ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೇ ಭಾಗ್ಯದ ನಿಧಿಯೇ | ಅನಂತಾದ್ರೀಶ | Baare Bhagyada Nidhiye | Sri Anantaadreesha Dasaru


ರಚನೆ : ಶ್ರೀ ಅನಂತಾದ್ರೀಶ ದಾಸರು 
Kruti:Sri Anantaadreesha Dasaru


ಬಾರೇ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೇ ||ಪ||  

ಬಾರೇ ಬಾರೇ ಕರವೀರನಿವಾಸಿನಿ 
ಬಾರಿ ಬಾರಿಗು ಶುಭ ತೋರೇ ನಮ್ಮನಿಗೆ ||ಅಪ||

ನಿಗಮವೇದ್ಯಳೆ ನೀನು | ನಿನ್ನ ಪೊಗಳಲಾಪೆನೆ ನಾನು 
ಮಗನಪರಾಧವ ತೆಗೆದೆಣಿಸದೆ ನೀ 
ಲಗುಬಗೆಯಿಂದಲಿ ಪನ್ನಂಗವೇಣಿ ||೧||

ಲೋಕಮಾತೆಯು ನೀನು ನಿನ್ನ ತೋಕನಲ್ಲವೇ ನಾನು 
ಆಕಳು ಕರುವನು ಸ್ವೀಕರಿಸುವ ಪರಿ | 
ನೀ ಕರುಣದಿ ಕಾಲ್ ಹಾಕು ನಮ್ಮನಿಗೆ ||೨||

ಕಡೆಗೆ ನಮ್ಮ ನಿವಾಸ ನಿನ್ನೊಡೆಯ ಅನಂತಾದ್ರೀಶ | 
ಒಡೆಯನಿದ್ದಲ್ಲಿಗೆ ಮಡದಿ ಬರುವುದು | 
ರೂಢಿಗುಚಿತವಿದು ನಡಿ ನಮ್ಮ ಮನಿಗೆ ||೩||

bArE BAgyada nidhiyE karavIra nivAsini siriyE ||pa||  

bArE bArE karavIranivAsini 
bAri bArigu SuBa tOrE nammanige ||apa||

nigamavEdyaLe nInu | ninna pogaLalApene nAnu 
maganaparAdhava tegedeNisade nI 
lagubageyiMdali pannaMgavENi ||1||

lOkamAteyu nInu ninna tOkanallavE nAnu 
AkaLu karuvanu svIkarisuva pari | 
nI karuNadi kAl hAku nammanige ||2||

kaDege namma nivAsa ninnoDeya anaMtAdrISa | 
oDeyaniddallige maDadi baruvudu | 
rUDhigucitavidu naDi namma manige ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru