ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಚಿನ್ನದ ಚ್ಯಾವಡಿ ಮ್ಯಾಲ್ | ಭೀಮೇಶಕೃಷ್ಣ | Chinnada Chyavadi Myal | Bhimesha Krishna


 
ಸಾಹಿತ್ಯ : ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ) 
Kruti: Sri Harapanahalli Bhimavva (Bhimesha Krishna)


ಚಿನ್ನದ ಚ್ಯಾವಡಿ ಮ್ಯಾಲ್ ಪನ್ನಂಗ ಶಯನರು ಮಾನ್ಯ ಮಾನ್ಯರು ಮುಕ್ತರು ||
ಮಾನ್ಯ ಮಾನ್ಯರು ಮುಕ್ತರನ್ನೇ ನೋಡುತಲಿ, ಇನ್ಯಾರ ಭಯವು ನಮಗಿಲ್ಲ ||೧||

ಮುತ್ತಿನ ಚ್ಯಾವಣಿ ಮ್ಯಾಲ್ ಮುಕ್ತರನ್ನೇ ನೋಡುತ ಲಕ್ಷ್ಮಿನಾರಾಯಣರು ಕುಳಿತ್ಯಾರೆ ||
ಲಕ್ಷ್ಮೀನಾರಾಯಣರು ಕುಳಿತು ನೋಡುತಲಿರಲು, ಮತ್ಯಾರ ಭಯವು ನಮಗಿಲ್ಲ ||೨||

ಯಮ ಧರ್ಮರಾಯಗೆ ನಮೋ ನಮೋ ನಾನೆಂಬೆ, ಘನಗುಣ ಮಹಿಮಾ ನೀನೆಂದು ||
ಘನಗುಣ ಮಹಿಮಾ ನೀನೆಂದು ಸ್ತುತಿಪೆನು ಅನುಮಾನವೇಕೆ ಸಲಹೆನ್ನ ||೩||

ರಂಗಾರಂಗಾ ಎಂದು ರಂಗನ್ನ ನೆನೆದರೆ, ಹಿಂಗೋದು ಸಕಲ ದಾರಿದ್ರ್ಯ ||
ಹಿಂಗೋದು ಸಕಲ ದಾರಿದ್ರ್ಯ ಕಳೆವಂತೆ, ಮಂಗಳಾಂಗಿ ಶ್ರೀಮಹಾಲಕುಮಿ ||೪||

ಸಾಮಜ ವರದನು ಭೀಮೇಶ ಕೃಷ್ಣನು ಕಾಮಿತಾರ್ಥಗಳ ಕೊಡುವೋನು ||
ಕಾಮಿತಾರ್ಥಗಳ ಕೊಡುವಂಥ ಶ್ರೀ ಹರಿಯು ಪ್ರೇಮದಿ ಎನ್ನ ಸಲಹಲಿ ||೫||

cinnada cyAvaDi myAl pannaMga Sayanaru mAnya mAnyaru muktaru ||
mAnya mAnyaru muktarannE nODutali, inyAra Bayavu namagilla ||1||
 
muttina cyAvaNi myAl muktarannE nODuta lakShminArAyaNaru kuLityAre ||
lakShmInArAyaNaru kuLitu nODutaliralu, matyAra Bayavu namagilla ||2||
 
yama dharmarAyage namO namO nAneMbe, GanaguNa mahimA nIneMdu ||
GanaguNa mahimA nIneMdu stutipenu anumAnavEke salahenna ||3||
 
raMgAraMgA eMdu raMganna nenedare, hiMgOdu sakala dAridrya ||
hiMgOdu sakala dAridrya kaLevaMte, maMgaLAMgi SrImahAlakumi ||4||
 
sAmaja varadanu BImESa kRuShNanu kAmitArthagaLa koDuvOnu ||
kAmitArthagaLa koDuvaMtha SrI hariyu prEmadi enna salahali ||5||

Comments

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru