ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಸುದೇವ ತನಯನಿಗೆ | ಶ್ರೀ ವಾದಿರಾಜರು | Vasudeva tanayanige | Vadirajaru


ರಚನೆ :  ಭಾವೀ ಸಮೀರ ಶ್ರೀ ವಾದಿರಾಜರು 
Kruti : Bhavisameera Sri Vadirajaru


ಜಯಮಂಗಳಂ ನಿತ್ಯ ಶುಭಮಂಗಳಂ 

ವಸುದೇವ ತನಯನಿಗೆ ವೈಕುಂಠ ನಿಲಯನಿಗೆ | ಕುಸುಮನಾಭನಿಗೆ ಕೋಮಲ ರೂಪಗೆ |
ಯಶೋದೆಯ ನಂದನಿಗೆ ವಸುಧೆಯ ರಮಣನಿಗೆ |ನಸುನಗೆಯೊಳೊಪ್ಪುವ ನರಸಿಂಹಗೆ ||೧||

ಕನಕ ಕಿರೀಟನಿಗೆ ಕಸ್ತೂರಿ ತಿಲಕನಿಗೆ | ಕನಕ ಕುಂಡಲಗೆ ಕೌಸ್ತುಭಧಾರಗೆ |
ಕನಕಾಂಬರಧರಗೆ ಕಾರುಣ್ಯ ರೂಪನಿಗೆ | ಸನಕಾದಿ ಮುನಿವಂದ್ಯ ನರಸಿಂಹಗೆ ||೨||

ಪಂಕಜನಾಭನಿಗೆ ಪಾಂಚಾಲಿ ರಕ್ಷಕಗೆ | ಲಂಕೆಯನು ವಿಭೀಷಣನಿಗಿತ್ತವನಿಗೆ |
ಕುಂಕುಮಾಂಕಿತನಿಗೆ ಕುವಲಯ ನೇತ್ರನಿಗೆ | ಬಿಂಕದಿಂದಲಿ ಮೆರೆವ ನರಸಿಂಹಗೆ ||೩||

ಪಕ್ಷಿವಾಹನನಿಗೆ ಪರಮ ಪಾವನನಿಗೆ | ಕುಕ್ಷಿಯೊಳು ಜಗವ ನಿಂಬಿಟ್ಟವನಿಗೆ |
ಲಕ್ಷುಮಿ ಕಾಂತನಿಗೆ ಲಕ್ಷಣವಂತನಿಗೆ | ಲಕ್ಷಣದೊಳೊಪ್ಪುವ ಲಕ್ಷ್ಮೀ ನರಸಿಂಹಗೆ ||೪||

ಭಕ್ತವತ್ಸಲನಿಗೆ ಭವ ದುಃಖದೂರನಿಗೆ | ಮುಕ್ತಿದಾಯಕಗೆ ಚಿನ್ಮಯ ರೂಪಗೆ |
ಮಿತ್ರೆ ರುಕ್ಮಿಣಿ ಸತ್ಯಭಾಮೆಯ ಅರಸನಿಗೆ | ನಿತ್ಯ ಕಲ್ಯಾಣ ಶ್ರೀಹಯವದನಗೆ ||೫||

jayamaMgaLaM nitya ShuBhamaMgalaM

vasudEva tanayanige vaikuMTha nilayanige | kusumanABanige kOmala rUpage |
yaSOdeya naMdanige vasudheya ramaNanige | nasunageyoLoppuva narasiMhage ||1||

kanaka kirITanige kastUri tilakanige | kanaka kuMDalage kaustuBadhArage |
kanakAMbaradharage kAruNya rUpanige | sanakAdi munivaMdya narasiMhage ||2||

paMkajanABanige pAMcAli rakShakage | laMkeyanu viBIShaNanigittavanige |
kuMkumAMkitanige kuvalaya nEtranige | biMkadindali mereva narasiMhage ||3||

pakShivAhananige parama pAvananige | kukShiyoLu jagava niMbiTTavanige |
lakShumi kAMtanige lakShaNavaMtanige | lakShaNa doLoppuva lakShmI narasiMhage ||4||

Baktavatsalanige Bava duHKadUranige | muktidAyakage cinmaya rUpage |
mitre rukmiNi satyaBAmeya arasanige | nitya kalyANa SrIhayavadanage ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru