ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೆರೆ ನಂಬಿದೆ ಮದ್‌ಹೃದಯ | ಶ್ರೀ ವ್ಯಾಸವಿಠ್ಠಲ | Nere Nambide | Sri Vyasa Vithala Dasaru


ಸಾಹಿತ್ಯ : ಶ್ರೀ ವ್ಯಾಸ ವಿಠಲ ದಾಸರು
Kruti: Sri Vyasa Vittala Dasaru


ನೆರೆ ನಂಬಿದೆ ಮದ್‌ಹೃದಯ ಮಂಟಪದೊಳು ಪರಿಶೋಭಿಸುತಿರು ಪಾಂಡುರಂಗ || ಪ ||

ಶರಣ ಜನರ ಸಂಸಾರ ಮಹಾಭಯ | ಹರಣ ಕರುಣಸಿರಿ ಪಾಂಡುರಂಗ || ಅಪ ||

ನೆರೆದಿಹ ಬಹುಜನರೊಳಿದ್ದರು | ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ
ಪರಿ ಪರಿ ಕೆಲಸವು ನಿನ್ನ ಮಹಾ ಪೂಜೆ | ನಿರುತ ಎನಗೆ ಕೊಡೊ ಪಾಂಡುರಂಗ || ೧ ||

ಪರದೇವನೆ ನಿನ್ನ ಲೀಲಾ ಸ್ಮೃತಿಯನು | ನಿರುತ ಎನಗೆ ಕೊಡೋ ಪಾಂಡುರಂಗ
ಪರರಾಪೇಕ್ಷೆಯ ಬಿಡಿಸಿ ನಿರಂತರ | ಪರಗತಿ ಪಥ ತೋರೋ ಪಾಂಡುರಂಗ || ೨ ||

ಸುಖವಾಗಲಿ ಬಹುದುಃಖವಾಗಲಿ | ಸಖ ನೀನಾಗಿರು ಪಾಂಡುರಂಗ
ನಿಖಿಲಾಂತರ್ಗತ ವ್ಯಾಸವಿಠ್ಠಲ | ತವ ಮುಖ ಪಂಕಜ ತೋರೋ ಪಾಂಡುರಂಗ || ೩ ||

nere naMbide mad^^hRudaya maMTapadoLu pariSOBisutiru pAMDuraMga || pa ||

SaraNa janara saMsAra mahABaya | haraNa karuNasiri pAMDuraMga || apa ||

nerediha bahujanaroLiddaru | mana sthiraviDu ninnali pAMDuraMga
pari pari kelasavu ninna mahA pUje | niruta enage koDo pAMDuraMga || 1 ||

paradEvane ninna lIlA smRutiyanu | niruta enage koDO pAMDuraMga
pararApEkSheya biDisi niraMtara | paragati patha tOrO pAMDuraMga || 2 ||

suKavAgali bahuduHKavAgali | saKa nInAgiru pAMDuraMga
niKilAMtargata vyAsaviThThala | tava muKa paMkaja tOrO pAMDuraMga || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru