ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಒಲಿದೆ ಯಾತಕಮ್ಮ ಲಕುಮಿ | ಗುರುಗೋಪಾಲ ವಿಠಲ | Olide Yatakamma Lakumi | Sri Guru Gopala Vittala Dasaru

 


ಸಾಹಿತ್ಯ : ಶ್ರೀ ಗುರು ಗೋಪಾಲ ವಿಠಲ ದಾಸರು 
Kruti:Sri Guru Gopala Vittala Dasaru


ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ |ಪ|
ಹಲವಂಗದವನ ಹವಣೆ ತಿಳಿದೂ ತಿಳಿದು ತಿಳಿಯದ್ಹಾಂಗೆ |ಅಪ|

ಕಮಲಗಂಧಿ ಕೋಮಲಾಂಗಿ| ಸುಂದರಾಬ್ಜ ವದನೆ ನೀನು|
ರಮಣ ಮತ್ಸ್ಯ ಕಠಿಣಕಾಯ| ಸೂಕರಾಸ್ಯನು|
ರಮಣೀಯ ಸ್ವರೂಪಿ ನೀನು ಅಮಿತ ಘೋರ ರೂಪನವನು|
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ |೧|

ಜಾಣೆ ರತ್ನಾಕರನ ಮಗಳು| ತಾನು ಶುದ್ಧ ಭೃಗುಜನವನು|
ಆನಂದಾಬ್ಜ ಸದನೆ ನೀನು ವನವಾಸಿ ಅವನು|
ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಕಾಮಿ ಅವನು|
ಜ್ಞಾನ ಚಿತ್ರವಸನೆ ನೀನು| ಹೀನ ಚೈಲನಾದವನಿಗೆ |೨|

ಲಲಿತೆ ಚಾರುಶೀಲೆ ನೀನು ಕಲಕಿ ಕಲಹ ಪ್ರಿಯನು ಅವನು|
ಕುಲದ ಕುರುಹು ಇಲ್ಲ ಇನ್ನು ನೆಲೆಯು ಗಂಡಿಲ್ಲ|
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು|
ಜಲದಿ ಆಲದೆಲೆಯ ಮೇಲೆ ಮಲಗಿ ಬೆರಳ ಸವಿವವನಿಗೆ |೩|

ಅವನ ವಾರ್ತೆ ಕೇಳಿದವರು ಬಲ್ಲರೊ ಸಂಸಾರವನ್ನು|
ಅವನ ಮೂರ್ತಿ ನೋಡಿದವರು ಮನೆಯ ಧನವ ಬಿಡುವರೋ|
ಅವನ ಪುರಕೆ ಪೋದ ಜನರು ಒಮ್ಮಿಗನ್ನ ಹಿಂತಿರುಗರು|
ಅವನು ತಾನೆ ತನಯರನ್ನು ತನ್ನವಯವದಿಂದ ಪಡೆದವನಿಗೆ |೪|

ಸ್ವರತ ಅನಪೇಕ್ಷ ಕಾಮಿ| ನಿದ್ರಾಹೀನ ಅನಾಶನಾ|
ಸ್ಪರುಷರೂಪ ಶಬ್ದವಾಚ್ಯ ಅಮಿತ ಭೋಕ್ತನು|
ಗುರು ಗೋಪಾಲ ವಿಠಲನು ನಿರುತ ತನ್ನ ವಕ್ಷದೊಳು|
ಅರಮನೆಯ ಮಾಡಿಟ್ಟು ನಿನಗೆ ಮರುಳು ಮಾಡಿದ ಮಾಯಾವಿಗೆ |೫|

olide yAtakamma lakumi vAsudEvage |pa|
halavaMgadavana havaNe tiLidU tiLidu tiLiyad~hAMge |apa|
 
kamalagaMdhi kOmalAMgi| suMdarAbja vadane nInu|
ramaNa matsya kaThiNakAya| sUkarAsyanu|
ramaNIya svarUpi nInu amita GOra rUpanavanu|
namipariShTadAni nInu dAnava bEDuvavanige |1|
 
jANe ratnAkarana magaLu| tAnu Suddha BRugujanavanu|
AnaMdAbja sadane nInu vanavAsi avanu|
mAne pativrateyu nInu nAnAyOShitkAmi avanu|
j~jAna citravasane nInu| hIna cailanAdavanige |2|
 
lalite cAruSIle nInu kalaki kalaha priyanu avanu|
kulada kuruhu illa innu neleyu gaMDilla|
halavu kAladavanu avana baMdhu baLaga niShkiMcanaru|
jaladi Aladeleya mEle malagi beraLa savivavanige |3|
 
avana vArte kELidavaru ballaro saMsAravannu|
avana mUrti nODidavaru maneya dhanava biDuvarO|
avana purake pOda janaru ommiganna hiMtirugaru|
avanu tAne tanayarannu tannavayavadiMda paDedavanige |4|
 
svarata anapEkSha kAmi| nidrAhIna anASanA|
sparuSharUpa SabdavAcya amita BOktanu|
guru gOpAla viThalanu niruta tanna vakShadoLu|
aramaneya mADiTTu ninage maruLu mADida mAyAvige |5|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru