ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ನಿನ್ನ ಚರಣ ಕಮಲ | ಪ್ರಾಣೇಶ ವಿಠಲ | Sharanu ninna charana | Sri Pranesha Vithala


ಸಾಹಿತ್ಯ : ಶ್ರೀ ಪ್ರಾಣೇಶ ವಿಠಲ ದಾಸರು
Kruti:Sri Pranesha Vittala Dasaru


ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವ ||ಪ||
ಕರವ ಪಿಡಿದು ಸುಮತಿ ಇತ್ತು ಪೊರೆಯೋ ಶಿವ ಶಿವ ||ಅಪ||

ದಂತಿ ಚರ್ಮ ಹೊದ್ದ ಭಸ್ಮ ಭೂಷ ಶಿವ ಶಿವ| 
ಚಿಂತೆ ರಹಿತ ಲಯಕೆ ಕರ್ತನಾದ ಶಿವ ಶಿವ|
ಸಂತರಿಂದ ಸತತ ಪೂಜೆಗೊಂಬ ಶಿವ ಶಿವ| 
ಕಂತು ಪಿತನ ಪೂರ್ಣ ಪ್ರೀತಿ ಪಾತ್ರ ಶಿವ ಶಿವ ||೧||

ಮಂದಮತಿಯ ತಪ್ಪನೆಣಿಸಬೇಡ ಶಿವ ಶಿವ| 
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವ ಶಿವ|
ಮಂದಗಮನೆ ನಿನ್ನ ಮನದೊಳೆಲ್ಲ ಶಿವ ಶಿವ| 
ತಂದು ಕೊಂಡ ದಕ್ಷವ್ರತ ಕುವಾರ್ತಿ ಶಿವ ಶಿವ ||೨||  

ಹೀನರಂತೆ ನಿನಗೆ ಕೋಪ ಸಲ್ಲ ಶಿವ ಶಿವ| 
ಮಾಣು ಯಜ್ಞ ಸಹಾಯನಾಗು ದಯದಿ ಶಿವ ಶಿವ|
ಏನುಪಾಯ ಇದಕೆ ಚಿಂತಿಸುವುದು ಶಿವ ಶಿವ| 
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವ ಶಿವ ||೩||

SaraNu ninna caraNa kamalagaLige Siva Siva ||pa||
karava piDidu sumati ittu poreyO Siva Siva ||apa||
 
daMti carma hodda Basma BUSha Siva Siva| 
ciMte rahita layake kartanAda Siva Siva|
saMtariMda satata pUjegoMba Siva Siva| 
kaMtu pitana pUrNa prIti pAtra Siva Siva ||1||
 
maMdamatiya tappaneNisabEDa Siva Siva| 
kuMdu ninage eMdigeMdigilla Siva Siva|
maMdagamane ninna manadoLella Siva Siva| 
taMdu koMDa dakShavrata kuvArti Siva Siva ||2||
 
hInaraMte ninage kOpa salla Siva Siva| 
mANu yaj~ja sahAyanAgu dayadi Siva Siva|
EnupAya idake ciMtisuvudu Siva Siva| 
prANESa viThala ninna vaSadoLihanu Siva Siva ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru