ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಯಾತಕಯ್ಯ ತೀರ್ಥಕ್ಷೇತ್ರಗಳು | ಶ್ರೀ ವಾದಿರಾಜರ ಕೃತಿ | Yatakayya Teertha Kshetragalu | Sri Vadirajara Kruti


ರಚನೆ : ಶ್ರೀ ಭಾವೀ ಸಮೀರ ಶ್ರೀ ವಾದಿರಾಜರು (ಹಯವದನ)
Kruthi: Bhavisameera Sri Vadirajaru (Hayavadana)


ಯಾತಕಯ್ಯ ತೀರ್ಥಕ್ಷೇತ್ರಗಳು
ಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ||

ಅಮೃತವ ಕೊಡುವ ಹರುಷದೊಳಿರ್ದ
ಕಮಲೆಯರಸನಕ್ಷಿಗಳಿಂದ
ಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧಿಯೊಳು
ಆ ಮಹಾತುಲಸಿ ಅಂದುದಿಸಿದಳು      ||೧||

ಪರಿಮಳಿಸುವ ಮಾಲೆಯ ನೆವದಿ 
ಹರಿಯುದರದಲ್ಲಿ ಸಿರಿಯೊಲಿಹಳು
ತರುಣಿ ತುಲಸಿ ತಪ್ಪದೆಯವನ
ಚರಣವ ರಮೆ ಭಜಿಸೆ ಭಜಿಪಳು  ||೨||

ಪೂಜಿಸುವರ ಶಿರದಿ ನಿರ್ಮಾಲ್ಯಗಳ
ವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳು
ಈ ಜಗದೊಳು ತಾವಿಬ್ಬರಿದ್ದಲ್ಲಿ
ಆ ಜನಾರ್ದನನಾಕ್ಷಣ ತಹಳು      ||೩||

ಒಂದು ಪ್ರದಕ್ಷಿಣವನು ಮಾಡಿದವರ
ಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯ
ಎಂದೆಂದಿವಳ ಸೇವಿಸುವ ನರರಿಗೆ
ಇಂದಿರೆಯರಸ ಕೈವಲ್ಯವೀವ          ||೪||

ತುಲಸಿಯ ನೆಟ್ಟವನು ಮತ್ತೆ ತನಗೆ
ಇಳೆಯೊಳು ಪುಟ್ಟುವ ವಾರ್ತೆಯ ಕಳೆವ
ಜಲವೆರೆದು ಬೆಳೆಸಿದ ಮನುಜರ
ಕುಲದವರ ಬೆಳೆಸು ವೈಕುಂಠದಲ್ಲಿ   ||೫||

ತುಲಸಿಯೆ ನಿನ್ನ ಪೋಲುವರಾರು
ಮೂಲದಲ್ಲಿ ಸರ್ವತೀರ್ಥಂಗಳಿಹವು
ದಳದಲ್ಲಿ ದೇವರ್ಕಳ ಸನ್ನಿಧಾನ
ಚೆಲುವಾಗ್ರದಿ ಸಕಲ ವೇದಗಳು       ||೬||

ತುಲಸಿ ಮಂಜರಿಯೆ ಬೇಕಚ್ಯುತಂಗೆ
ದಳಮಾತ್ರ ದೊರಕಲು ಸಾಕವಗೆ
ಸಲುವುದು ಕಾಷ್ಠಮೂಲ ಮೃತ್ತಿಕೆಯು
ಫಲವೀವನಿವಳ ಪೆಸರ್ಗೊಳಲು        ||೭||

ಕೊರಳಲ್ಲಿ ಸರ ಜಪಸರಗಳನ್ನು
ವರ ತುಲಸಿಯ ಮಣಿಯಿಂದ ಮಾಡಿ
ಗುರುಮಂತ್ರವ ಜಪಿಸುವ ನರರು
ಹರಿಶರಣರ ಕಲೆಗೆ ಸಾರುವರು      ||೮||

ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ -
ವಲ್ಲಭನು ಸರ್ವಸನ್ನಿಹಿತನಾಗಿ
ನೆಲೆಸಿಹನಿವಳೆಸಳೊಂದಿಲ್ಲದಿರೆ
ಸಲ್ಲದವಂಗನ್ಯಕುಸುಮದ ಪೂಜೆ       ||೯||

ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆ
ಎಲ್ಲಿ ಪೋಪುದು ದೇಶದೇಶಂಗಳಿಗೆ
ನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯ
ಅಲ್ಲೀಗಲು ನಮ್ಮ ಬನದಲೊಪ್ಪಿಹಳು     ||೧೦||

ಹರಿಪಾದಕೆ ಶ್ರೀ ತುಲಸಿಯೇರಿಸಿದ
ನರರನು ಪರಮಪದಕೇರಿಸುವುದು
ನಿರುತದಿ ತುಲಸಿಯ ಕಂಡರವಗೆ
ನರಕಗಳ ದರುಶನ ಮತ್ತಿಲ್ಲ       ||೧೧||

ಧನ್ಯ ತುಲಸಿಯ ದಳವಿಟ್ಟು ತೂಗೆ
ಮುನ್ನ ಕೃಷ್ಣಗೆ ಪಡಿ ಆಯಿತು ಗಡ
ಇನ್ನಿವಳ ವೃಂದಾನದಲ್ಲಿ ನಟ್ಟು
ಮನೆ ಮನೆ ಮನ್ನಿಸದವನ್ಯಾವ        ||೧೨||

ಕನಸಿನಲಿ ಕಂಡಂತೆ ಇನ್ನೊಂದು
ಕೊನೆವೆರಸಿದ ಪುಷ್ಪದಿ ಜಪಿಸಿ
ಅನುದಿನ ಹಯವದನನ್ನ ತೀರ್ಥ-
ವನು ಕೊಂಡು ನಾ ಧನ್ಯನಾದೆನು       ||೧೩||

yaatakayya tIrthakShEtragaLu
SrI tulasiya sEvipa sujanarige ||pa||

amRutava koDuva haruShadoLirda
kamaleyarasanakShigaLiMda
pramOdaashru suriye kShIraabdhiyoLu
A mahaatulasi aMdudisidaLu      ||1||

parimaLisuva maaleya nevadi 
hariyudaradalli siriyolihaLu
taruNi tulasi tappadeyavana
caraNava rame bhajise bhajipaLu  ||2||

pUjisuvara Siradi nirmaalyagaLa
vyaajadiMda lakShmiya kUDe bahaLu
I jagadoLu taavibbariddalli
A janaardananaakShaNa tahaLu      ||3||

oMdu pradakShiNavanu maaDidavara
hoMdippudu bhUpradakShiNa puNya
eMdeMdivaLa sEvisuva nararige
iMdireyarasa kaivalyavIva          ||4||

tulasiya neTTavanu matte tanage
iLeyoLu puTTuva vaarteya kaLeva
jalaveredu beLesida manujara
kuladavara beLesu vaikuMThadalli   ||5||

tulasiye ninna pOluvaraaru
mUladalli sarvatIrthaMgaLihavu
daLadalli dEvarkaLa sannidhaana
celuvaagradi sakala vEdagaLu       ||6||

tulasi maMjariye bEkacyutaMge
daLamaatra dorakalu saakavage
saluvudu kaaShThamUla mRuttikeyu
phalavIvanivaLa pesargoLalu        ||7||

koraLalli sara japasaragaLannu
vara tulasiya maNiyiMda maaDi
gurumaMtrava japisuva nararu
hariSaraNara kalege saaruvaru      ||8||

elli tulasiya banadalli lakShumI -
vallabhanu sarvasannihitanaagi
nelesihanivaLesaLoMdilladire
salladavaMganyakusumada pUje       ||9||

ella paapaMgaLommomme kaimugiye
elli pOpudu dESadESaMgaLige
nelli mallige modalaada sainya
allIgalu namma banadaloppihaLu     ||10||

haripaadake SrI tulasiYErisida
nararanu paramapadakErisuvudu
nirutadi tulasiya kaMDaravage
narakagaLa daruSana mattilla       ||11||

dhanya tulasiya daLaviTTu tUge
munna kRuShNage paDi Ayitu gaDa
innivaLa vRuMdaanadalli naTTu
mane mane mannisadavanyaava        ||12||

kanasinali kaMDaMte innoMdu
koneverasida puShpadi japisi
anudina hayavadananna tIrtha-
vanu koMDu naa dhanyanaadenu       ||13||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru