ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆನಂದ ಆನಂದ ಮತ್ತೆ ಪರಮಾನಂದ | ವಿಜಯ ವಿಠಲ | Ananda Ananda | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಆನಂದ ಆನಂದ ಮತ್ತೆ ಪರಮಾನಂದ |
ಆನಂದ ಆನಂದ ಆನಂದ ಆನಂದ ||ಪ||

ಆನಂದ ನಂದನನೊಲಿಯೆ ಏನಂದದ್ದೆ ವೇದ ವೃಂದ ||ಅಪ||

ಅ ಮೊದಲು ಕ್ಷಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ ||೧||

ಪೋಪುದು ಬರುತಿಪ್ಪುದು ಕೋಪ ಶಾಂತಿ ಮಾಡುವುದು |
ರೂಪ ಲಾವಣ್ಯವು ಹರಿ ವ್ಯಾಪಾರವೆಂದರಿತವರಿಗೆ ||೨||

ಜಲಕಾಷ್ಠ ಶೈಲ ಗಗನ ನೆಲಪಾವಕ ವಾಯುತರು |
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವರಿಗೆ ||೩||

ತಾರೋ ಬಾರೋ ಬೀರೋ ಸಾರೋ ಮಾರೋ ತೋರೋ ಹೋರೋ |
ಸೇರೊ ಕೋರೋದೆಂಬ ಈಶ ಪ್ರೇರಣೆ ಎಂದವಗೆ ||೪||

ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣನ ದರುಶನ |
ಸಿದ್ಧ ವಿಜಯ ವಿಠಲನ್ನ ಪೊಂದಿ ಕೊಂಡಾಡುವವರಿಗೆ ||೫||


AnaMda AnaMda matte paramAnaMda |
AnaMda AnaMda AnaMda AnaMda ||pa||

AnaMda naMdananoliye EnaMdadde vEda vRuMda ||apa||

a modalu kShakArAMta I mahA varNagaLella
svAmiyAda viShNuvina nAmaveMdu tiLidavage ||1||

pOpudu barutippudu kOpa SAMti mADuvudu |
rUpa lAvaNyavu hari vyApAraveMdaritavarige ||2||

jalakAShTha Saila gagana nelapAvaka vAyutaru |
PalapuShpa baLLili hari oLage vyAptaneMdavarige ||3||

tArO bArO bIrO sArO mArO tOrO hOrO |
sEro kOrOdeMba ISa prEraNe eMdavage ||4||

madhva SAstra pravacana muddu kRuShNana daruSana |
siddha vijaya viThalanna poMdi koMDADuvavarige ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru