ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನೆ ಬಂತಾನೆ ಬಂತಾನೆ | ಶ್ರೀ ಪ್ರಸನ್ನ ವೇಂಕಟ | Aane Bantane | Sri Prasanna Venkata Dasaru


ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ| 
ದಾನವ ಕದಳಿಯ ಕಾನನ ಮುರಿಯುತ |ಪ|

ಗುಂಗುರು ಗುರುಳ ನೀಲಾಂಗ ಚೆಲ್ವಾನೆ| 
ಕಂಗಳಿಗ್ಹೊಳೆವ ವ್ಯಾಘ್ರಾಂಗುಳಿ ಆನೆ|
ಬಂಗಾರದಣುಗಂಟೆ ಶೃಂಗಾರದಾನೆ| 
ಮಂಗಳ ತಿಲಕದ ರಂಗನೆಂಬಾನೆ |೧|

ಕೆಳದಿ ಗೋಪಿಯರೊಳು ಗೆಳೆತನದಾನೆ| 
ಸುಲಭದಿಂದೊಲಿಯುವ ಎಳೆಮರಿ ಆನೆ|
ಘಳಿರು ಘಳಿರು ರವದಿ ನಲಿದಾಡೋ ಆನೆ| 
ಮಲೆತವರೆದೆ ಮ್ಯಾಲೆ ತುಳಿದಾಡೋ ಆನೆ |೨|

ನಳಿನಜಭವರಿಗೆ ಸಿಲುಕದ ಆನೆ| 
ಒಲವಿಂದ ಭಕುತರ ಸಲಹುವ ಆನೆ|
ಹಲವು ಕವಿಗಳಿಗೆ ನಿಲುಕದ ಆನೆ| 
ಬಲ ಪ್ರಸನ್ವೇಂಕಟ ನಿಲಯನೆಂಬಾನೆ |೩|

Ane baMtAne baMtAne baMtammammA| 
dAnava kadaLiya kAnana muriyuta |pa|
 
guMguru guruLa nIlAMga celvAne| 
kaMgaLig~hoLeva vyAGraaMguLi Ane|
baMgAradaNugaMTe SRuMgAradAne| 
maMgaLa tilakada raMganeMbAne |1|
 
keLadi gOpiyaroLu geLetanadAne| 
sulaBadiMdoliyuva eLemari Ane|
GaLiru GaLiru ravadi nalidADO Ane| 
maletavarede myAle tuLidADO Ane |2|
 
naLinajaBavarige silukada Ane| 
olaviMda Bakutara salahuva Ane|
halavu kavigaLige nilukada Ane| 
bala prasanvEMkaTa nilayaneMbAne |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru