ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂಬಿದೆ ನಿನ್ನ ಪಾದ ನರಸಿಂಹ | ಪುರಂದರವಿಠಲ | Nambide Ninna Paada Narasimha | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ನಂಬಿದೆ ನಿನ್ನ ಪಾದ ನರಸಿಂಹ | ಎನ್ನ |
ಬೆಂಬಿಡದೆ ಸಲಹಯ್ಯ ನರಸಿಂಹ ||ಪ||

ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೋ ನರಸಿಂಹ ||ಅಪ||

ತುಂಬುರು ನಾರದಪ್ರಿಯ ನರಸಿಂಹ | ಚೆಲ್ವ |
ಶಂಬರಾರಿಯ ಪಿತನೆ ನರಸಿಂಹ ||
ಅಂಬರೀಷನ ಕಾಯ್ದೆ ನರಸಿಂಹ |
ಜಗದಂಬರಮಣನೆ ಸಿರಿ ನರಸಿಂಹ ||೧||

ಬಾಲ ಕರೆದಲ್ಲಿ ಬಂದೆ ನರಸಿಂಹ | ಭಕ್ತ | 
ಪಾಲಿಪ ದಯಾಳು ಸಿರಿ ನರಸಿಂಹ ||
ಲೀಲೆಯಿಂದ ಹಿರಣ್ಯಕನ ನರಸಿಂಹ | ಕೊಂದ |
ಲೋಲ ಸಿರಿಯರಸನೆ ನರಸಿಂಹ ||೨||

ಅಚ್ಯುತಾನಂತ ಗೋವಿಂದ ನರಸಿಂಹ | ಸಿರಿ |
ಸಚ್ಚಿದಾನಂದ ಮುಕುಂದ ನರಸಿಂಹ ||
ಕಿಚ್ಚಿನಂದದಿ ಬೆಂದೆ ನರಸಿಂಹ |
ಭವವಿಚ್ಛೆಯಿಂದ ಬಿಡಿಸಯ್ಯ ನರಸಿಂಹ ||೩||

ಕರಿ ಮೊರೆಯನು ಕೇಳಿ ನರಸಿಂಹ | ಬಲು |
ಬರದಿಂದೊದಗಿ ಬಂದೆ ನರಸಿಂಹ |
ಗರುಡವಾಹನನಾಗಿ ನರಸಿಂಹ |
ಉದ್ಧರಿಸಿ ಕಾಯ್ದೆಯಲ್ಲೋ ನರಸಿಂಹ ||೪||

ದೇವರ ದೇವನು ನೀನೇ ನರಸಿಂಹ | ಬೇರೆ |
ಕಾವರನು ಕಾಣೆನಯ್ಯ ನರಸಿಂಹ |
ಭಾವಜನಯ್ಯನೆ ಸಿರಿ ನರಸಿಂಹ |
ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ||೫||

ತಂದೆ ತಾಯಿ ಗುರುದೈವ ನರಸಿಂಹ | ಎನ್ನ |
ಬಂಧು ಬಳಗವು ನೀನೇ ನರಸಿಂಹ |
ಕುಂದು ಹೆಚ್ಚು ನೋಡಬೇಡ ನರಸಿಂಹ |
ಪುರಂದರ ವಿಠಲ ಕಾಯೋ ನರಸಿಂಹ ||೬||

naMbide ninna pAda narasiMha |enna |
beMbiDade salahayya narasiMha ||pa||
 
haMbalisuvenu balu narasiMha
pAda naMbidavaranu kAyO narasiMha ||apa||
 
tuMburu nAradapriya narasiMha | celva |
SaMbarAriya pitane narasiMha ||
aMbarIShana kAyde narasiMha |
jagadaMbaramaNane siri narasiMha ||1||
 
bAla karedalli baMde narasiMha | Bakta | 
pAlipa dayALu siri narasiMha ||
lIleyiMda hiraNyakana narasiMha | koMda |
lOla siriyarasane narasiMha ||2||
 
acyutAnaMta gOviMda narasiMha | siri |
saccidAnaMda mukuMda narasiMha ||
kiccinaMdadi beMde narasiMha |
BavavicCeyiMda biDisayya narasiMha ||3||
 
kari moreyanu kELi narasiMha | balu |
baradiMdodagi baMde narasiMha |
garuDavAhananAgi narasiMha |
uddharisi kAydeyallO narasiMha ||4||
 
dEvara dEvanu nInE narasiMha | bEre |
kAvaranu kANenayya narasiMha |
BAvajanayyane siri narasiMha |
ninna sEveya pAlisi kAyO narasiMha ||5||
 
taMde tAyi gurudaiva narasiMha | enna |
baMdhu baLagavu nInE narasiMha |
kuMdu heccu nODabEDa narasiMha |
puraMdara viThala kAyO narasiMha ||6||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru