಠಲನ ಪಾದ ಕಮಲವ ಕಂಡೆ ||೩|| kaMDe nA uDupiya kRuShNarAyana ||pa|| BU maMDaladoLage uddhaMDa mOhipana ||apa||   samudrava nA kaMDu snAnAdigaLa mADi | caMdra mauLISvarana caraNakkeragi || AmEle nA baMdu anaMtESvarana kaMDu  hanumaMtana pADi manadi nillisi ||1||   suttu nadiya kaMDe sUryapraBeya kaMDe | allidda madhvasarOvarava kaMDe || madhvamatada aShTa yatigaLa nA kaMDe | prasiddhavAgiruva SrI uDupi kRuShNana kaMDe ||2||   uMgura uDidAra uDiga...

ಶೇಷಗಿರಿ ದೊರೆ ನಮ್ಮ | ವೆಂಕಟವಿಠಲ ದಾಸರು | Sheshagiri Dore | Sri Venkatavithala Dasaru

Image
ಸಾಹಿತ್ಯ : ಶ್ರೀ ವೆಂಕಟವಿಠಲ ದಾಸರು  Kruti: Sri Venkatavittala Dasaru ಶೇಷಗಿರಿ ದೊರೆ ನಮ್ಮ ಶ್ರೀನಿವಾಸನ ಕಂಡೆ ಶ್ರೀನಿವಾಸನ |ಪ| ಶ್ರೀನಿವಾಸನ ಕಂಡೆ ಶ್ರೀನಿವಾಸನ  ಜ್ಞಾನ ಗುರು ಮಧ್ವಮುನಿ ಮಾನಸ ಹಂಸನ ಕಂಡೆ ||ಅಪ|| ಗರುಡ ಶೇಷ ಗಿರಿಜಾರಮಣ ಸುರಭಾರರೆಲ್ಲ | ನಿರುತ ಸೇವಿಸುವ ಪಾದ ಸರಸಿಜಯುಗಳನ್ನ ಕಂಡೆ ||೧|| ಮಾನಿನೀ ರಮಾದೇವಿ ಬಣ್ಣಿಸುತ್ತಲೀ | ದಾನವಾಂತಕನ ಪಾದ ಜಾನು ಜಂಘಗಳನ್ನು ಕಂಡೆ ||೨|| ಪರಮಾತ್ಮನ್ನ ಗುಣಗಳನ್ನ ವರ್ಣಿಸುತ್ತಲೀ | ಸಿರಿದೇವಿ ಇರುವ ವಕ್ಷಸ್ಥಳವನ್ನು ಕಣ್ಣಾರೆ ಕಂಡೆ ||೩|| ವಾಸವಾರ್ಜುನನ ರಥದ ಮುಂದೆ ನಿಲ್ಲುವನಾ | ಏಸು ಮಹಿಮೆಯಿಂದ ಇರುವ ಹರಿಯ ಹಸ್ತಗಳನ್ನು ಕಂಡೆ ||೪|| ಹಾರಪದಕ ಉಂಗುರ ಕಿರೀಟ ಕುಂಡಲ | ಮಾರ ಜನಕ ಧರಿಸಿದ ಆಭರಣದ ಸೊಬಗನ್ನು ಕಂಡೆ ||೫|| ಮಂದಗಮನೆ ಗೋಪಿಕಂದ ಬಾಯೆಂದತ್ತಲೂ || ಮಂದಹಾಸದಿಂದ ನಗುವ ಸುಂದರ ವದನನನ್ನು ಕಂಡೆ ||೬|| ಕುಕ್ಷಿಯೋಳೀರೇಳು ಜಗವ ರಕ್ಷಿಸುವವನ || ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀಯ ರಮಣನ್ನ ಕಂಡೆ ||೭|| ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ  ಪುಂಡರೀಕಾಕ್ಷ ಸಿರಿ ವೆಂಕಟವಿಠಲನ್ನ ಕಂಡೆ ||೮|| SEShagiri dore namma SrInivAsana kaMDe SrInivAsana |pa| SrInivAsana kaMDe SrInivAsana  j~jAna guru madhvamuni mAnasa haMsana kaMDe ||apa||   garuDa SESha girijAramaNa suraBArarella | niruta...

ವೇಂಕಟರಮಣನೆ ಬಾರೋ | ಪುರಂದರ ವಿಠಲ | Venkataramanane Baaro | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವೇಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ |ಪ| ಪಂಕಜನಾಭ ಪರಮಪವಿತ್ರ ಶಂಕರ ಮಿತ್ರನೆ ಬಾರೋ |ಅಪ| ಮುದ್ದು ಮುಖದ ಮಗುವೆ ನಿನಗೆ ಮುದ್ದು ಕೊಡುವೆನು ಬಾರೋ| ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ |೧| ಮಂದರಗಿರಿಯನೆತ್ತಿದಾನಂದ ಮೂರುತಿಯೇ ಬಾರೋ| ನಂದನ ಕಂದ ಮುಕುಂದ ಗೋವಿಂದ ಇಂದಿರೆಯರಸನೆ ಬಾರೋ |೨| ಕಾಮನಯ್ಯ ಕರುಣಾಳೋ ಶ್ಯಾಮಲ ವರ್ಣನೆ ಬಾರೋ| ಕೋಮಲಾಂಗ ಶ್ರೀ ಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ |೩| vEMkaTaramaNane bArO SEShAcalavAsane bArO |pa| paMkajanABa paramapavitra SaMkara mitrane bArO |apa|   muddu muKada maguve ninage muddu koDuvenu bArO| nirdayavEkO ninnoLage nAnu poMdiddEnu bArO |1|   maMdaragiriyanettidAnaMda mUrutiyE bArO| naMdana kaMda mukuMda gOviMda iMdireyarasane bArO |2|   kAmanayya karuNALO SyAmala varNane bArO| kOmalAMga SrI puraMdara viThalane svAmirAyane bArO |3|

ವೆಂಕಟಾದ್ರಿ ನಿಲಯನ | ಮೋಹನ ವಿಠಲ | Venkatadri Nilayana | Sri Mohana Vithala

Image
ಸಾಹಿತ್ಯ : ಶ್ರೀ ಮೋಹನ ದಾಸರು (ಮೋಹನ ವಿಠಲ)  Kruti:   Sri Mohana Dasaru (Mohana Vithala) ವೆಂಕಟಾದ್ರಿ ನಿಲಯನ ಪಂಕಜನಾಭನ ತೋರಮ್ಮ ಲಕುಮಿ |ಪ| ಶೇಷಾದ್ರಿ ನಿಲಯನ ದೋಷವಿದೂರನ ತೋರಮ್ಮ ಲಕುಮಿ| ಅಂಜನಾದ್ರಿ ನಿಲಯನ ಕಂಜಜನಾಭನ ತೋರಮ್ಮ ಲಕುಮಿ| ಪುಂಡಲೀಕ ವರದನ ಪಂಢರಿ ರಾಯನ ತೋರಮ್ಮ ಲಕುಮಿ |ಅಪ| ವಸುದೇವ ದೇವಕಿ ಕಂದ| ನಮ್ಮ ಶಶಿಮುಖಿಯರೊಡನೆ ಆನಂದ|   ಪಶುಗಳ ಕಾಯ್ದ ಗೋವಿಂದ| ನಮ್ಮ ಬಿಸಜನಾಭ ಮುಕುಂದನ |೧| ಸಾಮಜರಾಜನ ವರದ| ಬಲು ಪ್ರೇಮದಿ ಭಕುತರ ಪೊರೆದಾ|   ಆ ಮಹಾ ದಿತಿಜರ ತರಿದ| ನಿಸ್ಸೀಮ ಮಹಿಮನಾಗಿ ಮೆರೆವನ |೨|   ಉರಗ ಗಿರಿಯಲಿಪ್ಪ| ನಮ್ಮ ಮರುತನ ಹೆಗಲೇರಿ ಬಪ್ಪ| ಶರಣರಿಗೊರವಿತ್ತು ತಪ್ಪ| ಸಿರಿ ಮೋಹನ ವಿಠಲ ತಿಮ್ಮಪ್ಪನ |೩| veMkaTAdri nilayana paMkajanABana tOramma lakumi |pa| SEShAdri nilayana dOShavidUrana tOramma lakumi| aMjanAdri nilayana kaMjajanABana tOramma lakumi| puMDalIka varadana paMDhari rAyana tOramma lakumi |apa|   vasudEva dEvaki kaMda| namma SaSimuKiyaroDane AnaMda| paSugaLa kAyda gOviMda| namma bisajanABa mukuMdana |1|   sAmajarAjana varada| balu prEmadi Bakutara poredA| A mahA ditijara tarida| nissIma mahimanAgi merevana |2|   ...

ಎಂದು ಕಾಂಬೆನು ಎನ್ನ ಸಲಹುವ | ಶ್ರೀ ವಾದಿರಾಜರ ಕೃತಿ | Endu Kambenu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಂದು ಕಾಂಬೆನು ಎನ್ನ ಸಲಹುವ ಬಂಧು ಬಳಗ ನಮ್ಮಪ್ಪನ || ತಿರುಪತಿಯಲಿ ಇಪ್ಪನ ವರಾಹ ತಿಮ್ಮಪ್ಪನ ||ಪ|| ದಂಡಿಗೆಯನು ಬಾರಿಸುತಲಿ ಶ್ರುತಿಗೂಡಿಕೊಂಡು ಪಾಡುತ || ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧|| ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು ಕರಗಳ || ಮುಗಿವೆ ನಾ ಕವಕವ ನಗುವೆ ನಾ ಎನ್ನೊಡೆಯನಾ ಪೊಗಳಿ ನಾ ||೨|| ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ನೇಮವ ಮಾಡುವೆ || ಪುಣ್ಯಕ್ಷೇತ್ರವ ನೋಡುವೆ, ಹಯವದನನ ಕೊಂಡಾಡುವೆ ||೩|| eMdu kAMbenu enna salahuva baMdhu baLaga nammappana || tirupatiyali ippana varaaha timmappana ||pa|| daMDigeyanu bArisutali SrutigUDikoMDu pADuta || manadi lOlyADuta kuNikuNidADuta ||1|| beTTadoDeyana caraNakamalake SiraviTTu karagaLa || mugive nA kavakava naguve nA ennoDeyanA pogaLi nA ||2|| svAmi puShkariNiyalli snAna nEmava mADuve || puNyakShEtrava nODuve, hayavadanana koMDADuve ||3||

ನಾಚಿಕೆ ಪಡಬೇಡ ಮನದಲಿ | ಪುರಂದರ ವಿಠಲ | Nachike padabeda | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಾಚಿಕೆ ಪಡಬೇಡ ಮನದಲಿ ಯೋಚಿಸಿ ಕೆಡಬೇಡ ||ಪ|| ನೀಚವೇನೋ ನಮ್ಮಚ್ಯುತನೋಲಗ ಮೆಚ್ಚಿಕೊಟ್ಟಿದೆ ನಿನಗ್ಹೆಚ್ಚಿನ ಪದವಿಯ ||ಅಪ|| ಹರಿ ಹರಿ ಎಂದೊದರೋ ಹತ್ತಿದ ಪಾಪಗಳಿಗೆ ಬೆದರೋ || ನೀರಜಾಕ್ಷ ನಿರ್ಜರ ಪತಿ ಹರಿ ಎಂದು | ಚೀರಿ ಹಾರಿ ಬೋರಿಡುತಲಿ ಕುಣಿಯೋ ||೧|| ಯಾರ ಗೊಡವೆಯೇನೋ ನರಕದ ದಾರಿ ತಪ್ಪಿಪರೇನೋ | ಸಾರಿ ಸಾರಿಗೆ ಸರ್ವೇಶನ ನಾಮವ | ಬೀರಿ ಬೀರಿ ಕೈ ಮುಗಿದು ಕೊಂಡಾಡೋ ||೨|| ಭಕ್ತ ಜನರ ಕೂಡೋ ಭವ ಭಯ ಬತ್ತಿ ಪೋಪುದು ನೋಡೋ | ಮುಕ್ತಿದಾಯಕ ನಮ್ಮ ಪುರಂದರ ವಿಠಲನ | ಭಕ್ತಿಯಿಂದ ನೀ ಪಾಡುತ ಕುಣಿಯೋ ||೩|| nAcike paDabEDa manadali yOcisi keDabEDa ||pa|| nIcavEnO nammacyutanOlaga meccikoTTide ninag~heccina padaviya ||apa||   hari hari eMdodarO hattida pApagaLige bedarO || nIrajAkSha nirjara pati hari eMdu | cIri hAri bOriDutali kuNiyO ||1||   yAra goDaveyEnO narakada dAri tappiparEnO | sAri sArige sarvESana nAmava | bIri bIri kai mugidu koMDADO ||2|| Bakta janara kUDO Bava Baya batti pOpudu nODO | muktidAyaka namma puraMdara viThalana | BaktiyiMda nI pADuta kuNiyO ||3||

ರಂಗ ಬಾರೋ ಪಾಂಡುರಂಗ ಬಾರೋ | ಪುರಂದರ ವಿಠಲ | Ranga Baaro | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರಂಗ ಬಾರೋ ಪಾಂಡುರಂಗ ಬಾರೋ|  ಶ್ರೀರಂಗ ಬಾರೋ ನರಸಿಂಗ ಬಾರೋ |ಪ| ಕಂದ ಬಾರೋ ಎನ್ನ ತಂದೆ ಬಾರೋ|  ಇಂದಿರಾ ರಮಣ ಮುಕುಂದ ಬಾರೋ |೧| ಅಪ್ಪ ಬಾರೋ ತಿಮ್ಮಪ್ಪ ಬಾರೋ|  ಕಂದರ್ಪನಯ್ಯನೇ ಕಂಚಿ ವರದ ಬಾರೋ |೨| ಅಣ್ಣ ಬಾರೋ ಎನ್ನ ಚಿಣ್ಣ ಬಾರೋ|  ಪುಣ್ಯಮೂರ್ತಿ ಮಹಿಷ ಪುರಿ ಚೆನ್ನ ಬಾರೋ|೩| ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ| ಎ- ನ್ನಿಷ್ಟ ಮೂರ್ತಿ ಪುರಂದರ ವಿಠಲ ಬಾರೋ |೪| raMga bArO pAMDuraMga bArO|  SrIraMga bArO narasiMga bArO |pa|   kaMda bArO enna taMde bArO|  iMdirA ramaNa mukuMda bArO |1|   appa bArO timmappa bArO|  kaMdarpanayyanE kaMci varada bArO |2|   aNNa bArO enna ciNNa bArO|  puNyamUrti mahiSha puri cenna bArO|3|   viShNu bArO uDupi kRuShNa bArO| e- nniShTa mUrti puraMdara viThala bArO |4|

ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ | ಇಂದಿರೇಶ ದಾಸರು | Baare Venkataramani | Sri Indiresha Dasaru

Image
ಸಾಹಿತ್ಯ : ಶ್ರೀ ಇಂದಿರೇಶ ದಾಸರು  Kruti: Sri Indiresha Dasaru ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ ಬಾರೆ ವೆಂಕಟರಮಣಿ |ಪ|| ಬಾರೆ ವೆಂಕಟರಮಣಿ ಪಾರಾಯಣ ಕೇಳು ಚಾರುವದನೆ ಉಪಹಾರ ಕಾಲಕ್ಕೆ ನಿತ್ಯ ||ಅಪ|| ಏನು ಪುಣ್ಯವೆ ನಂದೂ ಪಾರಾಯಣ ನೀನು ಕೇಳುವಿ ಬಂದು ಹೀನ ಮಾನವನಿಗೆ ನೀನು ಬರುವಿ ಎಂಬೊ ಜ್ಞಾನವಿಲ್ಲದೆ ಉಚ್ಛ ಸ್ಥಾನದೊಳಗೆ ಕೂಡೆ ||೧|| ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿ ಕ್ಷಿಪ್ರ ತನದಿ ಪೋಗುವಿ ಸರ್ಪಶಯನ ನಮ್ಮಪ್ಪ ಗೋಕುಲ ಬಾಲನಪ್ಪಿಕೊಂಬುವ ಸುಖ ಒಪ್ಪಿಸೆ ಬೇಗನೆ ||೨|| ಎಲ್ಲಾ ದೇವತೆಗಳನು ತಡೆದಿಹೆ ಫುಲ್ಲ ವಾರಿಜನಯನೆ ಗೊಲ್ಲ ಬಾಲನ ಪಾದ ಪಲ್ಲವ ನೋಡದೆ ನಿಲ್ಲಲೊಲ್ಲದು ಮನ ಸೊಲ್ಲು ಲಾಲಿಸಿ ಬೇಗ ||೩|| ಮಂಗಳಾಂಗಿಯೇ ನಿನ್ನ ಕಾಣದೆ ಭಂಗ ಪಡುವೆನಮ್ಮ ಗಂಗಾಜನಕ ಸಿರಿ ರಂಗನಂಕದಿ ಕೂತು ಭೃಂಗಕುಂತಳೆ ಹೃದಯಾಂಗಣದೊಳಗಾಡೆ ||೪|| ಇಂದಿರೇಶನ ರಾಣಿ ಎನ್ನಯ ಮನ ಮಂದಿರದೊಳು ಬಾ ನೀ ನಂದಗೋಕುಲ ಬಾಲಕಂದನನೆತ್ತಿ ಕರೆ ತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮೀ ||೫|| bAre veMkaTaramaNi SrI SrIdEvi bAre veMkaTaramaNi |pa|| bAre veMkaTaramaNi pArAyaNa kELu cAruvadane upahAra kAlakke nitya ||apa|| Enu puNyave naMdU pArAyaNa nInu kELuvi baMdu hIna mAnavanige nInu baruvi eMbo j~jAnavillade ucCa sthAnadoLage kUDe ||1|| svapnadoLage baruvi SrI SrIdEvi kShipra tana...

ಎಂಥಾತ ಗುರುರಾಯನು | ಗುರು ಜಗನ್ನಾಥ ವಿಠಲ | Enthata Gururayanu | Sri Guru Jagannatha Vithala

Image
ಸಾಹಿತ್ಯ : ಶ್ರೀ ಗುರು ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Guru Jagannatha Dasaru (Jagannatha vittala) ಎಂಥಾತ ಗುರುರಾಯನು ಜಗದಂತರ್ನಿಯಾಮಕನ ನಿಜದೂತನು ||ಪ|| ಸಂತೋಷದಿಂದಲಿ ಅಂತೇ ವಾಸಿಗಳ ನಿಂತು ಪಾಲಿಸುತಿಹನು || ಅಪ || ಚಿಂತೆಯು ಯಾಕೆಂದನು ನಿಶ್ಚಿಂತಿ ಮಾರ್ಗವಿದೆಂದನು  ಅಂತರದೊಳು ಸಿರಿಕಾಂತನ ಪದವೇಕಾಂತದಿ ಭಜಿಸೆಂದನು ||೧|| ಯಾತಕೆ ಶ್ರಮವೆಂದನು ನಿನಗೆ ಪಾತಕವಿಲ್ಲೆಂದನು ದೂತಾನೆ ಎನ್ನೊಳಿಪ್ಪ ಮಾತರಿಶ್ವಗೆ ಸಿರಿನಾಥನ ಭಜಿಸೆಂದನು ||೨|| ಪೋತನೆ ಕೇಳೆಂದನು ಎನ್ನ ಮಾತು ಮೀರದಿರೆಂದನು ಪಾಥೋಜ ಗುರು ಜಗನ್ನಾಥ ವಿಠಲ ನಿನ್ನ ಮಾತು ಲಾಲಿಪನೆಂದನು ||೩|| eMthaata gururaayanu jagadaMtarniyaamakana nijadUtanu ||pa|| saMtOShadiMdali aMtE vaasigaLa niMtu paalisutihanu || apa || ciMteyu yaakeMdanu nishciMti maargavideMdanu  aMtaradoLu sirikaaMtana padavEkaaMtadi bhajiseMdanu ||1|| yaatake shramaveMdanu ninage paatakavilleMdanu dUtAne ennoLippa maatarishvage sirinaathana bhajiseMdanu ||2|| pOtane kELeMdanu enna maatu mIradireMdanu paathOja guru jagannaatha viThala ninna maatu laalipaneMdanu ||3||

ಕೃಷ್ಣ ನೀ ಬೇಗನೇ ಬಾರೋ | ಶ್ರೀ ಕೃಷ್ಣ | Krishna Nee Begane Baro | Sri Vyasarajaru

Image
ಸಾಹಿತ್ಯ :  ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti:    Sri Vyasarajaru (Sri Krishna) ಕೃಷ್ಣ ನೀ ಬೇಗನೇ ಬಾರೋ ||ಪ|| ಬೇಗನೇ ಬಾರೋ ಮುಖವನ್ನು ತೋರೋ ||ಅಪ||   ಹುಟ್ಟಿದ್ದು ಮಧುರೆಲಿ ಬೆಳೆದದ್ದು ಗೋಕುಲ| ಜಲಕ್ರೀಡೆಯಾಡಿದ್ದು ಯಮುನಾ ನದೀ ತೀರ ||೧|| ಕಾಲಲಂದುಗೆ ಗೆಜ್ಜೆ ನೀಲಾದ ಬಾವುಲಿ| ನೀಲವರ್ಣನೆ ಶ್ಯಾಮ ನಾಟ್ಯವಾಡುತ ಬಾರೋ ||೨||   ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ| ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ ||೩|| ಕಾಶೀಪೀತಾಂಬರ ಕೈಯಲ್ಲಿ ಕೊಳಲು | ಪೂಸಿದ ಶ್ರೀಗಂಧ ಮೈಯೊಳು ಘಮ ಘಮ ||೪||   ತಾಯಿಗೆ ಬಾಯಲ್ಲಿ ಮೂರ್ಜಗ ತೋರಿದ|   ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ||೫|| kRuShNa nI bEganE bArO ||pa|| bEganE bArO muKavannu tOrO ||apa||   huTTiddu madhureli beLedaddu gOkula| jalakrIDeyADiddu yamunA nadI tIra ||1||   kAlalaMduge gejje nIlAda bAvuli| nIlavarNane SyAma nATyavADuta bArO ||2||   uDiyalli uDugejje beraLalli uMgura| koraLalli hAkida vaijayaMti mAle ||3||   kASIpItAMbara kaiyalli koLalu| pUsida shrIgaMdha maiyoLu ghama ghama ||4||   tAyige bAyalli moorjaga tOrida| jagadOddhAraka namma uDupi SrIkRu...

ನಾರಾಯಣ ಎನ್ನಿರೋ | ಪುರಂದರ ವಿಠಲ | Narayana Enniro | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಾರಾಯಣ ಎನ್ನಿರೋ ಶ್ರೀ ನರಹರಿ ಪಾರಾಯಣ ಮಾಡಿರೋ ||ಪ|| ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬ ಸುದ್ದಿ ಕೇಳಿ ಅರಿಯಿರ ||ಅಪ|| ಕಾಶಿಗೆ ಹೋಗಲೇಕೆ | ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ | ವಾಸುದೇವನ ನಾಮ ಬಾಯ್ತುಂಬ ನೆನೆದರೆ ಕ್ಲೇಶಗಳೆಂಬೋದು ಲೇಶ ಮಾತ್ರವಿಲ್ಲ ||೧|| ಚೋರರ ಭಯವಿಲ್ಲವೋ ಹರಿನಾಮಕ್ಕೆ ಯಾರ ಅಂಜಿಕೆಯಿಲ್ಲವೋ ಊರನಾಳುವ ದೊರೆ ನೀತಿ ಭೀತಿಗಳಿಲ್ಲ | ಘೋರ ಪಾತಕವೆಲ್ಲಾ ದೂರ ಮಾಡುವುದಕ್ಕೆ ||೨|| ಸ್ನಾನವ ಮಾಡಲೇಕೆ | ಮಾನವರಿಗೆ ಮೌನಮಂತ್ರಗಳೇಕೆ | ದೀನಪಾಲಕ ನಮ್ಮ ಬೆಟ್ಟದೊಡೆಯನ ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠಲ ||೩|| nArAyaNa ennirO SrI narahari pArAyaNa mADirO ||pa|| nArAyaNaneMdu ajamiLanu kaivalya sEridaneMba suddi kELi ariyira ||apa|| kASige hOgalEke | kAvaDi pottu bEsattu tirugalEke | vAsudEvana nAma bAytuMba nenedare klESagaLeMbOdu lESa mAtravilla ||1|| cOrara BayavillavO harinAmakke yAra aMjikeyillavO UranALuva dore nIti BItigaLilla | GOra pAtakavellA dUra mADuvudakke ||2|| snAnava mADalEke | mAnavarige maunamaMtragaLEke | dInapAlaka namma beTTadoDeyana dhyAnakke sariyuMT...

ಕಾಳಿಂಗನಾ ಮೆಟ್ಟಿ | ಶ್ರೀ ಕೃಷ್ಣ | Kalingana Metti | Sri Vyasarajaru

Image
ಸಾಹಿತ್ಯ : ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti:   Sri Vyasarajaru (Sri Krishna) ಕಾಳಿಂಗನಾ ಮೆಟ್ಟಿ ನಾಟ್ಯವಾಡಿದ ಕಂಜನಾಭ ಕೃಷ್ಣನು ||ಪ|| ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿ ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ ತರಳತನದಲ್ಲಿ ಯಮುನೆಯ ಮಡುವಲ್ಲಿ ||ಅಪ|| ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು   ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ   ಕರ್ಣ ಕುಂಡಲವು ಥಳು ಥಳು ಥಳುಕೆಂದು ಲಲಿತ ಮಣಿಮಯೋ ಜ್ವಲಿತ ಪದಕಹಾರ ಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ||೧||   ಸುರರು ದುಂದುಭಿಯ ಢಣಢಣ ಢಣರೆಂದು ಮೊರೆಯೆ ತಾಳಗಳು ಝಣಝಣ ಝಣಾರೆಂದು ಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲು ನಾರದ ತುಂಬುರು ಸಿದ್ಧರು ವಿದ್ಯಾ-   ಧರರು ಅಂಬರದಲ್ಲಿ ಆಡುತ್ತ ಪಾಡಲು ||೨|| ಯೋಗಿಗಳೆಲ್ಲ ಜಯ ಜಯ ಜಯವೆನ್ನೆ   ಭೋಗಿಗಳೆಲ್ಲ ಭಯಭಯ ಭಯವೆನ್ನೆ ನಾಗಕನ್ಯೆಯರು ಅಭಯ ಅಭಯವೆನ್ನೆ ಜಗದೀಶ ಶ್ರೀ ಕೃಷ್ಣ ಜನನಿಯ ಕಂಡೋಡಿ ದಿಗಿದಿಗನೆ ಬಂದು ಬಿಗಿ ಬಿಗಿದಪ್ಪುತ ||೩|| kaaLiMganaa meTTi naaTyavaaDida kaMjanaabha kRuShNanu ||pa|| kaaLiMganaa meTTi ADida bharadalli shrIvatsa uradalli koraLalli vanamaale taraLatanadalli yamuneya maDuvalli ||apa|| kaalali gejje ghalughalu ghalukendu Paaladi tilakavu hoLe hoLe hoLeyutta kar...

ದಾಸ ದಾಸರ ಮನೆಯ | ಶ್ರೀ ಕನಕದಾಸರು | Dasa Dasara Maneya | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanakadasaru ದಾಸ ದಾಸರ ಮನೆಯ ದಾಸಾನುದಾಸ ನಾನು ||ಪ|| ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಅಪ|| ಶಂಕುದಾಸರ ಮನೆಯ ಮಂಕು ದಾಸ ನಾನಯ್ಯ  ಮಂಕುದಾಸನು ನಾನು ಮರುಳು ದಾಸ ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ ||೧|| ಕಾಳಿದಾಸರ ಮನೆಯ ಕೀಳು ದಾಸ ನಾನಯ್ಯ ಆಳು ದಾಸನು ನಾನು ಮೂಳದಾಸ   ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ ಆಳಿನಾಳಿನ ಮನೆಯ ಅಡಿದಾಸ ನಾನಯ್ಯ ||೨|| ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ ಕುಲವಿಲ್ಲದ ದಾಸ ಕುರುಬ ದಾಸ  ಛಲದಿ ನಿನ್ನ ಭಜಿಸುವರ ಮನೆಯ ಮಾದಿಗ ದಾಸ ಸಲೆ ಮುಕ್ತಿ ಪಾಲಿಸೆನ್ನ ಒಡೆಯ ಕೇಶವ ನಿನ್ನ ||೩|| dAsa dAsara maneya dAsAnudAsa nAnu ||pa|| SrISa SrIraMga nimma maneya dAsa ||apa|| SaMkudAsara maneya maMku dAsa nAnayya  maMkudAsanu nAnu maruLu dAsa saMkIrtaneya mADi neneva Baktara maneya biMkadi bAgila kAyva baDa dAsa nAnayya ||1|| kALidAsara maneya kILu dAsa nAnayya ALu dAsanu nAnu mULadAsa PAlAkShasaKa ninna Bajipa Baktara maneya ALinALina maneya aDidAsa nAnayya ||2|| halavu dAsara maneya holedAsa nAnayya kulavillada dAsa kuruba dAsa  Caladi ninna Bajisuvara m...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru