ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಚ್ಯುತನ ಮೆಚ್ಚಿಸಿ | ಶ್ರೀ ವಿಜಯದಾಸರ ರಚನೆ | Achyutana | Vijaya Dasaru | Prasanna Venkatadasara Stuti


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಅಚ್ಯುತನ ಮೆಚ್ಚಿಸಿ ಪ್ರಚ್ಛಿನ್ನವರ ಪಡೆದ|
ಆಚಾರ್ಯ ಸಿರಿ ಪ್ರಸನ್ವೆಂಕಟಾರ್ಯರ ಕಂಡೆ ||ಪ||

ಸ್ವಕುನಾತಿ ಸೋತ್ತಮರ ಗತಿ ದಾತ ಶ್ರೀಹರಿ
ಸ್ವೀಕರಿಸಿ ಈ ಮಹಾ ಭಕುತ ಮತಿದಾಸರಲಿ
ಕಕುಲಾತಿ ತೋರಿ ಸತ್ಕೃತಿ ರಚಿಸುವಂದದಲಿ
ಶಕುತಿಯಾನಿತ್ತಖಿಲ ಸಂತಸವ ನೀಡಿದಾ ||೧||

ಅಚ್ಯುತಾಮರ ಚಿತ್ತಗಚ್ಹಿಂತ ದಿಂದಿವರು
ಅರ್ಚಿಸಲು ನೆಚ್ಚಿ ಅಂಕಿತವ ನೀಡಿರಲು
ಅಚಿಂತನ ನಣುದ್ಭುತ ವಾಂಛಿತವನರಿತರು
ಶ್ರೀಚಕ್ರಧರ ನಿಂಗೆ ಅಚ್ಚುಮೆಚ್ಚೆನಿಸಿದರು ||೨||

ಏಸೇಸು ಜನುಮಗಳ ಬಯಸಿ ಬರಬೇಕೀ
ಅಸಮಾನ ಜ್ಞಾನ ನಿಧಿ ದಾಸರಾಸರೆಗಾಗಿ
ದೋಷ ರಾಶಿಗಳಳಿದು ಶ್ರೀಶನ್ನ ತೋರಿಸುವ
ವಸುಧೀಶ ಶ್ರೀ ವಿಜಯ ವಿಠ್ಠಲ ದಾಸಮಣಿಯು ||೩||

achyutana mechchisi prachChinnavara paDeda|
aachaarya siri prasanveMkaTAryara kaMDe ||pa||

swakunaati sOttamara gati daata shrIhari
swIkarisi I mahaa bhakuta matidaasarali
kakulaati tOri satkRuti rachisuvaMdadali
shakutiyaanittakhila saMtasava nIDidaa ||1||

achyutaamara chittagachhiMta diMdivaru
archisalu nechchi aMkitava nIDiralu
achiMtana naNudbhuta vaaMChitavanaritaru
shrIchakradhara niMge accumeccenisidaru ||2||

EsEsu janumagaLa bayasi barabEkI
asamaana j~jaana nidhi daasaraasaregaagi
dOSha raashigaLaLidu shrIshanna tOrisuva
vasudhIsha shrI vijaya viThThala daasamaNiyu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru