Posts

Showing posts from March, 2022

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರೇ ಭಾಗ್ಯದ ನಿಧಿಯೇ | ಅನಂತಾದ್ರೀಶ | Baare Bhagyada Nidhiye | Sri Anantaadreesha Dasaru

Image
ರಚನೆ : ಶ್ರೀ ಅನಂತಾದ್ರೀಶ ದಾಸರು  Kruti:Sri Anantaadreesha Dasaru ಬಾರೇ ಭಾಗ್ಯದ ನಿಧಿಯೇ ಕರವೀರ ನಿವಾಸಿನಿ ಸಿರಿಯೇ ||ಪ||   ಬಾರೇ ಬಾರೇ ಕರವೀರನಿವಾಸಿನಿ  ಬಾರಿ ಬಾರಿಗು ಶುಭ ತೋರೇ ನಮ್ಮನಿಗೆ ||ಅಪ|| ನಿಗಮವೇದ್ಯಳೆ ನೀನು | ನಿನ್ನ ಪೊಗಳಲಾಪೆನೆ ನಾನು  ಮಗನಪರಾಧವ ತೆಗೆದೆಣಿಸದೆ ನೀ  ಲಗುಬಗೆಯಿಂದಲಿ ಪನ್ನಂಗವೇಣಿ ||೧|| ಲೋಕಮಾತೆಯು ನೀನು ನಿನ್ನ ತೋಕನಲ್ಲವೇ ನಾನು  ಆಕಳು ಕರುವನು ಸ್ವೀಕರಿಸುವ ಪರಿ |  ನೀ ಕರುಣದಿ ಕಾಲ್ ಹಾಕು ನಮ್ಮನಿಗೆ ||೨|| ಕಡೆಗೆ ನಮ್ಮ ನಿವಾಸ ನಿನ್ನೊಡೆಯ ಅನಂತಾದ್ರೀಶ |  ಒಡೆಯನಿದ್ದಲ್ಲಿಗೆ ಮಡದಿ ಬರುವುದು |  ರೂಢಿಗುಚಿತವಿದು ನಡಿ ನಮ್ಮ ಮನಿಗೆ ||೩|| bArE BAgyada nidhiyE karavIra nivAsini siriyE ||pa||   bArE bArE karavIranivAsini  bAri bArigu SuBa tOrE nammanige ||apa|| nigamavEdyaLe nInu | ninna pogaLalApene nAnu  maganaparAdhava tegedeNisade nI  lagubageyiMdali pannaMgavENi ||1|| lOkamAteyu nInu ninna tOkanallavE nAnu  AkaLu karuvanu svIkarisuva pari |  nI karuNadi kAl hAku nammanige ||2|| kaDege namma nivAsa ninnoDeya anaMtAdrISa |  oDeyaniddallige maDadi baruvudu |  rUD...

ವಾದಿರಾಜ ಗುರು ನೀ ದಯ | ಶ್ರೀ ಜಗನ್ನಾಥ ದಾಸರ ಕೃತಿ | Vadiraja Guru | Sri Jagannatha Dasaru

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti: Sri Jagannatha Dasaru (Jagannatha vittala) ವಾದಿರಾಜ ಗುರು ನೀ ದಯ ಮಾಡದೆ | ಈ ದುರಿತವ ನಿವಾರಿಪರಾರೋ ||ಪ|| ಕಲಿ ಭಾದೆಯು ತಾ ವೆಗ್ಗಳವಾಗಿದೆ | ಇಳೆಯೊಳು ಯತಿಕುಲ ತಿಲಕ ಕೃಪಾಳೊ ||ಅಪ|| ದೇಶಿಕಾರ್ಯ ವಾಗೀಶಕುವರ ತವ  ದಾಸ ಸಮೂಹವ ನೀ ಸಲಹೈಸದಾ ||೧|| ಜನ್ಮಾದಿವ್ಯಾಧ್ಯುನ್ಮಾದಭ್ರಮ | ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ||೨|| ನೀ ಗತಿಯೆಂದನುರಾಗದಿ ನಂಬಿದ  ಭೋಗಿಪುರೀಶನ ರೋಗವ ಕಳೆದೆ ||೩|| ಯಲರುಣಿ ಭಯಕಂಜಿಲಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ ||೪|| ಗರಮಿಶ್ರಿತ ನರಹರಿ ನೈವೇದ್ಯವ | ಅರಿತು ಉಂಡು ಅದನರಗಿಸಿಕೊಂಡೆ ||೫|| ಹಯವದನನ ಪದದ್ವಯ ಭಕ್ತಾಗ್ರಣಿ | ದಯದಿ ವಿಪ್ರನಿಗೆ ನಯನವನಿತ್ತೆ ||೬|| ಮೋದಮುನಿ ಮತ ಪಯೋದಧಿ ಪೂರ್ಣ | ವಿದೋದಯ ಶರಣರ ಕಾದುಕೋ ದೊರೆಯೇ ||೭|| ಅರ್ಥಿಗಳಿಗೆ ಪರಮಾರ್ಥವ ತೋರಿಸಿ | ತೀರ್ಥಪ್ರಬಂಧವ ಕೀರ್ತನೆಗೈದೆ ||೮|| ಯಮಿವರದೆ ತ್ರಿವಿಕ್ರಮ ರಥೋತ್ಸವ | ಸಮಯವಿದೆಂದುತ್ಕ್ರಮಣವ ತೋರಿದೆ ||೯|| ಬಂದು ಕರೆಯೆ ಶ್ರೀ ಪುರಂದರನಾಳ್ಗಳು | ಹಿಂದಟ್ಟಿದೆ ಕರ್ಮೇಂದ್ರಿಗಳರಸನೆ ||೧೦|| ಭೂಮಿಪರುಪಟಳಕಾ ಮಹಿನಾಥನು | ತಾ ಮೈಮರೆದಿರೆ ನೀ ಮುದವಿತ್ತೆ ||೧೧|| ನಿನ್ನೊಶನಾದ ಜಗನ್ನಾಥ ವಿಠಲನ ಉನ್ನಹದಲ್ಲಿ ತೋರೆನ್ನ ಮನದಲಿ ||೧೨|| vAdirAja guru nI daya mADade | I duritava nivAriparArO ||pa||   ...

ಡಂಗುರವ ಸಾರಿ ಹರಿಯ | ಪುರಂದರ ವಿಠಲ | Dangurava Sari Hariya | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಪ || ಹರಿಯು ಮುಡಿದ ಹೂವು ಹರಿವಾಣದಲ್ಲಿ ಇಟ್ಟುಕೊಂಡು   ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ || ೧ || ಒಡಲು ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು ಬಿಡದೆ ಢಣಢಣರೆಂದು ಬಡಿದು ಚಪ್ಪಾಳಿಕ್ಕುತ || ೨ || ಇಂತು ಸಕಲ ಲೋಕಕ್ಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು ಸಂತತ ಶ್ರೀಪುರಂದರ ವಿಠಲನೇ ಪರದೈವವೆಂದು || ೩ || DaMgurava sAri hariya DiMgarigarellaru BU maMDalakke pAMDuraMga viThThala paradaivaveMdu || pa || hariyu muDida hUvu harivANadalli iTTukoMDu haruShadiMda hADi pADi kuNidu cappALikkuta || 1 || oDalu jAgaTeya mADi nuDiva nAligeya piDidu biDade DhaNaDhaNareMdu baDidu cappALikkuta || 2 || iMtu sakala lOkakkella lakShmIkAMtanalladillaveMdu saMtata SrIpuraMdara viThalanE paradaivaveMdu || 3 ||

ವಸುದೇವ ತನಯನಿಗೆ | ಶ್ರೀ ವಾದಿರಾಜರು | Vasudeva tanayanige | Vadirajaru

Image
ರಚನೆ :  ಭಾವೀ ಸಮೀರ ಶ್ರೀ ವಾದಿರಾಜರು  Kruti : Bhavisameera Sri Vadirajaru ಜಯಮಂಗಳಂ ನಿತ್ಯ ಶುಭಮಂಗಳಂ  ವಸುದೇವ ತನಯನಿಗೆ ವೈಕುಂಠ ನಿಲಯನಿಗೆ | ಕುಸುಮನಾಭನಿಗೆ ಕೋಮಲ ರೂಪಗೆ | ಯಶೋದೆಯ ನಂದನಿಗೆ ವಸುಧೆಯ ರಮಣನಿಗೆ |ನಸುನಗೆಯೊಳೊಪ್ಪುವ ನರಸಿಂಹಗೆ ||೧|| ಕನಕ ಕಿರೀಟನಿಗೆ ಕಸ್ತೂರಿ ತಿಲಕನಿಗೆ | ಕನಕ ಕುಂಡಲಗೆ ಕೌಸ್ತುಭಧಾರಗೆ | ಕನಕಾಂಬರಧರಗೆ ಕಾರುಣ್ಯ ರೂಪನಿಗೆ | ಸನಕಾದಿ ಮುನಿವಂದ್ಯ ನರಸಿಂಹಗೆ ||೨|| ಪಂಕಜನಾಭನಿಗೆ ಪಾಂಚಾಲಿ ರಕ್ಷಕಗೆ | ಲಂಕೆಯನು ವಿಭೀಷಣನಿಗಿತ್ತವನಿಗೆ | ಕುಂಕುಮಾಂಕಿತನಿಗೆ ಕುವಲಯ ನೇತ್ರನಿಗೆ | ಬಿಂಕದಿಂದಲಿ ಮೆರೆವ ನರಸಿಂಹಗೆ ||೩|| ಪಕ್ಷಿವಾಹನನಿಗೆ ಪರಮ ಪಾವನನಿಗೆ | ಕುಕ್ಷಿಯೊಳು ಜಗವ ನಿಂಬಿಟ್ಟವನಿಗೆ | ಲಕ್ಷುಮಿ ಕಾಂತನಿಗೆ ಲಕ್ಷಣವಂತನಿಗೆ | ಲಕ್ಷಣದೊಳೊಪ್ಪುವ ಲಕ್ಷ್ಮೀ ನರಸಿಂಹಗೆ ||೪|| ಭಕ್ತವತ್ಸಲನಿಗೆ ಭವ ದುಃಖದೂರನಿಗೆ | ಮುಕ್ತಿದಾಯಕಗೆ ಚಿನ್ಮಯ ರೂಪಗೆ | ಮಿತ್ರೆ ರುಕ್ಮಿಣಿ ಸತ್ಯಭಾಮೆಯ ಅರಸನಿಗೆ | ನಿತ್ಯ ಕಲ್ಯಾಣ ಶ್ರೀಹಯವದನಗೆ ||೫|| jayamaMgaLaM nitya ShuBhamaMgalaM vasudEva tanayanige vaikuMTha nilayanige | kusumanABanige kOmala rUpage | yaSOdeya naMdanige vasudheya ramaNanige | nasunageyoLoppuva narasiMhage ||1|| kanaka kirITanige kastUri tilakanige | kanaka kuMDalage kaustuBadhArage | kanakA...

ಪೋಗದಿರೆಲೊ ರಂಗಾ | ಪುರಂದರ ವಿಠಲ | Pogadirelo Ranga | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ || ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅಪ|| ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ | ಪರಮಾತ್ಮನ ಕಾಣದರಸುವರೊ | ದೊರಕದ ವಸ್ತುವು ದೊರಕಿತು ತಮಗೆಂದು  ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರೊ ||೧|| ಅಗಣಿತ ಗುಣ ನಿನ್ನ ಜಗದನಾರಿಯರೆಲ್ಲ | ಹಗೆಯಾಗಿ ನುಡಿವರೋ ಗೋಪಾಲನೆ || ಮಗುಗಳ ಮಾಣಿಕ್ಯ ತಗಲಿತು ಕರಕೆಂದು ಮಿಗಿಲು  ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ ||೨|| ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು | ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ | ಸೃಷ್ಟೀಶ ಪುರಂದರ ವಿಠಲರಾಯನೆ | ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ರಂಗಯ್ಯ ||೩|| pOgadirelo raMgA bAgiliMdAcege || BAgavataru kaMDarettikoMDoyvaro ||apa||   suramunigaLu tamma hRudaya gahvaradalli | paramAtmana kANadarasuvaro | dorakada vastuvu dorakitu tamageMdu  haruShadiMdali ninna karedettikoMbaro ||1||   agaNita guNa ninna jagadanAriyarella | hageyaagi nuDivarO gOpAlane || magugaLa mANikya tagalitu karakeMdu migilu  bEgadiMdali baMdu bigidappikoMbaro ||2||   diTTa nAriyarella iShTava saliseMd...

ಊಟಕ್ಕೆ ಬಂದೆವು ನಾವು | ಪುರಂದರ ವಿಠಲ | Ootakke Badevu Navu | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಊಟಕ್ಕೆ ಬಂದೆವು ನಾವು  | ನಿನ್ನ ಆಟ ಪಾಠವ ಬಿಟ್ಟು ಅಡುಗೆ ಮಾಡಮ್ಮ ||ಪ|| ಕತ್ತಾಲಿಟ್ಟಾವಮ್ಮ ಕಣ್ಣು ಬಾಯಿ ಬತ್ತಿ ಬರುತಲಿದೆ ಕೈಕಾಲು ಝುಮ್ಮು || ಹೊತ್ತು ಹೋಗಿಸಬೇಡವಮ್ಮ ಒಂದು | ತುತ್ತಾದರೂ ಇತ್ತು ಸಲಹೋ ನಮ್ಮಮ್ಮ ||೧|| ಒಡಲೊಳಗೆ ಉಸಿರಿಲ್ಲ ಒಂದು ಕ್ಷಣವಾದರೆ ಜೀವ ನಿಲ್ಲುವುದಿಲ್ಲ || ಮಡಿದರೆ ದೋಷ ತಟ್ಟುವುದು ಒಂದು ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ||೨|| ಹೊನ್ನುರಾಶಿಯ ತಂದುಸುರಿಯೆ ಕೋಟಿಕನ್ನಿಕೆಯರ ತಂದು ಧಾರೆಯನೆರೆಯೆ || ಅನ್ನದಾನಕ್ಕಿನ್ನು ಸರಿಯೆ ಪ್ರಸನ್ನ ಪುರಂದರವಿಠಲ ದೊರೆಯೆ ||೩|| UTakke baMdevu nAvu | ninna ATa pAThava biTTu aDuge mADamma ||pa|| kattAliTTAvamma kaNNu bAyi batti barutalide kaikAlu Jummu || hottu hOgisabEDavamma oMdu | tuttAdarU ittu salahO nammamma ||1|| oDaloLage usirilla oMdu kShaNavAdare jIva nilluvudilla || maDidare dOSha taTTuvudu oMdu hiDi akkiyiMdale kIrti bAhOdu ||2|| honnurASiya taMdusuriye kOTikannikeyara taMdu dhAreyanereye || annadAnakkinnu sariye prasanna puraMdaraviThala doreye ||3||

ಎಂತು ವರ್ಣಿಪೆ ನಮ್ಮಮ್ಮಾ | ಶ್ರೀ ವಿಜಯ ದಾಸರು | Enthu Varnipe Nammamma | Sri Vijaya Dasaru

Image
ರಚನೆ : ಶ್ರೀ ವಿಜಯ ದಾಸರು Kruti: Sri Vijaya Dasaru ಎಂತು ವರ್ಣಿಪೆ ನಮ್ಮಮ್ಮಾ ಯಂತ್ರೋದ್ಧಾರಕನಾಗಿ ಮೆರೆವನಾ ||ಪ|| ಕೋತಿ ರೂಪದಲ್ಲಿ ಬಂದು ಭೂತಳಕೆ ಬೆಡಗು ತೋರಿ ಈ ತುಂಗಭದ್ರೆಯಲ್ಲಿ ಖ್ಯಾತಿಯಾಗಿಪ್ಪ ಯತಿಯಾ ||೧|| ಸುತ್ತಲು ವಾನರ ಬದ್ಧ ಮತ್ತೆ ವಲಯಾಕಾರ ಮಧ್ಯ ಚಿತ್ರಕೋಣ ಅದರೊಳು ನಿತ್ಯದಲಿಯಿಪ್ಪ ಯತಿಯಾ ||೨|| ವ್ಯಾಸ ಮುನಿರಾಯರಿಂದ ಈ ಶಿಲೆಯೊಳಗೆ ನಿಂದು ಶ್ರೀಶ ವಿಜಯವಿಠ್ಠಲನ್ನ ಏಸು ಬಗೆ ತುತಿಪನ್ನ ||೩|| eMtu varNipe nammammaa yaMtrOddhaarakanaagi merevanaa ||pa|| kOti rUpadalli baMdu bhUtaLake beDagu tOri I tuMgabhadreyalli khyaatiyaagippa yatiyaa ||1|| suttalu vaanara baddha matte valayaakaara madhya citrakONa adaroLu nityadaliyippa yatiyaa ||2|| vyaasa muniraayariMda I shileyoLage niMdu SrISa vijayaviThThalanna Esu bage tutipanna ||3||

ಬಿಡೆ ನಿನ್ನ ಪಾದವ | ಶ್ರೀ ಪುರಂದರ ವಿಠಲ | Bide ninna Padava | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ | ಕೊಡು ಮನದಿಷ್ಟವ ಕೋಪವಿದೇಕೋ ||ಪ|| ನೀರ ಪೊಕ್ಕರೂ ಬಿಡೆ ಬೆನ್ನಿನೊಳಗೆ ಬಹು ಭಾರ ಪೊತ್ತೆನೆಂದು ಬಿದ್ದರೂ ಬಿಡೆನು | ಕೋರೆಯ ಮಸೆಯುತ ಕೊಸರಿಕೊಂಡರು ಬಿಡೆನು ಘೋರ ರೂಪವ ತಾಳಿ ಘುರು ಘುರಿಸಲು ನಾ ||೧|| ತಿರುಕನೆಂದರು ಬಿಡೆ ತಿಳಿದು ತಾಯ ಕೊರಳ ತರಿದನೆಂದರು ನಿನ್ನ ನಾ ಬಿಡೆನು ||    ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ | ಗರಳ ಮಡುವಿನಲ್ಲಿ ಧುಮುಕಿದರೇನು ನಾ ||೨|| ಕಡು ಬತ್ತಲಾಗಿ ಎನ್ನ ಕೈಗೆ ಕಾಸಿಲ್ಲೆಂದರೂ ಒಡನೆ ಹಯವೇರಿ ಓಡಿದರೂ ಬಿಡೆನು ||   ಪೊಡವಿಯೊಳಗೆ ನಮ್ಮ ಪುರಂದರ ವಿಠಲನೆ ಕಡೆ ಹಾಯಿಸುವ ಭಾರ ನಿನ್ನದಹುದಕೆ ನಾ ||೩|| biDe ninna paadava biMkavinnEkO | koDu manadiShTava kOpavidEkO ||pa|| nIra pokkarU biDe benninoLage bahu bhaara potteneMdu biddarU biDenu |  kOreya maseyuta kosarikoMDaru biDenu ghOra rUpava taaLi ghuru ghurisalu naa ||1|| tirukaneMdaru biDe tiLidu taaya koraLa taridaneMdaru ninna naa biDenu ||  poreye pitana vaakya kaaDa sEralu biDe | garaLa maDuvinalli dhumukidarEnu naa ||2|| kaDu battalaagi enna kaige k...

ತೇರಾನೇರಿ ಮೆರೆದು ಬರುವ | ಆನಂದವಿಠಲ | Teraneri Meredu | Anandavithala

Image
ರಚನೆ : ಶ್ರೀ ಆನಂದವಿಠಲ ದಾಸರು  Kruti: Sri Anandavithala Dasaru ತೇರಾನೇರಿ ಮೆರೆದು ಬರುವ ಭೂಸುರ ವಂದ್ಯ ಯಾರಕ್ಕ | ಗುರು ರಾಘವೇಂದ್ರರೆಂತೆಂಬೋ ಯತಿಕುಲ ತಿಲಕ ಕೇಳ್ತಂಗಿ ||ಅಪ|| ಚಂದದಿ ಕುಂದಣ ಮುಕುಟವ ಧರಿಸಿದ ಸುಂದರ ನೀತ ಯಾರಕ್ಕ | ತಂದೆಯ ಅಘ ಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಂಗಿ ||೧|| ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹನೀತ ಯಾರಕ್ಕ ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ಶ್ರೀವ್ಯಾಸರಾಯ ಕೇಳ್ತಂಗಿ ||೨|| ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ || ಹರುಷದಿ ಆನಂದವಿಠಲನ ಸಾರಿದ ಪರಿಮಳಾಚಾರ್ಯ ಕೇಳ್ತಂಗಿ ||೩|| tErAnEri meredu baruva BUsura vaMdya yArakka | guru rAGavEMdrareMteMbO yatikula tilaka kELtaMgi ||apa||   caMdadi kuMdaNa mukuTava dharisida suMdara nIta yArakka | taMdeya aGa haridu narahariya tOrida prahlAdarAya kELtaMgi ||1||   vipraru dAsaru yatitatigaLa kUDi barutihanIta yArakka kappu kRuShNana oppisi kuNisida SrIvyAsarAya kELtaMgi ||2||   varahaja nadiya tIradi iddu Bakutara porevava yArakka || haruShadi AnaMdaviThalana sArida parimaLAcArya kELtaMgi ||3||

ರಂಗ ಇಲ್ಲೆ ಇದ್ದ ಶ್ರೀಹರಿ | ಶ್ರೀ ನರಹರಿ ವಿಠಲ | Ranga Ille Idda | Sri Narahari Vithala

Image
ರಚನೆ : ನರಹರಿ ವಿಠಲ ದಾಸರು  Krithi : Sri Narahari Vittala Dasaru ರಂಗ ಇಲ್ಲೆ ಇದ್ದ ಶ್ರೀಹರಿ ರಂಗ ಇಲ್ಲೆ ಇದ್ದ ||ಪ|| ರಂಗ ಇಲ್ಲೆ ಇದ್ದಂಗನೆಯರ ಕೂಡಿ  ಪೊಂಗಳಲೂದುತ ಮನೆ ಬಿಟ್ಟಗಲದೆ ||ಅಪ|| ನಸುನಗುತಲಿ ನಮ್ಮ ಮನೆಯೊಳ್ ವಾಸಿಪ ಶ್ರೀಕೃಷ್ಣ ಹೊಸ ಹೊಸ ಪ್ರಾಯದ ಸ್ತ್ರೀಯರು ಪೊಗಳವರ್ ವಸನವ ಬಚ್ಚಿಡಲ್ಹೋಗಿರಬಹುದು ||೧|| ಆದಿಮೂರುತಿ ನಮ್ಮ ಶ್ರೀ ಕೃಷ್ಣ  ಬೀದಿಯೊಳ್ ಬರುತಿದ್ದ ಪಾಲ್ದಧಿ ಬೆಣ್ಣೆ ತಿನಬೇಕೆನುತಲಿ  ಹಾದಿ ಹಿಡಿದು ರಂಗ ಹೋಗಿರಬಹುದು ||೨|| ಎಷ್ಟು ಪುಡುಕಲಮ್ಮ ಕೃಷ್ಣ ದೃಷ್ಟಿಗೆ ಬೀಳಲೊಲ್ಲ ದೃಷ್ಟಿಗೆ ಬಿದ್ದರೆ ದಿಟ್ಟ ನರಹರಿ ವಿಠಲ ಸಿಕ್ಕರೆ ಬಿಟ್ಟೇನೇನೆ ||೩|| raMga ille idda SrIhari raMga ille idda ||pa|| raMga ille iddaMganeyara kUDi  poMgaLalUduta mane biTTagalade ||apa|| nasunagutali namma maneyoL vaasipa SrIkRuShNa hosa hosa praayada strIyaru pogaLavar vasanava bacciDal~hOgirabahudu ||1|| AdimUruti namma SrI kRuShNa  bIdiyoL barutidda paaldadhi beNNe tinabEkenutali  haadi hiDidu raMga hOgirabahudu ||2|| eShTu puDukalamma kRuShNa dRuShTige bILalolla dRuShTige biddare diTTa narahari viThala sikkare biTTEnEne ||3||

ನಮೋ ಪಾರ್ವತಿ ಪತಿನುತ | ಶ್ರೀ ವ್ಯಾಸರಾಜರ ಕೃತಿ | Namo Parvati | Sri Vyasarajara Kruti

Image
ಸಾಹಿತ್ಯ : ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ನಮೋ ಪಾರ್ವತಿ ಪತಿನುತಜನಪರ ನಮೋ ವಿರೂಪಾಕ್ಷ ||ಪ|| ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ||ಅಪ|| ನೀಲಕಂಠ ತ್ರಿಶೂಲ ಢಮರು ಹಸ್ತಾಲಂಕೃತ ರಕ್ಷಾ | ಫಾಲನೇತ್ರ ಕಪಾಲ ರುಂಡಮಣಿ ಮಾಲಾದೃತ ವಕ್ಷಾ || ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |    ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ ||೧|| ವಾಸವನುತ ಹರಿದಾಸ ಈಶ ಕೈಲಾಸವಾಸ ದೇವ | ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ || ಭಾಷಿಸುತಿಹೆ ಅಸತ್ವ ಜೀವರಿಗೆ ಈಶನೆಂಬ ಭಾವ | ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ ||೨|| ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ | ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ || ತೆತ್ತಿಗನಂತೆ ಕಾಯುತ್ತಿಹೆ ಬಾಣದ ಸತ್ಯದಿ ಸುಚರಿತ್ರ |   ಕರ್ತೃ ಉಡುಪಿ ಸರ್ವೋತ್ತಮ ಶ್ರೀ ಕೃಷ್ಣನ ಪೌತ್ರ ಕೃಪಾಪಾತ್ರ ||೩|| namO pArvati patinutajanapara namO virUpAkSha ||pa|| ramAramaNanallamala Bakuti koDu namO viSAlAkSha ||apa||   nIlakaMTha triSUla Dhamaru hastAlaMkRuta rakShA | PAlanEtra kapAla ruMDamaNi mAlAdRuta vakShA || SIlaramya vishaala suguNa sallIla surAdhyakSha | SrIlakumISana Olaisuva BaktAvaLi...

ವಾದಿರಾಜ ಮುನಿಪ | ಶ್ರೀ ಗೋಪಾಲ ದಾಸರು | Vadiraja Munipa | Sri Gopala Dasaru

Image
ರಚನೆ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ವಾದಿರಾಜ ಮುನಿಪ ಹಯಮುಖ | ಪಾದ ಕಮಲ ಮಧುಪ ||ಪ|| ನೀ ದಯದಲ್ಲಿ ತವ ಪಾದ ಧ್ಯಾನವನು  ಆದರದಲಿ ಕೊಟ್ಟಾದರಿಸೆನ್ನನು ||ಅಪ|| ಮೂಷಿಕ ಬಿಲದಿಂದ ಉದರ ಪೋಷಕೆ ಬರಲಂದು  ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ  ಕ್ಲೇಶ ಕಳೆದು ಸಂತೋಷಗೈಸಿದೆ ||೧|| ಮುಂದೆ ಭೂತ ನರನಾ ಪ್ರೇರಿಸಿ ಹಿಂದೆವೊಬ್ಬ ನರನಾ ನಿಂದಿರಿಸಿದೆ ಆನಂದದಿಂದ ಜನ  ವೃಂದ ನೋಡುತಿರೆ ಅಂದಣ ನಡೆಸಿದ್ಯೋ ||೨|| ಕ್ಷಿತಿಯೊಳು ಸತಿ ತನ್ನಾ ವಲ್ಲಭ ಮೃತಿಯೈದಿರೆ ಮುನ್ನಾ ಅತಿ ಶೋಕದಿ ಬಂದು ನುತಿಸಲು ಆ ಪತಿಯನು ಬದುಕಿಸಿ ಹಿತದಿ ರಕ್ಷಿಸಿದೆ || ೩ || ನರಪತಿ ವ್ಯಾಧಿಯಲಿ ಬಳಲ್ವದ ತ್ವರಿತದಿ ನೀ ಕೇಳಿ ಹರುಷದಿ ವ್ಯಾಧಿಯ ಪರಿಹರಿಸ್ಯವನಿಗೆ ಹರುಷದಿಂದಲಭಯವ ತೋರಿದೆ || ೪ || ಶಾಸ್ತ್ರ ಪ್ರಸಂಗದಲಿ ನಾರಾಯಣ ಭೂತರ ಗೆಲಿದಲ್ಲೆ ಖ್ಯಾತಿಯಿಂದ ಬಹು ಮಾತನಾಡಿ ಶ್ರೀ- ನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ || ೫ || ತುರಗವದನ ಪಾದಾ ಭುಜಗಳಲಿ ಧರಿಸಿಕೊಂಡು ಮೋದ ಕಡಲೆ ಮಡ್ಡಿಯನು ಕರದಿಂದುಣಿಸಿದ ಗುರುವರಶೇಖರ || ೬ || ಆ ಮಹಾ ಗೋಪಾಲವಿಠ್ಠಲ ತಾಮರಸದಳಗಳ ಧೀಮಂತರಿಗೆ ಸುಕಾಮಿತವನು ಕೊಡುವ ಆ ಮಹಾಮಹಿಮ || ೭ || vAdirAja munipa hayamuKa | pAda kamala madhupa ||pa|| nI dayadalli tava pAda dhyAnavanu  Adaradali koTTAdarisennanu ||apa|| mUShika bilad...

ಶರಣು ಶ್ರೀ ಗುರುವಾದಿರಾಜಗೆ | ಶ್ರೀ ಗುರುಜಗನ್ನಾಥ ದಾಸರು | Sharanu Sri Guru Vadirajage | Sri Gurujagannatha Dasaru

Image
ರಚನೆ : ಶ್ರೀ ಗುರುಜಗನ್ನಾಥ ದಾಸರು  Kruti: Sri Gurujagannatha Dasaru ಶರಣು ಶರಣಯ್ಯಾ ಶರಣು ಶ್ರೀ ಗುರುವಾದಿರಾಜಗೆ ||ಪ|| ಶರಣು ಸುರಗಣ ಮಾನ್ಯಗೆ ಶರಣು ಶರಣರ ಪೊರೆವ ಕರುಣಿಗೆ | ಶರಣು ಹರಿಗುಣಲೋಲಗೆ ||ಅಪ|| ಮಧ್ವಮತಶುಭವಾರ್ಧಿಚಂದ್ರಗೆ | ಸಿದ್ಧಸಾಧನ ಮೂರ್ತಿಗೆ | ಬದ್ಧ ಶ್ರೀ ಹರಿ ದ್ವೇಷಿಮಾಯಿಗಳ | ಗೆದ್ದ ಹಯಮುಖ ದಾಸಗೆ ||೧|| ನಿತ್ಯನಿರ್ಮಲ ನಿಗಮ ಸ್ತೋತ್ರಗೆ | ಭೃತ್ಯಪಾಲಕ ಸುಗುಣ ಗಾತ್ರಗೆ || ಸತ್ಯಲೋಕ ಸುಮುಖ್ಯ ಪಾತ್ರಗೆ | ಸ್ತುತ್ಯಯತಿವರ ಸುಜನ ಮಿತ್ರಗೆ ||೨|| ಮೋದದಾಯಕ ಭೇದ ಸಾಧಕ | ಸೋದಾ ಕ್ಷೇತ್ರಾಧೀಶಗೆ || ವೇದವೇದ್ಯ ಯತೀಶ ತಾತಗೆ || ಆದಿ ಗುರುಜಗನ್ನಾಥವಿಠಲ ದಾಸಗೆ ||೩|| sharaNu sharaNayyaa SaraNu SrI guruvAdirAjage ||pa||   SaraNu suragaNa mAnyage SaraNu SaraNara poreva karuNige | SaraNu hariguNalOlage ||apa||   madhvamatashubhavArdhicaMdrage | siddhasAdhana mUrtige | baddha SrI hari dvEShimAyigaLa | gedda hayamuKa dAsage ||1||   nityanirmala nigama stOtrage | BRutyapAlaka suguNa gAtrage || satyalOka sumuKya pAtrage | stutyayativara sujana mitrage ||2||   mOdadAyaka BEda sAdhaka | sOdA kShEtrAdhISage || vEdavEdya yatISa tAtage || Adi gurujagannAthaviTh...

ಗೋವಿಂದ ನಮೋ ಗೋವಿಂದ ನಮೋ | ಶ್ರೀ ಪುರಂದರ ವಿಠಲ | Govinda Namo | Sri Purandara Dasaru

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ||ಪ|| ಗೋವರ್ಧನ ಗಿರಿಯನೆತ್ತಿದ ಗೋವಿಂದ ನಮ್ಮ ರಕ್ಷಿಸೈ ||ಅಪ|| ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರವು | ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿದ ಧರ್ಮವೇ ||೧|| ಅರ್ಥವ್ಯಾರಿಗೆ ಪುತ್ರರ‍್ಯಾರಿಗೆ ಮಿತ್ರ ಬಾಂಧವರ‍್ಯಾರಿಗೆ | ಕರ್ತೃ ಯಮನವರೆಳೆದು ಒಯ್ವಾಗ ಅರ್ಥ ಪುತ್ರರು ಕಾಯ್ವರೆ ||೨|| ತಂದು ಬಂದರೆ ತನ್ನ ಪುರುಷನ ಹಸಿದು ಬಳಲಿದಿರೆಂಬಳು |   ಒಂದು ದಿವಸ ತಾರದಿದ್ದರೆ ಹಂದಿ ನಾಯಂತೆ ಕೆಲೆವಳು ||೩||   ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆ ನಿಲ್ಲಲಾರಳು | ಪ್ರಾಣ ಹೋಗುವ ಸಮಯದಲ್ಲಿ ಜಾಣೆ ಕರೆದರೂ ಬಾರಳು ||೪|| ಉಂಟು ಕಾಲಕೆ ನೆಂಟರಿಷ್ಟರು ಬಂಟರಾಗಿ ಕಾಯ್ವರು | ಕಂಟಕೆಮನೋರು ಬಂದು ಎಳೆವಾಗ ನೆಂಟರಿಷ್ಟರು ಬಾರರು ||೫|| ಒಡವೆ ಅರಸಿಗೆ ಒಡಲು ಅಗ್ನಿಗೆ ಮಡದಿ ಮತ್ತೊಬ್ಬ ಚೆಲುವಗೆ | ಬಡಿದೆಳೆದು ಯಮನವರು ಒಯ್ವಾಗ ಎಡವಿ ಬಿದ್ದಿತು ನಾಲಿಗೆ ||೬|| ದಿಟ್ಟ ತನದಲಿ ಪಟ್ಟವಾಳುವ ವೃಷ್ಣಿನಂದನ ಚರಣವ | ಮುಟ್ಟಿ ಭಜಿಸಿರೋ ಸಿರಿ ಪುರಂದರ ವಿಠಲೇಶನ ಪಾದವ ||೭|| gOviMda namO gOviMda namO gOviMda nArAyaNa ||pa|| gOvardhana giriyanettida gOviMda namma rakShisai ||apa|| maMca bAradu maDadi bAraLu kaMcu ka...

ವಿಠಲಯ್ಯಾ ವಿಠಲಯ್ಯಾ | ಶ್ರೀ ಜಗನ್ನಾಥ ದಾಸರು | Vithalayya Vithalayya | Sri Jagannatha Dasaru

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ವಿಠಲಯ್ಯಾ ವಿಠಲಯ್ಯಾ || ಪ || ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯಾ || ಅಪ || ಭಜಿಸುವೆ ನಿನ್ನನು ಅಜಭವ ಸುರನುತ | ಭಜಕಾಮರತರು ಕುಜನ ಕುಠಾರ ವಿಠಲಯ್ಯಾ ||೧|| ನೀ ಕರುಣಿಸದೆ ನಿರಾಕರಿಸಲು ಎನ್ನ | ಸಾಕುವರಾರೊ ದಯಾಪರ ಮೂರುತಿ ವಿಠಲಯ್ಯಾ ||೨|| ಶರಣಾಗತರನು ಪೊರೆವೆನೆಂಬ ತವ ಬಿರುದು ಪಾಲಿಸೈ | ಕರಿವರದ ಜಗನ್ನಾಥ ವಿಠಲಯ್ಯಾ ||೩|| viThalayyA viThalayyA || pa || taTitkOTi niBakAya jagannAtha viThalayyA || apa || Bajisuve ninnanu ajaBava suranuta | BajakAmarataru kujana kuThAra viThalayyA ||1|| nI karuNisade nirAkarisalu enna | sAkuvarAro dayApara mUruti viThalayyA ||2|| SaraNAgataranu poreveneMba tava birudu palisai | karivarada jagannAtha viThalayyA ||3||

ಪೊಂದಿ ಬದುಕಿರೋ | ಶ್ರೀ ಜಗನ್ನಾಥ ದಾಸರ ಕೃತಿ | Pondi Badukiro | Jagannatha Vithala

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti: Sri Jagannatha Dasaru (Jagannatha vittala) ಪೊಂದಿ ಬದುಕಿರೋ ಗುರು ರಾಘವೇಂದ್ರರ | ಕುಂದದೆಮ್ಮನು ಕರುಣದಿಂದ ಪೊರೆವರಾ ||ಪ|| ನಂಬಿ ನುತಿಸುವ ಜನಕದಂಬಕಿಷ್ಟವ | ತುಂಬಿ ಕೊಡುವನೋ | ಅನ್ಯರ್ಹ೦ಬಲೀಯನು ||೧|| ಅಲವಬೋಧರ ಸುಮತ ಜಲಧಿ ಚಂದಿರ | ಒಲಿದು ಭಕ್ತರಾ ಕಾಯ್ವ | ಸುಲಭ ಸುಂದರ ||೨|| ಗುರು ಸುಧೀಂದ್ರರ ವಿಮಲ ಕರಜರೆನಿಪರ |  ಸ್ಮರಿಸಿ ಸುರಚಿರ ವಿಮಲ ಚರಣ ಪುಷ್ಕರ ||೩|| ಫಾಲಲೋಚನ ವಿನುತ ಮೂಲರಾಮನ | ಶೀಲ ಸದ್ಗುಣ ನುತಿಪ ಮೇಲು ಭಕುತನಾ ||೪|| ಭೂತ ಭಾವನ ಜಗನ್ನಾಥ ವಿಠಲನ | ಪ್ರೀತಿಪಾತ್ರನಾ ನಂಬಿರೀತನನುದಿನ ||೫|| poMdi badukirO guru rAGavEMdrara | kuMdademmanu karuNadiMda porevarA ||pa||   naMbi nutisuva janakadaMbakiShTava | tuMbi koDuvanO | anyar^haMbalIyanu ||1||   alavabOdhara sumata jaladhi caMdira | olidu BaktarA kAyva | sulaBa suMdara ||2||   guru sudhIMdrara vimala karajarenipara |  smarisi suracira vimala caraNa puShkara ||3||   PAlalOcana vinuta mUlarAmana | SIla sadguNa nutipa mElu BakutanA ||4||   BUta BAvana jagannAtha viThalana | prItipAtranA naMbirItananudina ||5||

ಹೂ ಬೇಕೆ ಹೂ ಪರಿಮಳದ | ಶ್ರೀವಿದ್ಯಾಪ್ರಸನ್ನ ತೀರ್ಥರ ಕೃತಿ | Hoo Beke Hoo | Sri Vidyaprasanna Teerthara Kruti

Image
ಸಾಹಿತ್ಯ : ಶ್ರೀ ವಿದ್ಯಾಪ್ರಸನ್ನ ತೀರ್ಥರು  Kruti : Sri Vidyaprasanna Teertharu ಹೂ ಬೇಕೆ ಹೂ ಪರಿಮಳದ ||ಪ|| ಪರಮ ಪುರುಷ ನಮ್ಮ ಕೃಷ್ಣನ ತೋಟದ ||ಅಪ|| ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಮಲ್ಲೆ | ಗುಲಾಬಿ ತಾವರೆ ಪಾರಿಜಾತ || ಎಲ್ಲ ವಿಧದ ಮನ ಕ್ಲೇಶವ ಕಳೆಯುವ  ಫುಲ್ಲನಾಭ ನಮ್ಮ ಕೃಷ್ಣನ ತೋಟದ ||೧|| ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ | ಕೇರಿ ಕೇರಿಯೊಳು ಮಾರುವುದಿಲ್ಲ || ಭೂರಿ ಭಕುತಿಯೆಂಬ ಭಾರಿಯ ಬೆಲೆಗಿದ ಮಾರೆಂದು ಪೇಳಿದ ಶೌರಿಯ ಸೊಬಗಿನ ||೨|| ರಂಗು ರಂಗುಗಳಿಂದ ಕಂಗೊಳಿಪುದು ಸತ್ಯ ಶೃಂಗಾರದ ಸೊಬಗ ನೀಡುತಲಿ || ಶೃಂಗಾರ ಶೀಲ ಪ್ರಸನ್ನ ಶ್ರೀ ಮಾಧವನ  ಅಂಘ್ರಿಯ ಸಂಗದಿ ಮಂಗಳ ಕರವಾದ ||೩|| hU bEke hU parimaLada ||pa|| parama puruSha namma kRuShNana tOTada ||apa||   mallige saMpige jAji sEvaMtige malle | gulAbi tAvare pArijAta || ella vidhada mana klESava kaLeyuva  PullanABa namma kRuShNana tOTada ||1||   dAradi kaTTilla mAru hAkuvudilla | kEri kEriyoLu mAruvudilla || BUri BakutiyeMba BAriya belegida mAreMdu pELida Sauriya sobagina ||2||   raMgu raMgugaLiMda kaMgoLipudu satya SRuMgArada sobaga nIDutali || SRuMgAra SIla prasanna SrI mAdhavana  aMGri...

ನಿಗಮವ ತಂದ ಮತ್ಸ್ಯಗೆ | ಶ್ರೀ ವಾದಿರಾಜರ ಕೃತಿ | Nigamava Tanda | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮಂಗಳಂ ಜಯ ಮಂಗಳಂ ||ಪ|| ನಿಗಮವ ತಂದ ಮತ್ಸ್ಯಗೆ ನಿತ್ಯ ಮಂಗಳ  ನಗಧರ ಕೂರ್ಮಗೆ ಅತಿ ಮಂಗಳ  ಜಗವನುದ್ಧರಿಸಿದ ವರಾಹಗೆ ಮಂಗಳ  ಮಗುವ ಕಾಯ್ದ ನರಸಿಂಹನಿಗೆ ||೧|| ದಾನವ ಬೇಡಿದ ವಾಮನಗೆ ಮಂಗಳ  ಕ್ಷೋಣಿಪರನು ಕೊಂದಗೆ ಮಂಗಳ ಜಾನಕಿರಮಣ ರಾಮಗೆ ಮಂಗಳ  ಜ್ಞಾನಿಗಳ ಕಾಯ್ದ ಗೋಪಾಲನಿಗೆ ||೨|| ಬುದ್ಧರೂಪದಲಿಹ ದೇವಗೆ ಮಂಗಳ  ಶುದ್ಧ ಅಶ್ವಾರೂಢಗೆ ಮಂಗಳ ಮಧ್ವವಲ್ಲಭ ಹಯವದನಗೆ ಮಂಗಳ  ಉದ್ಧರಿಸುವ ದೇವರ ದೇವನಿಗೆ ||೩|| maMgaLaM jaya maMgaLaM ||pa|| nigamava taMda matsyage nitya maMgaLa  nagadhara kUrmage ati maMgaLa  jagavanuddharisida varaahage maMgaLa  maguva kAyda narasiMhanige ||1|| dAnava bEDida vAmanage maMgaLa  kShONiparanu koMdage maMgaLa jAnakiramaNa rAmage maMgaLa  j~jAnigaLa kAyda gOpAlanige ||2|| buddharUpadaliha dEvage maMgaLa  Suddha aSvaarUDhage maMgaLa madhvavallaBa hayavadanage maMgaLa  uddharisuva dEvara dEvanige ||3||

ಗುಮ್ಮನ ಕರೆಯದಿರೆ | ಶ್ರೀ ಪುರಂದರ ವಿಠಲ | Gummana Kareyadire | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಗುಮ್ಮನ ಕರೆಯದಿರೆ | ಅಮ್ಮಾ ನೀನು ||ಪ|| ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು | ಮಮ್ಮು ಉಣ್ಣುತ್ತೇನೆ ಅಮ್ಮಾ ಅಳುವುದಿಲ್ಲ ||ಅಪ|| ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ || ಚಿಣ್ಣರ ಬಡಿಯೆನು ಅಣ್ಣನ ಬಯ್ಯೆನು ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ||೧|| ಬಾವಿಗೆ ಹೋಗೆ ಕಾಣೆ ಅಮ್ಮಾ ನಾನು ಹಾವಿನೊಳಾಡೆ ಕಾಣೆ || ಆವಿನ ಮೊಲೆಯೂಡೆ ಕರುಗಳ ಬಿಡೆನೋಡೆ ದೇವರಂತೆ ಒಂದು ಠಾವಿಲಿ ಕೂಡುವೆ ||೨|| ಮಗನ ಮಾತನು ಕೇಳುತ ಗೋಪಿದೇವಿ | ಮುಗುಳು ನಗುವ ನಗುತಾ || ಜಗದೊಡೆಯ ಶ್ರೀ ಪುರಂದರ ವಿಠಲನ ಬಿಗಿದಪ್ಪಿಕೊಂಡಳು ಮೋಹದಿಂದಾಗ ||೩|| gummana kareyadire | ammA nInu ||pa||   summane iddEnu ammiya bEDenu | mammu uNNuttEne ammA aLuvudilla ||apa||   heNNugaLiruvallige hOgi avara kaNNu muccuvudillave || ciNNara baDiyenu aNNana bayyenu beNNeya bEDenu maNNu tinnuvudilla ||1||   bAvige hOge kANe ammA nAnu hAvinoLaaDe kANe || Avina moleyUDe karugaLa biDenODe dEvaraMte oMdu ThAvili kUDuve ||2||   magana mAtanu kELuta gOpidEvi | muguLu naguva nagutA || jagadoDeya SrI puraMdara viTh...

ಬಾಗಿಲನು ತೆರೆದು ಸೇವೆಯನು | ಶ್ರೀ ಕನಕದಾಸರು | Bagilanu Teredu | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ||ಪ|| ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ||ಅಪ|| ಪರಮ ಪದದೊಳಗೆ ವಿಷಧರನ ತಲ್ಪದಲಿ ನೀ | ಸಿರಿಸಹಿತ ಕ್ಷೀರವಾರಿಧಿಯೊಳಿರಲು || ಕರಿರಾಜ ಕಷ್ಟದಲಿ ಆದಿಮೂಲಾ ಎಂದು | ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ||೧|| ಕಡುಕೋಪದಿಂ ಖಳನು ಖಡ್ಗವನೇ ಪಿಡಿದು | ನಿನ್ನೊಡೆಯ ಎಲ್ಲಿಹನೆಂದು ಜರಿದು ನುಡಿಯೆ ||   ದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ |   ಸಡಗರದಿ ಕಂಭದಿಂದೊಡೆದೆ ನರಹರಿಯೇ ||೨||   ಯಮಸುತನ ರಾಣಿಗಕ್ಷಯವಸನವನಿತ್ತೆ | ಸಮಯದಲಿ ಅಜಮಿಳನ ಪೊರೆದೆ ||   ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ | ಕಮಲಾಕ್ಷ ಕಾಗಿನೆಲೆಯಾದಿಕೇಶವನೆ ||೩|| bAgilanu teredu sEveyanu koDu hariyE ||pa|| kUgidaru dhvani kELalillavE narahariyE ||apa||   parama padadoLage viShadharana talpadali nI | sirisahita kShIravAridhiyoLiralu || karirAja kaShTadali AdimUla eMdu | kareyalAkShaNa baMdu odagideyO narahariyE ||1||   kaDukOpadim KaLanu KaDgavanE piDidu | ninnoDeya ellihaneMdu jaridu nudiye || dRuDha Bakutiyali SiSuvu biDade ninnanu Bajise | saDagaradi kaMBadiMdoDede narahariyE ||...

ಪವನ ಸಂಭೂತ ಒಲಿದು | ಶ್ರೀ ಗುರು ಪ್ರಾಣೇಶ ವಿಠಲ ದಾಸರು | Pavana Sambhoota Olidu | Sri Guru Pranesha Vithala

Image
ಸಾಹಿತ್ಯ : ಶ್ರೀ ಗುರು ಪ್ರಾಣೇಶ ವಿಠಲ ದಾಸರು Kruti: Sri Guru Pranesha Vithala Dasaru ಪವನ ಸಂಭೂತ ಒಲಿದು ತವಕದಿ ಕಾಯಬೇಕು ||ಪ|| ಇವನಾರೋ ಏನೋ ಎಂದುದಾಸೀನ ಮಾಡದಲೆನ್ನ ||ಅಪ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು  ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ  ಹರಿಯಂತೆ ಒದಗುವಿಯೋ ನೀನು ಹರಿದಾಸನು ನಾನು ||೨|| ಅಜಪಿತನ ಶಾಪದಿಂದ ಅಜಗರನಾದವನ ಪಾದ ರಜದಿ ಪುನೀತನ ಮಾಡಿದನೇ ಅಜಪದವಿಗೆ ಬಹನೇ ||೩|| ಕಲಿಯುಗದಿ ಕವಿಗಳೆಲ್ಲ ಕಲಿ ಬಾಧೆಯಿಂದ ಬಳಲೆ ಕಲಿವೈರಿ ಮುನಿಯೆಂದೆನಿಸಿದೆ ಕಲಿಮಲವ ಕಳೆದಿ ||೪|| ಗುರು ಪ್ರಾಣೇಶ ವಿಠಲ ಹರಿಪರನೆಂಬೊ ಜ್ಞಾನ ಗುರುಮಧ್ವರಾಯ ಕರುಣಿಸೋ ದುರ್ಮತಿಗಳ ಬಿಡಿಸೋ ||೫|| pavana saMBUta olidu tavakadi kAyabEku ||pa|| ivanArO EnO eMdudAsIna mADadalenna ||apa||   kapipa kapi Aj~jeyaMte kapilana patniyannu  kapigaLu huDuki miDukalu kAyde Agalu ||1|| harivEShadharane narahari Bakutara porevudakke  hariyaMte odaguviyO nInu haridAsanu nAnu ||2||   ajapitana SApadiMda ajagaranAdavana pAda rajadi punItana mADidanE ajapadavige bahanE ||3||   kaliyugadi kavigaLella kali bAdheyiMda baLale kalivairi muniyeM...

ಯಾತಕಯ್ಯ ತೀರ್ಥಕ್ಷೇತ್ರಗಳು | ಶ್ರೀ ವಾದಿರಾಜರ ಕೃತಿ | Yatakayya Teertha Kshetragalu | Sri Vadirajara Kruti

Image
ರಚನೆ : ಶ್ರೀ ಭಾವೀ ಸಮೀರ ಶ್ರೀ ವಾದಿರಾಜರು (ಹಯವದನ) Kruthi: Bhavisameera Sri Vadirajaru (Hayavadana) ಯಾತಕಯ್ಯ ತೀರ್ಥಕ್ಷೇತ್ರಗಳು ಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದ ಕಮಲೆಯರಸನಕ್ಷಿಗಳಿಂದ ಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧಿಯೊಳು ಆ ಮಹಾತುಲಸಿ ಅಂದುದಿಸಿದಳು      ||೧|| ಪರಿಮಳಿಸುವ ಮಾಲೆಯ ನೆವದಿ  ಹರಿಯುದರದಲ್ಲಿ ಸಿರಿಯೊಲಿಹಳು ತರುಣಿ ತುಲಸಿ ತಪ್ಪದೆಯವನ ಚರಣವ ರಮೆ ಭಜಿಸೆ ಭಜಿಪಳು  ||೨|| ಪೂಜಿಸುವರ ಶಿರದಿ ನಿರ್ಮಾಲ್ಯಗಳ ವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳು ಈ ಜಗದೊಳು ತಾವಿಬ್ಬರಿದ್ದಲ್ಲಿ ಆ ಜನಾರ್ದನನಾಕ್ಷಣ ತಹಳು      ||೩|| ಒಂದು ಪ್ರದಕ್ಷಿಣವನು ಮಾಡಿದವರ ಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯ ಎಂದೆಂದಿವಳ ಸೇವಿಸುವ ನರರಿಗೆ ಇಂದಿರೆಯರಸ ಕೈವಲ್ಯವೀವ          ||೪|| ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವ ಜಲವೆರೆದು ಬೆಳೆಸಿದ ಮನುಜರ ಕುಲದವರ ಬೆಳೆಸು ವೈಕುಂಠದಲ್ಲಿ   ||೫|| ತುಲಸಿಯೆ ನಿನ್ನ ಪೋಲುವರಾರು ಮೂಲದಲ್ಲಿ ಸರ್ವತೀರ್ಥಂಗಳಿಹವು ದಳದಲ್ಲಿ ದೇವರ್ಕಳ ಸನ್ನಿಧಾನ ಚೆಲುವಾಗ್ರದಿ ಸಕಲ ವೇದಗಳು       ||೬|| ತುಲಸಿ ಮಂಜರಿಯೆ ಬೇಕಚ್ಯುತಂಗೆ ದಳಮಾತ್ರ ದೊರಕಲು ಸಾಕವಗೆ ಸಲುವುದು ಕಾಷ್ಠಮೂಲ ಮೃತ್ತಿಕೆಯು ಫಲವೀವನಿವಳ ಪೆಸರ್ಗೊ...

ಭೋ ಯತಿವರದೇಂದ್ರ | ಶ್ರೀ ಅನಂತಾದ್ರೀಶ ದಾಸರು | Bo Yativaradendra | Sri Anantaadreesha Dasaru

Image
ರಚನೆ :  ಶ್ರೀ ಅನಂತಾದ್ರೀಶ ದಾಸರು  Krithi : Sri Anantaadreesha Dasaru ಭೋ ಯತಿವರದೇಂದ್ರ | ಶ್ರೀ ಗುರುರಾಯರಾಘವೇಂದ್ರ ||ಪ|| ಕಾಯೋ ಎನ್ನ ಶುಭ ಕಾಯ ಭಜಿಸುವೆನು | ಕಾಯೋ ತವಕ ಚಂದ್ರಾ ||ಅಪ|| ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ ಶ್ರೀ ಮಹಾಮಹಿಮ ಪಾಮರ ನಾ ನಿಮ್ಮ ನಾಮ ಒಂದೇ ಬಲ್ಲೆ ||೧|| ಕಂಡ ಕಂಡ ಕಡೆಗೆ ತಿರುಗಿ ನಾ ಬೆಂಡಾದೆನೋ ಕೊನೆಗೆ || ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ ||೨|| ಮಂತ್ರವ ನಾನರಿಯೆ ಶ್ರೀಮನ್ಮಂತ್ರಾಲಯ ದೊರೆಯೇ || ಅಂತರಂಗದೊಳು ನಿಂತು ಪ್ರೇರಿಸೋ ಅನಂತಾದ್ರೀಶ ದೊರೆಯೇ ||೩|| BO yativaradEMdra | SrI gururAyarAGavEMdra ||pa||   kAyO enna SuBa kAya Bajisuvenu | kAyO tavaka caMdrA ||apa||   nEmavu enagelli iruvudu kAmAdhamanalli SrI mahAmahima pAmara nA nimma nAma oMdE balle ||1||   kaMDa kaMDa kaDege tirugi nA beMDAdenO konege || kaMDa kaMDavara koMDADuta nimma kaMDe kaTTa kaDege ||2||   maMtrava nAnariye SrImanmaMtrAlaya doreyE || aMtaraMgadoLu niMtu prErisO anaMtAdrISa doreyE ||3||

ನೆರೆ ನಂಬಿದೆ ಮದ್‌ಹೃದಯ | ಶ್ರೀ ವ್ಯಾಸವಿಠ್ಠಲ | Nere Nambide | Sri Vyasa Vithala Dasaru

Image
ಸಾಹಿತ್ಯ : ಶ್ರೀ ವ್ಯಾಸ ವಿಠಲ ದಾಸರು Kruti: Sri Vyasa Vittala Dasaru ನೆರೆ ನಂಬಿದೆ ಮದ್‌ಹೃದಯ ಮಂಟಪದೊಳು ಪರಿಶೋಭಿಸುತಿರು ಪಾಂಡುರಂಗ || ಪ || ಶರಣ ಜನರ ಸಂಸಾರ ಮಹಾಭಯ | ಹರಣ ಕರುಣಸಿರಿ ಪಾಂಡುರಂಗ || ಅಪ || ನೆರೆದಿಹ ಬಹುಜನರೊಳಿದ್ದರು | ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ ಪರಿ ಪರಿ ಕೆಲಸವು ನಿನ್ನ ಮಹಾ ಪೂಜೆ | ನಿರುತ ಎನಗೆ ಕೊಡೊ ಪಾಂಡುರಂಗ || ೧ || ಪರದೇವನೆ ನಿನ್ನ ಲೀಲಾ ಸ್ಮೃತಿಯನು | ನಿರುತ ಎನಗೆ ಕೊಡೋ ಪಾಂಡುರಂಗ ಪರರಾಪೇಕ್ಷೆಯ ಬಿಡಿಸಿ ನಿರಂತರ | ಪರಗತಿ ಪಥ ತೋರೋ ಪಾಂಡುರಂಗ || ೨ || ಸುಖವಾಗಲಿ ಬಹುದುಃಖವಾಗಲಿ | ಸಖ ನೀನಾಗಿರು ಪಾಂಡುರಂಗ ನಿಖಿಲಾಂತರ್ಗತ ವ್ಯಾಸವಿಠ್ಠಲ | ತವ ಮುಖ ಪಂಕಜ ತೋರೋ ಪಾಂಡುರಂಗ || ೩ || nere naMbide mad^^hRudaya maMTapadoLu pariSOBisutiru pAMDuraMga || pa || SaraNa janara saMsAra mahABaya | haraNa karuNasiri pAMDuraMga || apa || nerediha bahujanaroLiddaru | mana sthiraviDu ninnali pAMDuraMga pari pari kelasavu ninna mahA pUje | niruta enage koDo pAMDuraMga || 1 || paradEvane ninna lIlA smRutiyanu | niruta enage koDO pAMDuraMga pararApEkSheya biDisi niraMtara | paragati patha tOrO pAMDuraMga || 2 || suKavAgali bahuduHKavAgali | saKa nInAgiru pAMDuraMga niKilAM...

ಭಾರತಿ ಭಕುತಿಯನು | ಶ್ರೀ ತಂದೆ ಗೋಪಾಲ ವಿಠಲ | Bharati Bhakutiyanu | Sri Tande Gopala Vithala

Image
ಸಾಹಿತ್ಯ : ಶ್ರೀ ತಂದೆ ಗೋಪಾಲ ವಿಠಲ ದಾಸರು  Kruti: Sri Tande Gopala Vithala Dasaru ಭಾರತಿ ಭಕುತಿಯನು ಕೊಡುವುದು, ಮಾರುತನ ಸತಿ ನೀನು ||ಪ|| ಮೂರು ಲೋಕದೊಳಗಾರು ನಿನಗೆ ಸರಿ ಮಾರಾರಿಗಳಿಂದಾರಾಧಿತಳೇ ||ಅಪ|| ಸುಂದರಿ ಶುಭಕಾರಿ ಸುಮನಸ ವೃಂದ ಶೋಭಿತ ಕಬರಿ || ಮಂದಹಾಸ ಮುಖದಿಂದ ನೋಡಿ ನಿನ್ನ ಕಂದನೆಂದು ಎನ್ನ ಮುಂದಕೆ ಕರೆಯೇ ||೧|| ವಾಣಿ ಎನ್ನ ವದನಾದಲ್ಲಿಡು ಮಾಣದೆ ಹರಿಸ್ತವನಾ || ವೀಣಾಧೃತ ಸುಜ್ಞಾನ ಪಂಕಜ ಪಾಣಿಯೇ ಕೋಕಿಲ ವಾಣಿಯೆ ಎನಗೆ ||೨||   ಮಂಗಳಾಂಗಿ ಎನ್ನ ಅಂತರಂಗದಲ್ಲಿಡು ಮುನ್ನ || ತುಂಗ ವಿಕ್ರಮ ತಂದೆ ಗೋಪಾಲ ವಿಠಲನ್ನ ಹಿಂಗದೆ ನೆನೆವ ಸುಖಂಗಳ ನೀಡೆ ||೩|| BArati Bakutiyanu koDuvudu, mArutana sati nInu ||pa|| mUru lOkadoLagAru ninage sari mArArigaLiMdArAdhitaLE ||apa||   suMdari SuBakAri sumanasa vRuMda SOBita kabari || maMdahAsa muKadiMda nODi ninna kaMdaneMdu enna muMdake kareyE ||1||   vANi enna vadanAdalliDu mANade haristavanA || vINAdhRuta suj~jAna paMkaja pANiyE kOkila vANiye enage ||2||   maMgaLAMgi enna aMtaraMgadalliDu munna || tuMga vikrama taMde gOpAla viThalanna hiMgade neneva suKaMgaLa nIDe ||3||

ಕೊಳಲನೂದುತ ಬಂದ | ಶ್ರೀ ಪುರಂದರ ವಿಠಲ | Kolalanuduta Banda | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೊಳಲನೂದುತ ಬಂದ ಗೋಪಿಯ ಕಂದ|  ಕೊಳಲನೂದುವುದು ಬಲು ಚಂದಾ ||ಪ|| ಆ ವಸುದೇವನ ಕಂದ ದೇವಕಿ ಬಸಿರೊಳು ಬಂದಾ ಮಾವ ಕಂಸನ ಕೊಂದ ಭಾವಜನಯ್ಯ ಮುಕುಂದ ||೧|| ಮುತ್ತಿನಾಭರಣವ ತೊಟ್ಟು ಹಸ್ತದಿ ಕೊಳಲನಿಟ್ಟು  ಕಸ್ತೂರಿ ತಿಲಕನಿಟ್ಟು ತುತ್ತುರು ತುರುರೆಂಬ ನಾದವ ಪಿಡಿಯೆ ||೨|| ಹಿಂದೆ ಗೋವುಗಳ ಹಿಂಡು| ಮುಂದೆ ಗೋಪಾಲರ ದಂಡು| ಹಿಂದಕ್ಕೆ ದೈತ್ಯರ ಕೊಂದ ಪುರಂದರ ವಿಠಲ ಚಂದ ||೩|| koLalanUduta baMda gOpiya kaMda|  koLalanUduvudu balu caMdA ||pa||   A vasudEvana kaMda dEvaki basiroLu baMdA mAva kaMsana koMda BAvajanayya mukuMda ||1|| muttinaabharaNava toTTu hastadi koLalaniTTu  kastUri tilakaniTTu tutturu turureMba naadava piDiye ||2|| hiMde gOvugaLa hiMDu| muMde gOpAlara daMDu| hiMdakke daityara koMda puraMdara viThala caMda ||3||

ಬಾರೋ ಬ್ರಹ್ಮಾದಿ ವಂದ್ಯ | ಪುರಂದರ ವಿಠಲ | Baaro Brahmadi Vandya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬಾರೋ ಬ್ರಹ್ಮಾದಿ ವಂದ್ಯ |ಪ|  ವಸುದೇವ ಸುತನೆ |ಅಪ| ಧಿಗಿಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೇ | ಚಂದದಿ | ಜಗದೀಶ ನೀ ಕುಣಿದಾಡುತ ಬಾರೋ ಚೆನ್ನಕೇಶವನೇ |೧| ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದ ಕೇಳೋ | ನಿನಗೆ | ಹಾಲು ಬೆಣ್ಣೆ ಮೊಸರಿಕ್ಕುವೆ ಉಣ್ಣ ಬಾರೋ |೨| ದೊಡ್ಡ ದೊಡ್ಡ ಮುತ್ತಿನ ಹಾರ ಹಾಕಿ ನೋಡುವೆನೋ | ನೀನು | ದೊಡ್ಡ ಪುರದ ದ್ವಾರಕ ವಾಸ ಪುರಂದರ ವಿಠಲ ಬೇಗನೇ ಬಾರೋ |೩| bArO brahmAdi vaMdya |pa|  vasudEva sutane |apa|   dhigidhigi nI kuNidADuta bArO dInarakShakanE | caMdadi | jagadISa nI kuNidADuta bArO cennakESavanE |1|   gollara manege pOgalu bEDa gOviMda kELO| ninage| hAlu beNNe mosarikkuve uNNa bArO |2|   doDDa doDDa muttina hAra hAki nODuvenO |nInu| doDDa purada dvAraka vAsa puraMdara viThala bEganE bArO |3|

ಅಂಜಿಕಿನ್ಯಾತಕಯ್ಯಾ | ಶ್ರೀ ಪುರಂದರ ದಾಸರು | Anjikinyatakayya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ಭಯವೂ ಇನ್ಯಾತಕಯ್ಯಾ ||ಪ|| ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ||ಅಪ|| ಕನಸಿಲಿ ಮನಸಿಲಿ ಕಳವಳವಾದರೆ  ಹನುಮನ ನೆನೆದರೆ ಹಾರಿ ಹೋಗದೆ ಪಾಪ ||೧|| ರೋಮ ರೋಮಕೆ ಕೋಟಿ ಲಿಂಗವುದುರಿಸಿದ  ಭೀಮನ ನೆನೆದರೆ ಬಿಟ್ಟು ಹೋಗದೆ ಪಾಪ ||೨|| ಪುರಂದರ ವಿಠಲನ ಪಾದ ಪೂಜೆಯ ಮಾಳ್ಪ ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ ||೩|| aMjikinyAtakayyA sajjanarige BayavU inyAtakayyA ||pa|| saMjIvarAyara smaraNe mADida mEle ||apa||   kanasili manasili kaLavaLavAdare  hanumana nenedare hAri hOgade pApa ||1||   rOma rOmake kOTi liMgavudurisida  BImana nenedare biTTu hOgade pApa ||2||   puraMdara viThalana pAda pUjeya mALpa guru madhvarAyara smaraNe mADida mEle ||3||  

ಮೆಲ್ಲ ಮೆಲ್ಲನೆ ಬಂದನೆ | ಪುರಂದರ ವಿಠಲ | Mella Mellane Bandane | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೆ| ಮೆಲ್ಲ ಮೆಲ್ಲನೆ ಬಂದನೆ |ಪ| ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೆ |ಅಪ| ಹಾಲು ಮಾರಲು ಹೋದರೆ ನಿನ್ನಯ ಕಂದ ಕಾಲಿಗಡ್ಡವ ಕಟ್ಟಿದ| ಹಾಲ ಸುಂಕವ ಬೇಡಿ ಕೋಲನೆ ಅಡ್ಡಗಟ್ಟಿ ಶ್ಯಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣಾ |೧| ಮೊಸರು ಮಾರಲು ಹೋದರೆ ನಿನ್ನಯ ಕಂದ ಹೆಸರೇನೆಂದು ಕೇಳಿದ| ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ ಶಶಿಮುಖಿಯರಿಗೆಲ್ಲಾ ಬಸಿರು ಮಾಡಿದನೀತ |೨|   ಪೋಗೀರೆ ರಂಗಯ್ಯನ ಮೇಲೆ ನೀವು ದೂರೇನು  ಕೊಂಡು ಬಂದಿರೆ ಯೋಗೀಶ ಪುರಂದರ ವಿಠಲ ರಾಯನ ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ |೩| mella mellane baMdane gOpamma kELe| mella mellane baMdane |pa| mella mellane baMdu gallake muddu koTTu nillade ODi hOda kaLLage buddhi hELe |apa|   hAlu mAralu hOdare ninnaya kaMda kAligaDDava kaTTida| hAla suMkava bEDi kOlane aDDagaTTi SyAleya seLakoMDu hELadODida kRuShNA |1|   mosaru mAralu hOdare ninnaya kaMda hesarEneMdu kELida| hasanAda heNNa mEle kusumava taMdikki SaSimuKiyarigellA basiru maaDidanIta |2|...

ಮುನೀಂದ್ರ ನೋಡಿ ನಲಿದಾಡಿ | ಶ್ರೀ ವಿಠಲೇಶ ದಾಸರು | Munindra Nodi Nalidadi | Sri Vithalesha Dasaru

Image
ಸಾಹಿತ್ಯ : ಶ್ರೀ ವಿಠಲೇಶ ದಾಸರು  Kruti:Sri Vithalesha Dasaru ಮುನೀಂದ್ರ ನೋಡಿ ನಲಿದಾಡಿ ತನುವನೀಡಾಡಿ ಮನದಿ ಕೊಂಡಾಡೀ, ಮುನೀಂದ್ರ ನೋಡಿ, ಮನದಿ ಕೊಂಡಾಡಿ ||ಪ|| ಗುರು ರಾಘವೇಂದ್ರ ಸುರಮುನಿ ಚಂದ್ರ  ಕರುಣ ಕಟಾಕ್ಷದ ಕಾಂತಿ ಕೋಮಲಾ || ದುರಿತ ವಿನಾಶಕ ದಿನಕರ ತೇಜ  ಪರಮ ಪಾವನ ಸಿರಿಗೆರಗುವ ಮುಖಾಂಬುಜ ನೋಡೀ ||೧|| ಯತಿ ವರದೇಂದ್ರ ಪ್ರಥುವಿ ಸುರೇಂದ್ರ  ಹಿತರ ಹಸನ್ಮುಖ ಜ್ಯೋತಿ ಚಂದಿರ || ಪ್ರತಿಭೆ ಪ್ರಕಾಶದಿ ಪೃಥ್ವಿಗೆ ಶುಭೋದಯ  ನತಜನ ವಾಂಛಿತ ಪ್ರತಿಕರಿಸುವ ಪ್ರಭೆ ನೋಡೀ ||೨|| ರಾಜ ರಾಜೇಂದ್ರ ರಾಜ ಮಣೀಂದ್ರ  ತೇಜ ತಪೋಮಯ, ಶಾಂತಿ ಸಾಗರ || ನೈಜದಿ ಶ್ರೀ ವಿಠಲೇಶ ಸುಸನ್ನಿಧಿ  ಯೋಜಿಸಿದೋರ್ವ ಮಹಾತ್ಮ ಪ್ರಸನ್ಮುತ ನೋಡೀ ||೩|| munIMdra nODi nalidADi tanuvanIDADi manadi koMDADI, munIMdra nODi, manadi koMDADi ||pa||   guru rAGavEMdra suramuni caMdra  karuNa kaTAkShada kAMti kOmalA || durita vinASaka dinakara tEja  parama pAvana sirigeraguva muKAMbuja nODI ||1||   yati varadEMdra prathuvi surEMdra  hitara hasanmuKa jyOti caMdira || pratiBe prakASadi pRuthvige SuBOdaya  natajana vAMCita pratikarisuva praBe nODI ||2||   rAja rAjEMdra rAj...

ಬಿನ್ನೈಪೆ ನಿನಗಾನು ಭೀಮಸೇನ | ಜಗನ್ನಾಥ ವಿಠಲ | Binnaipe ninaganu Bhimasena | Sri Jagannatha Dasaru

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಬಿನ್ನೈಪೆ ನಿನಗಾನು ಭೀಮಸೇನ ||ಪ|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅಪ|| ನೀಚರಿಂದಲಿ ಬಂದ ಭಯಗಳಿಂದಲಿ ಜನರು  ಯೋಚಿಪರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಬಹುಕೀರ್ತಿಯನು ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧|| ರೋಚನೇಂದ್ರನೆ ಭವ ವಿಮೋಚಕನು ನೀನೆ  ಸಚರಾಚರಕೆ ಸಂತತ ಪುರೋಚನಾರಿ ಪ್ರಾಚೀನಕರ್ಮ ಬಲ ವೀಚಿಯೊಳು ಮುಳುಗಿಹರ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨|| ಖಚರೋತ್ತಮನೆ ನಿನ್ನ ಸುಚರಿತಗಳ    ನಿಚಯ ರಚನೆಗೈಯ ಬಲ್ಲೆನೆ ಅಚಲ ಸತ್ವಾ   ಪ್ರಚಲಿಸುತ್ತಲಿವೆ ಮನೋವಚನ ಕಾಯವು ಘಟೋ-   ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩|| ಈ ಚತುರ್ದಶ ಭುವನದಾಚಾರ್ಯ ದೇಶ ಕಾ- ಲೋಚಿತ ಸುಧರ್ಮಗಳ ಸೂಚಿಸೆನಗೆ  ಪಾಚಕನೆ ನಿನ್ನಡಿಗೆ ಚಾಚುವೆನು ಕರ ಸವ್ಯ- ಸಾಚಿ ಸೋದರನೆ ದಯ ಗೋಚರಿಸಿ ಸಲಹೆಂದು ||೪|| ವಾಚಾಮಗೋಚರ ಜಗನ್ನಾಥವಿಠಲನ  ಶ್ರೀಚರಣಭಜಕನೆ ನಿಶಾಚರಾರೀ ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ- ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು ||೫|| binnaipe ninagAnu BImasEna ||pa|| bannabaDutiha janara Bayava parihariseMdu ||apa|| nIcariMdali baMda BayagaLiMdali janaru  yOciparemagAru gatiyenuta...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru