ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮ ರಾಮ ರಾಮ ಸೀತಾರಾಮ | ಪುರಂದರ ವಿಠಲ | Rama Rama Seetharama | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ||

ಅಮರ ಪತಿಯ ದಿವ್ಯನಾಮ ಅಂದಿಗೊದಗಿ ಬಾರದೋ ||ಅಪ||

ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೇ ||
ಕೊರಳಿಗಾತ್ಮ ಸೇರಿದಾಗ ಹರಿಯ ನಾಮ ಒದಗದೋ ||೧||

ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕುವಾಗ ||
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಿ ಬಾರದೋ ||೨||

ಶ್ವಾಸಕೋಶವೆರಡು ಕಂಠ ದೇಹದಲ್ಲಿ ಸೇರಿದಾಗ ||
ವಾಸುದೇವನೆಂಬ ನಾಮ ಆ ಸಮಯಕ್ಕೆ ಒದಗದೋ ||೩||

ಕಲ್ಲು ಮರನಾಗಿ ಜ್ಞಾನವಿಲ್ಲದಾಗಿ ಮರಣ ಒದಗೆ ||
ಫುಲ್ಲನಾಭ ಕೃಷ್ಣನೆಂಬ ಸೊಲ್ಲು ಬಾಯಿಗೊದಗದೋ ||೪||

ಶೃಂಗಾರದ ದೇಹವೆಲ್ಲ ಅಂಗಮುರಿದು ಬೀಳುವಾಗ ||
ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ಒದಗದೋ ||೫||

ವಾತಪಿತ್ತವೆರಡೂ ಕೂಡಿ ಶ್ಲೇಷ್ಮ ಬಂದು ಒದಗಿದಾಗ ||
ಧಾತು ಕುಂದಿದಾಗ ರಘುನಾಥನ ಧ್ಯಾನ ಒದಗದೋ ||೬||  

ಕೆಟ್ಟ ಜನ್ಮದಲ್ಲಿ ಹುಟ್ಟಿ ದುಷ್ಟ ಕರ್ಮ ಮಾಡಿ ದೇಹ ||
ಬಿಟ್ಟು ಹೋಗುವಾಗ ಪುರಂದರ ವಿಠಲ ನಾಮ ಒದಗದೋ ||೭||

rAma rAma rAma sItArAma ennirO ||pa||

amara patiya divyanAma aMdigodagi bAradO ||apa||
 
Baradi yamana BaTaru baMdu horaDireMdu meTTi muriyE ||
koraLigAtma sEridAga hariya nAma odagadO ||1||
 
iMdriyaMgaLella kUDi baMdu tanuva musukuvAga ||
siMdhu suteya patiya nAma aMdigodagi bAradO ||2||

SvAsakOSaveraDu kaMTha dEhadalli sEridAga ||
vAsudEvaneMba nAma A samayakke odagadO ||3||

kallu maranAgi j~jAnavilladAgi maraNa odage ||
PullanABa kRuShNaneMba sollu bAyigodagadO ||4||
 
SRuMgArada dEhavella aMgamuridu bILuvAga ||
kaMgaLigAtma sEridAga raMgana dhyAna odagadO ||5||
 
vAtapittaveraDU kUDi shlEShma baMdu odagidaaga ||
dhAtu kuMdidAga raGunAthana dhyAna odagadO ||6||
 
keTTa janmadalli huTTi duShTa karma mADi dEha ||
biTTu hOguvAga puraMdara viThala nAma odagadO ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru