ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕ್ಷೀರವಾರಿಧಿ ಕನ್ನಿಕೆ | ವಿಜಯ ವಿಠ್ಠಲ | Ksheeravaridhi Kannike | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಕ್ಷೀರವಾರಿಧಿ ಕನ್ನಿಕೆ ಮಾರಜನಕೆ 
ಈರೇಳು ಲೋಕನಾಯಿಕೆ ||ಪ||

ವಾರವಾರಕೆ ನಿನ್ನಾರಾಧಿಪುದಕೆ 
ಚಾರುಮನಸು ಕೊಡು ದೂರ ನೋಡದಲೆ ||ಅಪ||

ಶ್ರೀಧರಾ ದುರ್ಗಾ ಆಂಭೃಣಿ ನಿತ್ಯಕಲ್ಯಾಣಿ
ವೇದವತಿಯೇ ರುಕ್ಮಿಣೀ
ವೇದ ವೇದಾಂತದಭಿಮಾನಿ ವಾರಿಜಪಾಣಿ
ಆದಿ ಮಧ್ಯಾಂತ ಗುಣಶ್ರೇಣೀ
ಸಾಧು ಜನರ ಹೃದಯಾಬ್ಜ ವಿರಾಜಿತೆ
ಖೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಲಿ ಮೇಲಾದ ಗತಿಗೆ ಪಂಚ
ಭೇದಮತಿಯ ಕೊಡು ಮಾಧವ ಪ್ರಿಯಳೆ ||೧||

ಶ್ರೀಮಾಯಜಯಾ ಕೃತಿ ಶಾಂತಿ ದೇವಿಜಯಂತಿ
ನಾಮದಲಿಪ್ಪ ಜಯವಂತಿ
ಕೋಮಲವಾದ ವೈಜಯಂತಿ ಧರಿಸಿದ ಶಾಂತಿ
ಸೋಮಾರ್ಕ ಕೋಟಿ ಮಿಗೆ ಕಾಂತಿ
ತಾಮರಸಾಂಬಿಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ ನಾಮವ ನುಡಿಸು- 
ತ್ತಮರೊಡನೆ ಪರಿಣಾಮನೀಯುವುದು ||೨||

ನಾನಾಭರಣ ಭೂಷಿತೆ ಧಾರುಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಅನಾದಿಯಿಂದ ಪ್ರಖ್ಯಾತೆ ಆದಿದೇವತೆ
ಗಾನವಿಲೋಲೆ ಸುರಗೀತೆ 
ನೀನೇ ಗತಿ ಎನಗೊಬ್ಬರ ಕಾಣೆ
ದಾನಿ ಇಂದಿರಾದೇವಿ ನಾನಾ ಪರಿಯಲಿ 
ಶ್ರೀನಿಧಿ ವಿಜಯವಿಠ್ಠಲನ ಮೂರುತಿಯನು
ಧ್ಯಾನದೊಳಿಡುವಂತೆ ಜ್ಞಾನ ಭಕುತಿ ಕೊಡೆ ||೩||

kShIravaaridhi kannike maarajanake 
IrELu lOkanaayike ||pa||

vaaravaarake ninnaaraadhipudake 
chaarumanasu koDu doora nODadale ||apa||

shrIdharaa durgaa aaMbhRuNi nityakalyaaNi
vEdavatiyE rukmiNI
vEda vEdaaMtadabhimaani vaarijapaaNi
aadi madhyaaMta guNashrENI
saadhu janara hRudayaabja viraajite
khEdagoLipa kaamakrOdhagaLODisi
nI dayadali mElaada gatige paMcha
bhEdamatiya koDu maadhava priyaLe ||1||

shrImaayajayaa kRuti shaaMti dEvijayaMti
naamadalippa jayavaMti
kOmalavaada vaijayaMti dharisida shaaMti
sOmaarka kOTi mige kaaMti
taamarasaaMbike rame lakumi satya
bhaame bhavaaraNya dhUmakEtaLe
yaama yaamake hari naamava nuDisu- 
ttamaroDane pariNaamanIyuvudu ||2||

naanaabharaNa bhUShite dhAruNijaate
j~jaanigaLa manOprIte
anaadiyiMda prakhyaate aadidEvate
gaanavilOle suragIte 
nInE gati enagobbara kaaNe
daani iMdiraadEvi naanaa pariyali 
shrInidhi vijayaviThThalana mUrutiyanu
dhyaanadoLiDuvaMte j~jaana bhakuti koDe ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru