ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗೋವಿಂದ ನಮೋ ಗೋವಿಂದ ನಮೋ | ಶ್ರೀ ಪುರಂದರ ವಿಠಲ | Govinda Namo | Sri Purandara Dasaru

 


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ||ಪ||
ಗೋವರ್ಧನ ಗಿರಿಯನೆತ್ತಿದ ಗೋವಿಂದ ನಮ್ಮ ರಕ್ಷಿಸೈ ||ಅಪ||

ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರವು |
ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿದ ಧರ್ಮವೇ ||೧||

ಅರ್ಥವ್ಯಾರಿಗೆ ಪುತ್ರರ‍್ಯಾರಿಗೆ ಮಿತ್ರ ಬಾಂಧವರ‍್ಯಾರಿಗೆ |
ಕರ್ತೃ ಯಮನವರೆಳೆದು ಒಯ್ವಾಗ ಅರ್ಥ ಪುತ್ರರು ಕಾಯ್ವರೆ ||೨||

ತಂದು ಬಂದರೆ ತನ್ನ ಪುರುಷನ ಹಸಿದು ಬಳಲಿದಿರೆಂಬಳು |  
ಒಂದು ದಿವಸ ತಾರದಿದ್ದರೆ ಹಂದಿ ನಾಯಂತೆ ಕೆಲೆವಳು ||೩||  

ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆ ನಿಲ್ಲಲಾರಳು |
ಪ್ರಾಣ ಹೋಗುವ ಸಮಯದಲ್ಲಿ ಜಾಣೆ ಕರೆದರೂ ಬಾರಳು ||೪||

ಉಂಟು ಕಾಲಕೆ ನೆಂಟರಿಷ್ಟರು ಬಂಟರಾಗಿ ಕಾಯ್ವರು |
ಕಂಟಕೆಮನೋರು ಬಂದು ಎಳೆವಾಗ ನೆಂಟರಿಷ್ಟರು ಬಾರರು ||೫||

ಒಡವೆ ಅರಸಿಗೆ ಒಡಲು ಅಗ್ನಿಗೆ ಮಡದಿ ಮತ್ತೊಬ್ಬ ಚೆಲುವಗೆ |
ಬಡಿದೆಳೆದು ಯಮನವರು ಒಯ್ವಾಗ ಎಡವಿ ಬಿದ್ದಿತು ನಾಲಿಗೆ ||೬||

ದಿಟ್ಟ ತನದಲಿ ಪಟ್ಟವಾಳುವ ವೃಷ್ಣಿನಂದನ ಚರಣವ |
ಮುಟ್ಟಿ ಭಜಿಸಿರೋ ಸಿರಿ ಪುರಂದರ ವಿಠಲೇಶನ ಪಾದವ ||೭||

gOviMda namO gOviMda namO gOviMda nArAyaNa ||pa||
gOvardhana giriyanettida gOviMda namma rakShisai ||apa||

maMca bAradu maDadi bAraLu kaMcu kannaDi bAravu |
saMcitArthada dravya bAradu muMce mADida dharmavE ||1||

arthavyArige putrar^yArige mitra bAMdhavar^yArige |
kartRu yamanavareLedu oyvAga artha putraru kAyvare ||2||

taMdu baMdare tanna puruShana hasidu baLalidireMbaLu |
oMdu divasa tAradiddare haMdi nAyaMte kelevaLu ||3||

prANavallaBe tanna puruShana kANade nillalAraLu |
prANa hOguva samayadalli jANe karedarU bAraLu ||4||

uMTu kAlake neMTariShTaru baMTarAgi kAyvaru |
kaMTakemanOru baMdu eLevAga neMTariShTaru bAraru ||5||

oDave arasige oDalu agnige maDadi mattobba celuvage |
baDideLedu yamanavaru oyvAga eDavi bidditu nAlige ||6||

diTTa tanadali paTTavALuva vRuShNinaMdana caraNava |
muTTi BajisirO siri puraMdara viThalESana pAdava ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru