ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಧನ್ಯನಾದೆ ನಾನೀ ಜಗದೊಳು | ಪುರಂದರ ವಿಠಲ | Dhanyanade Nanu | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಧನ್ಯನಾದೆ ನಾನೀ ಜಗದೊಳು | ಧನ್ಯನಾದೆ ನಾನು ||ಪ||
ಪನ್ನಗಶಯನನ ಕಣ್ಣಿನಿಂದಲಿ ಕಂಡು ||ಅಪ||

ಉನ್ನತ ಮಹಿಮ ಪಾವನ್ನ ಚರಿತ ಸುರ 
ಸನ್ನುತ ಚರಣನ ||
ಪನ್ನಗಾರಿ ವಾಹನ್ನ ಪುರುಷ ರನ್ನ 
ಚೆನ್ನಿಗ ಶ್ರೀರಂಗನ್ನ ಮಹಿಮೆಯ ಕಂಡು ||೧||

ದೇವ ದೇವೋತ್ತಮ ಕಾವ ನಮ್ಮ ಈಗ 
ಭಾವಜನಯ್ಯನು ||
ಕಾವೇರಿ ತೀರದ ಉತ್ತಮ ಕ್ಷೇತ್ರದೊಳು | 
ಪಾವನ ನರಸಿಂಗನ ಕಂಡು ||೨||

ಭಾನುಕೋಟಿ ಪ್ರಭಾ ಸ್ವಾನಂದ ಪೂರ್ಣನ 
ದೀನ ರಕ್ಷಕನ ||
ಸಿರಿ ಪುರಂದರ ವಿಠಲ ಚೆನ್ನಿಗ | 
ಶ್ರೀರಂಗನ ಮಹಿಮೆಯ ಕಂಡು ||೩||

dhanyanaade naanI jagadoLu | dhanyanaade naanu ||pa||
pannagashayanana kaNNiniMdali kaMDu ||apa||

unnata mahima paavanna charita sura 
sannuta charaNana ||
pannagaari vaahanna puruSha ranna 
cenniga shrIraMganna mahimeya kaMDu ||1||

dEva dEvOttama kaava namma Iga 
bhaavajanayyanu ||
kaavEri tIrada uttama kShEtradoLu | 
paavana narasiMgana kaMDu ||2||

bhaanukOTi prabhaa svaanaMda pUrNana 
dIna rakShakana ||
siri puraMdara viThala chenniga | 
shrIraMgana mahimeya kaMDu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru