ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದಾಸರೆಂದರೆ ಪುರಂದರ ದಾಸರಯ್ಯ | ಶ್ರೀ ವ್ಯಾಸರಾಜರು | Dasarendare Purandara Dasarayya | Sri Vyasarajaru


ಸಾಹಿತ್ಯ :  ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ದಾಸರೆಂದರೆ ಪುರಂದರ ದಾಸರಯ್ಯ ||ಪ||
ವಾಸುದೇವ ಕೃಷ್ಣನ ಸೂಸಿ ಪೂಜಿಸುವ ||ಅಪ||

ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು |
ದಾಸನೆಂದು ತುಳಸಿ ಮಾಲೆ ಧರಿಸಿ ||
ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ |
ಕಾಸುಗಳಿಸುವ ಪುರುಷ ಹರಿದಾಸನೇನೋ ||೧||

ಡಂಬಕದಿ ಹರಿ ಸ್ಮರಣೆ ಮಾಡಿ ಜನರ ಮುಂದೆ |
ಸಂಭ್ರಮದಿ ತಾನುಂಬೋ ಊಟ ಬಯಸಿ ||
ಅಂಬುಜೋದ್ಭವ ಪಿತನ ಆಗಮಗಳರಿಯದೆಲೆ 
ತಂಬೂರಿ ಮೀಟಿದವ ಹರಿದಾಸನೇನೋ ||೨||

ಯಾಯಿವಾರನೆ ಮಾಡಿ ವಿಪ್ರರಿಗೆ ಮೃಷ್ಟಾನ್ನ 
ಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು |
ಗಾಯನವ ಮಾಡಿದವ ಹರಿದಾಸನೇನೋ ||೩||

ಪಾಠಕನ ತೆರನಂತೆ ಪದಗಳ ತಾ ಬೊಗಳಿ |
ಕೂಟ ಜನರ ಮನ ಸಂತೋಷ ಬಡಿಸಿ ||
ಗೂಟ ನಾಮಗಳಿಟ್ಟು ಕೊಟ್ಟರಿಯೇ ತಾನೆನುತ |
ತಾಟತೂಟಕ ಮಾಡಿದವ ದಾಸನೇನೋ ||೪||

ನೀತಿಯಲ್ಲವ ನರಿತು ನಿಗಮ ವೇದ್ಯನ 
ನಿತ್ಯವಾತಸುತ ನಲ್ಲಿಹನ ವರ್ಣಿಸುತಲಿ ||
ಗೀತ ನರ್ತನದಿ ಶ್ರೀ ಕೃಷ್ಣನ್ನ ಪೂಜಿಸುವ 
ಪೂತಾತ್ಮ ಪುರಂದರ ದಾಸರಿವರಯ್ಯ ||೫||

dAsareMdare puraMdara dAsarayya ||pa||
vAsudEva kRuShNana sUsi pUjisuva ||apa||
 
grAsakillade pOgi parara manegaLa pokku |
dAsaneMdu tuLasi mAle dharisi ||
bEsarillade avara kADibEDi baLalisuta |
kAsugaLisuva puruSha haridAsanEnO ||1||
 
DaMbakadi hari smaraNe mADi janara muMde |
saMBramadi tAnuMbO UTa bayasi ||
aMbujOdBava pitana AgamagaLariyadele 
taMbUri mITidava haridAsanEnO ||2||
 
yAyivaarane mADi viprarige mRuShTAnna prIyadali
tAnoMdu koDada lOBi
mAya saMsAradali mamate heccAgiTTu |
gAyanava mADidava haridAsanEnO ||3||
 
pAThakana teranaMte padagaLa tA bogaLi |
kUTa janara mana saMtOSha baDisi ||
gUTa nAmagaLiTTu koTTariyE tAnenuta |
tATatUTaka mADidava dAsanEnO ||4||
 
nItiyallava naritu nigama vEdyana 
nityavAtasuta nallihana varNisutali ||
gIta nartanadi SrI kRuShNanna 
pUjisuva pUtAtma puraMdara dAsarivarayya ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru