ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ವಾದಿರಾಜರ ಜಯಂತಿ | ವಾದಿರಾಜ ಪಾಲಿಸು ಎನ್ನ | ಗುರು ಜಗನ್ನಾಥವಿಠಲ | Sri Vadiraja Jayanti |Vadiraja Palisu


ಸಾಹಿತ್ಯ : ಗುರು ಜಗನ್ನಾಥ ದಾಸರು 
Kruti: Guru Jagannatha Dasaru


ವಾದಿರಾಜ ಪಾಲಿಸು ಎನ್ನ ||ಪ||

ವಾದಿರಾಜ ತವ ಪಾದ ಸರೋಜ 
ಮೋದಪರಾಗುವ ಸಾದರ ನೀಡಿ ||ಅಪ||

ಮೋದ ತೀರ್ಥ ಸುಮ ತೋದದಿ ಚಂದಿರ || 
ಪಾದವ ನಂಬಿದೆ ನೀ ದಯದಲಿ ||೧||

ಆರ್ತ ಜನರ ಮನದಾರ್ಥಿಯ ಕಳೆದಿಹ || 
ವಾರ್ತದಿ ಬಂದವನಾರ್ಥಿಯ ಬಿಡಿಸೋ ||೨||

ಎಲ್ಲರಂತೆ ನೀನಲ್ಲವೋ ಜಗದೊಳು || 
ಬಲ್ಲಿದನೆಂಬೋದು ಬಲ್ಲೆ ಬಲ್ಲೆನು ||೩||

ಕರ್ತುಮಕರ್ತು ಸಮರ್ಥನೆ ಎನ್ನನು || 
ಮರೆತರೆ ಅನ್ಯ ಸಮರ್ಥರ ಕಾಣೆ ||೪||

ಕಾಮಧೇನು ಸಮ ಭೂಮಿಯ ತಳದಿ || 
ಕಾಮಿತ ನೀಡೈ ಸುರ ತರುವೆ ||೫||

ಮೋಕ್ಷ ಕರುಣ ಕಟಾಕ್ಷದಿ ಎನ್ನಾ || 
ವೀಕ್ಷಿಸಿ ಮನದಾಪೇಕ್ಷವ ಸಲ್ಲಿಸೋ ||೬||

ಯಾತಕೆ ಎನ್ನನು ಈತರ ಮಾಡಿದೆ || 
ನೀತ ಗುರು ಜಗನ್ನಾಥ ವಿಠಲ ದೂತ ||೭||

vAdirAja pAlisu enna ||pa||

vAdirAja tava pAda sarOja 
mOdaparAguva sAdara nIDi ||apa||

mOda tIrtha suma tOdadi caMdira || 
pAdava naMbide nI dayadali ||1||

Arta janara manadArthiya kaLediha || 
vArtadi baMdavanArthiya biDisO ||2||

ellaraMte nInallavO jagadoLu || 
ballidaneMbOdu balle ballenu ||3||

kartumakartu samarthane ennanu || 
maretare anya samarthara kANe ||4||

kAmadhEnu sama BUmiya taLadi || 
kAmita nIDai sura taruve ||5||

mOkSha karuNa kaTAkShadi ennA || 
vIkShisi manadApEkShava sallisO ||6||

yAtake ennanu Itara mADide || 
nIta guru jagannAtha viThala dUta ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru