ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮಪದ ಸರಸೀರುಹ ಭೃಂಗ | ಹಯವದನ | Ramapada Sarasiruha Brunga | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ರಾಮಪದ ಸರಸೀರುಹ ಭೃಂಗ 
ರೋಮಕೋಟಿ ಲಿಂಗ ಅಸುರಮದ ಭಂಗ ||ಪ||

ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆ
ಕಂದುಗೊರಳನಭಜಕನಂದನನ ನೀ ಕೊಂದೆ
ಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆ
ಮಂದರಧರನ ಮುಂದೆ ಸುರ-
ವೃಂದವರಿಯೆ ಪುರವ ಹೋಮಗೈದು ಬಂದೆ ||೧||

ಉರು ಗದೆಯಿಂದ ಕೌರವನ ತೊಡೆಗಳ ತರಿದೆ 
ಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆ
ದುರುಳ ದುಶ್ಯಾಸನನ ಕರುಳುಗಳನೆ ಹಿರಿದೆ
ಕರವೆತ್ತಿ ಬಲವೆರಡ ಕರೆದೆ
ಗುರುಮಧ್ವಮುನಿಯಾಗಿ ಶಾಸ್ತ್ರಗಳನೊರೆದೆ ||೨||

ಧರೆಯೊಳತ್ಯಧಿಕ ಸೋದೆಪುರ ನಿವಾಸ
ಸಿರಿಹಯವದನನ ಪರಮಪ್ರಿಯ ದಾಸ
ನೆರೆ ನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸ
ಕರುಣವಾರಿಧಿ ಪುಣ್ಯವಾಸ ಜಗಕೆ
ಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ ||೩||  

raamapada sarasIruha bhRuMga 
rOmakOTi liMga asuramada bhaMga ||pa||

oMdu nimiShake pOgi saMjIvanava taMde
kaMdugoraLanabhajakanaMdanana nI koMde
iMdrasoonuvina bhakutige rathaagradi niMde
maMdaradharana muMde sura-
vRuMdavariye purava hOmagaidu baMde ||1||

uru gadeyiMda kauravana toDegaLa taride 
dhuradalli maagadhana marmasthaLa muride
duruLa dushyaasanana karuLugaLane hiride
karavetti balaveraDa karede
gurumadhwamuniyaagi shaastragaLanorede ||2||

dhareyoLatyadhika sOdepura nivaasa
sirihayavadanana paramapriya daasa
nere ninna naMbirda bhaktarige koDu lEsa
karuNavaaridhi puNyavaasa jagake
guruvenisi merede mukhyapraaNEsha ||3||  

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru