ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗೋಪಾಲದಾಸರಾಯ | ಜಗನ್ನಾಥವಿಠಲ | Gopaladasaraya | Jagannatha Vithala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನೋ ನಿಶ್ಚಯ ||ಪ||
ಈ ಪೀಡಿಸುವ ತ್ರಯತಾಪಗಳೋಡಿಸಿ 
ಕೈ ಪಿಡಿದೆನ್ನ ಕಾಪಾಡಿದ ಗುರುರಾಯ ||ಅಪ||

ಘೋರವ್ಯಾಧಿಯನೇ ನೋಡಿ ವಿಜಯರಾಯ ಭೂರಿ ಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದಿನಾರಭ್ಯ ತವಪಾದ ಸಾರಿದೆ ಸಲಹೆಂದು
ಸೂರಿ ಜನಸಂಪ್ರಿಯ ಸುಗುಣೋದಾರ ದುರುಳನ ದೋಷನಿಚಯವ
ದೂರಗೈಸಿ ದಯಾಂಬುನಿಧೆ ನಿವಾರಿಸದೆ ಕರಪಿಡಿದು ಕರುಣದಿ ||೧||

ಅಪಮೃತ್ಯುವನು ತರಿದೆ ಎನ್ನೊಳಗಿದ್ದ ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು ನಿಪುಣನೆಂದೆನಿಸಿದಿ ತಪಸಿಗಳಿಂದಲಿ
ಕೃಪಣವತ್ಸಲ ನಿನ್ನ ಕರುಣೆಗೆ ಉಪಮೆಗಾಣೆನೊ ಸಂತತವು 
ಕಾಶ್ಯಪಿಯೊಳಗೆ ಬುಧರಿಂದ ಜಗದಾಧಿಪ ಕಿಂಕರನೆನಿಸಿ ಮೆರೆಯುವ ||೨||

ಎನ್ನ ಪಾಲಿಸಿದಂದದಿ ಸಕಲಪ್ರಪನ್ನರ ಸಲಹೋ ಮೋದಿ
ಅನ್ಯರಿಗೀಪರಿ ಬಿನ್ನಪಗೈಯೆ ಜಗನ್ನಾಥವಿಠಲನ ಸನ್ನುತಿಸುವ ಧೀರ
ನಿನ್ನ ನಂಬಿದ ಜನರಿಗೆಲ್ಲಿಯ ಬನ್ನವೋ ಭಕ್ತಾನುಕಂಪಿ 
ಶರಣ್ಯ ಬಂದೆನೋ ಈ ಸಮಯದಿ ಅಹರ್ನಿಶಿ ಧ್ಯಾನಿಸುವೆ ನಿನ್ನನು ||೩||

gOpaaladaasaraaya ninnaya paada
naa poMdidenO nishcaya ||pa||
I pIDisuva trayataapagaLODisi 
kai piDidenna kaapaaDida gururaaya ||apa||

GOravyaadhiyanE nODi vijayaraaya bhUri karuNava maaDi
tOridarivarE uddhaarakareMdaMdinaarabhya tavapaada sAride salaheMdu
sUri janasaMpriya suguNOdaara duruLana dOShanicayava
dUragaisi dayaaMbunidhe nivaarisade karapiDidu karuNadi ||1||

apamRutyuvanu taride ennoLagidda aparaadhagaLa marede
capalacittanigolidu vipulamatiyanittu nipuNaneMdenisidi tapasigaLiMdali
kRupaNavatsala ninna karuNege upamegaaNeno saMtatavu 
kaashyapiyoLage budhariMda jagadaadhipa kiMkaranenisi mereyuva ||2||

enna paalisidaMdadi sakalaprapannara salahO mOdi
anyarigIpari binnapagaiye jagannaathaviThalana sannutisuva dhIra
ninna naMbida janarigelliya bannavO bhaktaanukaMpi 
sharaNya baMdenO I samayadi aharnishi dhyaanisuve ninnanu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru