ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂಡೆನೀಗ ರಂಗನಾಥನ | ಹೆಳವನಕಟ್ಟೆ ರಂಗ| Kandeneega Ranganathana | Sri Helavanakatte Giriyamma


ಸಾಹಿತ್ಯ : ಶ್ರೀ ಹೆಳವನಕಟ್ಟೆ ಗಿರಿಯಮ್ಮ 
Kruti: Sri Helavanakatte Giriyamma


ಕಂಡೆನೀಗ ರಂಗನಾಥನ ಕಾರುಣ್ಯ ನಿಧಿಯ ಕಂಡೆನೀಗ ರಂಗನಾಥನ ||ಪ||
ಮಂಡಲದೊಳು ಉದ್ಧಂಡ ಮೂರುತಿ |
ಹಿಂಡು ಹಿಂಡು ದೈತ್ಯರ ತಂಡ ತಂಡದಿ 
ತುಂಡು ತುಂಡು ಮಾಡಿದ ಸ್ವಾಮಿಯ ||ಅಪ||

ಕಾಮ ಪಿತನ ಕೌಸ್ತುಭ ಹಾರನಾ |
ಕಸ್ತೂರಿ ನಾಮವ ನೇಮದಿಂದ ಧರಿಸಿದಾತನ |
ವಾಮಭಾಗ ಲಕ್ಷ್ಮೀ ಸಹಿತ ಹೇಮ ಮಂಟಪದೊಳಗೆ ಕುಳಿತು |
ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯಾ ||೧||

ಗರುಡ ವಾಹನವೇರಿ ಗಮಕದೀ |
ಚರಿಸುತ್ತ ಬಂದು ಸರಸೀಯೊಳು ಕರಿಯ ಸಲಹಿದೆ ||
ಪರಮ ಭಕ್ತರ ವಾಸುದೇವ ಅರುಣ ವಾರಿಧ್ರಿ ಕಮಲ ನಯನ |
ಉರಗಶಯನ ಉದ್ಧಾರಿ ನಿನ್ನ ಮೊರೆಯ ಹೊಕ್ಕೆ ಕಾಯೋ ಎನ್ನ ||೨||

ಇಂದುಧರನ ಸಖನೆ ಕೇಳಯ್ಯ |
ಬಂದಂಥ ದುರಿತ ಹಿಂದು ಮಾಡಿ ಮುಂದೆ ಸಲಹಯ್ಯಾ ||
ತಂದೆಯಡಿಯ ಹೊಂದಿದೇನು ಇಂದು ಹೆಳವನ ಕಟ್ಟೆ ರಂಗ |
ಆನಂದ ಪಡಿಸೋ ರಾಮಲಿಂಗ ಹೊಂದಿದೇನು ನಿನ್ನ ಚರಣ ||೩||

kaMDenIga raMganAthana kAruNya nidhiya kaMDenIga raMganAthana ||pa||
maMDaladoLu uddhaMDa mUruti |
hiMDu hiMDu daityara taMDa taMDadi 
tuMDu tuMDu mADida svAmiya ||apa||
 
kAma pitana kaustuBa hAranA |
kastUri nAmava nEmadiMda dharisidAtana |
vAmaBAga lakShmI sahita hEma maMTapadoLage kuLitu |
kAmisida Baktarige kAmitArtha koDuva svAmiyA ||1||
 
garuDa vAhanavEri gamakadI |
carisutta baMdu sarasIyoLu kariya salahide ||
parama Baktara vAsudEva aruNa vAridhri kamala nayana |
uragaSayana uddhAri ninna moreya hokke kAyO enna ||2||
 
iMdudharana saKane kELayya |
baMdaMtha durita hiMdu mADi muMde salahayyA ||
taMdeyaDiya hoMdidEnu iMdu heLavana kaTTe raMga |
AnaMda paDisO rAmaliMga hoMdidEnu ninna caraNa ||3||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru