ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರುಷದಿಂದಲಿ ಕಾಯೋ ಹನುಮ | ನರಹರಿ ವಿಠಲ | Harushadindali Kayo | Narahari Vithala


ಸಾಹಿತ್ಯ : ಶ್ರೀ ನರಹರಿ ವಿಠಲ ದಾಸರು 
Kruti:Sri Narahari Vithala Dasaru


ಹರುಷದಿಂದಲಿ ಕಾಯೋ ಹನುಮ
ಹಾಲಬಾವಿಯೊಳಿರುವಂಥ ಭೀಮ ||ಪ||

ಗುರುಮಧ್ವರಾಯರ ಚರಣಕ್ಕೆ ನಮಿಸುವೆ |
ಹರಿ ಸರ್ವೋತ್ತಮ ಎಂಬ ಸ್ಥಿರವಾದ ಮತಿ ಕೊಡು ಹನುಮ ||ಅಪ||

ಅಂಜನಾದೇವಿ ಸಂಭೂತ | ಧನಂಜಯನಣ್ಣ ಯತಿ ಪ್ರಖ್ಯಾತ |
ಕಂಜಲೋಚನ ರಾಮದೂತ | ಭವಭಂಜನ ಆನಂದತೀರ್ಥ
ಅಂಜಿಕಿನ್ಯಾತಕೆ ಸಂಜೀವರಾಯ | ಸೌಗಂಧಿಕ ಪುಷ್ಪವ ತಂದ ಸುಂದರ ಮಧ್ವ ಹನುಮ ||೧||

ಸಾಗರ ದಾಟಿದ್ಯೋ ಧೀರಾ | ಧರ್ಮರಾಯನ ಅನುಜ ವೃಕೋದರ |
ಆ ಮಧ್ಯಗೇಹರ ಕುವರ ಹನುಮ | ಭೀಮನೆ ಮಧ್ವಾವತಾರ |
ಆ ಮನೋಹರ ದಿವ್ಯ ನಾಮಾಮೃತವನ್ನು ಪ್ರೇಮದಿ ಸವಿದಂಥ ಸ್ವಾಮಿ ದಯಾನಿಧೇ ಹನುಮ ||೨||

ದೂರ ನೋಡದಿರೋ ಹನುಮ | ಕರ ಜೋಡಿಸಿ ಪ್ರಾರ್ಥಿಪೆ ಭೀಮ |
ಆನಂದ ತೀರ್ಥರೆ ಪ್ರೇಮ | ದಿಂದ ವ್ಯಾಳ್ಯವ್ಯಾಳ್ಯಕೆ ಹರಿ ನಾಮ |
ಪ್ರೇರಣೆ ಮಾಡಿಸೋ ಭಾರತೀರಮಣನೆ ಸಿರಿದೊರೆ ನರಹರಿ ವಿಠಲನ ದೂತ ಹನುಮ ||೩||

haruShadiMdali kAyO hanuma
hAlabaaviyoLiruvaMtha BIma ||pa||

gurumadhvarAyara caraNakke namisuve |
hari sarvOttama eMba sthiravAda mati koDu hanuma ||apa||
 
aMjanAdEvi saMBUta | dhanaMjayanaNNa yati praKyAta |
kaMjalOcana rAmadUta | BavaBaMjana AnaMdatIrtha
aMjikinyAtake saMjIvarAya | saugaMdhika puShpava taMda suMdara madhva hanuma ||1||
 
sAgara dATidyO dhIrA | dharmarAyana anuja vRukOdara |
A madhyagEhara kuvara hanuma | BImane madhvAvatAra |
A manOhara divya nAmAmRutavannu prEmadi savidaMtha svAmi dayAnidhE hanuma ||2||
 
dUra nODadirO hanuma | kara jODisi prArthipe BIma |
AnaMda tIrthare prEma | diMda vyALyavyALyake hari nAma |
prEraNe mADisO BAratIramaNane siridore narahari viThalana dUta hanuma ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru