ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಉಮಾ ಕಾತ್ಯಾಯನೀ ಗೌರಿ | ವಿಜಯ ವಿಠ್ಠಲ | Uma Katyayani Gowri | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ
ಹಿಮವಂತ ಗಿರಿಯ ಕುಮಾರಿ ||ಪ||

ರಮೆಯರಸನ ಪದಕಮಲ ಮಧುಪೆ ನಿತ್ಯ
ಅಮರವಂದಿತೆ ಗಜಗಮನೆ ಭವಾನಿ    ||ಅ.ಪ||

ಪನ್ನಗಧರನ ರಾಣಿ ಪರಮಪಾವನಿ
ಪುಣ್ಯಫಲ ಪ್ರದಾಯಿನಿ
ಪನ್ನಗವೇಣಿ ಶರ‍್ವಾಣಿ ಕೋಕಿಲವಾಣಿ
ಉನ್ನಂತ ಗುಣಗಣ ಶ್ರೇಣಿ
ಎನ್ನ ಮನದ ಅಭಿಮಾನಿ ದೇವತೆಯೆ
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧೆ
ನಿನ್ನ ಮಹಿಮೆಯನು ಬಿನ್ನಾಣದಲಿ ನಾ
ಬಣ್ಣಿಸಲಳವೆ ಪ್ರಸನ್ನವದನಳೆ ||೧||

ಮುತ್ತಿನ ಪದಕ ಹಾರ ಮೋಹನ ಸರ
ಉತ್ತಮಾಂಗದಲಂಕಾರ
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ
ರತ್ನಕಂಕಣದುಂಗುರ
ತೆತ್ತೀಸ ಕೋಟಿ ದೇವತೆಗಳು ಪೊಗಳುತ
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ
ಸುತ್ತಲು ಆಡುವ ನರ್ತನ ಸಂದಣಿ
ಎತ್ತ ನೋಡಿದರತ್ತ ತಥ್ಥೈವಾದ್ಯ ||೨||

ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ
ಥಳಿಪ ಮೂಗುತಿ ನಾಸಿಕ
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ
ಸಲೆ ಭುಜಕೀರ್ತಿ ಪಾಠಿಕ
ಇಳೆಯೊಳು ಮಧುರಾಪೊಳಲೊಳು ವಾಸಳೆ
ಅಳಗಿರಿ ವಿಜಯವಿಠ್ಠಲನ ಕೊಂಡಾಡುವ
ಸುಲಭ ಜನರಿಗೆಲ್ಲ ಒಲಿದು ಮತಿಯನೀವೆ
ಗಿಳಿಕರ ಶೋಭಿತೆ ಪರಮಮಂಗಳೆ ಹೇ ||೩||

umaa kaatyaayanI gauri daakShaayaNi
himavaMta giriya kumaari ||pa||

rameyarasana padakamala madhupe nitya
amaravaMdite gajagamane bhavaani    ||a.pa||

pannagadharana raaNi paramapaavani
puNyaphala pradaayini
pannagavENi shar^vaaNi kOkilavaaNi
unnaMta guNagaNa SrENi
enna manada abhimaani dEvateye
svarNagiri saMpanne bhaagya nidhe
ninna mahimeyanu binnaaNadali naa
baNNisalaLave prasannavadanaLe ||1||

muttina padaka haara mOhana sara
uttamaaMgadalaMkaara
jotyaagi iTTa paMjaradOle vayyaara
ratnakaMkaNaduMgura
tettIsa kOTi dEvategaLu pogaLuta
sattige caamaravetti piDiyutire
suttalu ADuva nartana saMdaNi
etta nODidaratta taththaivaadya ||2||

poLeva vasana kaMchuka kastUri tilaka
thaLipa mUguti naasika
kaLita mallige gaMdhika muDida sUsuka
sale bhujakIrti paaThika
iLeyoLu madhuraapoLaloLu vaasaLe
aLagiri vijayaviThThalana koMDaaDuva
sulabha janarigella olidu matiyanIve
giLikara shObhite paramamaMgaLe hE ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru