ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗೊಲ್ಲತಿಯರೆಲ್ಲ ಕೂಡಿ | ರಂಗವಿಠಲ | Gollatiyarella Koodi | Sri Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ 
ಕಳ್ಳನೆಂದು ದೂರುತ್ತಾರೆ ಗೋಪಿ ಎನ್ನ, ಕೊಲ್ಲಬೇಕೆಂಬ ಬಗೆಯೇ ||ಪ||

ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ, ಕೆರೆ ಏನೇ ಹೇಳಮ್ಮಯ್ಯ || 
ಕರೆದು ಅಣ್ಣನ ಕೇಳಮ್ಮ ಉಂಟಾದರೆ ಒರಳಿಗೆ ಕಟ್ಟಮ್ಮಯ್ಯ ||೧||

ಮೀಸಲು ಬೆಣ್ಣೆಯನು ಮೆಲುವುದು ಎನಗೆ ದೋಷವಲ್ಲವೇನಮ್ಮಯ್ಯ || 
ಆಸೆ ಮಾಡಿದರೆ ದೇವರು ಕಣ್ಣ ಮೋಸದಿ ಕುಕ್ಕುವನಮ್ಮಯ್ಯ ||೨||

ಅಟ್ಟವನೇರಿ ಹಿಡಿವುದು ಅದು ಎನಗೆ, ಕಷ್ಟವಲ್ಲವೆ ಹೇಳಮ್ಮಯ್ಯ ನೀ 
ಕೊಟ್ಟ ಹಾಲು ಕುಡಿಯಲಾರದೆ ನಾನು ಬಟ್ಟಲೊಳಗಿಟ್ಟು ಪೋದೇನೆ ||೩||

ಪುಂಡುತನವ ಮಾಡಲು ನಾನು ದೊಡ್ಡ ಗಂಡಸೇನೇ ಪೇಳಮ್ಮಯ್ಯ | ಎನ್ನ 
ಕಂಡವರು ದೂರುತ್ತಾರೆ ಗೋಪ್ಯಮ್ಮ, ನಾ ನಿನ್ನ ಕಂದನಲ್ಲವೇನೆ ಅಮ್ಮಯ್ಯ ||೪||

ಉಂಗುರದ ಕರದಿಂದ ಗೋಪ್ಯಮ್ಮ ತನ್ನ ಶೃಂಗಾರದ ಮಗನ್ನೆತ್ತಿ 
ರಂಗವಿಠಲನ ಪಾಡಿ ಉಡುಪಿಯ ಉತ್ತುಂಗ ಕೃಷ್ಣನ ತೂಗಿದಳು ||೫||

gollatiyarella kUDi enna mEle illada suddi puTTisi 
kaLLaneMdu dUruttaare gOpi enna, kollabEkeMba bageyE ||pa||

haraviya haalu kuDiyalu enna hoTTe, kere EnE hELammayya || 
karedu aNNana kELamma uMTaadare oraLige kaTTammayya ||1||

mIsalu beNNeyanu meluvudu enage dOShavallavEnammayya || 
Ase maaDidare dEvaru kaNNa mOsadi kukkuvanammayya ||2||

aTTavanEri hiDivudu adu enage, kaShTavallave hELammayya nI 
koTTa haalu kuDiyalaarade naanu baTTaloLagiTTu pOdEne ||3||

puMDutanava maaDalu naanu doDDa gaMDasEnE pELammayya | enna 
kaMDavaru dUruttaare gOpyamma, naa ninna kaMdanallavEne ammayya ||4||

uMgurada karadiMda gOpyamma tanna shRuMgaarada magannetti 
raMgaviThalana paaDi uDupiya uttuMga kRuShNana tUgidaLu ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru