ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ಶ್ರೀ ಗುರುವಾದಿರಾಜಗೆ | ಶ್ರೀ ಗುರುಜಗನ್ನಾಥ ದಾಸರು | Sharanu Sri Guru Vadirajage | Sri Gurujagannatha Dasaru


ರಚನೆ : ಶ್ರೀ ಗುರುಜಗನ್ನಾಥ ದಾಸರು 
Kruti: Sri Gurujagannatha Dasaru


ಶರಣು ಶರಣಯ್ಯಾ
ಶರಣು ಶ್ರೀ ಗುರುವಾದಿರಾಜಗೆ ||ಪ||

ಶರಣು ಸುರಗಣ ಮಾನ್ಯಗೆ
ಶರಣು ಶರಣರ ಪೊರೆವ ಕರುಣಿಗೆ |
ಶರಣು ಹರಿಗುಣಲೋಲಗೆ ||ಅಪ||

ಮಧ್ವಮತಶುಭವಾರ್ಧಿಚಂದ್ರಗೆ |
ಸಿದ್ಧಸಾಧನ ಮೂರ್ತಿಗೆ |
ಬದ್ಧ ಶ್ರೀ ಹರಿ ದ್ವೇಷಿಮಾಯಿಗಳ |
ಗೆದ್ದ ಹಯಮುಖ ದಾಸಗೆ ||೧||

ನಿತ್ಯನಿರ್ಮಲ ನಿಗಮ ಸ್ತೋತ್ರಗೆ |
ಭೃತ್ಯಪಾಲಕ ಸುಗುಣ ಗಾತ್ರಗೆ ||
ಸತ್ಯಲೋಕ ಸುಮುಖ್ಯ ಪಾತ್ರಗೆ |
ಸ್ತುತ್ಯಯತಿವರ ಸುಜನ ಮಿತ್ರಗೆ ||೨||

ಮೋದದಾಯಕ ಭೇದ ಸಾಧಕ |
ಸೋದಾ ಕ್ಷೇತ್ರಾಧೀಶಗೆ ||
ವೇದವೇದ್ಯ ಯತೀಶ ತಾತಗೆ ||
ಆದಿ ಗುರುಜಗನ್ನಾಥವಿಠಲ ದಾಸಗೆ ||೩||

sharaNu sharaNayyaa
SaraNu SrI guruvAdirAjage ||pa||
 
SaraNu suragaNa mAnyage
SaraNu SaraNara poreva karuNige |
SaraNu hariguNalOlage ||apa||
 
madhvamatashubhavArdhicaMdrage |
siddhasAdhana mUrtige |
baddha SrI hari dvEShimAyigaLa |
gedda hayamuKa dAsage ||1||
 
nityanirmala nigama stOtrage |
BRutyapAlaka suguNa gAtrage ||
satyalOka sumuKya pAtrage |
stutyayativara sujana mitrage ||2||
 
mOdadAyaka BEda sAdhaka |
sOdA kShEtrAdhISage ||
vEdavEdya yatISa tAtage ||
Adi gurujagannAthaviThala dAsage ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru