ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಿನ್ನೈಪೆ ನಿನಗಾನು ಭೀಮಸೇನ | ಜಗನ್ನಾಥ ವಿಠಲ | Binnaipe ninaganu Bhimasena | Sri Jagannatha Dasaru


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ಬಿನ್ನೈಪೆ ನಿನಗಾನು ಭೀಮಸೇನ ||ಪ||

ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅಪ||

ನೀಚರಿಂದಲಿ ಬಂದ ಭಯಗಳಿಂದಲಿ ಜನರು 
ಯೋಚಿಪರೆಮಗಾರು ಗತಿಯೆನುತಲಿ
ಕೀಚಕಾಂತಕ ನಿನ್ನ ಬಹುಕೀರ್ತಿಯನು ಕೇಳಿ
ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧||

ರೋಚನೇಂದ್ರನೆ ಭವ ವಿಮೋಚಕನು ನೀನೆ 
ಸಚರಾಚರಕೆ ಸಂತತ ಪುರೋಚನಾರಿ
ಪ್ರಾಚೀನಕರ್ಮ ಬಲ ವೀಚಿಯೊಳು ಮುಳುಗಿಹರ
ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨||

ಖಚರೋತ್ತಮನೆ ನಿನ್ನ ಸುಚರಿತಗಳ   
ನಿಚಯ ರಚನೆಗೈಯ ಬಲ್ಲೆನೆ ಅಚಲ ಸತ್ವಾ  
ಪ್ರಚಲಿಸುತ್ತಲಿವೆ ಮನೋವಚನ ಕಾಯವು ಘಟೋ-  
ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩||

ಈ ಚತುರ್ದಶ ಭುವನದಾಚಾರ್ಯ ದೇಶ ಕಾ-
ಲೋಚಿತ ಸುಧರ್ಮಗಳ ಸೂಚಿಸೆನಗೆ 
ಪಾಚಕನೆ ನಿನ್ನಡಿಗೆ ಚಾಚುವೆನು ಕರ ಸವ್ಯ-
ಸಾಚಿ ಸೋದರನೆ ದಯ ಗೋಚರಿಸಿ ಸಲಹೆಂದು ||೪||

ವಾಚಾಮಗೋಚರ ಜಗನ್ನಾಥವಿಠಲನ 
ಶ್ರೀಚರಣಭಜಕನೆ ನಿಶಾಚರಾರೀ
ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ-
ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು ||೫||

binnaipe ninagAnu BImasEna ||pa||

bannabaDutiha janara Bayava parihariseMdu ||apa||

nIcariMdali baMda BayagaLiMdali janaru 
yOciparemagAru gatiyenutali
kIcakAMtaka ninna bahukIrtiyanu kELi
yAcisuve ninagAnu ellaranu salaheMdu ||1||

rOcanEMdrane Bava vimOcakanu nIne 
sacarAcarake saMtata purOcanAri
prAcInakarma bala vIciyoLu muLugihara
KEcarEMdrAhipa trilOcanara guruveMdu ||2||

KacarOttamane ninna sucaritagaLa 
nicaya racanegaiya ballene acala satvA 
pracalisuttalive manOvacana kAyavu GaTO-
tkacajanaka sajjanara pracaya mADuvudeMdu ||3||

I caturdaSa BuvanadAcArya dESa kA-
lOcita sudharmagaLa sUcisenage 
pAcakane ninnaDige cAcuvenu kara savya-
sAci sOdarane daya gOcarisi salaheMdu ||4||

vAcAmagOcara jagannAthaviThalana 
SrIcaraNaBajakane niSAcarArI
maicarma sulidu duSyAsanana rakuta pari-
ShEcaneya mADide mahOcitavideMdaridu ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru