ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಜಗನ್ನಾಥ ದಾಸ ವಿರಚಿತ | ಹರಿಕಥಾಮೃತಸಾರ | ಮಂಗಳಾಚರಣ ಸಂಧಿ | Harikathamrutasaara | Mangalacharana Sandhi


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಮಂಗಳಾಚರಣ ಸಂಧಿ

ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ ||
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||
ಶ್ರೀರಮಣಿ ಕರಕಮಲ ಪೂಜಿತ |
ಚಾರುಚರಣ ಸರೋಜ ಬ್ರಹ್ಮ ಸ |
ಮೀರ ವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖ ವಿನುತ ||
ನೀರಜ ಭವಾಂಡೋದಯ ಸ್ಥಿತಿ |
ಕಾರಣನೆ ಕೈವಲ್ಯ ದಾಯಕ |
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ ||
ಜಗದುದರನತಿವಿಮಲ ಗುಣರೂ |
ಪಗಳನಾಲೋಚನದಿ ಭಾರತ |
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||
ಬಗೆ ಬಗೆಯ ನೂತನವ ಕಾಣುತ |
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||
ನಿರುಪಮಾನಂದಾತ್ಮ ಭವ ನಿ |
ರ್ಜರಸಭಾಸಂಸೇವ್ಯ ಋಜುಗಣ |
ದರಸೆ ಸತ್ವಪ್ರಚುರ ವಾಣೀಮುಖಸರೋಜೇನ ||
ಗರುಡ ಶೇಷ ಶಶಾಂಕದಳ ಶೇ |
ಖರರ ಜನಕ ಜಗದ್ಗುರುವೇ ತ್ವ |
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||
ಆರುಮೂರೆರಡೊಂದು ಸಾವಿರ |
ಮೂರೆರಡು ಶತಶ್ವಾಸ ಜಪಗಳ |
ಮೂರು ವಿಧ ಜೀವರೊಳಗಬ್ಜಜಕಲ್ಪ ಪರಿಯಂತ ||
ತಾ ರಚಿಸಿ ಸಾತ್ವರಿಗೆ ಸುಖ ಸಂ |
ಸಾರ ಮಿಶ್ರರಿಗಧಮಜನರಿಗ |
ಪಾರ ದು:ಖಗಳೀವ ಗುರು ಪವಮಾನ ಸಲಹೆಮ್ಮ || ೪ ||
ಚತುರವದನನ ರಾಣಿ ಅತಿರೋ |
ಹಿತ ವಿಮಲ ವಿಜ್ಞಾನಿ ನಿಗಮ |
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ ||
ನತಿಸಿ ಬೇಡುವೆ ಜನನಿ ಲಕುಮೀ |
ಪತಿಯ ಗುಣಗಳ ತುತಿಪುದಕೆ ಸ |
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||
ಕೃತಿರಮಣ ಪ್ರದ್ಯುಮ್ನ ನಂದನೆ |
ಚತುರವಿಂಶತಿ ತತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ರತ ಪುರಾಣ ರಹಸ್ಯ ತತ್ವಗಳರುಪು ಕರುಣದಲಿ || ೬ ||
ವೇದಪೀಠ ವಿರಿಂಚಿ ಭವ ಶ |
ಕ್ರಾದಿ ಸುರ ವಿಜ್ಞಾನ ದಾಯಕ |
ಮೋದಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||
ಛೇದ ಭೇದ ವಿಷಾದಕುಟಿಲಾಂ |
ತಾದಿ ಮಧ್ಯವಿದೂರ ಆದಾ |
ನಾದಿಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||
ಕ್ಷಿತಿಯೊಳಗೆ ಮಣಿಮಂತ ಮೊದಲಾ |
ದತಿ ದುರಾತ್ಮರು ಒಂದಧಿಕ ವಿಂ |
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ |
ಸತಿಯ ಜಠರದೊಳವತರಿಸಿ ಭಾ |
ರತಿರಮಣ ಮಧ್ವಾಭಿಧಾನದಿ |
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||
ಪಂಚಭೇದಾತ್ಮಕ ಪ್ರಪಂಚಕೆ |
ಪಂಚರೂಪಾತ್ಮಕನೆ ದೈವಕ |
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||
ಪಂಚವಿಂಶತಿ ತತ್ವ ತರತಮ |
ಪಂಚಿಕೆಗಳನು ಪೇಳ್ದ ಭಾವಿ ವಿ |
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||
ವಾಮದೇವ ವಿರಿಂಚಿತನಯ ಉ |
ಮಾಮನೋಹರ ಉಗ್ರಧೂರ್ಜಟಿ |
ಸಾಮಜಾಜಿನ ವಸನ ಭೂಷಣ ಸುಮನಸೋತ್ತಂಸ |
ಕಾಮಹರ ಕೈಲಾಸ ಮಂದಿರ |
ಸೋಮಸೂರ್ಯಾನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||
ಕೃತ್ತಿವಾಸನೆ ಹಿಂದೆ ನೀ ನಾ |
ಲ್ವತ್ತು ಕಲ್ಪಸಮೀರನಲಿ ಶಿ |
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು |
ಹತ್ತು ಕಲ್ಪದಿ ತಪವ ಗೈದಾ |
ದಿತ್ಯರೊಳಗುತ್ತಮನೆನಿಸಿ ಪುರು |
ಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ || ೧೧ ||
ಪಾಕಶಾಸನ ಮುಖ್ಯ ಸಕಲ ದಿ |
ವೌಕಸರಿಗಭಿನಮಿಪೆ ಋಷಿಗಳಿ |
ಗೇಕ ಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||
ಆ ಕಮಲನಾಭಾದಿ ಯತಿಗಳ |
ನೀಕಕಾನಮಿಸುವೆನು ಬಿಡದೆ ರ |
ಮಾ ಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||
ಪರಿಮಳವು ಸುಮನದೊಳಗನಲನು |
ಅರಣಿಯೊಳಗಿಪ್ಪಂತೆ ದಾಮೋ |
ದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ |
ಇರುತಿಹ ಜಗನ್ನಾಥ ವಿಠಲನ |
ಕರುಣ ಪಡೆವ ಮುಮುಕ್ಷುಜೀವರು |
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||

|| ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ ||

ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ ||
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||


Mangalaacharana Sandhi 

harikathAmRutasAra gurugaLa |
karuNadiMdApanitu pELuve ||
parama BagavadBaktaridanAdaradi kELuvudu ||
SrIramaNi karakamala pUjita |
cArucaraNa sarOja brahma sa |
mIra vANi PaNIMdra vIMdra BavEMdra muKa vinuta ||
nIraja BavAMDOdaya sthiti |
kAraNane kaivalya dAyaka |
nArasiMhane namipe karuNipudemage maMgaLava || 1 ||
jagadudaranativimala guNarU |
pagaLanAlOcanadi BArata |
nigamatatigaLatikramisi kriyAviSEShagaLa ||
bage bageya nUtanava kANuta |
mige haruShadiM pogaLi higguva |
triguNamAni mahAlakumi saMtaisalanudinavu || 2 ||
nirupamAnaMdAtma Bava ni |
rjarasaBAsaMsEvya RujugaNa |
darase satvapracura vANImuKasarOjEna ||
garuDa SESha SaSAMkadaLa SE |
Karara janaka jagadguruvE tva |
ccaraNagaLigaBivaMdisuve pAlipudu sanmatiya || 3 ||
ArumUreraDoMdu sAvira |
mUreraDu SataSvAsa japagaLa |
mUru vidha jIvaroLagabjajakalpa pariyaMta ||
tA racisi saatvarige suKa saM |
sAra miSrarigadhamajanariga |
pAra du:KagaLIva guru pavamAna salahemma || 4 ||
caturavadanana rANi atirO |
hita vimala vij~jAni nigama |
pratatigaLigaBimAni vINApANi brahmANi ||
natisi bEDuve janani lakumI |
patiya guNagaLa tutipudake sa |
nmatiya pAlisi nelesu nI madvadana sadanadali || 5 ||
kRutiramaNa pradyumna naMdane |
caturaviMSati tatvapati dE |
vategaLige guruvenisutiha mArutana nijapatni ||
satata hariyali gurugaLali sa |
dratiya pAlisi BAgavata BA |
rata purANa rahasya tatvagaLarupu karuNadali || 6 ||
vEdapITha viriMci Bava Sa |
krAdi sura vij~jAna dAyaka |
mOdacinmayagAtra lOkapavitra sucaritra ||
CEda BEda viShAdakuTilAM |
tAdi madhyavidUra AdA |
nAdikAraNa bAdarAyaNa pAhi satrANa || 7 ||
kShitiyoLage maNimaMta modalA |
dati durAtmaru oMdadhika viM |
Sati kuBAShyava racise naDumaneyeMba brAhmaNana |
satiya jaTharadoLavatarisi BA |
ratiramaNa madhvABidhAnadi |
caturadaSa lOkadali meredapratimagoMdisuve || 8 ||
paMcaBEdAtmaka prapaMcake |
paMcarUpAtmakane daivaka |
paMcamuKa SakrAdigaLu kiMkararu SrIharige ||
paMcaviMSati tatva taratama |
paMcikegaLanu pELda BAvi vi |
riMciyenipAnaMdatIrthara nenevenanudinavu || 9 ||
vAmadEva viriMcitanaya u |
mAmanOhara ugradhUrjaTi |
sAmajAjina vasana BUShaNa sumanasOttaMsa |
kAmahara kailAsa maMdira |
sOmasUryAnala vilOcana |
kAmitaprada karuNisemage sadA sumaMgaLava || 10 ||
kRuttivAsane hiMde nI nA |
lvattu kalpasamIranali Si |
Shyatva vahisyaKiLAgamArthagaLOdi jaladhiyoLu |
hattu kalpadi tapava gaidA |
dityaroLaguttamanenisi puru |
ShOttamana pariyaMka padavaidideyO mahadEva || 11 ||
pAkaSAsana muKya sakala di |
vaukasarigaBinamipe RuShigaLi |
gEka cittadi pitRugaLige gaMdharva kShitiparige ||
A kamalanABAdi yatigaLa |
nIkakAnamisuvenu biDade ra |
mA kaLatrana dAsavargake namipenanavarata || 12 ||
parimaLavu sumanadoLaganalanu |
araNiyoLagippaMte dAmO |
daranu brahmAdigaLa manadali tOritOradale |
irutiha jagannAtha viThalana |
karuNa paDeva mumukShujIvaru |
parama BAgavataranu koMDADuvudu pratidinavu || 13 ||

|| iti SrI maMgaLAcaraNa saMdhi saMpUrNaM ||

harikathAmRutasAra gurugaLa |
karuNadiMdApanitu pELuve ||
parama BagavadBaktaridanAdaradi kELuvudu ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru