ಪಾಲಿಸುವ ರಮೆಯರಸ ಎಣೆಯಿರದ ದೈವತವು
ಹಿರಿಯ ಪರಮೇಶ್ವರನು ನಾಲ್ಮೊಗನ ತಂದೆ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧||
ದೇವತೆಗಳೆರುಗುತಿಹ ಸಜ್ಜನರ ದೈವತವೆ
ಎಲ್ಲ ಗುಣಗಳ ಗಡಣ ಮೈವೆತ್ತ ಮೂರ್ತಿ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೨||
ಬಗೆಯೊಳಗೆ ಕವಿದಿರುವ ಎಲ್ಲ ಕತ್ತಲು ಕಳೆವೆ
ಸಂತಸದ ಸೊದೆಗಡಲು ಅಚ್ಚರಿಯೊಳಚ್ಚರಿ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೩||
ಮೂರುಲೋಕದ ಕಡಲು ಹಾಯಿಸುವ ಅಂಬಿಗನು
ಎಲ್ಲರೆರಗಿದ ಪಾದ ದಿಕ್ಪತಿಗಳೊಡೆಯ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೪||
ಮೂರು ಗುಣಗಳ ದಾಟಿ ನಿಂತವನೆ ಎಲ್ಲವನು
ಹೊತ್ತವನೆ ನೀಡು ನಿನ್ನ ಹಿರಿಯ ಚೆಲು ಭಕ್ತಿ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೫||
ಕೊಲ್ಲುವನೆ ಉಳಿಸುವನೆ ಎಲ್ಲವನು ಸಲಹುವನೆ
ಜಗದೀಶ್ವರನೆ ನೀಡು ನಿನ್ನ ಚೆಲು ಭಕ್ತಿ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೬||
ಎಲ್ಲದಕೂ ಕಾರಣನೆ ಎಲ್ಲವನು ಸಲಹುವನೆ
ಓ ತಂದೆ ನಿನ್ನೆಡೆಗೆ ಶರಣು ಬಂದಿಹೆನು
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೭||
ಉದಿಸುತಿಹ ಸೂರ್ಯನೊಳು ಹೊಂಬಣ್ಣ ಹೊತ್ತಿರುವ
ಸೊಬಗಿನಡಿದಾವರೆಯ ವಿಮಲ ಚರಿತ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೮||
ಕೊಳದ ಕೆಂದಾವರೆಯ ಒಡನಾಡಿ ಬಣ್ಣದಲಿ
ಕೆಂಪು ಮಣಿಯೊಳು ಭವ್ಯ ನಿನ್ನ ತುದಿಯುಗುರು
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ||೯||
ಮನಸಿಜನ ಬತ್ತಳಿಕೆಯಂತಿರುವ ಪಾವನಂ
ಚೆಲುವ ಮೊಣಗಾಲವನೆ ಅಮಿತ ವೀರ್ಯ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೦||
ಅರಳಿನಿಂತಿರುವಂಥ ಹೊನ್ನ ಹೂವಿನ ತೆರದಿ
ಚೆಲುವ ಪೀತಾಂಬರವನುಟ್ಟ ದೈವತವೆ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೧||
ಈ ಜಗವ ಸೃಷ್ಟಿಸುವ ಬ್ರಹ್ಮದೇವನ ಪಡೆದ
ತಾವರೆಯು ಚಿಮ್ಮಿರುವ ಹೊಕ್ಕುಳವನೆ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೨||
ಕಾಡುಸಲಗದ ನೀಳ ಸೊಂಡಿಯೊಳು ಸೊಗಸಾದ
ತೊಡೆಯಲ್ಲಿ ಕುಳಿತಿಹಳು ರಮೆ ಬಾಳ ಗೆಳತಿ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೩||
ತಳಿರಿನೊಳು ನಸೆಯಾದ ನಿನ್ನ ನಡುವಿನೊಳಡಿಯು
ಬ್ರಹ್ಮಾಂಡ ಅಡಗಿಹುದು ನೀನೆ ಹಿರಿ ಶರಣು
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೪||
ಸೊಗದ ಸುಂದರಿ ಜಗದ ತಾಯಿ ಲಕ್ಷ್ಮೀದೇವಿ
ನಿನ್ನ ಚೆಲುವೆದೆಯಲ್ಲಿ ಮನೆ ಮಾಡಿಕೊಂಡಿಹಳು
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೫||
ರಕ್ಕಸರ ಕುಲವನ್ನು ತರಿದಂತ ಚಕ್ರವನು
ಪಾಂಚಜನ್ಯದ ಗದೆಯ ಹೊತ್ತ ಚೆಲು ಕೈಗಳು
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೬||
ನಿನ್ನ ಚೆಲು ಮೋರೆಯದು ಹಿರಿ ತಿಳಿವಿನಾಗರ
ರಮೆಗೆ ಸಂತಸವೀವ ಹುಣ್ಣಿಮೆಯ ಚಂದಿರ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೭||
ಪಾಪ ರಾಶಿಯನ್ನೆಲ್ಲ ಸುಟ್ಟು ಬಿಡುವುದು ಹಿರಿಯ
ಸಂತಸವನೀಯುವುದು ನಿನ್ನ ಕುಡಿನೋಟ
ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು
ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧೮||
ಎಂದೆಂದು ಅಳಿವಿರದ ತುಂಬು ಸಂತಸವೆಂಬ
ಪರಮಪದ ಬಯಸುತಿಹ ಓ ಭಕ್ತ ವೃಂದ
ಮುನಿಗಳಿಗು ಮುನಿಯಾದ ಆನಂದ ತೀರ್ಥಮುನಿ
ಹರಿಯ ಈ ಗಾದೆಯನು ಹಾಡಿರುವನು ||೧೯||
paalisuva rameyarasa eNeyirada daivatavu
hiriya paramESvaranu naalmogana taMde
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||1||
dEvategaLerugutiha sajjanara daivatave
ella guNagaLa gaDaNa maivetta mUrti
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||2||
bageyoLage kavidiruva ella kattalu kaLeve
saMtasada sodegaDalu accariyoLaccari
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||3||
mUrulOkada kaDalu haayisuva aMbiganu
ellareragida paada dikpatigaLoDeya
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||4||
mUru guNagaLa daaTi niMtavane ellavanu
hottavane nIDu ninna hiriya celu bhakti
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||5||
kolluvane uLisuvane ellavanu salahuvane
jagadIshvarane nIDu ninna celu bhakti
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||6||
elladakU kaaraNane ellavanu salahuvane
O taMde ninneDege sharaNu baMdihenu
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||7||
udisutiha sUryanoLu hoMbaNNa hottiruva
sobaginaDidaavareya vimala carita
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||8||
koLada keMdaavareya oDanaaDi baNNadali
keMpu maNiyoLu bhavya ninna tudiyuguru
bEDiddu nIDuvanu tuMbu karuNeya kaDalu
ninna mahimeya tiLiva nIDu nanage||9||
manasijana battaLikeyaMtiruva paavanaM
celuva moNagaalavane amita vIrya
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||10||
araLiniMtiruvaMtha honna hUvina teradi
celuva pItaaMbaravanuTTa daivatave
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||11||
I jagava sRuShTisuva brahmadEvana paDeda
taavareyu cimmiruva hokkuLavane
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||12||
kaaDusalagada nILa soMDiyoLu sogasaada
toDeyalli kuLitihaLu rame baaLa geLati
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||13||
taLirinoLu naseyaada ninna naDuvinoLaDiyu
brahmaaMDa aDagihudu nIne hiri SaraNu
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||14||
sogada suMdari jagada taayi lakShmIdEvi
ninna celuvedeyalli mane maaDikoMDihaLu
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||15||
rakkasara kulavannu taridaMta cakravanu
paaMcajanyada gadeya hotta celu kaigaLu
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||16||
ninna celu mOreyadu hiri tiLivinaagara
ramege saMtasavIva huNNimeya caMdira
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||17||
paapa raaSiyannella suTTu biDuvudu hiriya
saMtasavanIyuvudu ninna kuDinOTa
bEDiddu nIDuvanu tuMbu karuNeya kaDalu
ninna mahimeya tiLiva nIDu nanage ||18||
eMdeMdu aLivirada tuMbu saMtasaveMba
paramapada bayasutiha O bhakta vRuMda
munigaLigu muniyaada AnaMda tIrthamuni
hariya I gaadeyanu haaDiruvanu ||19||