ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರಯ್ಯ ವೆಂಕಟ ಮನ್ಮನಕೆ | ಜಗನ್ನಾಥ ವಿಠಲ | Barayya Venkata Manmanake | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಬಾರಯ್ಯ ವೆಂಕಟ ಮನ್ಮನಕೆ ತ್ವರಿತದಿ ನಿಜನಾರಿ ಸಹಿತದೀ ಸಮಯಕೆ
ಶರಣೆಂಬೆನೋ ತವ ಪದಯುಗಕೆ || ಪ ||
ಸಾರಿದ ನಿಜ ಶರಣನ ಈ ಭವಭವ 
ಘೋರ ಭಯವ ಪರಿಹರಿಸುವುದಕೆ || ಅಪ ||

ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ
ಮುಕ್ತಾಮುಕ್ತ ಜೀವರ ಗಣದಾಪ್ತಾ ನೀಸರ್ವತ್ರದಿ ವ್ಯಾಪ್ತ
ಭಕ್ತನ ಹೃದಯದಿ ವ್ಯಕ್ತನಾಗಿ ನಿಜ 
ಮುಕ್ತಿಪಥವ ತೋರೋ ಭಕ್ತಿಯನಿತ್ತು ||೧||

ಆನಂದ ನಿಲಯ ನಿರ್ಮಲ ಕಾಯ ಕವಿಜನಗೇಯ 
ಆನಂದದಾಯಕ ನಿರ್ಜಿತ ಮಾಯಾ ಕಾಯಯ್ಯ ಜೀಯ 
ಆನತ ಜನ ಸನ್ಮಾನದ ಮನ್ಮನ 
ವನಜದಿ ನೀ ಸನ್ನಿಹಿತನಾಗುವುದಕೆ ||೧||

ದಿಟ್ಟ ಗುರು ಜಗನ್ನಾಥ ವಿಠಲ ನಾನನಾಥ 
ಥಟ್ಟನೆ ನೀ ಎನ್ನನು ಕಾಯೋ ಶ್ರೀನಾಥ|
ಇಷ್ಟೆ ಎನಮನದರ್ಥ ಸೃಷ್ಟಿಯೊಳಗೆ ಬಹು
ಭ್ರಷ್ಟರ ಸ್ತುತಿಸಿ ನಿಕೃಷ್ಟನಾದೆನೋ ಶ್ರೇಷ್ಠ ಮೂರುತಿ ||೩||

bArayya veMkaTa manmanake tvaritadi nijanAri sahitadI samayake
SaraNeMbenO tava padayugake || pa ||
sArida nija SaraNana I BavaBava 
GOra Bayava pariharisuvudake || apa ||

vyaktaavyakta trijagadvyaaptaa dOSha nirliptaa
muktaamukta jeevara gaNadaaptaa nIsarvatradi vyaapta
bhaktana hRudayadi vyaktanaagi nija 
muktipathava tOrO bhaktiyanittu ||1||

AnaMda nilaya nirmala kAya kavijanagEya 
AnaMdadAyaka nirjita mAyA kAyayya jIya 
Anata jana sanmAnada manmana 
vanajadi nI sannihitanAguvudake ||1||
 
diTTa guru jagannAtha viThala nAnanAtha 
thaTTane nI ennanu kAyO SrInAtha|
iShTe enamanadartha sRuShTiyoLage bahu
BraShTara stutisi nikRuShTanAdenO SrEShTha mUruti ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru