ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎನ್ನಾಣೆ ಬ್ಯಾಡ ಬ್ಯಾಡವೋ ರಂಗ | ಹಯವದನ | Ennane Byada Byadavo | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದು ಚೆನ್ನಾಗಿತ್ತೆರಮನೆ ಗೋವಿಂದ||ಪ||  

ಎನ್ನಪ್ಪ ಕಂದನೆ ಚಿನ್ನ ಗೋಪ್ಯರು ಬಂದು ನಿನ್ನ ದೂರುತ್ತಲೈದಾರೋ ಗೋವಿಂದ
ಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆ ಇನ್ನೇನು ಮಾಡಲಮ್ಮ ಗೋಪ್ಯಮ್ಮ||೧||

ದಧಿದುಗ್ಧ ಭಾಂಡ ಒಡೆದು ಗೋಪಿಯರನ್ನು ಸದರವ ಮಾಡುವರೇ ಗೋವಿಂದ 
ಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆ ದಧಿಭಾಂಡ ಒಡೆಯಿತಮ್ಮ ಗೋಪ್ಯಮ್ಮ||೨||

ಬಸವನ ಆಟದಿ ಶಿಶುಗಳೆಲ್ಲರು ಕೂಡಿ ಮಸಿಮಣ್ಣು ಮೈಯಾದವೋ ಗೋವಿಂದ 
ಬಿಸಜಾಕ್ಷಿಯರು ತಮ್ಮ ಮನೆ ಕೆಲಸದ ಕೈಯ್ಯ ಮಸಿ ಮಣ್ಣು ಒರೆಸಿದರಮ್ಮ ಗೋಪ್ಯಮ್ಮ||೩||

ಅಣ್ಣ ಬಲರಾಮ ನಿನ್ನ ಬಣ್ಣನೆ ಸುದ್ದಿ ಚೆನ್ನಾಗಿ ಹೇಳಿದನೋ ಗೋವಿಂದ 
ಉನ್ನಂತ ದಾಯಾದಿಗಳ ಮಾತನು ಕೇಳಿ ಮನ್ನಿಸಬೇಡವಮ್ಮಾ ಗೋಪ್ಯಮ್ಮ||೪||

ಬಾ ಎನ್ನ ರನ್ನವೇ ಬಾ ಎನ್ನ ಚಿನ್ನವೇ ಬಾ ಎನ್ನ ಮೋಹದ ಗಿಳಿಯೇ ಗೋವಿಂದ 
ಬಾ ಎಂದು ಯಶೋದೆ ಕರೆದಳು ಬಿಗಿದಪ್ಪಿ ಬಾ ಎನ್ನ ಹಯವದನ ಗೋವಿಂದ||೫||

ennaaNe byaaDa byaaDavO raMga ninagidu cennaagitteramane gOviMda||pa||  

ennappa kaMdane cinna gOpyaru baMdu ninna dUruttalaidaarO gOviMda
kannEru kobbiMda anyaaya nuDitaare innEnu maaDalamma gOpyamma||1||

dadhidugdha bhaaMDa oDedu gOpiyarannu sadarava maaDuvarE gOviMda 
udayadi guddyaaDi maarjaalaMgaLu bILe dadhibhaaMDa oDeyitamma gOpyamma||2||

basavana aaTadi shishugaLellaru kUDi masimaNNu maiyaadavO gOviMda 
bisajaakShiyaru tamma mane kelasada kaiyya masi maNNu oresidaramma gOpyamma||3||

aNNa balaraama ninna baNNane suddi cennaagi hELidanO gOviMda 
unnaMta daayaadigaLa maatanu kELi mannisabEDavammaa gOpyamma||4||

baa enna rannavE baa enna cinnavE baa enna mOhada giLiyE gOviMda 
baa eMdu yashOde karedaLu bigidappi baa enna hayavadana gOviMda||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru