ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಂಗ ಇಲ್ಲೆ ಇದ್ದ ಶ್ರೀಹರಿ | ಶ್ರೀ ನರಹರಿ ವಿಠಲ | Ranga Ille Idda | Sri Narahari Vithala


ರಚನೆ : ನರಹರಿ ವಿಠಲ ದಾಸರು 
Krithi : Sri Narahari Vittala Dasaru


ರಂಗ ಇಲ್ಲೆ ಇದ್ದ ಶ್ರೀಹರಿ ರಂಗ ಇಲ್ಲೆ ಇದ್ದ ||ಪ||

ರಂಗ ಇಲ್ಲೆ ಇದ್ದಂಗನೆಯರ ಕೂಡಿ 
ಪೊಂಗಳಲೂದುತ ಮನೆ ಬಿಟ್ಟಗಲದೆ ||ಅಪ||

ನಸುನಗುತಲಿ ನಮ್ಮ ಮನೆಯೊಳ್ ವಾಸಿಪ ಶ್ರೀಕೃಷ್ಣ
ಹೊಸ ಹೊಸ ಪ್ರಾಯದ ಸ್ತ್ರೀಯರು ಪೊಗಳವರ್
ವಸನವ ಬಚ್ಚಿಡಲ್ಹೋಗಿರಬಹುದು ||೧||

ಆದಿಮೂರುತಿ ನಮ್ಮ ಶ್ರೀ ಕೃಷ್ಣ 
ಬೀದಿಯೊಳ್ ಬರುತಿದ್ದ ಪಾಲ್ದಧಿ ಬೆಣ್ಣೆ ತಿನಬೇಕೆನುತಲಿ 
ಹಾದಿ ಹಿಡಿದು ರಂಗ ಹೋಗಿರಬಹುದು ||೨||

ಎಷ್ಟು ಪುಡುಕಲಮ್ಮ ಕೃಷ್ಣ ದೃಷ್ಟಿಗೆ ಬೀಳಲೊಲ್ಲ
ದೃಷ್ಟಿಗೆ ಬಿದ್ದರೆ ದಿಟ್ಟ ನರಹರಿ ವಿಠಲ
ಸಿಕ್ಕರೆ ಬಿಟ್ಟೇನೇನೆ ||೩||

raMga ille idda SrIhari raMga ille idda ||pa||

raMga ille iddaMganeyara kUDi 
poMgaLalUduta mane biTTagalade ||apa||

nasunagutali namma maneyoL vaasipa SrIkRuShNa
hosa hosa praayada strIyaru pogaLavar
vasanava bacciDal~hOgirabahudu ||1||

AdimUruti namma SrI kRuShNa 
bIdiyoL barutidda paaldadhi beNNe tinabEkenutali 
haadi hiDidu raMga hOgirabahudu ||2||

eShTu puDukalamma kRuShNa dRuShTige bILalolla
dRuShTige biddare diTTa narahari viThala
sikkare biTTEnEne ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru