ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭೋ ಯತಿವರದೇಂದ್ರ | ಶ್ರೀ ಅನಂತಾದ್ರೀಶ ದಾಸರು | Bo Yativaradendra | Sri Anantaadreesha Dasaru


ರಚನೆ :  ಶ್ರೀ ಅನಂತಾದ್ರೀಶ ದಾಸರು 
Krithi : Sri Anantaadreesha Dasaru


ಭೋ ಯತಿವರದೇಂದ್ರ | ಶ್ರೀ ಗುರುರಾಯರಾಘವೇಂದ್ರ ||ಪ||

ಕಾಯೋ ಎನ್ನ ಶುಭ ಕಾಯ ಭಜಿಸುವೆನು |
ಕಾಯೋ ತವಕ ಚಂದ್ರಾ ||ಅಪ||

ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ
ಶ್ರೀ ಮಹಾಮಹಿಮ ಪಾಮರ ನಾ ನಿಮ್ಮ ನಾಮ ಒಂದೇ ಬಲ್ಲೆ ||೧||

ಕಂಡ ಕಂಡ ಕಡೆಗೆ ತಿರುಗಿ ನಾ ಬೆಂಡಾದೆನೋ ಕೊನೆಗೆ ||
ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ ||೨||

ಮಂತ್ರವ ನಾನರಿಯೆ ಶ್ರೀಮನ್ಮಂತ್ರಾಲಯ ದೊರೆಯೇ ||
ಅಂತರಂಗದೊಳು ನಿಂತು ಪ್ರೇರಿಸೋ ಅನಂತಾದ್ರೀಶ ದೊರೆಯೇ ||೩||

BO yativaradEMdra | SrI gururAyarAGavEMdra ||pa||
 
kAyO enna SuBa kAya Bajisuvenu |
kAyO tavaka caMdrA ||apa||
 
nEmavu enagelli iruvudu kAmAdhamanalli
SrI mahAmahima pAmara nA nimma nAma oMdE balle ||1||
 
kaMDa kaMDa kaDege tirugi nA beMDAdenO konege ||
kaMDa kaMDavara koMDADuta nimma kaMDe kaTTa kaDege ||2||
 
maMtrava nAnariye SrImanmaMtrAlaya doreyE ||
aMtaraMgadoLu niMtu prErisO anaMtAdrISa doreyE ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru