ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಘವೇಂದ್ರ ಗುಣಸಾಗರ | ಇಂದಿರೇಶ | Raghavendra Guna Sagara | Indiresha


ಸಾಹಿತ್ಯ : ಶ್ರೀ ಇಂದಿರೇಶ ದಾಸರು 
Kruti: Sri Indiresha Dasaru


ರಾಘವೇಂದ್ರ ಗುಣಸಾಗರ ನೋಡೆನ್ನ | ಹರಿಯನು ತೋರಿನ್ನ ||ಪ||

ಮಂತ್ರಾಲಯದೊಳು ಮಂದಿರ ಮಾಡಿರುವಿ | ಮನೆ ಮನೆಯಲ್ಲಿರುವಿ
ಸಂತತಿ ಸಂಪತ್ತುಗಳನು ನೀ ಕೊಡುವಿ | ಸಂತತ ರಕ್ಷಿಸುವಿ ||
ತಂತ್ರದೀಪಿಕೆ ಎಂಬ ಗ್ರಂಥವ ರಚಿಸಿರುವಿ ಸೂತ್ರಾರ್ಥಗಳರುಹಿ ||೧||

ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿ | ವೇದಾರ್ಥವ ನೋಡಿ |
ಕೆಟ್ಟ ವಾದಿಗಳ ವಾದದಿ ಜಯ ಮಾಡಿ | ಸೂರಿಗಳನು ಕೂಡಿ ||
ಕುಷ್ಠರೋಗಗಳ ಹರಿಯನು ನೀ ಬೇಡಿ | ಕಳೆಯುವ ಗುರು ಮೇಧಿ ||೨||

ಒಂದು ಚರಿತೆಯ ಪೇಳಲು ನಾನರಿಯೆ | ಇರುವೆನು ಈ ಪರಿಯೇ |
ನಂದ ಬಾಲನ ಪ್ರಿಯೆ ನೀ ಎನಗೊಲಿಯೇ | ದುರಿತಾರ್ತಿಗೆ ಸರಿಯೇ |
ಇಂದಿರೇಶನ ಪಾದ ಸಂದರುಶನ ದೊರೆಯೇ | ನಿನ್ನನು ನಾ ಮರೆಯೇ ||೩||

rAGavEMdra guNasAgara nODenna | hariyanu tOrinna ||pa||
 
maMtrAlayadoLu maMdira mADiruvi | mane maneyalliruvi
saMtati saMpattugaLanu nI koDuvi | saMtata rakShisuvi ||
taMtradIpike eMba graMthava racisiruvi sUtrArthagaLaruhi ||1||
 
eShTO graMthagaLa vyAKyAnava mADi | vEdArthava nODi |
keTTa vAdigaLa vAdadi jaya mADi | sUrigaLanu kUDi ||
kuShTharOgagaLa hariyanu nI bEDi | kaLeyuva guru mEdhi ||2||
 
oMdu cariteya pELalu nAnariye | iruvenu I pariyE |
naMda bAlana priye nI enagoliyE | duritArtige sariyE |
iMdirESana pAda saMdaruSana doreyE | ninnanu nA mareyE ||3||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru