ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತೇರಾನೇರಿ ಮೆರೆದು ಬರುವ | ಆನಂದವಿಠಲ | Teraneri Meredu | Anandavithala


ರಚನೆ : ಶ್ರೀ ಆನಂದವಿಠಲ ದಾಸರು 
Kruti: Sri Anandavithala Dasaru


ತೇರಾನೇರಿ ಮೆರೆದು ಬರುವ ಭೂಸುರ ವಂದ್ಯ ಯಾರಕ್ಕ |
ಗುರು ರಾಘವೇಂದ್ರರೆಂತೆಂಬೋ ಯತಿಕುಲ ತಿಲಕ ಕೇಳ್ತಂಗಿ ||ಅಪ||

ಚಂದದಿ ಕುಂದಣ ಮುಕುಟವ ಧರಿಸಿದ ಸುಂದರ ನೀತ ಯಾರಕ್ಕ |
ತಂದೆಯ ಅಘ ಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಂಗಿ ||೧||

ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹನೀತ ಯಾರಕ್ಕ
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ಶ್ರೀವ್ಯಾಸರಾಯ ಕೇಳ್ತಂಗಿ ||೨||

ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ ||
ಹರುಷದಿ ಆನಂದವಿಠಲನ ಸಾರಿದ ಪರಿಮಳಾಚಾರ್ಯ ಕೇಳ್ತಂಗಿ ||೩||

tErAnEri meredu baruva BUsura vaMdya yArakka |
guru rAGavEMdrareMteMbO yatikula tilaka kELtaMgi ||apa||
 
caMdadi kuMdaNa mukuTava dharisida suMdara nIta yArakka |
taMdeya aGa haridu narahariya tOrida prahlAdarAya kELtaMgi ||1||
 
vipraru dAsaru yatitatigaLa kUDi barutihanIta yArakka
kappu kRuShNana oppisi kuNisida SrIvyAsarAya kELtaMgi ||2||
 
varahaja nadiya tIradi iddu Bakutara porevava yArakka ||
haruShadi AnaMdaviThalana sArida parimaLAcArya kELtaMgi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru