ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸೋಮಶೇಖರ ತಾನೆ ಬಲ್ಲ | ಸಿರಿಕೃಷ್ಣ | Somashekhara tane balla | Sri Vyasarajaru


ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ಸೋಮಶೇಖರ ತಾನೆ ಬಲ್ಲ ಶ್ರೀ-
ರಾಮನಾಮಾಮೃತ ಸವಿಯನೆಲ್ಲ||ಪ||

ಮದನಪಿತ ಎಂದು ಕುಣಿಕುಣಿದಾಡಲು
ಕೆದರಿದ ಕೆಂಜೆಡೆಗಳ ಪುಂಜದಿ
ಒದಗಿದ ಗಂಗೆ ತುಂತುರು ಹನಿಗಳ ಕಂಡು
ಪದುಮಜಾಂಡಹಿತ ರಾಮರಾಮ ಎಂಬ|೧||

ಆನಂದ ಜಲದ ಸೋನೆಗೆ ಲಲಾಟದ
ನೇತ್ರ ಬಡಬಾನಲನಂತಿರೆ
ಏನೆನ್ನಲಿಬಹುದು ಸುಖ ಸಾಗರದೊಳು
ತಾನೆದ್ದು ಮುಳುಗುತ ರಾಮ ರಾಮ ಎಂಬ||೨||

ಶಿರದ ಗಂಗೆಯ ವರ ಅಗ್ಗಣಿಯಾಗಿರೆ
ಸರಸಿಜ ಬಾಂಧವ ಚೆಂದಿರ ದೀಪ
ಉರಿಗಣ್ಣಿನ ಹೊಗೆ ಧೂಪವನೇರಿಸಿ
ಕರಣವೆ ನೈವೇದ್ಯಯೆಂದು ರಾಮರಾಮ ಎಂಬ||೩||

ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪ
ಇಂದ್ರನೀಲದ ಚೆನ್ನಪುತ್ಥಳಿಯಂತೆ
ಚಂದದಿ ತನ್ನಯ ಹೃದಯ ಮಧ್ಯದಿ ರಾಮ-
ಚಂದ್ರ ಹೊಳೆಯೆ ಶ್ರೀರಾಮರಾಮ ಎಂಬ||೪||

ಐದು ಮುಖಗಳಿಂದ ಹರಿಯ ಕೊಂಡಾಡಲು
ಸ್ವಾಧೀನ ಭೂಷಣ ಫಣಿಗಳೆಲ್ಲ
ಮೋದದಿಂದಾಡಲು ಫಣಿ ಮಣಿಯಾಘಾತ
ನಾದ ತಾಳವಾಗೆ ರಾಮ ರಾಮ ಎಂಬ||೫||

ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬ
ಒಮ್ಮೆ ನಾರದ ಪಾಡೆ ತತ್ಥೈಯೆಂಬ
ಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವ
ಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ||೬||

ಅರಸಂಜೆಯ ಕಂಜ ಪುಂಜಗಳಲಿಪ್ಪ
ಅರೆ ಮುಚ್ಚಿದ ಹದಿನೈದು ನೇತ್ರಗಳಿಂದ
ಹರಿಯ ಕೊಂಡಾಡುತ ಪಂಚ ಮುಖಗಳಿಂದ
ಸಿರಿಕೃಷ್ಣ ಮುಕುಂದ ರಾಮ ರಾಮ ಎಂಬ||೭|| 

sOmashEkhara taane balla shrI-
raamanaamaamRuta saviyanella||pa||

madanapita eMdu kuNikuNidaaDalu
kedarida keMjeDegaLa puMjadi
odagida gaMge tuMturu hanigaLa kaMDu
padumajaaMDahita raamaraama eMba|1||

aanaMda jalada sOnege lalaaTada
nEtra baDabaanalanaMtire
Enennalibahudu sukha saagaradoLu
taaneddu muLuguta raama raama eMba||2||

shirada gaMgeya vara aggaNiyaagire
sarasija baaMdhava cheMdira dIpa
urigaNNina hoge dhUpavanErisi
karaNave naivEdyayeMdu raamaraama eMba||3||

chaMdada sphaTikada karaDigeyallippa
iMdranIlada chennaputthaLiyaMte
chaMdadi tannaya hRudaya madhyadi raama-
chaMdra hoLeye shrIraamaraama eMba||4||

aidu mukhagaLiMda hariya koMDaaDalu
swaadhIna bhUShaNa phaNigaLella
mOdadiMdaaDalu phaNi maNiyaaghaata
naada taaLavaage raama raama eMba||5||

omme hariya guNa ajapELalaayeMba
omme naarada paaDe tatthaiyeMba
omme raaNige pELi shiravanolidaaDuva
omme tannoLu nenesi raama raama eMba||6||

arasaMjeya kaMja puMjagaLalippa
are muchchida hadinaidu nEtragaLiMda
hariya koMDaaDuta paMcha mukhagaLiMda
sirikRuShNa mukuMda raama raama eMba||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru