ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕನಸು ಕಂಡೆನೆ ಮನದಲಿ | ಪುರಂದರವಿಠಲ | Kanasu Kandene Manadali Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಕನಸು ಕಂಡೆನೆ ಮನದಲಿ ಕಳವಳಗೊಂಡೆನೆ ||ಪ||

ಏನ ಪೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅಪ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು
ಅಂದುಗೆ ಘಲುಕೆನ್ನುತ ಎನ್ನ ಮುಂದೆ ಬಂದು ನಿಂತಿದ್ದನಲ್ಲೇ ||೧||

ಮಕರ ಕುಂಡಲನಿಟ್ಟು ತಿಮ್ಮಯ್ಯ ತಾ ಕಸ್ತೂರಿ ತಿಲಕನಿಟ್ಟು ||
ಗೆಜ್ಜೆ ಘಲುಕೆನ್ನುತ ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||೨||

ಮುತ್ತಿನ ಪಲ್ಲಕ್ಕಿ ಯತಿಗಳು ಹೊತ್ತು ನಿಂತಿದ್ದರಲ್ಲೇ ||
ಛತ್ರ ಚಾಮರದಿಂದ ರಂಗಯ್ಯನ ಉತ್ಸವ ಮೂರುತಿಯ ||೩||

ತಾವರೆ ಕಮಲದಲ್ಲಿ ಕೃಷ್ಣಯ್ಯ ತಾ ಬಂದು ನಿಂತಿದ್ದನಲ್ಲೇ
ವಾಯು ಬೊಮ್ಮಾದಿಗಳು ರಂಗಯ್ಯನ ಸೇವೆಯ ಮಾಡುವರೆ ||೪||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ ಹೃದಯ ಮಂಟಪದಲ್ಲಿ ||
ಸರ್ವಾಭರಣದಿಂದ ಪುರಂದರ ವಿಠಲನ ಕೂಡಿದನೆ ||೫||

kanasu kaMDene manadali kaLavaLagoMDene ||pa||
 
Ena pELali taMgi timmayyana pAdavanu kaMDe ||apa||
 
ponnada kaDaganiTTu timmayya tA pOlva nAmava iTTu
aMduge Galukennuta enna muMde baMdu niMtiddanallE ||1||
 
makara kuMDalaniTTu timmayya tA kastUri tilakaniTTu ||
gejje Galukennuta svAmi tA baMdu niMtiddanallE ||2||
 
muttina pallakki yatigaLu hottu niMtiddarallE ||
Catra cAmaradiMda raMgayyana utsava mUrutiya ||3||
 
tAvare kamaladalli kRuShNayya tA baMdu niMtiddanallE
vAyu bommAdigaLu raMgayyana sEveya mADuvare ||4||
 
navaratna kettisida svAmi enna hRudaya maMTapadalli ||
sarvABaraNadiMda puraMdara viThalana kUDidane ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru