Posts

Showing posts from September, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇಂಥವನಿಗ್ಹ್ಯಾಂಗೆ ಮನಸೋತೆ | ಹೆಳವನಕಟ್ಟೆ ಗಿರಿಯಮ್ಮ| Inthavanighyange | Helavanakatte Giriyamma

Image
ಸಾಹಿತ್ಯ : ಶ್ರೀ ಹೆಳವನ ಕಟ್ಟೆ ಗಿರಿಯಮ್ಮ  Kruti:   Sri Helavanakatte Giriyamma ಇಂಥವನಿಗ್ಹ್ಯಾಂಗೆ ಮನಸೋತೆ ಬಹು ಪಂಥವಾಡಿದ ಜಗನ್ಮಾತೆ ||ಅಪ|| ಆವಾಗನಾರುವ ಮೈಯ್ಯ ಮಾರಿ ತೋರಿ ಆಡುವ ಕಾಲು ಕೈಯ್ಯ | ಕೋರೆಯಿಂದೆತ್ತುತ್ತ ಕೊಸರಿ ಕೊಂಡಸುರನಾ ಘೋರನಾಗಿ ದೊಡ್ಡ ಧೀರನ ಸೀಳಿದ ||೧|| ಬಡಬ್ರಾಹ್ಮಣನೆಂದು ತಿರಿದು ತನ್ನ ಹಡೆದ ತಾಯಿಯ ಶಿರವಾ ಕಡಿದು || ಮಡದಿ ತಮ್ಮರ ಕೂಡೆ ಅಡವಿಯ ಸೇರಿದಾ | ಕಡು ಗೋಪಿಗೊಲ್ಲರ ಬಾಧೆಯ ಬಿಡಿಸಿದ ||೨|| ಬತ್ತಲೆ ನಿಂತಿದ್ದನಾಗ ತೇಜಿ ಹತ್ತಿ ಮೆರೆವನಿವ ಹೀಂಗ  ಸಂತತ ಭಕುತರ ಸಲಹೋ ಹೆಳವನ ಕಟ್ಟೆ ಇಂಥಾ  ರಂಗಯ್ಯಗೆ ಏನಂತ ಮನಸೋತೆ ||೩|| iMthavanig hyAMge manasOte bahu paMthavADida jaganmAte ||apa||   AvAganAruva maiyya mAri tOri ADuva kAlu kaiyya | kOreyiMdettutta kosari koMDasuranA GOranAgi doDDa dhIrana sILida ||1||   baDabrAhmaNaneMdu tiridu tanna haDeda tAyiya SiravA kaDidu || maDadi tammara kUDe aDaviya sEridA | kaDu gOpigollara bAdheya biDisida ||2||   battale niMtiddanAga tEji hatti merevaniva hIMga  saMtata Bakutara salahO heLavana kaTTe iMthA  raMgayyage EnaMta manasOte ||3||

ತಾರೋ ನಮ್ಮ ಬಂಡಿಯಾ | ಶ್ರೀದವಿಠಲ | Taaro Namma Bandiya | Srida Vittala

Image
ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು Kruti: Sri Srida Vittala Dasaru ತಾರೋ ನಮ್ಮ ಬಂಡಿಯಾ ಗೋಪಾಲಕೃಷ್ಣ |ಪ| ಅತ್ತರೇನು ಕಂಗಳಿಂದ ಮುತ್ತು ಸುರಿಯೋದಿಲ್ಲ ರಂಗ | ಮತ್ತೆ ಬೆನ್ನ ಮೇಲೆ ಬಂಡಿ ಹೊತ್ತರೆ ನೀ ಬಿಡುವಿ ಏನೋ |೧| ವಾರಿಜಾಕ್ಷ ನಿನ್ನ ಬಡಿವಾರವೇನೋ ಹೇರದೆ | ಹಾರಿ ಹತ್ತಿಕೊಂಡು ಭಾರ ಬೆಟ್ಟವನ್ನು ಏರಿದೆ |೨| ಕೊಟ್ಟು ಹೋಗೆಂದರ್ಯಾಕೆ ಸಿಟ್ಟು ಮಾಡುವಿಯೋ ಕೃಷ್ಣ | ಶ್ರೀದ ವಿಠ್ಠಲ ಕೂಡ್ಯಾಡಿದ ಮೇಲೆ ಬಿಟ್ಟರೆ ನಿನ್ನ ಬಿಡುವರಲ್ಲ |೩| tArO namma baMDiyA gOpAlakRuShNa |pa|   attarEnu kaMgaLiMda muttu suriyOdilla raMga | matte benna mEla baMDi hottare nI biDuvi EnO |1|   vArijAkSha ninna baDivAravEnO hErade | hAri hattikoMDu BAra beTTavannu Eride |2|   koTTu hOgeMdaryAke siTTu mADuviyO kRuShNa | SrIda viThThala kUDyADida mEle biTTare ninna biDuvaralla |3|

ರಾಮ ರಾಮ ರಾಮ ಸೀತಾರಾಮ | ಪುರಂದರ ವಿಠಲ | Rama Rama Seetharama | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ|| ಅಮರ ಪತಿಯ ದಿವ್ಯನಾಮ ಅಂದಿಗೊದಗಿ ಬಾರದೋ ||ಅಪ|| ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೇ || ಕೊರಳಿಗಾತ್ಮ ಸೇರಿದಾಗ ಹರಿಯ ನಾಮ ಒದಗದೋ ||೧|| ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕುವಾಗ || ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಿ ಬಾರದೋ ||೨|| ಶ್ವಾಸಕೋಶವೆರಡು ಕಂಠ ದೇಹದಲ್ಲಿ ಸೇರಿದಾಗ || ವಾಸುದೇವನೆಂಬ ನಾಮ ಆ ಸಮಯಕ್ಕೆ ಒದಗದೋ ||೩|| ಕಲ್ಲು ಮರನಾಗಿ ಜ್ಞಾನವಿಲ್ಲದಾಗಿ ಮರಣ ಒದಗೆ || ಫುಲ್ಲನಾಭ ಕೃಷ್ಣನೆಂಬ ಸೊಲ್ಲು ಬಾಯಿಗೊದಗದೋ ||೪|| ಶೃಂಗಾರದ ದೇಹವೆಲ್ಲ ಅಂಗಮುರಿದು ಬೀಳುವಾಗ || ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ಒದಗದೋ ||೫|| ವಾತಪಿತ್ತವೆರಡೂ ಕೂಡಿ ಶ್ಲೇಷ್ಮ ಬಂದು ಒದಗಿದಾಗ || ಧಾತು ಕುಂದಿದಾಗ ರಘುನಾಥನ ಧ್ಯಾನ ಒದಗದೋ ||೬||   ಕೆಟ್ಟ ಜನ್ಮದಲ್ಲಿ ಹುಟ್ಟಿ ದುಷ್ಟ ಕರ್ಮ ಮಾಡಿ ದೇಹ || ಬಿಟ್ಟು ಹೋಗುವಾಗ ಪುರಂದರ ವಿಠಲ ನಾಮ ಒದಗದೋ ||೭|| rAma rAma rAma sItArAma ennirO ||pa|| amara patiya divyanAma aMdigodagi bAradO ||apa||   Baradi yamana BaTaru baMdu horaDireMdu meTTi muriyE || koraLigAtma sEridAga hariya nAma odagadO ||1||   iMdriyaMgaLella kUDi baMdu tanuva musuku...

ನರಸಿಂಹ ಪಾದ ಭಜನೆಯ ಮಾಡೋ | ಪುರಂದರ ವಿಠಲ | Narasimha Paada | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನರಸಿಂಹ ಪಾದ ಭಜನೆಯ ಮಾಡೋ ||ಪ|| ನರಸಿಂಹನ ಪಾದ ಭಜನೆಯ ಮಾಡಲು | ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅಪ|| ತರಳನ ಮೊರೆ ಕೇಳಿ ತ್ವರಿತದಿಂದಲಿ ಬಂದು || ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||೧|| ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ || ವರ ಕಂಭದಿಂದ ಬಂದ ಸಿರಿ ನರಹರಿ ನಮ್ಮಾ ||೨|| ಹರ ವಿರಿಂಚಾದಿಗಳು ಕರವೆತ್ತಿ ಮುಗಿಯಲು || ಪರಮ ಶಾಂತನಾದ ಪುರಂದರ ವಿಠಲ ||೩|| narasiMha pAda Bajaneya mADO ||pa||   narasiMhana pAda Bajaneya mADalu | durita parvatava KaMDisuva kuliSadaMte ||apa||   taraLana more kELi tvaritadiMdali baMdu || duruLana karuLa tanna koraLalli dharisida ||1||   surarella naDugalu siridEvi moreyiDe || vara kaMBadiMda baMda siri narahari nammA ||2||   hara viriMcAdigaLu karavetti mugiyalu || parama SAMtanAda puraMdara viThala ||3||

ಬಾರೋ ನಮ್ಮ ಮನೆಗೆ | ರಂಗ ವಿಠಲ | Baaro Namma Manege | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ |ಪ| ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿ| ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ |೧| ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟು| ಮಸ್ತಕದಲ್ಲಿ ಪರವಸ್ತು ತೋರಿದ ಕೃಷ್ಣ |೨| ಮೂರ್ಜಗವನ್ನೆಲ್ಲ ಬೊಜ್ಜೆಯೊಳಗೆ ಇಟ್ಟು| ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ |೩| ನಾರೇರು ಬಿಚ್ಚಿಟ್ಟ ಸೀರೆಗಳನೆ ಒಯ್ದು| ಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ |೪| ಅಂಗನೆಯರ ವ್ರತ ಭಂಗವ ಮಾಡಿದ| ರಂಗವಿಠಲ ಭವಭಂಗವ ಪರಿಹರಿಸೋ |೫| bArO namma manege gOpAlakRuShNa |pa|   golla bAlakaranu nillisi pegalEri| gullu mADade mosarella savida kRuShNa |1|   kastUri tilakava SistAgi paNeyoLiTTu| mastakadalli paravastu tOrida kRuShNa |2|   mUrjagavannella bojjeyoLage iTTu| gejjeya kaTTi tappu hejjeyanikkuta |3|   nArEru bicciTTa sIregaLane oydu| myAre illade karatOreMda SrIkRuShNa |4|   aMganeyara vrata BaMgava mADida| raMgaviThala BavaBaMgava pariharisO |5|

ವಾರಿಜನಾಭನ ಕರುಣವೆ ಸ್ಥಿರ | ಪುರಂದರ ವಿಠಲ | Varijanabhana Karunave | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು ಕೇಳಾತ್ಮ |ಪ| ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸರಿಯು ಕೇಳಾತ್ಮ |ಅಪ| ಕೆರೆಯ ಕಟ್ಟಿಸು ಹೂದೋಟವನ್ಹಾಕಿಸು ಸೆರೆಯ ಬಿಡಿಸು ಪುಣ್ಯಾತ್ಮ | ಅರಿಯದೆ ಮನೆಗೆ ಬಂದವರಿಗಶನವಿತ್ತು ಪರಮ ಪದವಿ ಪಡೆಯಾತ್ಮ |೧| ಆನೆ ಕುದುರೆ ಒಂಟೆ ಸೈನ್ಯ ಭಂಡಾರವ ಏನು ಪಡೆದರೇನು ಆತ್ಮ| ನಾನಾ ವಿಧದಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು ಕೇಳಾತ್ಮ |೨| ಲೆತ್ತ ಪಗಡೆ ಚದುರಂಗ ಜೂಜಾಟವ ಮತ್ತಾಡಿ ಕೆಡಬೇಡ ಆತ್ಮ | ಭಕ್ತಿಯಲಿ ಪುರಂದರ ವಿಠಲನ ನೆನೆ ಮುಕ್ತಿಯ ಪಡೆವೆ ಕೇಳಾತ್ಮ |೩| vArijanABana karuNave sthira saMsAra eravu kELAtma |pa| jArutadAyuShya dUrada mukutige dAri sariyu kELAtma |apa|   kereya kaTTisu hUdOTavanhAkisu sereya biDisu puNyAtma | ariyade manege baMdavarigaSanavittu parama padavi paDeyAtma |1|   Ane kudure oMTe sainya BaMDArava Enu paDedarEnu Atma| nAnA vidhadiMda aLiduLidare muMde hAni tappadu kELAtma |2|   letta pagaDe caduraMga jUjATava mattADi keDabEDa Atma | Baktiyali puraMdara viThalana nene muktiya paDeve kELAtma |3|

ಮಾರುತಾತ್ಮಜ ಮಧ್ವಮುನಿರಾಯ | ವಿದ್ಯೇಶ ವಿಠಲ | Marutatmaja Madhwamuniraya | Sri Vidyesha Teertharu

Image
ಸಾಹಿತ್ಯ  : ಶ್ರೀ ವಿದ್ಯೇಶ ತೀರ್ಥರು Kruti:    Sri Vidyesha Teertharu ಮಾರುತಾತ್ಮಜ ಮಧ್ವಮುನಿರಾಯ ಸುರ-ಮುನಿ-ಗಂಧರ್ವ ಗೀತ ವಿಜಯ ಕರುಣಿಸೆನಗೆ ತತ್ಕಾಲದಲಿ ಸರುವ ಶತ್ರುಜಯ ಸಂಪದವ ||ಪ|| ರಕ್ಕಸ ಪುರಿಯಲಿ ಸಿಂಹನಾದದಿ ರಕ್ಕಸ ಹರಿಣಗಳ ಹಿಂಡಿನ ಪುಕ್ಕಲು ಹೃದಯ ಸೀಳಿ ವಿಕ್ರಮದಿ "ರಕ್ಕಸ ಗಜಗಣಕೆ ಸಿಂಹ"ನಾದೆ ||೧|| ನಯ-ವಿನಯಾದಿ ಗುಣದಿ ಸೆಳೆದು ವಾಯುಜ ಸೀತಾ-ರಾಮರ ಮನವ ಆಯಾಸವಿಲ್ಲದೆ ಕಾಂಚನ ಮಾಲೆಯ ಜಯಿಸಿ ದಾಸೋತ್ತಮ ನೆಂದು ನುತನಾದೆ ||೨|| ಮಾತೆ ಕುಂತಿಯ ಕರದಿಂ ಜಾರಿದ ಪತಿತ ನಿಜ ಪೋತ ಕಾಯದಿ ಶೀಘ್ರ ಶತಶೃಂಗ ಗಿರಿಯ ಭೇದಿಸಿ ಅತುಲ ವಜ್ರಶರೀರ ನೀನಹುದು ||೩|| ಹರಿ ವರಮಾನಸ ಪೂಜಾರತ ಪರಮ ಭಾಗವತಮಣೆ ನಿನ್ನ ಜರಾಸಂಧ ವಧಯಜ್ಞ ಹರಿಗೆ ಪರಮಪ್ರಿಯವಾಯಿತು ಕ್ರತುವಿಗಿಂತ ||೪|| ವಾದಿಗಳ ಗೆದ್ದು ಶಿಷ್ಯ ನಕ್ಷತ್ರಮಾಲಾ ಮಧ್ಯದಲಿ ವಿರಾಜಿಸಿದ ನಿಷ್ಕಳಂಕ ವಿದ್ಯೇಶ ವಿಠಲನ ಹೃದ್ಗಗನಾಶ್ರಿತ ಮಧ್ವಚಂದಿರಗೆ ನಿತ್ಯಜಯವೆನ್ನುವೆ ||೫|| maarutaatmaja madhvamuniraaya sura-muni-gaMdharva gIta vijaya karuNisenage tatkaaladali saruva Satrujaya saMpadava ||pa|| rakkasa puriyali siMhanaadadi rakkasa hariNagaLa hiMDina pukkalu hRudaya sILi vikramadi "rakkasa gajagaNake siMha"naade ||1|| naya-vinayaadi guNadi seLedu vaayuja sItaa-raamara manava Aya...

ಒಲಿದೆ ಯಾತಕಮ್ಮ ಲಕುಮಿ | ಗುರುಗೋಪಾಲ ವಿಠಲ | Olide Yatakamma Lakumi | Sri Guru Gopala Vittala Dasaru

Image
  ಸಾಹಿತ್ಯ : ಶ್ರೀ ಗುರು ಗೋಪಾಲ ವಿಠಲ ದಾಸರು  Kruti:Sri Guru Gopala Vittala Dasaru ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ |ಪ| ಹಲವಂಗದವನ ಹವಣೆ ತಿಳಿದೂ ತಿಳಿದು ತಿಳಿಯದ್ಹಾಂಗೆ |ಅಪ| ಕಮಲಗಂಧಿ ಕೋಮಲಾಂಗಿ| ಸುಂದರಾಬ್ಜ ವದನೆ ನೀನು| ರಮಣ ಮತ್ಸ್ಯ ಕಠಿಣಕಾಯ| ಸೂಕರಾಸ್ಯನು| ರಮಣೀಯ ಸ್ವರೂಪಿ ನೀನು ಅಮಿತ ಘೋರ ರೂಪನವನು| ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ |೧| ಜಾಣೆ ರತ್ನಾಕರನ ಮಗಳು| ತಾನು ಶುದ್ಧ ಭೃಗುಜನವನು| ಆನಂದಾಬ್ಜ ಸದನೆ ನೀನು ವನವಾಸಿ ಅವನು| ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಕಾಮಿ ಅವನು| ಜ್ಞಾನ ಚಿತ್ರವಸನೆ ನೀನು| ಹೀನ ಚೈಲನಾದವನಿಗೆ |೨| ಲಲಿತೆ ಚಾರುಶೀಲೆ ನೀನು ಕಲಕಿ ಕಲಹ ಪ್ರಿಯನು ಅವನು| ಕುಲದ ಕುರುಹು ಇಲ್ಲ ಇನ್ನು ನೆಲೆಯು ಗಂಡಿಲ್ಲ| ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು| ಜಲದಿ ಆಲದೆಲೆಯ ಮೇಲೆ ಮಲಗಿ ಬೆರಳ ಸವಿವವನಿಗೆ |೩| ಅವನ ವಾರ್ತೆ ಕೇಳಿದವರು ಬಲ್ಲರೊ ಸಂಸಾರವನ್ನು| ಅವನ ಮೂರ್ತಿ ನೋಡಿದವರು ಮನೆಯ ಧನವ ಬಿಡುವರೋ| ಅವನ ಪುರಕೆ ಪೋದ ಜನರು ಒಮ್ಮಿಗನ್ನ ಹಿಂತಿರುಗರು| ಅವನು ತಾನೆ ತನಯರನ್ನು ತನ್ನವಯವದಿಂದ ಪಡೆದವನಿಗೆ |೪| ಸ್ವರತ ಅನಪೇಕ್ಷ ಕಾಮಿ| ನಿದ್ರಾಹೀನ ಅನಾಶನಾ| ಸ್ಪರುಷರೂಪ ಶಬ್ದವಾಚ್ಯ ಅಮಿತ ಭೋಕ್ತನು| ಗುರು ಗೋಪಾಲ ವಿಠಲನು ನಿರುತ ತನ್ನ ವಕ್ಷದೊಳು| ಅರಮನೆಯ ಮಾಡಿಟ್ಟು ನಿನಗೆ ಮರುಳು ಮಾಡಿದ ಮಾಯಾವಿಗೆ |೫| olide yAtakamma lakumi vAsudEvage |pa| halava...

ಏನ ಪೇಳಲೆ ನಾನು ಕೃಷ್ಣನ ಮಹಿಮೆ | ಪುರಂದರ ವಿಠಲ | Ena Pelale Nanu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಏನ ಪೇಳಲೆ ನಾನು ಕೃಷ್ಣನ ಮಹಿಮೆ, ಯಾರಿಗೂ ತಿಳಿಯದಮ್ಮ ||ಪ||    ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು,  ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು  ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ||ಅಪ|| ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು,  ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು,  ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ||೧|| ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ,  ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು,  ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ||೨||  ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ  ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು,  ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ||೩||  Ena pELale nAnu kRuShNana mahime, yArigU tiLiyadamma ||pa||    hottAreddu yaSOde muttu pONisuttiddaLu,  hattiridda kRuShNa baMdu oMdu muttu tegedukoMDu  suttalidda huDugara sahita hittaloLage bitti hOda ||apa|| paripari ciM...

ಮೂರುತಿಯನು ನಿಲ್ಲಿಸೋ | ಪುರಂದರ ವಿಠಲ | Moorutiyanu Nilliso | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮೂರುತಿಯನು ನಿಲ್ಲಿಸೋ ಮಾಧವ ನಿನ್ನ ||ಪ|| ಎಳೆತುಳಸಿ ವನಮಾಲೆಯು ಕೊರಳೊಳು | ಪೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||೧|| ಮುತ್ತಿನ ಸರ ನವರತುನದುಂಗುರವಿಟ್ಟು || ಮತ್ತೆ ಶ್ರೀ ಲಕುಮಿಯು ಉರದೊಳುಪ್ಪುವ ನಿನ್ನ ||೨|| ಭಕ್ತರ ಕಲ್ಪತರು ಭಾಗ್ಯದ ಸುರಧೇನು || ಮುಕ್ತಿದಾಯಕ ನಮ್ಮ ಪುರಂದರ ವಿಠಲ ನಿನ್ನ ||೩|| mUrutiyanu nillisO mAdhava ninna ||pa||   eLetuLasi vanamAleyu koraLoLu | poLeva pItAMbaradiMdaloppuva ninna ||1||   muttina sara navaratunaduMguraviTTu || matte SrI lakumiyu uradoLuppuva ninna ||2||   Baktara kalpataru BAgyada suradhEnu || muktidAyaka namma puraMdara viThala ninna ||3||

ಕಂಡೆನೀಗ ರಂಗನಾಥನ | ಹೆಳವನಕಟ್ಟೆ ರಂಗ| Kandeneega Ranganathana | Sri Helavanakatte Giriyamma

Image
ಸಾಹಿತ್ಯ : ಶ್ರೀ ಹೆಳವನಕಟ್ಟೆ ಗಿರಿಯಮ್ಮ  Kruti: Sri Helavanakatte Giriyamma ಕಂಡೆನೀಗ ರಂಗನಾಥನ ಕಾರುಣ್ಯ ನಿಧಿಯ ಕಂಡೆನೀಗ ರಂಗನಾಥನ ||ಪ|| ಮಂಡಲದೊಳು ಉದ್ಧಂಡ ಮೂರುತಿ | ಹಿಂಡು ಹಿಂಡು ದೈತ್ಯರ ತಂಡ ತಂಡದಿ  ತುಂಡು ತುಂಡು ಮಾಡಿದ ಸ್ವಾಮಿಯ ||ಅಪ|| ಕಾಮ ಪಿತನ ಕೌಸ್ತುಭ ಹಾರನಾ | ಕಸ್ತೂರಿ ನಾಮವ ನೇಮದಿಂದ ಧರಿಸಿದಾತನ | ವಾಮಭಾಗ ಲಕ್ಷ್ಮೀ ಸಹಿತ ಹೇಮ ಮಂಟಪದೊಳಗೆ ಕುಳಿತು | ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯಾ ||೧|| ಗರುಡ ವಾಹನವೇರಿ ಗಮಕದೀ | ಚರಿಸುತ್ತ ಬಂದು ಸರಸೀಯೊಳು ಕರಿಯ ಸಲಹಿದೆ || ಪರಮ ಭಕ್ತರ ವಾಸುದೇವ ಅರುಣ ವಾರಿಧ್ರಿ ಕಮಲ ನಯನ | ಉರಗಶಯನ ಉದ್ಧಾರಿ ನಿನ್ನ ಮೊರೆಯ ಹೊಕ್ಕೆ ಕಾಯೋ ಎನ್ನ ||೨|| ಇಂದುಧರನ ಸಖನೆ ಕೇಳಯ್ಯ | ಬಂದಂಥ ದುರಿತ ಹಿಂದು ಮಾಡಿ ಮುಂದೆ ಸಲಹಯ್ಯಾ || ತಂದೆಯಡಿಯ ಹೊಂದಿದೇನು ಇಂದು ಹೆಳವನ ಕಟ್ಟೆ ರಂಗ | ಆನಂದ ಪಡಿಸೋ ರಾಮಲಿಂಗ ಹೊಂದಿದೇನು ನಿನ್ನ ಚರಣ ||೩|| kaMDenIga raMganAthana kAruNya nidhiya kaMDenIga raMganAthana ||pa|| maMDaladoLu uddhaMDa mUruti | hiMDu hiMDu daityara taMDa taMDadi  tuMDu tuMDu mADida svAmiya ||apa||   kAma pitana kaustuBa hAranA | kastUri nAmava nEmadiMda dharisidAtana | vAmaBAga lakShmI sahita hEma maMTapadoLage kuLitu | kAmisida Baktarige kAmitA...

ಬಾರಯ್ಯ ವೆಂಕಟ ಮನ್ಮನಕೆ | ಜಗನ್ನಾಥ ವಿಠಲ | Barayya Venkata Manmanake | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಬಾರಯ್ಯ ವೆಂಕಟ ಮನ್ಮನಕೆ ತ್ವರಿತದಿ ನಿಜನಾರಿ ಸಹಿತದೀ ಸಮಯಕೆ ಶರಣೆಂಬೆನೋ ತವ ಪದಯುಗಕೆ || ಪ || ಸಾರಿದ ನಿಜ ಶರಣನ ಈ ಭವಭವ  ಘೋರ ಭಯವ ಪರಿಹರಿಸುವುದಕೆ || ಅಪ || ವ್ಯಕ್ತಾವ್ಯಕ್ತ ತ್ರಿಜಗದ್ವ್ಯಾಪ್ತಾ ದೋಷ ನಿರ್ಲಿಪ್ತಾ ಮುಕ್ತಾಮುಕ್ತ ಜೀವರ ಗಣದಾಪ್ತಾ ನೀಸರ್ವತ್ರದಿ ವ್ಯಾಪ್ತ ಭಕ್ತನ ಹೃದಯದಿ ವ್ಯಕ್ತನಾಗಿ ನಿಜ  ಮುಕ್ತಿಪಥವ ತೋರೋ ಭಕ್ತಿಯನಿತ್ತು ||೧|| ಆನಂದ ನಿಲಯ ನಿರ್ಮಲ ಕಾಯ ಕವಿಜನಗೇಯ  ಆನಂದದಾಯಕ ನಿರ್ಜಿತ ಮಾಯಾ ಕಾಯಯ್ಯ ಜೀಯ  ಆನತ ಜನ ಸನ್ಮಾನದ ಮನ್ಮನ  ವನಜದಿ ನೀ ಸನ್ನಿಹಿತನಾಗುವುದಕೆ ||೧|| ದಿಟ್ಟ ಗುರು ಜಗನ್ನಾಥ ವಿಠಲ ನಾನನಾಥ  ಥಟ್ಟನೆ ನೀ ಎನ್ನನು ಕಾಯೋ ಶ್ರೀನಾಥ| ಇಷ್ಟೆ ಎನಮನದರ್ಥ ಸೃಷ್ಟಿಯೊಳಗೆ ಬಹು ಭ್ರಷ್ಟರ ಸ್ತುತಿಸಿ ನಿಕೃಷ್ಟನಾದೆನೋ ಶ್ರೇಷ್ಠ ಮೂರುತಿ ||೩|| bArayya veMkaTa manmanake tvaritadi nijanAri sahitadI samayake SaraNeMbenO tava padayugake || pa || sArida nija SaraNana I BavaBava  GOra Bayava pariharisuvudake || apa || vyaktaavyakta trijagadvyaaptaa dOSha nirliptaa muktaamukta jeevara gaNadaaptaa nIsarvatradi vyaapta bhaktana hRudayadi vyaktanaagi nija  mukt...

ಆರತಿ ಹಾಡು | ಪಂಕಜ ಮುಖಿಯರೆಲ್ಲರೂ ಬಂದು | ಪುರಂದರ ವಿಠಲ | Aarati Song | Pankaja Mukhiyarellaru Bandu

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಪಂಕಜ ಮುಖಿಯರೆಲ್ಲರೂ ಬಂದು ಲಕ್ಷ್ಮೀ  ವೆಂಕಟರಮಣಗಾರತಿ ಎತ್ತಿರೇ ||ಪ|| ಮತ್ಸ್ಯಾವತಾರಗೆ ಮಂದರೋದ್ಧಾರಗೆ ಉತ್ಸಾಹದಿ ಭೂಮಿ ತಂದವಗೇ ವತ್ಸಗಾಗಿ ಕಂಭದಿಂದಲಿ ಬಂದ ಉತ್ಸವನರಸಿಂಹಗಾರತಿ ಎತ್ತಿರೇ ||೧|| ವಾಮನ ರೂಪದಿ ದಾನವ ಬೇಡಿದಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮನಾಗಿ ದಶಶಿರನನ್ನು ಕೊಂದ ಸ್ವಾಮಿ ಶ್ರೀ ಕೃಷ್ಣಗೆ ಆರತಿ ಎತ್ತಿರೇ ||೨|| ಬತ್ತಲೆ ನಿಂತಗೆ ಬೌದ್ಧವತಾರಗೆ ಉತ್ತಮ ಅಶ್ವವನೇರಿದವಗೆ ಭಕ್ತರ ಸಲಹುವ ಪುರಂದರ ವಿಠಲಗೆ ಮುತ್ತೈದೆಯರು ಆರತಿ ಎತ್ತಿರೆ ||೩|| paMkaja mukhiyarellarU baMdu lakShmI  veMkaTaramaNagaarati ettirE ||pa|| matsyaavataarage maMdarOddhaarage utsaahadi bhUmi taMdavagE vatsagaagi kaMbhadiMdali baMda utsavanarasiMhagaarati ettirE ||1|| vaamana rUpadi daanava bEDidage prEmadi koDaliya piDidavage raamanaagi daSashiranannu koMda svaami SrI kRuShNage Arati ettirE ||2|| battale niMtage bauddhavataarage uttama aSvavanEridavage bhaktara salahuva puraMdara viThalage muttaideyaru Arati ettire ||3||

ಆನೆ ಬಂತಾನೆ ಬಂತಾನೆ | ಶ್ರೀ ಪ್ರಸನ್ನ ವೇಂಕಟ | Aane Bantane | Sri Prasanna Venkata Dasaru

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ|  ದಾನವ ಕದಳಿಯ ಕಾನನ ಮುರಿಯುತ |ಪ| ಗುಂಗುರು ಗುರುಳ ನೀಲಾಂಗ ಚೆಲ್ವಾನೆ|  ಕಂಗಳಿಗ್ಹೊಳೆವ ವ್ಯಾಘ್ರಾಂಗುಳಿ ಆನೆ| ಬಂಗಾರದಣುಗಂಟೆ ಶೃಂಗಾರದಾನೆ|  ಮಂಗಳ ತಿಲಕದ ರಂಗನೆಂಬಾನೆ |೧| ಕೆಳದಿ ಗೋಪಿಯರೊಳು ಗೆಳೆತನದಾನೆ|  ಸುಲಭದಿಂದೊಲಿಯುವ ಎಳೆಮರಿ ಆನೆ| ಘಳಿರು ಘಳಿರು ರವದಿ ನಲಿದಾಡೋ ಆನೆ|  ಮಲೆತವರೆದೆ ಮ್ಯಾಲೆ ತುಳಿದಾಡೋ ಆನೆ |೨| ನಳಿನಜಭವರಿಗೆ ಸಿಲುಕದ ಆನೆ|  ಒಲವಿಂದ ಭಕುತರ ಸಲಹುವ ಆನೆ| ಹಲವು ಕವಿಗಳಿಗೆ ನಿಲುಕದ ಆನೆ|  ಬಲ ಪ್ರಸನ್ವೇಂಕಟ ನಿಲಯನೆಂಬಾನೆ |೩| Ane baMtAne baMtAne baMtammammA|  dAnava kadaLiya kAnana muriyuta |pa|   guMguru guruLa nIlAMga celvAne|  kaMgaLig~hoLeva vyAGraaMguLi Ane| baMgAradaNugaMTe SRuMgAradAne|  maMgaLa tilakada raMganeMbAne |1|   keLadi gOpiyaroLu geLetanadAne|  sulaBadiMdoliyuva eLemari Ane| GaLiru GaLiru ravadi nalidADO Ane|  maletavarede myAle tuLidADO Ane |2|   naLinajaBavarige silukada Ane|  olaviMda Bakutara salahuva Ane| halavu kavigaLige nilukada Ane|...

ಅಚ್ಯುತನ ಮೆಚ್ಚಿಸಿ | ಶ್ರೀ ವಿಜಯದಾಸರ ರಚನೆ | Achyutana | Vijaya Dasaru | Prasanna Venkatadasara Stuti

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಅಚ್ಯುತನ ಮೆಚ್ಚಿಸಿ ಪ್ರಚ್ಛಿನ್ನವರ ಪಡೆದ| ಆಚಾರ್ಯ ಸಿರಿ ಪ್ರಸನ್ವೆಂಕಟಾರ್ಯರ ಕಂಡೆ ||ಪ|| ಸ್ವಕುನಾತಿ ಸೋತ್ತಮರ ಗತಿ ದಾತ ಶ್ರೀಹರಿ ಸ್ವೀಕರಿಸಿ ಈ ಮಹಾ ಭಕುತ ಮತಿದಾಸರಲಿ ಕಕುಲಾತಿ ತೋರಿ ಸತ್ಕೃತಿ ರಚಿಸುವಂದದಲಿ ಶಕುತಿಯಾನಿತ್ತಖಿಲ ಸಂತಸವ ನೀಡಿದಾ ||೧|| ಅಚ್ಯುತಾಮರ ಚಿತ್ತಗಚ್ಹಿಂತ ದಿಂದಿವರು ಅರ್ಚಿಸಲು ನೆಚ್ಚಿ ಅಂಕಿತವ ನೀಡಿರಲು ಅಚಿಂತನ ನಣುದ್ಭುತ ವಾಂಛಿತವನರಿತರು ಶ್ರೀಚಕ್ರಧರ ನಿಂಗೆ ಅಚ್ಚುಮೆಚ್ಚೆನಿಸಿದರು ||೨|| ಏಸೇಸು ಜನುಮಗಳ ಬಯಸಿ ಬರಬೇಕೀ ಅಸಮಾನ ಜ್ಞಾನ ನಿಧಿ ದಾಸರಾಸರೆಗಾಗಿ ದೋಷ ರಾಶಿಗಳಳಿದು ಶ್ರೀಶನ್ನ ತೋರಿಸುವ ವಸುಧೀಶ ಶ್ರೀ ವಿಜಯ ವಿಠ್ಠಲ ದಾಸಮಣಿಯು ||೩|| achyutana mechchisi prachChinnavara paDeda| aachaarya siri prasanveMkaTAryara kaMDe ||pa|| swakunaati sOttamara gati daata shrIhari swIkarisi I mahaa bhakuta matidaasarali kakulaati tOri satkRuti rachisuvaMdadali shakutiyaanittakhila saMtasava nIDidaa ||1|| achyutaamara chittagachhiMta diMdivaru archisalu nechchi aMkitava nIDiralu achiMtana naNudbhuta vaaMChitavanaritaru shrIchakradhara niMge accumeccenisidaru ||2|| EsEsu janumagaLa bayasi barabEkI asamaana j~jaana nidhi daa...

ರಂಗನಾಯಕ ರಾಜೀವಲೋಚನ | ಪುರಂದರ ವಿಠಲ | Ranganayaka Rajeevalochana | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ ||ಪ||  ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು  ಶೃಂಗಾರದ ನಿದ್ದೆ ಸಾಕೆನ್ನುತ ||ಅಪ|| ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು  ಅಕ್ಷಿ ತೆರೆದು ಬೇಗ ಈಕ್ಷಿಸೆಂದು | ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ  ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ ||೧|| ಸನಕ ಸನಂದನ ಸನತ್ಸುಜಾತರು ಬಂದು  ವಿನಯದಿಂ ಕರ ಮುಗಿದು ಓಲೈಪರು | ಘನ ಶುಕ ಶೌನಕ ವ್ಯಾಸ ವಾಲ್ಮೀಕರು  ನೆನೆದು ನೆನೆದು ಕೊಂಡಾಡುವರೋ ಹರಿಯೇ ||೨|| ಸುರರು ಕಿನ್ನರರು ಕಿಂಪುರುಷರು ಉರಗರು  ಪರಿಪರಿಯಲಿ ನಿನ್ನ ಸ್ಮರಿಸುವರೋ || ಅರುಣನು ಬಂದು ಉದಯಾಚಲದಲಿ ನಿಂದು ಕಿರಣ  ತೋರುವನು ಭಾಸ್ಕರನು ಶ್ರೀಹರಿಯೇ ||೩|| ಪದುಮನಾಭನೆ ನಿನ್ನ ನಾಮಾಮೃತವನ್ನು  ಪದುಮಾಕ್ಷಿಯರು ತಮ್ಮ ಗೃಹದೊಳಗೆ | ಉದಯದೊಳೆದ್ದು ಸವಿದಾಡುತ್ತ ಪಾಡುತ್ತ  ದಧಿಯ ಕಡೆವರೇಳು ಮಧುಸೂದನ ಕೃಷ್ಣ ||೪|| ಮುರಮಥನನೇ ನಿನ್ನ ಚರಣದ ಸೇವೆಯ  ಕರುಣಿಸಬೇಕೆಂದು ತರುಣಿಯರು | ಪರಿಪರಿಯಲಿ ನಿನ್ನ ಸ್ಮರಿಸಿ ಹಾರೈಪರು  ಪುರಂದರ ವಿಠಲ ನೀನೇಳು ಶ್ರೀ ಹರಿಯೇ ||೫|| raMganAyaka rAjIvalOcana ramaNane beLagAyitELennuta ||pa||  aMgane lakumi tA patiyanebbisidaLu ...

ಶ್ರೀ ಜಗನ್ನಾಥ ದಾಸ ವಿರಚಿತ | ಹರಿಕಥಾಮೃತಸಾರ | ಮಂಗಳಾಚರಣ ಸಂಧಿ | Harikathamrutasaara | Mangalacharana Sandhi

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಮಂಗಳಾಚರಣ ಸಂಧಿ ಹರಿಕಥಾಮೃತಸಾರ ಗುರುಗಳ | ಕರುಣದಿಂದಾಪನಿತು ಪೇಳುವೆ || ಪರಮ ಭಗವದ್ಭಕ್ತರಿದನಾದರದಿ ಕೇಳುವುದು || ಶ್ರೀರಮಣಿ ಕರಕಮಲ ಪೂಜಿತ | ಚಾರುಚರಣ ಸರೋಜ ಬ್ರಹ್ಮ ಸ | ಮೀರ ವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖ ವಿನುತ || ನೀರಜ ಭವಾಂಡೋದಯ ಸ್ಥಿತಿ | ಕಾರಣನೆ ಕೈವಲ್ಯ ದಾಯಕ | ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ || ಜಗದುದರನತಿವಿಮಲ ಗುಣರೂ | ಪಗಳನಾಲೋಚನದಿ ಭಾರತ | ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ || ಬಗೆ ಬಗೆಯ ನೂತನವ ಕಾಣುತ | ಮಿಗೆ ಹರುಷದಿಂ ಪೊಗಳಿ ಹಿಗ್ಗುವ | ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ || ನಿರುಪಮಾನಂದಾತ್ಮ ಭವ ನಿ | ರ್ಜರಸಭಾಸಂಸೇವ್ಯ ಋಜುಗಣ | ದರಸೆ ಸತ್ವಪ್ರಚುರ ವಾಣೀಮುಖಸರೋಜೇನ || ಗರುಡ ಶೇಷ ಶಶಾಂಕದಳ ಶೇ | ಖರರ ಜನಕ ಜಗದ್ಗುರುವೇ ತ್ವ | ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ || ಆರುಮೂರೆರಡೊಂದು ಸಾವಿರ | ಮೂರೆರಡು ಶತಶ್ವಾಸ ಜಪಗಳ | ಮೂರು ವಿಧ ಜೀವರೊಳಗಬ್ಜಜಕಲ್ಪ ಪರಿಯಂತ || ತಾ ರಚಿಸಿ ಸಾತ್ವರಿಗೆ ಸುಖ ಸಂ | ಸಾರ ಮಿಶ್ರರಿಗಧಮಜನರಿಗ | ಪಾರ ದು:ಖಗಳೀವ ಗುರು ಪವಮಾನ ಸಲಹೆಮ್ಮ || ೪ || ಚತುರವದನನ ರಾಣಿ ಅತಿರೋ | ಹಿತ ವಿಮಲ ವಿಜ್ಞಾನಿ ನಿಗಮ | ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ || ನತಿಸಿ ಬೇಡುವೆ ಜನನಿ ಲಕುಮೀ | ಪತಿಯ ಗು...

ರಾಯರ ನೋಡಿರೈ | ಶ್ರೀಶ ಪ್ರಾಣೇಶ ದಾಸರು | ಜಗನ್ನಾಥ ದಾಸರ ಕುರಿತು ಹಾಡು | Rayara Nodirai | Sri Shreesha Pranesha Dasaru

Image
ರಚನೆ  : ಶ್ರೀ ಶ್ರೀಶ ಪ್ರಾಣೇಶ ದಾಸರು  Krithi : Sri Shreesha Pranesha Dasaru ರಾಯರ ನೋಡಿರೈ ದಾಸರಾಯರ ಪಾಡಿರೈ ||ಪ|| ಮಾಯಾ ರಮಣ ಪ್ರಿಯ ಇವರ ಮನದೊಳಗೆ ಸುಳಿದ ಶ್ರೀರಂಗ ಒಲಿದ ಕ್ಷೋ- ಣಿಯೊಳಗೆ ಜನಿಸಿದ ಪ್ರಥಮದಿ ಸಹ್ಲಾದಾ - ಜನರಿಗೆ ಮೋದಾ ||೧|| ಕಾಣಿಸುವುದು ಜಗದೊಳಗೆ ಇವರ ಕೀರುತಿಯು ಪುಣ್ಯ ಮೂರುತಿಯೂ ಧೇನಿಪ ಎರಡನೇ ಜನ್ಮದಿ ಈತನೇ ಶಲ್ಯ ತತ್ತ್ವವ ಬಲ್ಲ ||೨|| ಮೂರನೇ ಜನ್ಮದಿ ಕೊಂಡಪ್ಪ ರಾಜರ ದೂತಾ - ಸುಪ್ರಖ್ಯಾತಾ ಸಾರ ಜನರ ಪ್ರಿಯ ಪುರಂದರ ಗುರುದಾಸರ್ಯಾ - ಸುತ ಆಶ್ಚರ್ಯಾ ||೩||  ತೋರಿದ ಐದನೇ ಜನ್ಮದಿ ಶ್ರೀ ಹರಿ ದೂತಾ ಗುರು ಜಗನ್ನಾಥಾ ಎಷ್ಟು ಹೇಳಲಿ ಇವರ ಮಹಿಮೆ ತುತಿಸಲ್ಕೆ ವಶನಲ್ಲ ಮನಕೆ ||೪|| ನಿಷ್ಠೆಯಿಂದಿವರ ತುತಿಸಲು ಶ್ರೀವರ ತುಷ್ಠ - ಪಾಪವು ನಷ್ಟ ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲ ದಾಸಾ - ದಾಸೋತ್ತಂಸಾ ||೫|| raayara nODirai daasaraayara paaDirai ||pa|| maayaa ramaNa priya ivara manadoLage suLida SrIraMga olida kShO­­- NiyoLage janisida prathamadi sahlaadaa - janarige mOdaa ||1|| kaaNisuvudu jagadoLage ivara kIrutiyu puNya mUrutiyU dhEnipa eraDanE janmadi ItanE Salya tattvava balla ||2|| mUranE janmadi koMDappa raajara dUtaa - suprakhyaataa saara janara priya puraMdara gurudaasaryaa -...

ಧನ್ಯನಾದೆ ನಾನೀ ಜಗದೊಳು | ಪುರಂದರ ವಿಠಲ | Dhanyanade Nanu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಧನ್ಯನಾದೆ ನಾನೀ ಜಗದೊಳು | ಧನ್ಯನಾದೆ ನಾನು ||ಪ|| ಪನ್ನಗಶಯನನ ಕಣ್ಣಿನಿಂದಲಿ ಕಂಡು ||ಅಪ|| ಉನ್ನತ ಮಹಿಮ ಪಾವನ್ನ ಚರಿತ ಸುರ  ಸನ್ನುತ ಚರಣನ || ಪನ್ನಗಾರಿ ವಾಹನ್ನ ಪುರುಷ ರನ್ನ  ಚೆನ್ನಿಗ ಶ್ರೀರಂಗನ್ನ ಮಹಿಮೆಯ ಕಂಡು ||೧|| ದೇವ ದೇವೋತ್ತಮ ಕಾವ ನಮ್ಮ ಈಗ  ಭಾವಜನಯ್ಯನು || ಕಾವೇರಿ ತೀರದ ಉತ್ತಮ ಕ್ಷೇತ್ರದೊಳು |  ಪಾವನ ನರಸಿಂಗನ ಕಂಡು ||೨|| ಭಾನುಕೋಟಿ ಪ್ರಭಾ ಸ್ವಾನಂದ ಪೂರ್ಣನ  ದೀನ ರಕ್ಷಕನ || ಸಿರಿ ಪುರಂದರ ವಿಠಲ ಚೆನ್ನಿಗ |  ಶ್ರೀರಂಗನ ಮಹಿಮೆಯ ಕಂಡು ||೩|| dhanyanaade naanI jagadoLu | dhanyanaade naanu ||pa|| pannagashayanana kaNNiniMdali kaMDu ||apa|| unnata mahima paavanna charita sura  sannuta charaNana || pannagaari vaahanna puruSha ranna  cenniga shrIraMganna mahimeya kaMDu ||1|| dEva dEvOttama kaava namma Iga  bhaavajanayyanu || kaavEri tIrada uttama kShEtradoLu |  paavana narasiMgana kaMDu ||2|| bhaanukOTi prabhaa svaanaMda pUrNana  dIna rakShakana || siri puraMdara viThala chenniga |  shrIraMgana mahimeya kaM...

ಇನ್ನು ದಯ ಬಾರದೇ | ಪುರಂದರ ವಿಠಲ | Innu Daya Baarade | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala)   ಇನ್ನು ದಯ ಬಾರದೇ ದಾಸನ ಮೇಲೆ | ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ||ಪ|| ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ ||೧|| ಕಾಮಾದಿ ಷಡ್ವರ್ಗ ಗಾಢಾಂಧಕಾರದಿ  ಪಾಮರನಾಗಿಹ ಪಾತಕಿಯು ಮಾಮನೋಹರನೇ ಚಿತ್ತಜ ಜನಕನೇ ನಾಮವೇ ಗತಿಯೆಂದು ನಂಬಿದ ದಾಸನ ಮೇಲೆ || ೨ || ಮಾನಸಾ ವಾಚಾ ಕಾಯದಿ ಮಾಳ್ಪ ಕರ್ಮವು | ದಾನವಾಂತಕ ನಿನ್ನ ಅಧೀನವಲ್ತೇ | ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ | ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ ||೩|| innu daya bAradE dAsana mEle | pannagaSayana paalgaDaloDeyane kRuShNa ||pa||   nAnA dESagaLalli nAnA kAlagaLalli nAnA yOnigaLalli nalidu huTTi nAnu nannadu eMba narakadoLage biddu nInE gatiyeMdu naMbida dAsana mEle ||1|| kaamaadi ShaDvarga gaaDhaaMdhakaaradi  paamaranaagiha paatakiyu maamanOharanE cittaja janakanE naamavE gatiyeMdu naMbida daasana mEle || 2 || maanasaa vaacaa kaayadi maaLpa karmavu | dAnavAMtaka ninna adhInavaltE | Enu mADidarEnu prANa ni...

ವೆಂಕಟೇಶ ಬೇಡಿಕೊಂಬೆ | ಪುರಂದರ ವಿಠಲ | Venkatesha Bedikombe | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ|ಪ| ಬ್ರಹ್ಮ ಶಂಕರಾದಿ ಮುನಿವಂದ್ಯ ಎನಗೆ ಮುಕ್ತಿ ತೋರಿಸೋ|ಅಪ| ನಷ್ಟ ಮೊದಲಾದಂಥ ಕಷ್ಟ ಬಿಡಿಸೋ|  ನಿನ್ನ ಪಟ್ಟದರಾಣಿಗೆ ಹೇಳಿ ಎನಗೆ ಪದವಿ ಕೊಡಿಸೋ| ಇಷ್ಟ ಭಕ್ತ ಜನರೊಳು ಎನ್ನ ಸೇರಿಸೋ  ಈ ಸೃಷ್ಟಿಯೊಳು ನಿನ್ನ ದಾಸರ ದಾಸನೆನಿಸೋ|೧| ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೋ  ಪೊಂಬಟ್ಟಲೊಳಗಿನ ಹಾಲು ಉಚ್ಛಿಷ್ಟ ಹಾಕಿಸೋ| ಗಟ್ಟಿಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೋ|  ಮುಂದೆ ಹುಟ್ಟಿ ಬಹ ಜನ್ಮಂಗಳ ಎನಗೆ ಬಿಡಿಸೋ|೨| ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ|  ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೋ| ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೋ ಸ್ವಾಮಿ|  ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೋ|೩| veMkaTESa bEDikoMbe kRupeya pAlisO|pa| brahma SaMkarAdi munivaMdya enage mukti tOrisO|apa|   naShTa modalAdaMtha kaShTa biDisO|  ninna paTTadarANige hELi enage padavi koDisO| iShTa Bakta janaroLu enna sErisO  I sRuShTiyoLu ninna dAsara dAsanenisO|1|   uTTu uMDu mikkiddella enage hAkisO  poMbaTTaloLagina hAlu ucChiShTa hAkisO| gaTTiyAgi sak...

ಶರಣು ಸಿದ್ಧಿವಿನಾಯಕ | ಪುರಂದರವಿಠಲ | Sharanu Siddivinayaka | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಶರಣು ಸಿದ್ಧಿ ವಿನಾಯಕ | ಶರಣು ವಿದ್ಯಾಪ್ರದಾಯಕ || ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ||ಪ|| ನಿಟಿಲನೇತ್ರನ ದೇವಿಸುತನೇ ನಾಗಭೂಷಣ ಪ್ರೀಯನೇ | ತಟಿಲತಾಂಕಿತ ಕೋಮಲಾಂಗನೇ ಕರ್ಣಕುಂಡಲಧಾರನೇ ||೧|| ಬಟ್ಟ ಮುತ್ತಿನ ಪದಕ ಹಾರನೇ ಬಾಹು ಹಸ್ತಚತುಷ್ಟನೇ || ಇಟ್ಟ ತೊಡಿಗೆಯ ಹೇಮ ಕಂಕಣ ಪಾಶ ಅಂಕುಶಧಾರನೇ ||೨|| ಕುಕ್ಷಿ ಮಹಾ ಲಂಬೋದರನೇ ಇಕ್ಷುಚಾಪನ ಗೆಲಿದನೇ || ಪಕ್ಷಿ ವಾಹನ ಸಿರಿ ಪುರಂದರ ವಿಠಲನ ನಿಜ ದಾಸನೇ ||೩|| SaraNu siddhi vinAyaka | SaraNu vidyApradAyaka || SaraNu pArvati tanaya mUruti SaraNu mUShika vAhana ||pa||   niTilanEtrana dEvisutanE nAgaBUShaNa prIyanE | taTilaTaaMkita kOmalAMganE karNakuMDaladhAranE ||1||   baTTa muttina padaka hAranE bAhu hastacatuShTanE || iTTa toDigeya hEma kaMkaNa pASa aMkuSadhAranE ||2||   kukShi mahA laMbOdaranE ikShucApana gelidanE || pakShi vAhana siri puraMdara viThalana nija dAsanE ||3||

ಉಮಾ ಕಾತ್ಯಾಯನೀ ಗೌರಿ | ವಿಜಯ ವಿಠ್ಠಲ | Uma Katyayani Gowri | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ ಹಿಮವಂತ ಗಿರಿಯ ಕುಮಾರಿ ||ಪ|| ರಮೆಯರಸನ ಪದಕಮಲ ಮಧುಪೆ ನಿತ್ಯ ಅಮರವಂದಿತೆ ಗಜಗಮನೆ ಭವಾನಿ    ||ಅ.ಪ|| ಪನ್ನಗಧರನ ರಾಣಿ ಪರಮಪಾವನಿ ಪುಣ್ಯಫಲ ಪ್ರದಾಯಿನಿ ಪನ್ನಗವೇಣಿ ಶರ‍್ವಾಣಿ ಕೋಕಿಲವಾಣಿ ಉನ್ನಂತ ಗುಣಗಣ ಶ್ರೇಣಿ ಎನ್ನ ಮನದ ಅಭಿಮಾನಿ ದೇವತೆಯೆ ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧೆ ನಿನ್ನ ಮಹಿಮೆಯನು ಬಿನ್ನಾಣದಲಿ ನಾ ಬಣ್ಣಿಸಲಳವೆ ಪ್ರಸನ್ನವದನಳೆ ||೧|| ಮುತ್ತಿನ ಪದಕ ಹಾರ ಮೋಹನ ಸರ ಉತ್ತಮಾಂಗದಲಂಕಾರ ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ ರತ್ನಕಂಕಣದುಂಗುರ ತೆತ್ತೀಸ ಕೋಟಿ ದೇವತೆಗಳು ಪೊಗಳುತ ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ಸುತ್ತಲು ಆಡುವ ನರ್ತನ ಸಂದಣಿ ಎತ್ತ ನೋಡಿದರತ್ತ ತಥ್ಥೈವಾದ್ಯ ||೨|| ಪೊಳೆವ ವಸನ ಕಂಚುಕ ಕಸ್ತೂರಿ ತಿಲಕ ಥಳಿಪ ಮೂಗುತಿ ನಾಸಿಕ ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ ಸಲೆ ಭುಜಕೀರ್ತಿ ಪಾಠಿಕ ಇಳೆಯೊಳು ಮಧುರಾಪೊಳಲೊಳು ವಾಸಳೆ ಅಳಗಿರಿ ವಿಜಯವಿಠ್ಠಲನ ಕೊಂಡಾಡುವ ಸುಲಭ ಜನರಿಗೆಲ್ಲ ಒಲಿದು ಮತಿಯನೀವೆ ಗಿಳಿಕರ ಶೋಭಿತೆ ಪರಮಮಂಗಳೆ ಹೇ ||೩|| umaa kaatyaayanI gauri daakShaayaNi himavaMta giriya kumaari ||pa|| rameyarasana padakamala madhupe nitya amaravaMdite gajagamane bhavaani    ||a.pa|| pannagadharana raaNi paramapaavani puNyaphala...

ಗಯ್ಯುವೆನಾರುತಿ ಗರುಡ ವಾಹನಗೆ | ಭೀಮೇಶ ಕೃಷ್ಣ | Gayyuvenaruti | Bhimesha Krishna

Image
ಸಾಹಿತ್ಯ :    ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Harapanahalli Bhimavva (Bhimesha Krishna) ಗಯ್ಯುವೆನಾರುತಿ ಗರುಡ ವಾಹನಗೆ ಉರಗಶಯನ ಹರಿಗೆ ಸುರ ದೊರೆಗೆ ಉರಗಶಯನ ಹರಿಗೆ ||ಪ|| ಕಂದ ಧ್ರುವರಾಯಗಾನಂದ ಪದವನಿತ್ತು ಮಂದರೋದ್ಧರ ಗೋವಿಂದ ಮುಕುಂದಗೆ ||೧|| ದುರುಳ ದೈತ್ಯನ ಕೊಂದು ಕರುಳ ಧರಿಸಿಕೊಂಡು ತರಳನಿಗೊಲಿದಂಥ ಪರಮ ದಯಾಳೊ ||೨|| ಹತ್ತಾವತಾರದಲೆ ಅಷ್ಟು ದೈತ್ಯರನೆ ಕೊಂದು ಭಕ್ತರಿಗೊಲಿದ ಭೀಮೇಶ ಕೃಷ್ಣನಿಗೆ ||೩||  gayyuvenaaruti garuDa vaahanage uragashayana harige sura dorege uragashayana harige ||pa|| kaMda dhruvaraayagaanaMda padavanittu maMdarOddhara gOviMda mukuMdage ||1|| duruLa daityana koMdu karuLa dharisikoMDu taraLanigolidaMtha parama dayaaLo ||2|| hattaavataaradale aShTu daityarane koMdu bhaktarigolida bheemEsha kRuShNanige ||3|| 

ಪಾಲಿಸೆ ಶ್ರೀ ಗೌರಿ | ಪ್ರಾಣೇಶ ವಿಠಲ | Paalise Sri Gowri | Sri Pranesha Vittala Dasaru

Image
ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು Kruti: Sri Pranesha Vittala Dasaru ಪಾಲಿಸೆ ಶ್ರೀ ಗೌರಿ ಎನ್ನನು ||ಪ|| ಪಾಲಿಸೆ ನಿನ್ನಯ ಪಾಲಿಗೆ ಬಂದೆನು ಬೀಳುವೆ ಸರ್ವದ ಕಾಲಿಗೆ ಕರುಣದೀ ||ಅಪ|| ಶರಣೆಂದವರನು ಪೊರೆವಳು ಎಂಬುವ ಬಿರುದು ನಿನ್ನದು ಎಂದರಿದೆನು ತ್ವರದಿಂ ||೧|| ಸನ್ಮತ ಪುರುಷನ ಇನ್ನೆಲ್ಲಿ ಕಾಣೆನೋ ಮನ್ಮಥನೆಂಬುವ ಬನ್ನಬಿಡಿಪ ಬಲು ||೨|| ಕಾಣೆನು ಶಾಂತಿಯ ಏನೆಂದು ಹೇಳಲಿ  ಪ್ರಾಣೇಶ ವಿಠಲನು ತಾನೆಯೇ ಬಲ್ಲನು ||೩|| paalise SrI gauri ennanu ||pa|| paalise ninnaya paalige baMdenu bILuve sarvada kaalige karuNadI ||apa|| SaraNeMdavaranu porevaLu eMbuva birudu ninnadu eMdaridenu tvaradiM ||1|| sanmata puruShana innelli kaaNenO manmathaneMbuva bannabiDipa balu ||2|| kaaNenu SaaMtiya EneMdu hELali  praaNESa viThalanu taaneyE ballanu ||3||

ಸೋಮಶೇಖರ ತಾನೆ ಬಲ್ಲ | ಸಿರಿಕೃಷ್ಣ | Somashekhara tane balla | Sri Vyasarajaru

Image
ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ಸೋಮಶೇಖರ ತಾನೆ ಬಲ್ಲ ಶ್ರೀ- ರಾಮನಾಮಾಮೃತ ಸವಿಯನೆಲ್ಲ||ಪ|| ಮದನಪಿತ ಎಂದು ಕುಣಿಕುಣಿದಾಡಲು ಕೆದರಿದ ಕೆಂಜೆಡೆಗಳ ಪುಂಜದಿ ಒದಗಿದ ಗಂಗೆ ತುಂತುರು ಹನಿಗಳ ಕಂಡು ಪದುಮಜಾಂಡಹಿತ ರಾಮರಾಮ ಎಂಬ|೧|| ಆನಂದ ಜಲದ ಸೋನೆಗೆ ಲಲಾಟದ ನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳು ತಾನೆದ್ದು ಮುಳುಗುತ ರಾಮ ರಾಮ ಎಂಬ||೨|| ಶಿರದ ಗಂಗೆಯ ವರ ಅಗ್ಗಣಿಯಾಗಿರೆ ಸರಸಿಜ ಬಾಂಧವ ಚೆಂದಿರ ದೀಪ ಉರಿಗಣ್ಣಿನ ಹೊಗೆ ಧೂಪವನೇರಿಸಿ ಕರಣವೆ ನೈವೇದ್ಯಯೆಂದು ರಾಮರಾಮ ಎಂಬ||೩|| ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪ ಇಂದ್ರನೀಲದ ಚೆನ್ನಪುತ್ಥಳಿಯಂತೆ ಚಂದದಿ ತನ್ನಯ ಹೃದಯ ಮಧ್ಯದಿ ರಾಮ- ಚಂದ್ರ ಹೊಳೆಯೆ ಶ್ರೀರಾಮರಾಮ ಎಂಬ||೪|| ಐದು ಮುಖಗಳಿಂದ ಹರಿಯ ಕೊಂಡಾಡಲು ಸ್ವಾಧೀನ ಭೂಷಣ ಫಣಿಗಳೆಲ್ಲ ಮೋದದಿಂದಾಡಲು ಫಣಿ ಮಣಿಯಾಘಾತ ನಾದ ತಾಳವಾಗೆ ರಾಮ ರಾಮ ಎಂಬ||೫|| ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬ ಒಮ್ಮೆ ನಾರದ ಪಾಡೆ ತತ್ಥೈಯೆಂಬ ಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವ ಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ||೬|| ಅರಸಂಜೆಯ ಕಂಜ ಪುಂಜಗಳಲಿಪ್ಪ ಅರೆ ಮುಚ್ಚಿದ ಹದಿನೈದು ನೇತ್ರಗಳಿಂದ ಹರಿಯ ಕೊಂಡಾಡುತ ಪಂಚ ಮುಖಗಳಿಂದ ಸಿರಿಕೃಷ್ಣ ಮುಕುಂದ ರಾಮ ರಾಮ ಎಂಬ||೭||  sOmashEkhara taane balla shrI- raamanaamaamRuta saviyanella||pa|| mada...

ವೇಣುನಾದ ಬಾರೋ | ಪುರಂದರ ವಿಠಲ | Venu Naada Baaro | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ವೇಣುನಾದ ಬಾರೋ ವೆಂಕಟರಮಣನೆ ಬಾರೋ || ಪ || ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಅಪ || ಪೂತನಿಯ ಮೊಲೆಯುಂಡ ನವನೀತ ಚೋರನೇ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲನಾಭನೆ ಬಾರೋ ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ || ೨ || ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ ಕುಂದದೆ ಗೋವುಗಳ ಕಾಯ್ದ ಪುಂಡರೀಕಾಕ್ಷನೆ ಬಾರೋ || ೩ || ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ ಈರೇಳು ಭುವನವ ಕಾಯುವ ಮಾರನಯ್ಯನೆ ಬಾರೋ || ೪ || ಶೇಷಶಯನ ಮೂರುತಿಯಾದ ವಾಸುದೇವನೆ ಬಾರೋ ದಾಸರೊಳು ದಾಸನಾದ ಪುರಂದರ ವಿಠಲನೆ ಬಾರೋ || ೫ || vENunaada baarO veMkaTaramaNane baarO || pa || baaNana bhaMgisidaMtha bhaavajanayyane baarO || apa || pUtaniya moleyuMDa navanIta cOranE baarO bhIta raavaNana saMharisida sItaanaayaka baarO || 1 || billa muridu mallara gedda Pullanaabhane baarO gollatEroDane naliva celuva mUruti baarO || 2 || maMdaragiri ettidaMtha iMdire ramaNane baarO kuMdade gOvugaLa kaayda puMDarIkaakShane baarO || 3 || naariyara manege pOguva vaarijanaabhane baarO I...

ಕೂಸನು ಕಂಡೀರ್ಯಾ | ಪುರಂದರ ವಿಠಲ | Koosanu Kandeerya | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೂಸನು ಕಂಡೀರ್ಯಾ ಮುಖ್ಯಪ್ರಾಣನ ಕಂಡೀರ್ಯಾ ||ಪ|| ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ ||ಅಪ|| ಅಂಜನೆ ಉದರದಿ ಹುಟ್ಟಿತು ಕೂಸು ರಾಮರ ಪಾದಕ್ಕೆರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾಪುರವನು ಸುಟ್ಟಿತು ಕೂಸು ||೧|| ಬಂಡಿಯನ್ನವನುಂಡಿತು ಕೂಸು  ಬಕನ ಪ್ರಾಣವ ಕೊಂದಿತು ಕೂಸು ವಿಷದಾ ಲಡ್ಡುಗೆ ಮೆದ್ದಿತು ಕೂಸು ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||೨|| ಮಾಯಾವೆಲ್ಲಾ ಗೆದ್ದಿತು ಕೂಸು | ಮಧ್ವಮತವನ್ನುದ್ಧರಿಸಿತು ಕೂಸು ಪುರಂದರ ವಿಠಲನ ದಯದಿಂದ ಕೂಸು ಸುಮ್ಮನೆ ಉಡುಪಿಲಿ ನಿಂತಿತು ಕೂಸು ||೩|| kUsanu kaMDIryA muKyaprANana kaMDIryA ||pa|| bAlana kaMDIryA balavaMtana kaMDIryA ||apa||   aMjane udaradi huTTitu kUsu rAmara pAdakkeragitu kUsu sItege uMgura koTTitu kUsu laMkApuravanu suTTitu kUsu ||1||   baMDiyannavanuMDitu kUsu  bakana prANava koMditu kUsu viShadA laDDuge medditu kUsu maDadige puShpava koTTitu kUsu ||2||   mAyAvellA gedditu kUsu | madhvamatavannuddharisitu kUsu puraMdara viThalana dayadiMda kUsu summane uDupili niMtitu kUsu ||3||

ಕ್ಷೀರವಾರಿಧಿ ಕನ್ನಿಕೆ | ವಿಜಯ ವಿಠ್ಠಲ | Ksheeravaridhi Kannike | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕ್ಷೀರವಾರಿಧಿ ಕನ್ನಿಕೆ ಮಾರಜನಕೆ  ಈರೇಳು ಲೋಕನಾಯಿಕೆ ||ಪ|| ವಾರವಾರಕೆ ನಿನ್ನಾರಾಧಿಪುದಕೆ  ಚಾರುಮನಸು ಕೊಡು ದೂರ ನೋಡದಲೆ ||ಅಪ|| ಶ್ರೀಧರಾ ದುರ್ಗಾ ಆಂಭೃಣಿ ನಿತ್ಯಕಲ್ಯಾಣಿ ವೇದವತಿಯೇ ರುಕ್ಮಿಣೀ ವೇದ ವೇದಾಂತದಭಿಮಾನಿ ವಾರಿಜಪಾಣಿ ಆದಿ ಮಧ್ಯಾಂತ ಗುಣಶ್ರೇಣೀ ಸಾಧು ಜನರ ಹೃದಯಾಬ್ಜ ವಿರಾಜಿತೆ ಖೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಲಿ ಮೇಲಾದ ಗತಿಗೆ ಪಂಚ ಭೇದಮತಿಯ ಕೊಡು ಮಾಧವ ಪ್ರಿಯಳೆ ||೧|| ಶ್ರೀಮಾಯಜಯಾ ಕೃತಿ ಶಾಂತಿ ದೇವಿಜಯಂತಿ ನಾಮದಲಿಪ್ಪ ಜಯವಂತಿ ಕೋಮಲವಾದ ವೈಜಯಂತಿ ಧರಿಸಿದ ಶಾಂತಿ ಸೋಮಾರ್ಕ ಕೋಟಿ ಮಿಗೆ ಕಾಂತಿ ತಾಮರಸಾಂಬಿಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸು-  ತ್ತಮರೊಡನೆ ಪರಿಣಾಮನೀಯುವುದು ||೨|| ನಾನಾಭರಣ ಭೂಷಿತೆ ಧಾರುಣಿಜಾತೆ ಜ್ಞಾನಿಗಳ ಮನೋಪ್ರೀತೆ ಅನಾದಿಯಿಂದ ಪ್ರಖ್ಯಾತೆ ಆದಿದೇವತೆ ಗಾನವಿಲೋಲೆ ಸುರಗೀತೆ  ನೀನೇ ಗತಿ ಎನಗೊಬ್ಬರ ಕಾಣೆ ದಾನಿ ಇಂದಿರಾದೇವಿ ನಾನಾ ಪರಿಯಲಿ  ಶ್ರೀನಿಧಿ ವಿಜಯವಿಠ್ಠಲನ ಮೂರುತಿಯನು ಧ್ಯಾನದೊಳಿಡುವಂತೆ ಜ್ಞಾನ ಭಕುತಿ ಕೊಡೆ ||೩|| kShIravaaridhi kannike maarajanake  IrELu lOkanaayike ||pa|| vaaravaarake ninnaaraadhipudake  chaarumanasu koDu doora nODadale ||apa|| shrIdharaa durgaa aaMbhRuNi nityak...

ಗೊಲ್ಲತಿಯರೆಲ್ಲ ಕೂಡಿ | ರಂಗವಿಠಲ | Gollatiyarella Koodi | Sri Sripadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ  ಕಳ್ಳನೆಂದು ದೂರುತ್ತಾರೆ ಗೋಪಿ ಎನ್ನ, ಕೊಲ್ಲಬೇಕೆಂಬ ಬಗೆಯೇ ||ಪ|| ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ, ಕೆರೆ ಏನೇ ಹೇಳಮ್ಮಯ್ಯ ||  ಕರೆದು ಅಣ್ಣನ ಕೇಳಮ್ಮ ಉಂಟಾದರೆ ಒರಳಿಗೆ ಕಟ್ಟಮ್ಮಯ್ಯ ||೧|| ಮೀಸಲು ಬೆಣ್ಣೆಯನು ಮೆಲುವುದು ಎನಗೆ ದೋಷವಲ್ಲವೇನಮ್ಮಯ್ಯ ||  ಆಸೆ ಮಾಡಿದರೆ ದೇವರು ಕಣ್ಣ ಮೋಸದಿ ಕುಕ್ಕುವನಮ್ಮಯ್ಯ ||೨|| ಅಟ್ಟವನೇರಿ ಹಿಡಿವುದು ಅದು ಎನಗೆ, ಕಷ್ಟವಲ್ಲವೆ ಹೇಳಮ್ಮಯ್ಯ ನೀ  ಕೊಟ್ಟ ಹಾಲು ಕುಡಿಯಲಾರದೆ ನಾನು ಬಟ್ಟಲೊಳಗಿಟ್ಟು ಪೋದೇನೆ ||೩|| ಪುಂಡುತನವ ಮಾಡಲು ನಾನು ದೊಡ್ಡ ಗಂಡಸೇನೇ ಪೇಳಮ್ಮಯ್ಯ | ಎನ್ನ  ಕಂಡವರು ದೂರುತ್ತಾರೆ ಗೋಪ್ಯಮ್ಮ, ನಾ ನಿನ್ನ ಕಂದನಲ್ಲವೇನೆ ಅಮ್ಮಯ್ಯ ||೪|| ಉಂಗುರದ ಕರದಿಂದ ಗೋಪ್ಯಮ್ಮ ತನ್ನ ಶೃಂಗಾರದ ಮಗನ್ನೆತ್ತಿ  ರಂಗವಿಠಲನ ಪಾಡಿ ಉಡುಪಿಯ ಉತ್ತುಂಗ ಕೃಷ್ಣನ ತೂಗಿದಳು ||೫|| gollatiyarella kUDi enna mEle illada suddi puTTisi  kaLLaneMdu dUruttaare gOpi enna, kollabEkeMba bageyE ||pa|| haraviya haalu kuDiyalu enna hoTTe, kere EnE hELammayya ||  karedu aNNana kELamma uMTaadare oraLige kaTTammayya ||1|| mIsalu beNNeyan...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru