ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಾರುತಾತ್ಮಜ ಮಧ್ವಮುನಿರಾಯ | ವಿದ್ಯೇಶ ವಿಠಲ | Marutatmaja Madhwamuniraya | Sri Vidyesha Teertharu


ಸಾಹಿತ್ಯ  : ಶ್ರೀ ವಿದ್ಯೇಶ ತೀರ್ಥರು
Kruti:    Sri Vidyesha Teertharu


ಮಾರುತಾತ್ಮಜ ಮಧ್ವಮುನಿರಾಯ
ಸುರ-ಮುನಿ-ಗಂಧರ್ವ ಗೀತ ವಿಜಯ
ಕರುಣಿಸೆನಗೆ ತತ್ಕಾಲದಲಿ
ಸರುವ ಶತ್ರುಜಯ ಸಂಪದವ ||ಪ||

ರಕ್ಕಸ ಪುರಿಯಲಿ ಸಿಂಹನಾದದಿ
ರಕ್ಕಸ ಹರಿಣಗಳ ಹಿಂಡಿನ
ಪುಕ್ಕಲು ಹೃದಯ ಸೀಳಿ ವಿಕ್ರಮದಿ
"ರಕ್ಕಸ ಗಜಗಣಕೆ ಸಿಂಹ"ನಾದೆ ||೧||

ನಯ-ವಿನಯಾದಿ ಗುಣದಿ ಸೆಳೆದು
ವಾಯುಜ ಸೀತಾ-ರಾಮರ ಮನವ
ಆಯಾಸವಿಲ್ಲದೆ ಕಾಂಚನ ಮಾಲೆಯ
ಜಯಿಸಿ ದಾಸೋತ್ತಮ ನೆಂದು ನುತನಾದೆ ||೨||

ಮಾತೆ ಕುಂತಿಯ ಕರದಿಂ ಜಾರಿದ
ಪತಿತ ನಿಜ ಪೋತ ಕಾಯದಿ ಶೀಘ್ರ
ಶತಶೃಂಗ ಗಿರಿಯ ಭೇದಿಸಿ
ಅತುಲ ವಜ್ರಶರೀರ ನೀನಹುದು ||೩||

ಹರಿ ವರಮಾನಸ ಪೂಜಾರತ
ಪರಮ ಭಾಗವತಮಣೆ ನಿನ್ನ
ಜರಾಸಂಧ ವಧಯಜ್ಞ ಹರಿಗೆ
ಪರಮಪ್ರಿಯವಾಯಿತು ಕ್ರತುವಿಗಿಂತ ||೪||

ವಾದಿಗಳ ಗೆದ್ದು ಶಿಷ್ಯ ನಕ್ಷತ್ರಮಾಲಾ
ಮಧ್ಯದಲಿ ವಿರಾಜಿಸಿದ ನಿಷ್ಕಳಂಕ
ವಿದ್ಯೇಶ ವಿಠಲನ ಹೃದ್ಗಗನಾಶ್ರಿತ
ಮಧ್ವಚಂದಿರಗೆ ನಿತ್ಯಜಯವೆನ್ನುವೆ ||೫||

maarutaatmaja madhvamuniraaya
sura-muni-gaMdharva gIta vijaya
karuNisenage tatkaaladali
saruva Satrujaya saMpadava ||pa||

rakkasa puriyali siMhanaadadi
rakkasa hariNagaLa hiMDina
pukkalu hRudaya sILi vikramadi
"rakkasa gajagaNake siMha"naade ||1||

naya-vinayaadi guNadi seLedu
vaayuja sItaa-raamara manava
Ayaasavillade kaaMcana maaleya
jayisi daasOttama neMdu nutanaade ||2||

maate kuMtiya karadiM jaarida
patita nija pOta kaayadi SIGra
SataSRuMga giriya bhEdisi
atula vajraSarIra nInahudu ||3||

hari varamaanasa pUjaarata
parama bhaagavatamaNe ninna
jaraasaMdha vadhayaj~ja harige
paramapriyavaayitu kratuvigiMta ||4||

vaadigaLa geddu SiShya nakShatramaalaa
madhyadali viraajisida niShkaLaMka
vidyESa viThalana hRudgaganaaSrita
madhvacaMdirage nityajayavennuve ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru