ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಲಾಲಿ ಆಡಿದ ರಂಗ | ವಾದಿರಾಜರು | Laali Aadida Ranga | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಲಾಲಿ ಆಡಿದ ರಂಗ ಲಾಲಿ ಆಡಿದ ||ಪ||
ಬಾಲೆ ರುಕ್ಮಿಣಿ ದೇವರೊಡನೆ ಮೂರು ಲೋಕನಾಳ್ವ ದೊರೆಯು ||ಅಪ||

ಸಾಧು ಮಚ್ಛಪರೂಪನಾಗಿ ಭೇದಿಸಿ ತಮನ ಕೊಂದು
ವೇದವನ್ನು ಮಗನಿಗಿತ್ತು ಭೂದೇವಿರೊಡನೆ ಕೃಷ್ಣ ||೧||

ಬೆಟ್ಟವನ್ನು ಬೆನ್ನಲಿಟ್ಟು ಮಿತ್ರೆ ಮೋಹಿನಿ ರೂಪತಾಳಿ
ಭಕ್ತರಿಗೆ ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ ||೨||

ಕ್ರೋಡ ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದು
ಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ ||೩||

ಪುಟ್ಟಬಾಲನ ನುಡಿಯಕೇಳಿ ಕೆಟ್ಟ ಕಶ್ಯಪನುದರ ಸೀಳಿ
ಅಷ್ಟಮಂಗಳ ವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ ||೪||

ಯುಕುತಿಯಿಂದ ಭೂಮಿ ಅಳೆದು ಭಕುತ ಬಲಿಯ ತಲೆಯ ತುಳಿದು
ಶಕುತನೆಂದು ಪೊಗಳೆ ಸುರರು ಲಕುಮಿಯೊಡನೆ ನಗುತ ಕೃಷ್ಣ ||೫||

ಯುದ್ಧದಲ್ಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದು
ಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡ ಕೃಷ್ಣ ||೬||

ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದು
ಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ ||೭||

ಒಂದುಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿ
ಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು ||೮||

ಅಂಬರವ ತೊರೆದು ದಿಗಂಬರವ ವೇಷವನ್ನೆ ಧರಿಸಿ
ಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ ||೯||

ಅಚ್ಚಮುತ್ತಿನಾಭರಣವಿಟ್ಟು ಲಕ್ಷ್ಯವಿಲ್ಲದೆ ಹಯವನೇರಿ
ಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ ||೧೦||    

laali aaDida raMga laali aaDida ||pa||
baale rukmiNi dEvaroDane mooru lOkanaaLwa doreyu ||apa||

saadhu machCaparoopanaagi bhEdisi tamana koMdu
vEdavannu maganigittu bhoodEviroDane kRuShNa ||1||

beTTavannu bennaliTTu mitre mOhini rUpataaLi
bhaktarige amRuta baDisi satyabhaameyaroDane kRuShNa ||2||

krODa varaaha rUpanaagi aadi hiraNyakana koMdu
mEdiniya mElake taMdu raadheyoDane naguta kRuShNa ||3||

puTTabaalana nuDiyakELi keTTa kashyapanudara sILi
aShTamaMgaLa vaadyavaagalu aShTa strIyaroDane kRuShNa ||4||

yukutiyiMda bhoomi aLedu bhakuta baliya taleya tuLidu
shakutaneMdu pogaLe suraru lakumiyoDane naguta kRuShNa ||5||

yuddhadalli koDali piDidu guddi kShatrEra shirava taridu
gedda siMhanenisikoMDu padmaavatiya kooDa kRuShNa ||6||

sEtubaMdhanavanne maaDi dhUrtaraavaNanna koMdu
khyaatipaDedu purake baMdu sIteyoDane raamachaMdra ||7||

oMduELu eMTusaavira iMdumukhiyarannu kooDi
maMdamaaruta chaMdra baralu naMdagOkulada doreyu ||8||

aMbarava toredu digaMbarava vEShavanne dharisi
maMgaLaaMga maarajanaka raMganaayakiyoDane kRuShNa ||9||

achchamuttinaabharaNaviTTu lakShyavillade hayavanEri
bhakutarige abhayakoDuta bhaktavatsala hayavadana ||10||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru