ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀಮಧ್ವರಾಯರ ಸೇವೆ | ಪುರಂದರ ವಿಠಲ | Sri Madhwarayara Seve | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು 
Kruti: Sri Purandara dasaru 


ಶ್ರೀಮಧ್ವರಾಯರ ಸೇವೆ ದೊರಕುವುದು 
ಜನುಮ ಸಫಲ ಕಾಣಿರೋ ||ಪ||
ಶ್ರೀಮದಾನಂದ ತೀರ್ಥರ ಪಾದ 
ನೆನೆವವರು ಸಾಮಾನ್ಯ 
ನರರೇ ಕಾಣಿ ಬೊಮ್ಮನ ಆಣೆ ||ಅಪ||

ಜಗವು ಸತ್ಯವು ಅಲ್ಲ ಜಡಜೀವ ಬೇಧವಿಲ್ಲ 
ಅಗುಣನು ಪರಬೊಮ್ಮನು ಹೀಗೆ ನುಡಿವ ಜನರ 
ನಿಗಮ ಶಾಸ್ತ್ರದಿ ಗೆದ್ದು ಜಗಸತ್ಯ ಸುಗುಣ ಬ್ರಹ್ಮ ಎಂದು ಪೇಳುವ||೧||

ಹರಿ ಸರ್ವೋತ್ತಮ ನಿತ್ಯ ತರುವಾಯ ರಮಾದೇವಿ 
ತರುವಾಯ ವಿಧಿಪ್ರಾಣರು ಸರಸ್ವತಿ ಭಾರತಿ ಗರುಡ ಅನಂತ ರುದ್ರ 
ತರುವಾಯ ಆರು ರುದ್ರ ದೇವಿಗಳು ||೨||

ಸೌಪರ್ಣಿ ವಾರುಣಿ ಅಪರ್ಣಿಯರು ಸಮರು ದ್ಯುಪವಿ ಮನ್ವಾದಿಗಳು 
ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ ಅಪವರ್ಗದವನ 
ಸೇವೆಯ ಮಾಡಿರೋ ಎಂಬ ||೩||

ಒಂದೊಂದು ಯುಗದಲ್ಲಿ ಅನಂತ ಸೇವೆಯ ಮಾಡಿ 
ಚಂದದಿಂದಲಿ ಲಾಲಿಸಿ ಇಂದಿರಾರಮಣ ಗೋವಿಂದನೆ 
ದೈವವೆಂದು ಸಂದೇಹವಿಲ್ಲದೆ ಸಾಧಿಸಿ 
ಮಾಯಿಗಳ ಸೋಲಿಸಿ ||೪||

ಹಿಮಗಿರಿಯಿಂದ ಸೇತುವೆಯ ಪರ್ಯಂತರ ಭ್ರಮಿಸುವ ಸುಜನರಿಗೆ
ಕ್ರಮತತ್ವ ಬೋಧಿಸಿ ಕಮಲನಾಭನ 
ಮೂರ್ತಿ ಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ ||೫||

ಭೂತಳದೊಳು ರೌಪ್ಯಪುರದಿ ನೆಲೆಸಿ 
ಗೆದ್ದು ಧಾತ್ರಿ ಮುದ್ರೆಯ ತೋರಿಸಿ
ಈತನೇ ಹನುಮಂತ, ಈತನೇ ಭೀಮಸೇನ 
ಈತನೇ ಭವಿಷ್ಯದ ಬ್ರಹ್ಮ ದೇವೋತ್ತಮ ||೬||

ಶ್ರೀಮದಾನಂದನೇ ಅನಂತ ಕಾಲಕೆ ಎಂದು 
ಯಮಕ ಭಾರತ ತೋರಿಸಿ ಸ್ವಾಮಿ ಸರ್ವಾಂತರ್ಯಾಮಿ 
ಸರ್ವಗುಣ ಪರಿಪೂರ್ಣ ಪ್ರೇಮಿ 
ಪುರಂದರ ವಿಠಲನ ದಾಸನಾದ||೭||

shrImadhvarAyara sEve dorakuvudu 
januma saPala kANirO ||pa||
shrImadAnaMda tIrthara pAda 
nenevavaru sAmAnya 
nararE kANi bommana ANe ||apa||
 
jagavu satyavu alla jaDajIva bEdhavilla 
aguNanu parabommanu hIge nuDiva janara 
nigama SAstradi geddu jagasatya suguNa brahma eMdu pELuva||1||
 
hari sarvOttama nitya taruvAya ramAdEvi 
taruvAya vidhiprANaru sarasvati BArati garuDa anaMta rudra 
taruvAya Aru rudra dEvigaLu ||2||
 
sauparNi vAruNi aparNiyaru samaru dyupavi manvAdigaLu 
I pari tAratamya japadhyAnArcaneyiMda apavargadavana 
sEveya mADirO eMba ||3||
 
oMdoMdu yugadalli anaMta sEveya mADi 
caMdadiMdali lAlisi iMdirAramaNa gOviMdane 
daivaveMdu saMdEhavillade sAdhisi 
mAyigaLa sOlisi ||4||
 
himagiriyiMda sEtuveya paryaMtara Bramisuva sujanarige
kramatatva bOdhisi kamalanABana 
mUrti kramavaritu sthApisi pUjisireMda ||5||
 
BUtaLadoLu raupyapuradi nelesi 
geddu dhAtri mudreya tOrisi
ItanE hanumaMta, ItanE BImasEna 
ItanE BaviShyada brahma dEvOttama ||6||
 
SrImadAnaMdanE anaMta kAlake eMdu 
yamaka BArata tOrisi svAmi sarvAMtaryAmi 
sarvaguNa paripUrNa prEmi 
puraMdara viThalana dAsanAda||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru