ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪೊಂದಿ ಬದುಕಿರೋ | ಶ್ರೀ ಜಗನ್ನಾಥ ದಾಸರ ಕೃತಿ | Pondi Badukiro | Jagannatha Vithala


ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti: Sri Jagannatha Dasaru (Jagannatha vittala)


ಪೊಂದಿ ಬದುಕಿರೋ ಗುರು ರಾಘವೇಂದ್ರರ |
ಕುಂದದೆಮ್ಮನು ಕರುಣದಿಂದ ಪೊರೆವರಾ ||ಪ||

ನಂಬಿ ನುತಿಸುವ ಜನಕದಂಬಕಿಷ್ಟವ |
ತುಂಬಿ ಕೊಡುವನೋ | ಅನ್ಯರ್ಹ೦ಬಲೀಯನು ||೧||

ಅಲವಬೋಧರ ಸುಮತ ಜಲಧಿ ಚಂದಿರ |
ಒಲಿದು ಭಕ್ತರಾ ಕಾಯ್ವ | ಸುಲಭ ಸುಂದರ ||೨||

ಗುರು ಸುಧೀಂದ್ರರ ವಿಮಲ ಕರಜರೆನಿಪರ | 
ಸ್ಮರಿಸಿ ಸುರಚಿರ ವಿಮಲ ಚರಣ ಪುಷ್ಕರ ||೩||

ಫಾಲಲೋಚನ ವಿನುತ ಮೂಲರಾಮನ |
ಶೀಲ ಸದ್ಗುಣ ನುತಿಪ ಮೇಲು ಭಕುತನಾ ||೪||

ಭೂತ ಭಾವನ ಜಗನ್ನಾಥ ವಿಠಲನ |
ಪ್ರೀತಿಪಾತ್ರನಾ ನಂಬಿರೀತನನುದಿನ ||೫||

poMdi badukirO guru rAGavEMdrara |
kuMdademmanu karuNadiMda porevarA ||pa||
 
naMbi nutisuva janakadaMbakiShTava |
tuMbi koDuvanO | anyar^haMbalIyanu ||1||
 
alavabOdhara sumata jaladhi caMdira |
olidu BaktarA kAyva | sulaBa suMdara ||2||
 
guru sudhIMdrara vimala karajarenipara | 
smarisi suracira vimala caraNa puShkara ||3||
 
PAlalOcana vinuta mUlarAmana |
SIla sadguNa nutipa mElu BakutanA ||4||
 
BUta BAvana jagannAtha viThalana |
prItipAtranA naMbirItananudina ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru