Posts

Showing posts from February, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆರ್ಯನ್ನ ಯೋಗಧುರ್ಯನ್ನ | ಹಯವದನ | Aryanna Yogadhuryanna | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆರ್ಯನ್ನ ಯೋಗಧುರ್ಯನ್ನ  ಭಜಿಸಿ ವರ್ಯನ್ನ ಮಧ್ವಾಚಾರ್ಯನ್ನ || ಪ || ಅಕಳಂಕ ಮಹಿಮ ಚರಿತ್ರನ್ನ  ಈ ಸಕಲ ಭುವನಕೆ ಪವಿತ್ರನ್ನ ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ ನಿಕರಕಾನನ ವೀತಿ ಹೋತ್ರನ್ನ || ೧ || ನಿರ್ಜಿತ ಪಾಷಂಡ ಯೂಧನ್ನ ದೂರ ವರ್ಜಿತ ಭವ ದುಃಖ ಬದ್ದನ್ನ ಸಜ್ಜನ ರಘಕೆನಿರೋಧನ್ನ ದೋಷ ವರ್ಜಿತ ಗುಣಪೂರ್ಣ ಬೋಧನ್ನ || ೨ || ಸದಮಲ ಲಕ್ಷಣ ತುಂಗನ್ನ | ಸಿರಿಸದನನ್ನ ಕರುಣಾಂತ ರಂಗನ್ನ | ಮದ ಮೋಹ ತಿಮಿರ ಪತಂಗನ್ನ ಹಯವದನನ್ನ ಚರಣಾಬ್ಜ ಭೃಂಗನ್ನ || ೩ || Aryanna yOgadhuryanna  Bajisi varyanna madhvAcAryanna || pa || akaLaMka mahima caritranna  I sakala Buvanake pavitranna prakaTa BArati satkaLatranna pApa nikarakAnana vIti hOtranna || 1 || nirjita pAShaMDa yUdhanna dUra varjita Bava duHKa baddanna sajjana raGakenirOdhanna dOSha varjita guNapUrNa bOdhanna || 2 || sadamala lakShaNa tuMganna | sirisadananna karuNAMta raMganna | mada mOha timira pataMganna hayavadananna caraNAbja BRuMganna || 3 ||

ಎನ್ನಾಣೆ ಬ್ಯಾಡ ಬ್ಯಾಡವೋ ರಂಗ | ಹಯವದನ | Ennane Byada Byadavo | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದು ಚೆನ್ನಾಗಿತ್ತೆರಮನೆ ಗೋವಿಂದ||ಪ||   ಎನ್ನಪ್ಪ ಕಂದನೆ ಚಿನ್ನ ಗೋಪ್ಯರು ಬಂದು ನಿನ್ನ ದೂರುತ್ತಲೈದಾರೋ ಗೋವಿಂದ ಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆ ಇನ್ನೇನು ಮಾಡಲಮ್ಮ ಗೋಪ್ಯಮ್ಮ||೧|| ದಧಿದುಗ್ಧ ಭಾಂಡ ಒಡೆದು ಗೋಪಿಯರನ್ನು ಸದರವ ಮಾಡುವರೇ ಗೋವಿಂದ  ಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆ ದಧಿಭಾಂಡ ಒಡೆಯಿತಮ್ಮ ಗೋಪ್ಯಮ್ಮ||೨|| ಬಸವನ ಆಟದಿ ಶಿಶುಗಳೆಲ್ಲರು ಕೂಡಿ ಮಸಿಮಣ್ಣು ಮೈಯಾದವೋ ಗೋವಿಂದ  ಬಿಸಜಾಕ್ಷಿಯರು ತಮ್ಮ ಮನೆ ಕೆಲಸದ ಕೈಯ್ಯ ಮಸಿ ಮಣ್ಣು ಒರೆಸಿದರಮ್ಮ ಗೋಪ್ಯಮ್ಮ||೩|| ಅಣ್ಣ ಬಲರಾಮ ನಿನ್ನ ಬಣ್ಣನೆ ಸುದ್ದಿ ಚೆನ್ನಾಗಿ ಹೇಳಿದನೋ ಗೋವಿಂದ  ಉನ್ನಂತ ದಾಯಾದಿಗಳ ಮಾತನು ಕೇಳಿ ಮನ್ನಿಸಬೇಡವಮ್ಮಾ ಗೋಪ್ಯಮ್ಮ||೪|| ಬಾ ಎನ್ನ ರನ್ನವೇ ಬಾ ಎನ್ನ ಚಿನ್ನವೇ ಬಾ ಎನ್ನ ಮೋಹದ ಗಿಳಿಯೇ ಗೋವಿಂದ  ಬಾ ಎಂದು ಯಶೋದೆ ಕರೆದಳು ಬಿಗಿದಪ್ಪಿ ಬಾ ಎನ್ನ ಹಯವದನ ಗೋವಿಂದ||೫|| ennaaNe byaaDa byaaDavO raMga ninagidu cennaagitteramane gOviMda||pa||   ennappa kaMdane cinna gOpyaru baMdu ninna dUruttalaidaarO gOviMda kannEru kobbiMda anyaaya nuDitaare innEnu maaDalamma gOpyamma||1|| dadhidugdha bhaaMDa oDedu gOpiya...

ಮನ್ನಿಸೊ ಶ್ರೀವೆಂಕಟೇಶ | ಹಯವದನ | Manniso Sri Venkatesha | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮನ್ನಿಸೊ ಶ್ರೀವೆಂಕಟೇಶ ಮಂಜುಗುಣಿಪುರವಾಸ ||ಪ|| ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ ||ಅಪ|| ದೇಶದೇಶದಿಂದ ಬಂದ ಜನರಿಗೆ ಮುದದಿಂದ ಲೇಸಿನ ವರವನೀವೆ ನಿರುತ ಕಾವೆ ಭಾಸುರ ಮೋಹನವೇಷ ಭಾನುಕೋಟಿಸುಪ್ರಕಾಶ ಶ್ರೀಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ ||೧|| ವಾರಿಧಿಯೊಳಗಾಡಿದೆ ಗಿರಿಯ ಬೆನ್ನಲೆತ್ತಿದೆ ಭಾರವಹ ಧರೆಯ ತಂದೆ ದೈತ್ಯನ ಕೊಂದೆ ದುರುಳ ಬಲಿಯನು ಮೆಟ್ಟಿ ದೈತ್ಯನೃಪರನೆ ಕುಟ್ಟಿ ತರುಣಿಗಭಯವನಿತ್ತೆ ತರುವ ಕಿತ್ತೆ ||೨|| ಪುರದ ನಾರಿಯರನು ಪಂಥದಿ ಗೆಲಿದೆ ನೀನು ವರ ಕಲ್ಕಿಯಾಗಿ ತುರಗವನೇರಿ ಮೆರೆದೆ ವರದ ಪ್ರಸನ್ನ ಹಯವದನ ವೆಂಕಟರಾಯ ಪೊರೆಯೊ ಎಂದೆಂದೂ ಎನ್ನ ಪುರುಷರನ್ನ ||೩|| manniso shrIveMkaTEsha maMjuguNipuravaasa ||pa|| sannuta sadguNapUrNa suprasanna hayavadana ||apa|| dEshadEshadiMda baMda janarige mudadiMda lEsina varavanIve niruta kaave bhaasura mOhanavESha bhaanukOTisuprakaasha shrIsatiya praaNEsha shrI shrInivaasa ||1|| vaaridhiyoLagaaDide giriya bennalettide bhaaravaha dhareya taMde daityana koMde duruLa baliyanu meTTi daityanRuparane kuTTi taruNigabhayavanitte taruva kitte ||2|| purada naariyaranu paMthadi gelide nInu ...

ಭಾರತಿ ದೇವಿಯೆ ಮಾರುತಿ ರಾಣಿಯೆ | ಹಯವದನ | Bharati Deviye | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಭಾರತಿ ದೇವಿಯೆ ಮಾರುತಿ ರಾಣಿಯೆ ||ಪ|| ಮಂದಿ ನಾಲ್ವರನು ಹೊಂದಿಸಿ ಉದರದಿ ಒಂದೆ ರೂಪದಿ ಜನರಿಗೆ ತೋರುವ ಸತಿ ||೧|| ಸೀತಾಕಾಂತನ ದೂತನಾಗಿ ಪ್ರ- ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ ||೨||      ದುಷ್ಟ ಕಲಿಯ ಕುಲ ಕುಟ್ಟಿ ಕೆಡಹಿದ ಭಲ ಕಟ್ಟಾಳು ಭೀಮನ ಪಟ್ಟದ ಸತಿಯಳೆ  ||೩|| ಮೂರು ಏಳು ಕುಲ ಮಾಯಿಗಳನು ಗೆದ್ದು ಬೋರೆಮರದ ಕೆಳಗಿರುವನ ಸತಿಯಳೆ ||೪|| ಹಗಲಿರುಳೆನ್ನದೆ ಹಯವದನನ ಪದ ಹೃದಯ ಕಮಲದೊಳು ಭಜಿಪನ ಸತಿಯಳೆ ||೫|| bhaarati dEviye maaruti raaNiye ||pa|| maMdi naalwaranu hoMdisi udaradi oMde roopadi janarige tOruva sati ||1|| sItAkAMtana dUtanAgi pra- khyaatiya paDedana prItiya satiyaLe ||2||      duShTa kaliya kula kuTTi keDahida bhala kaTTaaLu bhImana paTTada satiyaLe  ||3|| mUru ELu kula maayigaLanu geddu bOremarada keLagiruvana satiyaLe ||4|| hagaliruLennade hayavadanana pada hRudaya kamaladoLu bhajipana satiyaLe ||5||

ರಾಘವೇಂದ್ರ ಗುಣಸಾಗರ | ಇಂದಿರೇಶ | Raghavendra Guna Sagara | Indiresha

Image
ಸಾಹಿತ್ಯ : ಶ್ರೀ ಇಂದಿರೇಶ ದಾಸರು  Kruti: Sri Indiresha Dasaru ರಾಘವೇಂದ್ರ ಗುಣಸಾಗರ ನೋಡೆನ್ನ | ಹರಿಯನು ತೋರಿನ್ನ ||ಪ|| ಮಂತ್ರಾಲಯದೊಳು ಮಂದಿರ ಮಾಡಿರುವಿ | ಮನೆ ಮನೆಯಲ್ಲಿರುವಿ ಸಂತತಿ ಸಂಪತ್ತುಗಳನು ನೀ ಕೊಡುವಿ | ಸಂತತ ರಕ್ಷಿಸುವಿ || ತಂತ್ರದೀಪಿಕೆ ಎಂಬ ಗ್ರಂಥವ ರಚಿಸಿರುವಿ ಸೂತ್ರಾರ್ಥಗಳರುಹಿ ||೧|| ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿ | ವೇದಾರ್ಥವ ನೋಡಿ | ಕೆಟ್ಟ ವಾದಿಗಳ ವಾದದಿ ಜಯ ಮಾಡಿ | ಸೂರಿಗಳನು ಕೂಡಿ || ಕುಷ್ಠರೋಗಗಳ ಹರಿಯನು ನೀ ಬೇಡಿ | ಕಳೆಯುವ ಗುರು ಮೇಧಿ ||೨|| ಒಂದು ಚರಿತೆಯ ಪೇಳಲು ನಾನರಿಯೆ | ಇರುವೆನು ಈ ಪರಿಯೇ | ನಂದ ಬಾಲನ ಪ್ರಿಯೆ ನೀ ಎನಗೊಲಿಯೇ | ದುರಿತಾರ್ತಿಗೆ ಸರಿಯೇ | ಇಂದಿರೇಶನ ಪಾದ ಸಂದರುಶನ ದೊರೆಯೇ | ನಿನ್ನನು ನಾ ಮರೆಯೇ ||೩|| rAGavEMdra guNasAgara nODenna | hariyanu tOrinna ||pa||   maMtrAlayadoLu maMdira mADiruvi | mane maneyalliruvi saMtati saMpattugaLanu nI koDuvi | saMtata rakShisuvi || taMtradIpike eMba graMthava racisiruvi sUtrArthagaLaruhi ||1||   eShTO graMthagaLa vyAKyAnava mADi | vEdArthava nODi | keTTa vAdigaLa vAdadi jaya mADi | sUrigaLanu kUDi || kuShTharOgagaLa hariyanu nI bEDi | kaLeyuva guru mEdhi ||2||   oMdu cariteya pELalu nAnar...

ಲಾಲಿ ಆಡಿದ ರಂಗ | ವಾದಿರಾಜರು | Laali Aadida Ranga | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಲಾಲಿ ಆಡಿದ ರಂಗ ಲಾಲಿ ಆಡಿದ ||ಪ|| ಬಾಲೆ ರುಕ್ಮಿಣಿ ದೇವರೊಡನೆ ಮೂರು ಲೋಕನಾಳ್ವ ದೊರೆಯು ||ಅಪ|| ಸಾಧು ಮಚ್ಛಪರೂಪನಾಗಿ ಭೇದಿಸಿ ತಮನ ಕೊಂದು ವೇದವನ್ನು ಮಗನಿಗಿತ್ತು ಭೂದೇವಿರೊಡನೆ ಕೃಷ್ಣ ||೧|| ಬೆಟ್ಟವನ್ನು ಬೆನ್ನಲಿಟ್ಟು ಮಿತ್ರೆ ಮೋಹಿನಿ ರೂಪತಾಳಿ ಭಕ್ತರಿಗೆ ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ ||೨|| ಕ್ರೋಡ ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದು ಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ ||೩|| ಪುಟ್ಟಬಾಲನ ನುಡಿಯಕೇಳಿ ಕೆಟ್ಟ ಕಶ್ಯಪನುದರ ಸೀಳಿ ಅಷ್ಟಮಂಗಳ ವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ ||೪|| ಯುಕುತಿಯಿಂದ ಭೂಮಿ ಅಳೆದು ಭಕುತ ಬಲಿಯ ತಲೆಯ ತುಳಿದು ಶಕುತನೆಂದು ಪೊಗಳೆ ಸುರರು ಲಕುಮಿಯೊಡನೆ ನಗುತ ಕೃಷ್ಣ ||೫|| ಯುದ್ಧದಲ್ಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದು ಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡ ಕೃಷ್ಣ ||೬|| ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದು ಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ ||೭|| ಒಂದುಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿ ಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು ||೮|| ಅಂಬರವ ತೊರೆದು ದಿಗಂಬರವ ವೇಷವನ್ನೆ ಧರಿಸಿ ಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ ||೯|| ಅಚ್ಚಮುತ್ತಿನಾಭರಣವಿಟ್ಟು ಲಕ್ಷ್ಯವಿಲ್ಲದೆ ಹಯವನೇರಿ ಭಕುತರಿಗೆ ಅಭಯಕೊಡುತ ಭಕ್ತವತ್...

ಶ್ರೀ ವಾದಿರಾಜರ ಜಯಂತಿ | ವಾದಿರಾಜ ಪಾಲಿಸು ಎನ್ನ | ಗುರು ಜಗನ್ನಾಥವಿಠಲ | Sri Vadiraja Jayanti |Vadiraja Palisu

Image
ಸಾಹಿತ್ಯ : ಗುರು ಜಗನ್ನಾಥ ದಾಸರು  Kruti: Guru Jagannatha Dasaru ವಾದಿರಾಜ ಪಾಲಿಸು ಎನ್ನ ||ಪ|| ವಾದಿರಾಜ ತವ ಪಾದ ಸರೋಜ  ಮೋದಪರಾಗುವ ಸಾದರ ನೀಡಿ ||ಅಪ|| ಮೋದ ತೀರ್ಥ ಸುಮ ತೋದದಿ ಚಂದಿರ ||  ಪಾದವ ನಂಬಿದೆ ನೀ ದಯದಲಿ ||೧|| ಆರ್ತ ಜನರ ಮನದಾರ್ಥಿಯ ಕಳೆದಿಹ ||  ವಾರ್ತದಿ ಬಂದವನಾರ್ಥಿಯ ಬಿಡಿಸೋ ||೨|| ಎಲ್ಲರಂತೆ ನೀನಲ್ಲವೋ ಜಗದೊಳು ||  ಬಲ್ಲಿದನೆಂಬೋದು ಬಲ್ಲೆ ಬಲ್ಲೆನು ||೩|| ಕರ್ತುಮಕರ್ತು ಸಮರ್ಥನೆ ಎನ್ನನು ||  ಮರೆತರೆ ಅನ್ಯ ಸಮರ್ಥರ ಕಾಣೆ ||೪|| ಕಾಮಧೇನು ಸಮ ಭೂಮಿಯ ತಳದಿ ||  ಕಾಮಿತ ನೀಡೈ ಸುರ ತರುವೆ ||೫|| ಮೋಕ್ಷ ಕರುಣ ಕಟಾಕ್ಷದಿ ಎನ್ನಾ ||  ವೀಕ್ಷಿಸಿ ಮನದಾಪೇಕ್ಷವ ಸಲ್ಲಿಸೋ ||೬|| ಯಾತಕೆ ಎನ್ನನು ಈತರ ಮಾಡಿದೆ ||  ನೀತ ಗುರು ಜಗನ್ನಾಥ ವಿಠಲ ದೂತ ||೭|| vAdirAja pAlisu enna ||pa|| vAdirAja tava pAda sarOja  mOdaparAguva sAdara nIDi ||apa|| mOda tIrtha suma tOdadi caMdira ||  pAdava naMbide nI dayadali ||1|| Arta janara manadArthiya kaLediha ||  vArtadi baMdavanArthiya biDisO ||2|| ellaraMte nInallavO jagadoLu ||  ballidaneMbOdu balle ballenu ||3|| kartumakartu samarthane ennanu ||  maretare anya samarthara kANe ||4|| kAmad...

ಶ್ರೀ ವಾದಿರಾಜರ ಸ್ತೋತ್ರ ಸುಳಾದಿ | ವಿಜಯವಿಠಲ | Vadirajara Stotra Suladi | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಧ್ರುವ ತಾಳ ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ ಸಾದರದಿಂದ ಭಜಿಸಿ ಮೇದಿನಿಗೆ ಭಾರವಾದ ಮಾಯಾವಾದಿಗಳ ಗೆದ್ದ ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ ಮಾಧವ ವೇದವೇದ್ಯ ವಿಜಯವಿಠಲ ತಾನು ಆದರದಿಂದವರ ಭುಜದಿ ಹಯವಕ್ತ್ರನಾಗಿ ಪಾದವನ್ನು ಇಟ್ಟು  ಸ್ವಾದುವಾದಕಡಲಿ ಹೂರಣವನು ಉಂಡ ಶ್ರೀಧರನ ಮಹಿಮೆ ಸಾಧುಜನರು ಕೇಳಿ ||೧|| ಮಟ್ಟತಾಳ ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ ಸಡಗರದ ಭಕ್ಷ್ಯ ಪಾಯಸ ಘೃತ ನೀಡೆ ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು ಕಡಗೋಲು ನೇಣು ಪಿಡಿದುಡುಪಿಲಿನಿಂದ ಉಡುರಾಜಮುಖ ನಮ್ಮ ವಿಜಯವಿಠ್ಠಲನು ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||೨|| ತ್ರಿವಿಡತಾಳ ತಾಮಸ ಗುಣವುಳ್ಳ ಪಾಮರ ಜನರಿಗೆ ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ ಧಾಮ ದೊರಿಯದು ಭೂಮಿಯೊಳಗಿದ್ದ ಭ್ರಾಮಕ ಜನರಿಗೆ ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ ಕಾಮಾರಿ ವಂದ್ಯ ನಮ್ಮ ವಿಜಯವಿಠಲನು ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ||೩|| ಅಟ್ಟತಾಳ ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿಗ್ವಿಜಯ ಮಾಡಲು ಪುರಕೆ ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು ಅಜನ ಪದಕೆ ಬಂದು ಅಖಿಳರನಾಳಿದಾ ನಿಜವಾಯು ಹನುಮ ಭೀಮ ಮಧ್ವನೆನಿಸಿದ ವಿಜಯಸಾರಥಿ...

ಮಧ್ವರಾಯ ಗುರು ಮಧ್ವರಾಯ | ಪುರಂದರ ವಿಠಲ | Madhwaraya Guru | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru ಮಧ್ವರಾಯ ಗುರು ಮಧ್ವರಾಯ ||ಪ|| ರಾಮಾವತಾರದೊಳೊಮ್ಮೆ ಮಧ್ವರಾಯ | ನೀ ಮಹಾ ಹನುಮನಾದ್ಯೋ ಮಧ್ವರಾಯ || ಕಾಮಿತಾರ್ಥ ಸುರರಿಗಿತ್ಯೋ ಮಧ್ವರಾಯಾ | ಅಯ್ಯಾ ಮುಷ್ಠಿಯಿಂದ ರಾವಣನ ಗೆದ್ಯೋ ಮಧ್ವರಾಯ ||೧|| ಕೃಷ್ಣಾವತಾರದೊಳೊಮ್ಮೆ ಮಧ್ವರಾಯ | ದಿಟ್ಟ ಕಲಿಭೀಮ ನಾದ್ಯೋ ಮಧ್ವರಾಯ | ಕುಟ್ಟಿದ್ಯೋ ಕೌರವರನೆಲ್ಲ ಮಧ್ವರಾಯ ಅಯ್ಯಾ ಶ್ರೀ ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||೨|| ಧರಣಿಯೊಳು ನರನಾಗಿ ಜನಿಸಿದ್ಯೋ ಮಧ್ವರಾಯ | ದುರುಳ ಮಾಯ ಮತವ ತರಿದ್ಯೋ ಮಧ್ವರಾಯ || ಗುರುವ್ಯಾಸರ ಹಿತವ ಪಡೆದ್ಯೋ ಮಧ್ವರಾಯ ಅಯ್ಯಾ | ಪುರಂದರ ವಿಠಲನ ದಾಸನಾದ್ಯೋ ಮಧ್ವರಾಯ ||೩|| madhvarAya guru madhvarAya ||pa||   rAmAvatAradoLomme madhvarAya | nI mahA hanumanAdyO madhvarAya || kAmitArtha surarigityO madhvarAyA | ayyA muShThiyiMda rAvaNana gedyO madhvarAya ||1||   kRuShNAvatAradoLomme madhvarAya | diTTa kaliBIma nAdyO madhvarAya | kuTTidyO kauravaranella madhvarAya ayyA SrI kRuShNana hitava paDedyO madhvarAya ||2||   dharaNiyoLu naranAgi janisidyO madhvarAya | duruLa mAya matava taridyO madhvarAya || guruvyAsara hitava paDedyO madhvarAya ayyA | puraMdara viTha...

ಶ್ರೀಮಧ್ವರಾಯರ ಸೇವೆ | ಪುರಂದರ ವಿಠಲ | Sri Madhwarayara Seve | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti: Sri Purandara dasaru  ಶ್ರೀಮಧ್ವರಾಯರ ಸೇವೆ ದೊರಕುವುದು  ಜನುಮ ಸಫಲ ಕಾಣಿರೋ ||ಪ|| ಶ್ರೀಮದಾನಂದ ತೀರ್ಥರ ಪಾದ  ನೆನೆವವರು ಸಾಮಾನ್ಯ  ನರರೇ ಕಾಣಿ ಬೊಮ್ಮನ ಆಣೆ ||ಅಪ|| ಜಗವು ಸತ್ಯವು ಅಲ್ಲ ಜಡಜೀವ ಬೇಧವಿಲ್ಲ  ಅಗುಣನು ಪರಬೊಮ್ಮನು ಹೀಗೆ ನುಡಿವ ಜನರ  ನಿಗಮ ಶಾಸ್ತ್ರದಿ ಗೆದ್ದು ಜಗಸತ್ಯ ಸುಗುಣ ಬ್ರಹ್ಮ ಎಂದು ಪೇಳುವ||೧|| ಹರಿ ಸರ್ವೋತ್ತಮ ನಿತ್ಯ ತರುವಾಯ ರಮಾದೇವಿ  ತರುವಾಯ ವಿಧಿಪ್ರಾಣರು ಸರಸ್ವತಿ ಭಾರತಿ ಗರುಡ ಅನಂತ ರುದ್ರ  ತರುವಾಯ ಆರು ರುದ್ರ ದೇವಿಗಳು ||೨|| ಸೌಪರ್ಣಿ ವಾರುಣಿ ಅಪರ್ಣಿಯರು ಸಮರು ದ್ಯುಪವಿ ಮನ್ವಾದಿಗಳು  ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ ಅಪವರ್ಗದವನ  ಸೇವೆಯ ಮಾಡಿರೋ ಎಂಬ ||೩|| ಒಂದೊಂದು ಯುಗದಲ್ಲಿ ಅನಂತ ಸೇವೆಯ ಮಾಡಿ  ಚಂದದಿಂದಲಿ ಲಾಲಿಸಿ ಇಂದಿರಾರಮಣ ಗೋವಿಂದನೆ  ದೈವವೆಂದು ಸಂದೇಹವಿಲ್ಲದೆ ಸಾಧಿಸಿ  ಮಾಯಿಗಳ ಸೋಲಿಸಿ ||೪|| ಹಿಮಗಿರಿಯಿಂದ ಸೇತುವೆಯ ಪರ್ಯಂತರ ಭ್ರಮಿಸುವ ಸುಜನರಿಗೆ ಕ್ರಮತತ್ವ ಬೋಧಿಸಿ ಕಮಲನಾಭನ  ಮೂರ್ತಿ ಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ ||೫|| ಭೂತಳದೊಳು ರೌಪ್ಯಪುರದಿ ನೆಲೆಸಿ  ಗೆದ್ದು ಧಾತ್ರಿ ಮುದ್ರೆಯ ತೋರಿಸಿ ಈತನೇ ಹನುಮಂತ, ಈತನೇ ಭೀಮಸೇನ  ಈತನೇ ಭವಿಷ್ಯದ ಬ್ರಹ್ಮ ದೇವೋತ್ತಮ ||೬|| ಶ್ರೀಮದಾನಂದನೇ ಅನಂತ ಕಾಲಕೆ ಎಂದು...

ಕನ್ನಡ ದ್ವಾದಶಸ್ತೋತ್ರ | ಬನ್ನಂಜೆಗೋವಿಂದಾಚಾರ್ಯ | ಪಾಲಿಸುವ ರಮೆಯರಸ | Dwadasha Stotra Palisuvarame | Bannanje

Image
ಶ್ರೀ ಮದಾನಂದತೀರ್ಥ ವಿರಚಿತ ದ್ವಾದಶ ಸ್ತೋತ್ರದ ಕನ್ನಡ ಅನುವಾದ  Kannada translation of Dwadasha Stotra by Srimad Ananda Teerthacharya ಕನ್ನಡ ಅನುವಾದ  : ಶ್ರೀ ಬನ್ನಂಜೆ ಗೋವಿಂದಾಚಾರ್ಯ  Kannada Translation : Sri Bannanje Govindacharya ಪಾಲಿಸುವ ರಮೆಯರಸ ಎಣೆಯಿರದ ದೈವತವು ಹಿರಿಯ ಪರಮೇಶ್ವರನು ನಾಲ್ಮೊಗನ ತಂದೆ ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೧|| ದೇವತೆಗಳೆರುಗುತಿಹ ಸಜ್ಜನರ ದೈವತವೆ ಎಲ್ಲ ಗುಣಗಳ ಗಡಣ ಮೈವೆತ್ತ ಮೂರ್ತಿ ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು  ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೨||   ಬಗೆಯೊಳಗೆ ಕವಿದಿರುವ ಎಲ್ಲ ಕತ್ತಲು ಕಳೆವೆ ಸಂತಸದ ಸೊದೆಗಡಲು ಅಚ್ಚರಿಯೊಳಚ್ಚರಿ ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೩|| ಮೂರುಲೋಕದ ಕಡಲು ಹಾಯಿಸುವ ಅಂಬಿಗನು ಎಲ್ಲರೆರಗಿದ ಪಾದ ದಿಕ್ಪತಿಗಳೊಡೆಯ  ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೪|| ಮೂರು ಗುಣಗಳ ದಾಟಿ ನಿಂತವನೆ ಎಲ್ಲವನು ಹೊತ್ತವನೆ ನೀಡು ನಿನ್ನ ಹಿರಿಯ ಚೆಲು ಭಕ್ತಿ ಬೇಡಿದ್ದು ನೀಡುವನು ತುಂಬು ಕರುಣೆಯ ಕಡಲು ನಿನ್ನ ಮಹಿಮೆಯ ತಿಳಿವ ನೀಡು ನನಗೆ ||೫|| ಕೊಲ್ಲುವನೆ ಉಳಿಸುವನೆ ಎಲ್ಲವನು ಸಲಹುವನೆ ಜಗದೀಶ್ವರನೆ ನೀಡು ನಿನ್ನ ಚೆಲು ಭಕ್ತಿ  ಬೇಡಿದ್ದ...

ನೆರೆನಂಬಿ ಪಡೆಯಿರೊ ಹಿತವ | ಹಯವದನ | Nerenambi Padeyiro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನೆರೆನಂಬಿ ಪಡೆಯಿರೊ ಹಿತವ ನಮ್ಮ ಗುರುಮಧ್ವಮುನಿಯ ಸಮ್ಮತವ ||ಪ|| ತ್ರೇತೆಯೊಳಂಜನೆ ತನಯನಾಗಿ ಸೀತಾರಮಣ ರಘುಪತಿಗತಿಪ್ರಿಯ ದೂತತನದಿ ಖಳತತಿಯ ಕೊಂದು ಖ್ಯಾತಿ ಪಡೆದ ಹನುಮನಾದ ಯತಿಯ ||೧|| ದ್ವಾಪರದಲಿ ಭೀಮನೆನಿಸಿ ಪಾಂಡು- ಭೂಪನರಸಿ ಕುಂತಿ ಉದರದಿ ಜನಿಸಿ ಶ್ರೀಪತಿಗರ್ಥಿಯ ಸಲಿಸಿ ದೈತ್ಯ- ರೂಪ ನೃಪನ ಕೊಂದ ಮುನಿಪನ ಭಜಿಸಿ ||೨|| ಕಲಿಯುಗದಲಿ ಯತಿಯಾಗಿ ಈ ಇಳೆಯ ದುಶ್ಯಾಸ್ತ್ರವ ಜರಿದವರಾಗಿ ಕುಲಗುರು ಮಧ್ವಪತಿಮುನಿಯೋಗಿ ನಮ್ಮ ಬಲು ಹಯವದನನ ಬಂಟನೆಂದು ಬಾಗಿ ||೩||   nerenaMbi paDeyiro hitava namma gurumadhwamuniya sammatava ||pa|| trEteyoLaMjane tanayanaagi sItaaramaNa raghupatigatipriya dootatanadi khaLatatiya koMdu khyaati paDeda hanumanaada yatiya ||1|| dwaaparadali bhImanenisi paaMDu- bhoopanarasi kuMti udaradi janisi shrIpatigarthiya salisi daitya- roopa nRupana koMda munipana bhajisi ||2|| kaliyugadali yatiyaagi I iLeya dushyaastrava jaridavaraagi kulaguru madhwapatimuniyOgi namma balu hayavadanana baMTaneMdu baagi ||3||    

ಸಾಗಿ ಬಾರೋ ಗುರು ರಾಘವೇಂದ್ರ | ಶ್ಯಾಮಸುಂದರ | Saagi Baaro Guru Raghavendra | Shyamasundara

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti: Sri Shyamasundara Dasaru ಸಾಗಿ ಬಾರೋ ಗುರು ರಾಘವೇಂದ್ರರಾಯ ವರಸತ್ಕವಿಗೇಯಾ ||ಪ|| ಕೂಗುತ ಕರೆಯುತ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ||ಅಪ|| ಪಾವನ ಘನ ವೃಂದಾವನ ಮಂದಿರನೇ ಸದ್ಗುಣ ಬಂಧುರನೇ ಪಾವಮಾನಿ ಮತ ಶರಧಿಗೆ ಚಂದಿರನೇ ದರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ ||೧|| ಶರಣು ಜನರು ಮೈ ಮರೆದು ಕರೆಯಲಾಗಿ ನಿಲ್ಲದೆ ವರಯೋಗಿ ಭರದಿ ಬಂದು ಕರ ಪಿಡಿಯುವ ದೊರೆ ನೀನು ಎಂದರಿತೆವು ಸುರಧೇನು ಕರುಣಾಕರ ಗತಿ ನಾಯಕ ನೀನೆಂದು ಭಜಿಪೆವು ದಯಾಸಿಂಧು ||೨|| ಶ್ಯಾಮಸುಂದರನ ಪ್ರೇಮ ಪಡೆದಾತ ಜಗದೊಳಗೆ ಪ್ರಖ್ಯಾತ ನಿಯಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ ||೩|| sAgi bArO guru rAGavEMdrarAya varasatkavigEyA ||pa|| kUguta kareyuta BAgavatara moreya lAlisO munivarya ||apa|| pAvana Gana vRuMdAvana maMdiranE sadguNa baMdhuranE pAvamAni mata Saradhige caMdiranE darasama kaMdaranE ChAvaNipura sujanAvaLi kOrikeya gareyalu SuBakAya ||1|| SaraNu janaru mai maredu kareyalAgi nillade varayOgi Baradi baMdu kara piDiyuva dore nInu eMdaritevu suradhEnu karuNAkara gati nAyaka nIneMdu Bajipevu dayAsiMdhu ||2|| SyAmasuMda...

ಬಾರೋ ಮುಂದಿರೋ | ಹಯವದನ | Baaro Mundiro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರೋ ಮುಂದಿರೋ ಪರನಾರಿಸಹೋದರ ಮಾರ ನಿನಗಾರ ಮುದ್ದತರ ವೀರಹನುಮ ||ಪ||  ಮರಗಳ ಮುರಿದೆ ಕರೆಕರೆದು ನೆರೆದಸುರರ ಶಿರಂಗಳ ತರಿದೆ ನಿನ್ನ ಸರಿಯಾರೋ ವೀರಹನುಮ ||೧|| ಕಂಡೆ ನಿನ್ನ ಬಲವ ಸುಪ್ರಚಂಡ ರಿಪುಕುಲವ ತುಂಡು ತುಂಡಿಕ್ಕಿ ಮೆರೆದೆ ಬಲುಗಂಡೆ ವೀರಹನುಮ ||೨|| ಎನ್ನೊಡೆಯ ಶ್ರೀಹಯವದನಗೆ ರನ್ನದ ಕನ್ನಡಿಯಂತೆ ಪ್ರ- ಸನ್ನ ಮೋಹದ ಬಾಳು ಬಾಳು ವೀರಹನುಮ ||೩|| baarO muMdirO paranaarisahOdara maara ninagaara muddatara vIrahanuma ||pa||  maragaLa muride karekaredu neredasurara shiraMgaLa taride ninna sariyaarO vIrahanuma ||1|| kaMDe ninna balava suprachaMDa ripukulava tuMDu tuMDikki merede balugaMDe vIrahanuma ||2|| ennoDeya shrIhayavadanage rannada kannaDiyaMte pra- sanna mOhada baaLu baaLu veerahanuma ||3||

ಚಿನ್ನದ ಚ್ಯಾವಡಿ ಮ್ಯಾಲ್ | ಭೀಮೇಶಕೃಷ್ಣ | Chinnada Chyavadi Myal | Bhimesha Krishna

Image
  ಸಾಹಿತ್ಯ : ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Sri Harapanahalli Bhimavva (Bhimesha Krishna) ಚಿನ್ನದ ಚ್ಯಾವಡಿ ಮ್ಯಾಲ್ ಪನ್ನಂಗ ಶಯನರು ಮಾನ್ಯ ಮಾನ್ಯರು ಮುಕ್ತರು || ಮಾನ್ಯ ಮಾನ್ಯರು ಮುಕ್ತರನ್ನೇ ನೋಡುತಲಿ, ಇನ್ಯಾರ ಭಯವು ನಮಗಿಲ್ಲ ||೧|| ಮುತ್ತಿನ ಚ್ಯಾವಣಿ ಮ್ಯಾಲ್ ಮುಕ್ತರನ್ನೇ ನೋಡುತ ಲಕ್ಷ್ಮಿನಾರಾಯಣರು ಕುಳಿತ್ಯಾರೆ || ಲಕ್ಷ್ಮೀನಾರಾಯಣರು ಕುಳಿತು ನೋಡುತಲಿರಲು, ಮತ್ಯಾರ ಭಯವು ನಮಗಿಲ್ಲ ||೨|| ಯಮ ಧರ್ಮರಾಯಗೆ ನಮೋ ನಮೋ ನಾನೆಂಬೆ, ಘನಗುಣ ಮಹಿಮಾ ನೀನೆಂದು || ಘನಗುಣ ಮಹಿಮಾ ನೀನೆಂದು ಸ್ತುತಿಪೆನು ಅನುಮಾನವೇಕೆ ಸಲಹೆನ್ನ ||೩|| ರಂಗಾರಂಗಾ ಎಂದು ರಂಗನ್ನ ನೆನೆದರೆ, ಹಿಂಗೋದು ಸಕಲ ದಾರಿದ್ರ್ಯ || ಹಿಂಗೋದು ಸಕಲ ದಾರಿದ್ರ್ಯ ಕಳೆವಂತೆ, ಮಂಗಳಾಂಗಿ ಶ್ರೀಮಹಾಲಕುಮಿ ||೪|| ಸಾಮಜ ವರದನು ಭೀಮೇಶ ಕೃಷ್ಣನು ಕಾಮಿತಾರ್ಥಗಳ ಕೊಡುವೋನು || ಕಾಮಿತಾರ್ಥಗಳ ಕೊಡುವಂಥ ಶ್ರೀ ಹರಿಯು ಪ್ರೇಮದಿ ಎನ್ನ ಸಲಹಲಿ ||೫|| cinnada cyAvaDi myAl pannaMga Sayanaru mAnya mAnyaru muktaru || mAnya mAnyaru muktarannE nODutali, inyAra Bayavu namagilla ||1||   muttina cyAvaNi myAl muktarannE nODuta lakShminArAyaNaru kuLityAre || lakShmInArAyaNaru kuLitu nODutaliralu, matyAra Bayavu namagilla ||2||   yama dharmarAyage namO namO ...

ತಂದು ತೋರೆ ಮಂದರಧರ | ಹಯವದನ | Tandu Tore Mandaradhara | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ತಂದು ತೋರೆ ಮಂದರಧರ ಮುಕುಂದ ಮುರಹರನ ||ಪ|| ಬೇಗದಿ ಪೋಗೆ ನೀ ಸಾಗರದೊಳಗೆ ಭೋಗಿ ಭೋಗದೊಳಿಪ್ಪ ಸೊಬಗುಮೂರುತಿಯ ||೧|| ಸಾರಿದ ಸುಜನರ ಸಲಹುವ ಧೀರನ ನೀರೆ ನಿಗಮಸ್ತೌತ್ಯ ನಿರ್ಮಲರೂಪನ ||೨|| ಮಂಗಳಮೂರುತಿ ಸಿರಿಹಯವದನನ ಸಂಗಿಸು ಎನ್ನೊಳು ಸಖಿ ಸುಖಮಯನ ||೩|| taMdu tOre maMdaradhara mukuMda muraharana ||pa|| bEgadi pOge nI saagaradoLage bhOgi bhOgadoLippa sobagumUrutiya ||1|| saarida sujanara salahuva dhIrana nIre nigamastoutya nirmalarUpana ||2|| maMgaLamooruti sirihayavadanana saMgisu ennoLu sakhi sukhamayana ||3||

ರಾಮಪದ ಸರಸೀರುಹ ಭೃಂಗ | ಹಯವದನ | Ramapada Sarasiruha Brunga | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ರಾಮಪದ ಸರಸೀರುಹ ಭೃಂಗ  ರೋಮಕೋಟಿ ಲಿಂಗ ಅಸುರಮದ ಭಂಗ ||ಪ|| ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆ ಕಂದುಗೊರಳನಭಜಕನಂದನನ ನೀ ಕೊಂದೆ ಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆ ಮಂದರಧರನ ಮುಂದೆ ಸುರ- ವೃಂದವರಿಯೆ ಪುರವ ಹೋಮಗೈದು ಬಂದೆ ||೧|| ಉರು ಗದೆಯಿಂದ ಕೌರವನ ತೊಡೆಗಳ ತರಿದೆ  ಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆ ದುರುಳ ದುಶ್ಯಾಸನನ ಕರುಳುಗಳನೆ ಹಿರಿದೆ ಕರವೆತ್ತಿ ಬಲವೆರಡ ಕರೆದೆ ಗುರುಮಧ್ವಮುನಿಯಾಗಿ ಶಾಸ್ತ್ರಗಳನೊರೆದೆ ||೨|| ಧರೆಯೊಳತ್ಯಧಿಕ ಸೋದೆಪುರ ನಿವಾಸ ಸಿರಿಹಯವದನನ ಪರಮಪ್ರಿಯ ದಾಸ ನೆರೆ ನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸ ಕರುಣವಾರಿಧಿ ಪುಣ್ಯವಾಸ ಜಗಕೆ ಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ ||೩||   raamapada sarasIruha bhRuMga  rOmakOTi liMga asuramada bhaMga ||pa|| oMdu nimiShake pOgi saMjIvanava taMde kaMdugoraLanabhajakanaMdanana nI koMde iMdrasoonuvina bhakutige rathaagradi niMde maMdaradharana muMde sura- vRuMdavariye purava hOmagaidu baMde ||1|| uru gadeyiMda kauravana toDegaLa taride  dhuradalli maagadhana marmasthaLa muride duruLa dushyaasanana karuLugaLane hiride karavetti balaver...

ಕೇಳಲೊಲ್ಲನೆ ಎನ್ನ ಮಾತನು ರಂಗ | ಹಯವದನ | Kelalollane Enna Matanu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕೇಳಲೊಲ್ಲನೆ ಎನ್ನ ಮಾತನು ರಂಗ ||ಪ|| ಕಾಳೀಮರ್ದನ ಕೃಷ್ಣಗೆ ಹೇಳೆ ಗೋಪ್ಯಮ್ಮ ಬುದ್ಧಿ ||ಅಪ|| ಬಿಟ್ಟ ಕಣ್ಣನು ಮುಚ್ಚಲೊಲ್ಲನೆ ದೊಡ್ಡ ಬೆಟ್ಟಕ್ಕೆ ಬೆನ್ನೊತ್ತಿ ನಿಂದನೆ ಬಲು ಸಿಟ್ಟಿಲಿ ಕೋರೆಹಲ್ಲ ಕಿರಿದನೆ ಈಗ ಗಟ್ಟಿ ಉಕ್ಕಿನ ಕಂಬವೊಡೆದು ಬಂದನೆ ರಂಗ ||೧|| ಮೂರಡಿ ಭೂಮಿಬೇಡಿ ಬಂದನೆ ತಾಯ- ಶಿರವ ಕಡಿಯಲಿಕೆ ಕೊಡಲಿ ತಂದನೆ ನಾರಸೀರೆಯನುಟ್ಟುಕೊಂಡನೆ ಬಲು ಚೋರತನದಲಿ ಹರವಿಹಾಲ ಕುಡಿದನೆ ರಂಗ ||೨|| ಬತ್ತಲೆ ನಾರಿಯರ ಅಪ್ಪಿದ ಹೋಗಿ ಉತ್ತಮ ಅಶ್ವವ ಹತ್ತಿದ ಹತ್ತವತಾರವ ತೋರಿದ ದಿಟ್ಟ ಮೂರ್ತಿ ನಮ್ಮ ಚೆಲವ ಶ್ರೀ ಹಯವದನ ||೩|| kELalollane enna maatanu raMga ||pa|| kaaLImardana kRuShNage hELe gOpyamma buddhi ||apa|| biTTa kaNNanu muchchalollane doDDa beTTakke bennotti niMdane balu siTTili kOrehalla kiridane Iga gaTTi ukkina kaMbavoDedu baMdane raMga ||1|| mUraDi bhUmibEDi baMdane taaya- shirava kaDiyalike koDali taMdane naarasIreyanuTTukoMDane balu chOratanadali haravihaala kuDidane raMga ||2|| battale naariyara appida hOgi uttama ashwava hattida hattavataarava tOrida diTTa moorti namma chelava shrI hayavadana ||3||

ಮನಸು ಕರಗದೇ ಸ್ವಾಮಿ | ಪ್ರಾಣೇಶ ವಿಠಲ | Manasu Karagade Swamy | Pranesha Vithala

Image
ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು  Kruti:Sri Pranesha Vithala Dasaru  ಮನಸು ಕರಗದೇ ಸ್ವಾಮಿ ದಯವು ಬಾರದೇ ||ಪ|| ದೀನನಾಗಿ ನಿನ್ನ ಪಾದ ನಂಬಿದೆನೋ ಕೃಪಾ ಸಿಂಧು ||ಅಪ|| ಒಡಲಿಗೋಸುಗವಾಗಿ ಪರರ ಅಡಿಗಳಿಗೆ ನಮಿಸಿ ಅವರ ಬಿಡುನುಡಿಗಳ ಕೇಳಲಾರೆ ಹೇಳಲಾರೆ ಹೇ ಮುರಾರೇ ||೧|| ಜನನಿ ಜನಕ ನೀನು ಎಂದು ನಿನ್ನ ನಂಬಿದೆ ದೀನ ಬಂಧು  ಎನ್ನ ಪಾಲಿಸೋ ಈಗ ಬಂದು ಮನ್ನಿಸಯ್ಯ ಕೃಪಾ ಸಿಂಧು ||೨||  ದಿನವು ಕಳೆದು ಹೋಯಿತಲ್ಲ ಪ್ರಾಣೇಶ ವಿಠಲ ಮನ್ನಿಸುವರು ಒಬ್ಬರಿಲ್ಲ ಕಾಯೋ ಬಾಲ ಗೋಪಾಲ ||೩|| manasu karagadE svaami dayavu baaradE ||pa|| dInanaagi ninna paada naMbidenO kRupaa siMdhu ||apa|| oDaligOsugavaagi parara aDigaLige namisi avara biDunuDigaLa kELalaare hELalaare hE muraarE ||1|| janani janaka nInu eMdu ninna naMbide dIna baMdhu  enna paalisO Iga baMdu mannisayya kRupaa siMdhu ||2||  dinavu kaLedu hOyitalla praaNEsha viThala mannisuvaru obbarilla kaayO baala gOpaala ||3||  

ಇಂಥ ಹೆಣ್ಣನ್ನು ನಾನೆಲ್ಲಿ ಕಾಣೆನೋ | ಪುರಂದರ ವಿಠಲ | Intha Hennannu Nanelli | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru ಇಂಥ ಹೆಣ್ಣನ್ನು ನಾನೆಲ್ಲಿ ಕಾಣೆನೋ ಹೊಂತಕಾರಿ ಕಾಣಿರೋ ||ಪ|| ಸಂತತ ಸುರರಿಗೆ ಪೀಯೂಷ ಉಣಿಸಿದ | ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅಪ|| ಮಂದರಗಿರಿ ತಂದು ಸಿಂಧುವಿನೊಳಿಟ್ಟು ಚಂದದಿ ಕಡೆದು ಅಮೃತವ ತೆಗೆದು  ಇಂದು ಮುಖಿ ನೀ ಬಡಿಸೆಂದು ಕೊಟ್ಟರೆ ದಂಧನಗಳ ಮಾಡಿ ದೈತ್ಯರ ವಂಚಿಸಿದ ||೧|| ವಿಶ್ವಾಸದಿಂದಲಿ ಅಸುರಗೆ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ | ನಸುನಗುತಲಿ ಬಂದು ಭಸ್ಮಾಸುರನಿಗೆ ಭೋಗ ದಾಸೆಯ ತೋರಿ ಭಸ್ಮವ ಮಾಡಿದ ||೨|| ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ ಬಸಿರಲಿ ಬ್ರಹ್ಮನ ಪಡೆದವಳಿವಳು || ಕುಸುಮನಾಭ ಶ್ರೀ ಪುರಂದರ ವಿಠಲನ ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆ ||೩|| iMtha heNNannu nAnelli kANenO hoMtakAri kANirO ||pa||   saMtata surarige pIyUSha uNisida | paMktiyoLage paravaMcane mADida ||apa||   maMdaragiri taMdu siMdhuvinoLiTTu caMdadi kaDedu amRutava tegedu  iMdu muKi nI baDiseMdu koTTare daMdhanagaLa mADi daityara vaMcisida ||1||   viSvAsadiMdali asurage varavittu triSUladhara ODi baLalutire | nasunagutali baMdu BasmAsuranige BOga dAseya tOri Basmava mADida ||2||   vasudheyoLage heNNu osageyAgada...

ದಾಸರೆಂದರೆ ಪುರಂದರ ದಾಸರಯ್ಯ | ಶ್ರೀ ವ್ಯಾಸರಾಜರು | Dasarendare Purandara Dasarayya | Sri Vyasarajaru

Image
ಸಾಹಿತ್ಯ :  ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ದಾಸರೆಂದರೆ ಪುರಂದರ ದಾಸರಯ್ಯ ||ಪ|| ವಾಸುದೇವ ಕೃಷ್ಣನ ಸೂಸಿ ಪೂಜಿಸುವ ||ಅಪ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು | ದಾಸನೆಂದು ತುಳಸಿ ಮಾಲೆ ಧರಿಸಿ || ಬೇಸರಿಲ್ಲದೆ ಅವರ ಕಾಡಿಬೇಡಿ ಬಳಲಿಸುತ | ಕಾಸುಗಳಿಸುವ ಪುರುಷ ಹರಿದಾಸನೇನೋ ||೧|| ಡಂಬಕದಿ ಹರಿ ಸ್ಮರಣೆ ಮಾಡಿ ಜನರ ಮುಂದೆ | ಸಂಭ್ರಮದಿ ತಾನುಂಬೋ ಊಟ ಬಯಸಿ || ಅಂಬುಜೋದ್ಭವ ಪಿತನ ಆಗಮಗಳರಿಯದೆಲೆ  ತಂಬೂರಿ ಮೀಟಿದವ ಹರಿದಾಸನೇನೋ ||೨|| ಯಾಯಿವಾರನೆ ಮಾಡಿ ವಿಪ್ರರಿಗೆ ಮೃಷ್ಟಾನ್ನ  ಪ್ರೀಯದಲಿ ತಾನೊಂದು ಕೊಡದ ಲೋಭಿ ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು | ಗಾಯನವ ಮಾಡಿದವ ಹರಿದಾಸನೇನೋ ||೩|| ಪಾಠಕನ ತೆರನಂತೆ ಪದಗಳ ತಾ ಬೊಗಳಿ | ಕೂಟ ಜನರ ಮನ ಸಂತೋಷ ಬಡಿಸಿ || ಗೂಟ ನಾಮಗಳಿಟ್ಟು ಕೊಟ್ಟರಿಯೇ ತಾನೆನುತ | ತಾಟತೂಟಕ ಮಾಡಿದವ ದಾಸನೇನೋ ||೪|| ನೀತಿಯಲ್ಲವ ನರಿತು ನಿಗಮ ವೇದ್ಯನ  ನಿತ್ಯವಾತಸುತ ನಲ್ಲಿಹನ ವರ್ಣಿಸುತಲಿ || ಗೀತ ನರ್ತನದಿ ಶ್ರೀ ಕೃಷ್ಣನ್ನ ಪೂಜಿಸುವ  ಪೂತಾತ್ಮ ಪುರಂದರ ದಾಸರಿವರಯ್ಯ ||೫|| dAsareMdare puraMdara dAsarayya ||pa|| vAsudEva kRuShNana sUsi pUjisuva ||apa||   grAsakillade pOgi parara manegaLa pokku | dAsaneMdu tuLasi mAle dharisi || bEsarillade avara kADibEDi baLa...

ಮುಸುರೆ ತೊಳೆಯಬೇಕು ಈ ಮನಸಿನ | ಪುರಂದರ ದಾಸರು | Musure Toleyabeku | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru ಮುಸುರೆ ತೊಳೆಯಬೇಕು ಈ ಮನಸಿನ ಮುಸುರೆ ತೊಳೆಯಬೇಕು ||ಪ|| ಮುಸುರೆ ತೊಳೆಯಬೇಕು ಗುಸುಗುಸು ಬಿಡಬೇಕು ಈಶ ಪ್ರೇರಣೆಯೆಂಬೊ ಹಸಿಯ ಹುಲ್ಲನು ಹಾಕಿ ||ಅಪ|| ಅಷ್ಟ ಮದದಿಂದ ಸುಟ್ಟ ಈ ಪಾತ್ರೆಯ  ವಿಷ್ಣುನಾಮವೆಂಬೊ ಕೃಷ್ಣಾ ನದಿಯಲ್ಲಿ ||೧|| ಕಾಮಕ್ರೋಧದಿಂದ ಬೆಂದ ಈ ಪಾತ್ರೆಯ ರಾಮಕೃಷ್ಣರೆಂಬೊ ಹೇಮಾನದಿಯಲ್ಲಿ ||೨|| ವಿಷವೆಂಬೊ ಪಾತ್ರೆಯ ಮುಸುರೆಯ ತೊಳೆದಿಟ್ಟು ಬಿಸಜಾಕ್ಷ ಪುರಂದರವಿಠಲಗರ್ಪಿಸೋ ನಿತ್ಯ ||೩|| musure toLeyabEku I manasina musure toLeyabEku ||pa|| musure toLeyabEku gusugusu biDabEku Isha prEraNeyeMbo hasiya hullanu haaki ||apa|| aShTa madadiMda suTTa I paatreya  viShNunaamaveMbo kRuShNaa nadiyalli ||1|| kaamakrOdhadiMda beMda I paatreya raamakRuShNareMbo hEmaanadiyalli ||2|| viShaveMbo paatreya musureya toLediTTu bisajaakSha puraMdaraviThalagarpisO nitya ||3||

ದಾಸರೇ ಗತಿಯು ನಮಗೆ ಪುರಂದರ | ಬಾದರಾಯಣ ವಿಠಲ | Dasare Gatiyu Namage | Badarayana Vithala

Image
ಸಾಹಿತ್ಯ : ಶ್ರೀ ಬಾದರಾಯಣ ವಿಠಲ ದಾಸರು  Kruti: Sri Badarayana Vithala Dasaru ದಾಸರೇ ಗತಿಯು ನಮಗೆ ಪುರಂದರ ದಾಸರೇ || ಪ || ಕಾಸು ವೀಸವು ಬೇಡದಂಥ ಸಿರಿ ಪುರಂದರ | ಅಪ || ನದಿಗಳಿಗೆ ಜಲಧಿಗತಿ ನರರಿಗೆ ಎಲ್ಲರ ಸುಗತಿ ಸುಧತಿಯರಿಗೆಲ್ಲಾ ನಿಜಪತಿಯೇ ಗತಿಯು ಸದಾಕಾಲ ಶಿಷ್ಯರಿಗೆ ಗುರು ಚರಣಗಳೇ ಗತಿಯು ಮುದದಿಂದ ಕರವೆತ್ತಿ ಕೂಗುವೆನು ಪುರಂದರ ಪುರಂದರ || ೧ || ತನಯರಿಗೆ ತಾಯಿ ಗತಿ ಸಸಿಗಳಿಗೆ ಮಳೆಯೆ ಗತಿ ವನದ ಲತೆಗಳಿಗೆಲ್ಲ ತರುವೇ ಗತಿಯು || ಮನೆಗೆ ಬಂದ ಅತಿಥಿಗಳಿಗೆ ಅನ್ನದಾನವೇ ಗತಿಯು ದಣಿದ್ಹಕ್ಕಿಗಳಿಗೆ ಗಿಡ ಗೋಪುರವೇ ಗತಿಯು ಪುರಂದರ || ೨ || ರಾಮ ಕಪಿಗಳಿಗೆಲ್ಲ ನಮ್ಮ ಹನುಮಪ್ಪ ಕಾಯ್ದಂತೆ ಸ್ವಾಮಿ ಸಿರಿ ಬಾದರಾಯಣ ವಿಠ್ಠಲನಾ ಶ್ರೀ ಮನೋಹರ ಚರಣ  ಸೇವಕರನುದ್ಧರಿಪ ಆ ಮಹಾ ನಾರದಾತ್ಮಕರಾದ ಪುರಂದರ ಪುರಂದರ || ೩ || dAsarE gatiyu namage puraMdara dAsarE || pa || kAsu vIsavu bEDadaMtha siri puraMdara | apa || nadigaLige jaladhigati nararige ellara sugati sudhatiyarigellA nijapatiyE gatiyu sadAkAla SiShyarige guru caraNagaLE gatiyu mudadiMda karavetti kUguvenu puraMdara puraMdara || 1 || tanayarige tAyi gati sasigaLige maLeye gati vanada lategaLigella taruvE gatiyu || manege baMda atithigaLige annadAnavE gatiyu da...

ಆದದ್ದೆಲ್ಲ ಒಳಿತೇ ಆಯಿತು | ಪುರಂದರವಿಠಲ | Adaddella Olite Ayitu | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು  Kruti: Sri Purandara dasaru ಆದದ್ದೆಲ್ಲ ಒಳಿತೇ ಆಯಿತು |ಪ| ನಮ್ಮ ಶ್ರೀಧರನ್ನ ಸೇವೆ ಮಾಡಲು ಸಾಧನ ಸಂಪತ್ತಾಯಿತು ||ಅಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ | ಮಂಡೆ ಬಾಗಿ ನಾಚುತ್ತಿದ್ದೆ || ಹೆಂಡತಿ ಸಂತತಿ ಸಾವಿರವಾಗಲಿ | ದಂಡಿಗೆ ಬೆತ್ತ ಹಿಡಿಸಿದಳಯ್ಯ ||೧|| ಗೋಪಾಳ ಬುಟ್ಟಿ ಹಿಡಿಯುವುದಕ್ಕೆ | ಭೂಪತಿಯಂತೆ ಗರ್ವಿಸುತ್ತಿದ್ದೆ || ಆ ಪತ್ನೀ ಕುಲ ಸಾವಿರವಾಗಲಿ | ಗೋಪಾಳ ಬುಟ್ಟಿ ಹಿಡಿಸಿದಳಯ್ಯ ||೨|| ತುಳಸೀ ಮಾಲೆ ಹಾಕುವುದಕ್ಕೆ | ಅರಸನಾಗಿ ನಾಚುತ್ತಿದ್ದೆ || ಸರಸೀಜಾಕ್ಷ ಪುರಂದರ ವಿಠಲನು | ತುಳಸೀ ಮಾಲೆ ಹಾಕಿಸಿದನು ||೩|| Adaddella oLitE Ayitu |pa| namma SrIdharanna sEve mADalu sAdhana saMpattAyitu ||apa||   daMDige betta hiDiyuvudakke | maMDe bAgi nAcuttidde || heMDati saMtati sAviravAgali | daMDige betta hiDisidaLayya ||1||   gOpALa buTTi hiDiyuvudakke | BUpatiyaMte garvisuttidde || A patnI kula sAviravAgali | gOpALa buTTi hiDisidaLayya ||2||   tuLasI mAle hAkuvudakke | arasanAgi nAcuttidde || sarasIjAkSha puraMdara viThalanu | tuLasI mAle hAkisidanu ||3||  

ವಂದಿಪೆ ಪುರಂದರ ದಾಸರ | ವೇಣುಗೋಪಾಲ ವಿಠಲ | Vandipe Purandara Dasara | Venugopala Vithala

Image
ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು Kruti:Sri Venu Goapala Vithala Dasaru ವಂದಿಪೆ ಪುರಂದರ ದಾಸರ ಪಾದ  ದ್ವಂದ್ವಕ್ಕೆ ನಾನು ನಿರಂತರ ||ಪ|| ಮಂದರೋದ್ಧಾರ ಗೋವಿಂದ ಮುಕುಂದನ  ಎಂದಿಗು ವಂದಿಸುತಿರುವರ ||ಅಪ|| ಒದಗಿದ ಜ್ಞಾನವನೋಡಿಸಿ ಮತ್ತೆ  ಸದಮಲ ಜ್ಞಾನವ ಪಾಲಿಸಿ  ಪದುಮನಾಭನ ಕಥೆ ಪೇಳಿಸಿ  ಸನ್ಮುದದಿ ಪಾಲಿಪರ ಧ್ಯಾನಿಸಿ ||೧|| ಮೊರೆ ಹೊಕ್ಕ ಸುಜನರಿಗಿಹಪರದ  ಸುಖತರಗಳನೊದಗಿಸಿ ಹರಿ ಪದದ  ಪರಮ ಭಕ್ತಿಯನೀವರೆಂದರಿದಾವಾಗ  ಸ್ಮರಿಸುವೆನಿವರಿಗೆ ಕರ ಮುಗಿದು || ೨ || ಅನಾಥ ಜನರನು ಮನ್ನಿಸಿ  ವೇಣುಗೋಪಾಲ ವಿಠಲನ ಕಾಣಿಸಿ ಜ್ಞಾನ ಭಕ್ತಿಯ ಪಥ ತೋರಿಸಿ ಕಾಯ್ವ  ಜ್ಞಾನಿಗಳರಸನ ತುತಿಸಿ ತುತಿಸಿ || ೩ || vaMdipe puraMdara dAsara pAda  dvaMdvakke nAnu niraMtara ||pa|| maMdarOddhAra gOviMda mukuMdana  eMdigu vaMdisutiruvara ||apa|| odagida jnAnavanODisi matte  sadamala jnAnava pAlisi  padumanABana kathe pELisi  sanmudadi pAlipara dhyAnisi ||1|| more hokka sujanarigihaparada  suKataragaLanodagisi hari padada  parama BaktiyanIvareMdaridAvAga  smarisuvenivarige kara mugidu || 2 || anaatha janaranu mannisi  vENu...

ಆನಂದ ಆನಂದ ಮತ್ತೆ ಪರಮಾನಂದ | ವಿಜಯ ವಿಠಲ | Ananda Ananda | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಆನಂದ ಆನಂದ ಮತ್ತೆ ಪರಮಾನಂದ | ಆನಂದ ಆನಂದ ಆನಂದ ಆನಂದ ||ಪ|| ಆನಂದ ನಂದನನೊಲಿಯೆ ಏನಂದದ್ದೆ ವೇದ ವೃಂದ ||ಅಪ|| ಅ ಮೊದಲು ಕ್ಷಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ ||೧|| ಪೋಪುದು ಬರುತಿಪ್ಪುದು ಕೋಪ ಶಾಂತಿ ಮಾಡುವುದು | ರೂಪ ಲಾವಣ್ಯವು ಹರಿ ವ್ಯಾಪಾರವೆಂದರಿತವರಿಗೆ ||೨|| ಜಲಕಾಷ್ಠ ಶೈಲ ಗಗನ ನೆಲಪಾವಕ ವಾಯುತರು | ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವರಿಗೆ ||೩|| ತಾರೋ ಬಾರೋ ಬೀರೋ ಸಾರೋ ಮಾರೋ ತೋರೋ ಹೋರೋ | ಸೇರೊ ಕೋರೋದೆಂಬ ಈಶ ಪ್ರೇರಣೆ ಎಂದವಗೆ ||೪|| ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣನ ದರುಶನ | ಸಿದ್ಧ ವಿಜಯ ವಿಠಲನ್ನ ಪೊಂದಿ ಕೊಂಡಾಡುವವರಿಗೆ ||೫|| AnaMda AnaMda matte paramAnaMda | AnaMda AnaMda AnaMda AnaMda ||pa|| AnaMda naMdananoliye EnaMdadde vEda vRuMda ||apa|| a modalu kShakArAMta I mahA varNagaLella svAmiyAda viShNuvina nAmaveMdu tiLidavage ||1|| pOpudu barutippudu kOpa SAMti mADuvudu | rUpa lAvaNyavu hari vyApAraveMdaritavarige ||2|| jalakAShTha Saila gagana nelapAvaka vAyutaru | PalapuShpa baLLili hari oLage vyAptaneMdavarige ||3|| tArO bArO bIrO sArO mArO tOrO hOrO | sEro kOrOdeMb...

ಎಲ್ಲ ಲೀಲೆ ಇದೆಲ್ಲ ಲೀಲೆ | ಹಯವದನ | Ella Leele idella Leele | Hayavadana | Devaranama

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಲ್ಲ ಲೀಲೆ ಇದೆಲ್ಲ ಲೀಲೆ ಎಲ್ಲ ಲೀಲೆ ರಂಗಗೆಲ್ಲ ಲೀಲೆ ||ಪ|| ಪುಟ್ಟಿಸುವುದು ಮನವಿಟ್ಟು ಕಾವುದು ದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ ||೧|| ನೀರೊಳುಲ್ಲಾಸ ಮತ್ತಾರಣ್ಯವಾಸ ಹಾರುವರಾಟ ತನ್ನ ನಾರಿಯ ಭೇಟ ||೨|| ಗೊಲ್ಲರಾಕೃತಿ ಬತ್ತಲೆಯ ಸ್ಥಿತಿ  ಬಲ್ಲಿದ ದೈವ ಕಲಿಯ ಗೆಲ್ಲುವ ಭಾವ ||೩|| ವರನಿಪ್ಪುದು ಕರೆದರೆ ಬಪ್ಪುದು ಧರೆಯಜನುಮ ಪರಿಪರಿಯ ಕರ್ಮ ||೪|| ಹೆಂಗಳಕೂಟ ಅಪಾಂಗದ ನೋಟ ಹಾಸ್ಯ- ದಂಗದಿಂದೂಟ ರಣರಂಗದಿಂದೋಟ ||೫|| ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ- ಯಂಬಕ ಪೂಜೆ ತ್ರಿವಿಡಂಬನವೋಜೆ ||೬|| ಕರ್ತುಂ ಅಕರ್ತುಂ ಮತ್ತನ್ಯಥಾಕರ್ತುಂ ಎಂಬ ಶಕ್ತಿದೇವಗೆ ಬಲುಯುಕ್ತಿ ಇವಗೆ ||೭|| ನಾವೆಕರ್ತವ್ಯಂ ಸುಪ್ರವೆವಕ್ತವ್ಯಂ ಏಸು ಮಹಿಮೆಗೆ ಕೃತಕೃತ್ಯ ನಮಗೆ ||೮|| ಪ್ರಿಯಮೋದನ ದೈತೇಯಭೇದನ ಹಯವದನ ನಿನ್ನರ್ಥಿ ಕಾಯಿದನ ||೯|| ella lIle idella lIle ella lIle raMgagella lIle ||pa|| puTTisuvudu manaviTTu kaavudu duShTara shikShe alli vishiShTara rakShe ||1|| nIroLullaasa mattaaraNyavaasa haaruvaraaTa tanna naariya bhETa ||2|| gollaraakRuti battaleya sthiti  ballida daiva kaliya gelluva bhaava ||3|| varanippudu karedare bappudu dhareyajanuma paripariya karma ...

ಯದುಪತಿಯ ತೋರಮ್ಮಾ | ಹಯವದನ | Yadupatiya Toramma | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮ ಯದೆಯೊಳು ನಿನ್ನ ನಿಲಿಸಿಕೊಂಡನಾ  ಖಳಕುಲಖಂಡನಾ ನಿನ್ನಯ ಗಂಡನಾ ||ಪ|| ಸರಸೀಹ ದಳನೇತ್ರೇ ಸದಮಲ ಶುಭಗಾತ್ರೇ ಸರಸಾದಿ ನಿನ್ನ ಕೂಡ ಮಾತನಾಡುವ  ಭಕ್ತರೊಡನಾಡುವ ಕರುಣಾದಿ ನೋಡುವ ||೧|| ಮದಗಜ ಸಮಯಾತ್ರೆ ಮೇದಿನಿಯೊಳತಿಚಿತ್ರೆ ಅದುಭೂತ ಪ್ರಳಯಾಬ್ಧಿಯೊಳಿಪ್ಪನ  ನಿನಗೊಲಿದಿಪ್ಪನ ಮನುಮಥನಪ್ಪನ ||೨|| ಆದ್ಯಂತಾ ಮಧ್ಯರಹಿತೆ ಅಜಭವಸುರಮಾತೆ ಮುದ್ದು ಹಯವದನನಾ ಶ್ರೀಧರೇಶನಾ ಸ್ವಾದಿಪುರವಾಸನ ವಾದಿರಾಜಾಧೀಶನ ||೩||  yadupatiya tOrammaa yenna nI biDadiramma yadeyoLu ninna nilisikoMDanaa  khaLakulakhaMDanaa ninnaya gaMDanaa ||pa|| sarasIha daLanEtrE sadamala shubhagaatrE sarasaadi ninna kUDa maatanaaDuva  bhaktaroDanaaDuva karuNaadi nODuva ||1|| madagaja samayaatre mEdiniyoLatichitre adubhUta praLayaabdhiyoLippana  ninagolidippana manumathanappana ||2|| aadyaMtaa madhyarahite ajabhavasuramaate muddu hayavadananaa shrIdharEshanaa swAdipuravaasana vaadiraajaadhIshana ||3|| 

ಗೋಪಾಲದಾಸರಾಯ ಮಾಂಪಾಲಯ | ಕಾರ್ಪರ ನರಹರಿ | Gopaladasaraya Maampaalaya | Karpara Narahari

Image
ಸಾಹಿತ್ಯ : ಶ್ರೀ ಕಾರ್ಪರ ನರಹರಿ ದಾಸರು Kruti:Sri Karpara Narahari Dasaru ಗೋಪಾಲದಾಸರಾಯ ಮಾಂಪಾಲಯ ||ಪ|| ಗೋಪಾಲದಾಸರಾಯಾ ಅಪಾರ ಮಹಿಮ  ಮತ್ಪಾಪಗಳೋಡಿಸಿ ಕಾಪಾಡೊ ಗುರುರಾಜ ||ಅಪ|| ಗಜಮುಖ ನಮಿಸುವೆ ಸುಜನ ಪಾಲಕ ಶ್ರೀಮದ್ | ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತರಿ ಜಪದಿ ಜಗನ್ನಾಥದಾಸರ| ಬನ್ನವ ಬಿಡಿಸಿದ ಘನ್ನ ಮಹಿಮಗುರು ||೨|| ಏನು ಕರುಣವೋ ಶ್ರೀ ಮಾನವಿ ದಾಸರಿಗೆ| ಸಾನುರಾಗದಿ ಆಯುರ್ದಾನವ ಮಾಡಿದ ||೩|| ಪದುಮನಾಭನ ಪದಪದುಮ ಮಹಿಮೆಗಳ| ವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪|| ಶರಣು ಜನಕೆ ಸುರತರುವೆನಿಸಿ ಧರೆಯೊಳು | ಮೆರೆವ ಕಾರ್ಪರ ನರಹರಿಯನೊಲಿಸಿದಂಥ ||೫||  gOpaaladaasaraaya maaMpaalaya ||pa|| gOpaaladaasaraayaa apaara mahima  matpaapagaLODisi kaapaaDo gururaaja ||apa|| gajamuKa namisuve sujana paalaka shrImad | vijayadaasarige nija shiShyarenisida ||1|| dhanvaMtari japadi jagannaathadaasara| bannava biDisida ghanna mahimaguru ||2|| Enu karuNavO shrI maanavi daasarige| saanuraagadi Ayurdaanava maaDida ||3|| padumanaabhana padapaduma mahimegaLa| vidha vidha padasuLaadigaLiMda tutisida ||4|| sharaNu janake surataruvenisi dhareyoLu | mereva kaarpara narahariya...

ದಯವಿರಲಿ ದಯವಿರಲಿ ದಾಮೋದರಾ | ಗೋಪಾಲ ದಾಸರು | Dayavirali Dayavirali Damodara | Goapala Dasaru

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ದಯವಿರಲಿ ದಯವಿರಲಿ ದಾಮೋದರಾ ||ಪ|| ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆ ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧|| ಬಂದೆನೊ ನಾನಿಲ್ಲಿ ಬಹುಜನ್ಮದಾ ಸುಕೃತದಿಂದ ನಿನ್ನ ಬಳಿಗೆ ಇಂದಿರೇಶಾ ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ ಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨|| ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂ ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ ಕೊಡೊ ಸ್ವಾಮಿ ಚಿನುಮಯ ಮೂರುತಿ ಗೋಪಾಲವಿಠಲ ಘನ ಮಹಿಮ ಮಧ್ವಮುನಿ ಮನ ಮಂದಿರವಾಸ ||೩|| dayavirali dayavirali daamOdarA ||pa|| sayavaagi biDadennaa saakuva shrIkRuShNaa ||apa|| hOguvaa haadiyali hOda haaMgella naa saaguvava naanalla ninna smaraNeya biTTu tUguva toTTilu konege sthaLadallE niluvaMte hyaaMge naDesuvi haaMge naDakoMbe swaami ||1|| baMdeno naanilli bahujanmadaa sukRutadiMda ninna baLige iMdirEshaa oMdu maatravu biTTu sakalavu arpiside baMdhanava kaDiva j~jaana bhakuti koDo swaami ||2|| enagyaavudoo oll...

ಗೋಪಾಲದಾಸರಾಯ | ಜಗನ್ನಾಥವಿಠಲ | Gopaladasaraya | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನೋ ನಿಶ್ಚಯ ||ಪ|| ಈ ಪೀಡಿಸುವ ತ್ರಯತಾಪಗಳೋಡಿಸಿ  ಕೈ ಪಿಡಿದೆನ್ನ ಕಾಪಾಡಿದ ಗುರುರಾಯ ||ಅಪ|| ಘೋರವ್ಯಾಧಿಯನೇ ನೋಡಿ ವಿಜಯರಾಯ ಭೂರಿ ಕರುಣವ ಮಾಡಿ ತೋರಿದರಿವರೇ ಉದ್ಧಾರಕರೆಂದಂದಿನಾರಭ್ಯ ತವಪಾದ ಸಾರಿದೆ ಸಲಹೆಂದು ಸೂರಿ ಜನಸಂಪ್ರಿಯ ಸುಗುಣೋದಾರ ದುರುಳನ ದೋಷನಿಚಯವ ದೂರಗೈಸಿ ದಯಾಂಬುನಿಧೆ ನಿವಾರಿಸದೆ ಕರಪಿಡಿದು ಕರುಣದಿ ||೧|| ಅಪಮೃತ್ಯುವನು ತರಿದೆ ಎನ್ನೊಳಗಿದ್ದ ಅಪರಾಧಗಳ ಮರೆದೆ ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು ನಿಪುಣನೆಂದೆನಿಸಿದಿ ತಪಸಿಗಳಿಂದಲಿ ಕೃಪಣವತ್ಸಲ ನಿನ್ನ ಕರುಣೆಗೆ ಉಪಮೆಗಾಣೆನೊ ಸಂತತವು  ಕಾಶ್ಯಪಿಯೊಳಗೆ ಬುಧರಿಂದ ಜಗದಾಧಿಪ ಕಿಂಕರನೆನಿಸಿ ಮೆರೆಯುವ ||೨|| ಎನ್ನ ಪಾಲಿಸಿದಂದದಿ ಸಕಲಪ್ರಪನ್ನರ ಸಲಹೋ ಮೋದಿ ಅನ್ಯರಿಗೀಪರಿ ಬಿನ್ನಪಗೈಯೆ ಜಗನ್ನಾಥವಿಠಲನ ಸನ್ನುತಿಸುವ ಧೀರ ನಿನ್ನ ನಂಬಿದ ಜನರಿಗೆಲ್ಲಿಯ ಬನ್ನವೋ ಭಕ್ತಾನುಕಂಪಿ  ಶರಣ್ಯ ಬಂದೆನೋ ಈ ಸಮಯದಿ ಅಹರ್ನಿಶಿ ಧ್ಯಾನಿಸುವೆ ನಿನ್ನನು ||೩|| gOpaaladaasaraaya ninnaya paada naa poMdidenO nishcaya ||pa|| I pIDisuva trayataapagaLODisi  kai piDidenna kaapaaDida gururaaya ||apa|| GOravyaadhiyanE nODi vijayaraaya bhUri karuNava maaDi tOridar...

ಬಾಗಿ ಬೇಡುವೆ ಪಿಡಿಯೊ | ಶ್ಯಾಮಸುಂದರ ರಾಣಿ | Baagi Beduve Pidiyo | Shyamasundara Dasaru

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು (ಶ್ಯಾಮಸುಂದರ ರಾಣಿ) Kruti: Sri Shyamasundara Dasaru (Shyamasundara Rani) ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯ  ಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ ||ಪ|| ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜನೆಂದೆನಿಪ ವಿಜಯವಿಠಲದಾಸರೊಲಿಮೆ ಪಾತ್ರ ನಿಜಮನದಿ ನಿತ್ಯದಲಿ ಭುಜಗ ಶಯನನ ಪಾದ ಭಜಿಪ ಭಾಗ್ಯವನಲಿವ ಸುಜನರೊಳು ಇಡು ಎಂದು ||೧|| ನೀನೇವೆ ಗತಿ ಎಂದ ದೀನರಿಗೆ ನಾನೆಂಬ ಹೀನಮತಿ ಕಳೆದು ಪವಮಾನ ಪಿತನ ಧ್ಯಾನಗೈಯ್ಯುವ ದಿವ್ಯ ಜ್ಞಾನ ಮಾರ್ಗವ ತೋರಿ ಸಾನುರಾಗದಿ ಪೊರೆವ ದಾನಿ ದಯವಾರಿಧಿಯೇ ||೨|| ಮಂದಜನ ಸಂದೋಹ ಮಂದಾರತರು ವಿಜಿತ ಕಂದರ್ಪ ಕಾರುಣ್ಯ ಸಿಂಧು ಬಂಧು ಕಂದನೆಂದರಿದೆನ್ನ ಕುಂದು ಎಣಿಸದೆ ಹೃದಯ ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು ||೩|| baagi bEDuve piDiyo bEga kaiyya  bhaagavata janapriya bhaagaNNa daasaarya ||pa|| dwijakulaabdhige pUrNa dwijaraajaneMdenipa vijayaviThaladaasarolime paatra nijamanadi nityadali bhujaga shayanana paada bhajipa bhaagyavanaliva sujanaroLu iDu eMdu ||1|| nInEve gati eMda dInarige naaneMba heenamati kaLedu pavamaana pitana dhyaanagaiyyuva divya j~jaana maargava tOri saanuraagadi poreva daani dayavaaridhiyE ||2|| maMdajana saMdOha maMdaa...

ಯಾರೇನೆಂದರೋ ರಂಗಯ್ಯ | ಪುರಂದರ ವಿಠಲ | Yaarenendaro Rangayya | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಯಾರೇನೆಂದರೋ ರಂಗಯ್ಯ ನಿನ್ನ ಯಾರೇನೆಂದರೋ ಕೃಷ್ಣಯ್ಯ ||ಪ|| ಸಕಲ ಭಾಗವತರು ಗತಿ ತಾಳಮೇಳದಿಂದ  ತಕಕಿಟ ಕಿಟತಕ ಧಿಮಿಕೆಂದು ಕುಣಿವಾಗ ರಂಗಯ್ಯ ||ಅಪ|| ಸಕ್ಕರೆ ಚೀಣಿ ಹಾಲಿನ ಕೆನೆರಸದಿಂದ ಉಕ್ಕುವ  ನೊರೆ ಹಾಲನು ಮೆದ್ದ ರಂಗಯ್ಯ ||೧|| ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ  ಕೃಪೆಯಿಂದ ಅಕ್ಷಯವಿತ್ತ ದೇವನೆ ನಿನ್ನ ||೨|| ಜಗದೊಡೆಯ ಮೂಡಲ ಕೋನೇರಿ ತಿಮ್ಮ  ಅಗಣಿತ ಮಹಿಮ ಶ್ರೀ ಪುರಂದರ ವಿಠಲ ನಿನ್ನ ||೩|| yArEneMdarO raMgayya ninna yArEneMdarO kRuShNayya ||pa|| sakala BAgavataru gati tALamELadiMda  takakiTa kiTataka dhimikeMdu kuNivAga raMgayya ||apa|| sakkare cINi hAlina kenerasadiMda ukkuva  nore hAlanu medda raMgayya ||1|| drupadana magaLa sIreya sutti seLevAga  kRupeyiMda akShayavitta dEvane ninna ||2|| jagadoDeya mUDala kOnEri timma  agaNita mahima SrI puraMdara viThala ninna ||3||

ಫಲಹಾರವ ಮಾಡೊ ಪರಮಪುರುಷನೆ | ಹಯವದನ | Phalahaarava Maado | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಫಲಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ||ಪ|| ಕದಳಿ ಕಾಮಾರೆ ಖರ್ಜೂರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿಫಲಗಳು ||೧|| ಉತ್ತುತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬುಜಂಬುನೇರಳೆಹಣ್ಣು ಒತ್ತಿದಬೇಳೆ ನೆನೆಗಡಲೆ ಕರ್ಬುಜೀಹಣ್ಣು ||೨|| ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ ||೩|| phalahaarava maaDo paramapuruShane lalane lakumiya karakaMjadiMda ||pa|| kadaLi kaamaare kharjUra kittaLe kaMchi badari beLalu bikke halasu draakShigaLu madhuramaavu maadaLa teMginakaayi tudimodalaada paripariphalagaLu ||1|| uttutte jEnu aMjUra sEbu dALiMbe mattaada tumare paragi kAre kavaLi kattarisida kabbujaMbunEraLehaNNu ottidabELe nenegaDale karbujIhaNNu ||2|| haalu sakkare beNNe tuppa sIkaraNeyu saalurasaayana saviyeLanIru mUlOkadoDeya hayavadana veMkaTarEya paaliso lakumiya karakaMjadiMda ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru